Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಹೇನಬೇರಿನ ಅಕ್ಷತಾಳ ಕರಾಳ ನೆನಪಿಗೆ ಒಂದು ವರ್ಷ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ |
17 ಜೂನ್ 2015. ಬೈಂದೂರಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನವದು. ಎಲ್ಲರಂತೆಯೇ ನೂರಾರು ಕನಸು ಹೊತ್ತ ಕಂಗಳು ಅಂದು ಕಮರಿ ಹೋಗಿದ್ದವು. ಮನುಷ್ಯರೂಪಿ ವ್ಯಾಫ್ರನ ಅಟ್ಟಹಾಸಕ್ಕೆ ಆ ಕುಗ್ರಾಮದ ಹುಡುಗಿ ನಲುಗಿ ಹೋಗಿದ್ದಳು. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ದಿಟ್ಟ ಹುಡುಗಿಯ ಬದುಕಿನ ದಾರಿಗೆ ಅಂತ್ಯ ಹಾಡಲಾಗಿತ್ತು. ಹೌದು. ಅಂದು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷತಾ ದೇವಾಡಿಗ ಎಂಬ ಹೆಣ್ಣಮಗಳು ತನ್ನ ಮನೆಗೆ ಸಾಗುವ ಹಾದಿಯಲ್ಲಿಯೇ ವಿಧಿಯ ಕ್ರೂರಲೀಲೆ ಬಲಿಯಾಗಿ ಹೋಗಿದ್ದಳು

ಅಕ್ಷತಾಳ ಸಾವಿನ ಕರಾಳತೆಗೆ ಬೈಂದೂರಿನ ಜನತೆ ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿ ಸಮೂಹ ಅಕ್ಷರಶಃ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಕೆಗೆ ಮುಂದಾದರು. ಕೊನೆಗೆ ಆರೋಪಿಯ ಬಂಧನವೂ ಆಯಿತು. ಆದರೆ ಅಕ್ಷತಾ ಮಾತ್ರ ಮರಳಿ ಬರಲಿಲ್ಲ!

ಬದುಕಿದ್ದರೆ ಇಂಜಿನಿಯರಿಂಗ್ ಓದುತ್ತಿದ್ದಳು:
ಹೇನಬೇರಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯವಳಾದ ಅಕ್ಷತಾ ದೇವಾಡಿಗ ಪ್ರತಿಭಾವಂತೆ. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ಚತುರೆ. ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಳು. ಪಿಯುಸಿ ವಿಜ್ಞಾನ ವಿಭಾಗವನ್ನು ಆಯ್ಕುಕೊಂಡು ತನ್ನ ಇಂಜಿನಿಯರ್ ಆಗು ಬಯಕೆಯೆಡೆಗೆ ಸಾಗುತ್ತಿದ್ದಳು. ತನಗೆ ವಿದ್ಯಾರ್ಥಿವೇತನ ನೀಡುತ್ತಿದ್ದ ಮಾತೃಶ್ರೀಗೆ ಬರೆದ ಪತ್ರದಲ್ಲಿ ಉಪಕಾರವನ್ನು ಸ್ಮರಿಸಿ ಒಳ್ಳೆಯ ಕೆಲಸ ಪಡೆದು ಇತರರಿಗೂ ಉಪಕಾರ ಮಾಡುವುದಾಗಿ ಹೇಳಿದ್ದ ಅಕ್ಷತಾ, ತನ್ನ ಡೈರಿಯಲ್ಲಿ ತನ್ನ ನೂರಾರು ಕನಸುಗಳನ್ನು ಬಿಚ್ಚಿಟ್ಟಿದ್ದಳು. ಅವಳ ಪ್ರತಿಭಾನ್ವಿತೆ ಮಾತ್ರವೇ ಆಗಿರಲಿಲ್ಲ. ಸಮಾಜದ ಬಗೆಗೂ ಒಂದೊಳ್ಳೆ ಕಾಳಜಿ ಹೊಂದಿದ್ದ ದಿಟ್ಟ ಹೆಣ್ಣುಮಗಳಾಗಿದ್ದಳು.

ಕಟ್ಟೆಯೊಡೆದಿದ್ದ ವಿದ್ಯಾರ್ಥಿ, ನಾಗರಿಕರ ಆಕ್ರೋಶ:
ಅಕ್ಷತಾಳ ಸಾವುನಿಂದ ಬೈಂದೂರಿನಂತಹ ಪ್ರದೇಶದಲ್ಲಿಯೂ ರಾಜಾರೋಷವಾಗಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತವೆ ಎಂಬುದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗದಿದ್ದಾಗ ಬೈಂದೂರಿನ ನಾಗರಿಕರು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದ್ದರು. ಪ್ರಕರಣ ನಡೆದ ಮರುದಿನವೇ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸರಿಗೆ ಅಪರಾಧಿಯನ್ನು ಬಂಧಿಸುವಂತೆ ಒತ್ತಡ ಹೇರಿದ್ದರು. ವಿದ್ಯಾರ್ಥಿಗಳು ಮೂರು ದಿನವೂ ಪ್ರತಿಭಟನೆಗಿಳಿದು ತಮ್ಮ ಆಕ್ರೋಶ ಹೊರಹಾಕಿದರು. ಸಮುದಾಯದ ಮುಖಂಡರು, ಬೈಂದೂರಿನ ನಾಗರಿಕರು ಪ್ರತಿಭಟನೆಯ ಮೂಲಕವೇ ಬಿಸಿ ಮುಟ್ಟಿಸಿದ್ದರು. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.

ಪೊಲೀಸರ ಕರ್ತವ್ಯಪ್ರಜ್ಞೆಗೆ ಶ್ಲಾಘನೀಯ:
ರತ್ನಾ ಕೊಠಾರಿಯ ಪ್ರಕರಣದ ಬಗೆಗಿದ್ದಷ್ಟೇ ಒತ್ತಡ ಈ ಪ್ರಕರಣದಲ್ಲಿಯೂ ಎದುರಾಗಿದ್ದರಿಂದ ಘಟನೆ ನಡೆದ ದಿನದಿಂದಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಮೂರು ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಹಂತಗಳಲ್ಲಿ ತನಿಕೆ ಕೈಗೆತ್ತಿಕೊಂಡರೇ, ಇನ್ನೊಂದೆಡೆ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಂದ ಮೊದಲ್ಗೊಂಡು ಇಲಾಖೆಯ ಅಧಿಕಾರಿಗಳು ಬೈಂದೂರಿನಲ್ಲಿ ಬೀಡುಬಿಟ್ಟಿದ್ದರು. ಮೂರು ದಿನದಲ್ಲಿ ಆರೋಪಿಯನ್ನು ಹಿಡಿದೊಪ್ಪಿಸುವುದಾಗಿ ಪ್ರತಿಭಟನಾ ನಿರತರಿಗೆ ಮಾತು ಕೊಟ್ಟಿದ್ದ ಎಸ್ಪಿ ಅದರಂತೆ ನಡೆದುಕೊಂಡರೂ ಕೂಡ. ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಡಿಸಿಬಿಐ ಜೈಶಂಕರ್, ವೃತ್ತನಿರೀಕ್ಷಕ ಸುದರ್ಶನ, ಉಪನಿರೀಕ್ಷಕರುಗಳಾದ ಸಂತೋಷ್ ಕಾಯ್ಕಿಣಿ ಸೇರಿದಂತೆ ದೊಡ್ಡ ಪಡೆಯೇ ಪ್ರಕರಣದ ಹಿಂದೆ ಬಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ಪೋಲಿ ಹುಡುಗರಿಗೆ ಕಠಿಣ ಶಿಕ್ಷೆಯಾಗಬೇಕಿದೆ:
ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಅಕ್ಷತಾಳ ಬೆನ್ನಟ್ಟಿದ್ದ ಯೋಜನಾನಗರದ ಪೋಲಿ ಹುಡುಗ ಸುನಿಲ, ಆಕೆಯ ಸಾವಿಗೆ ಅಧ್ಯಾಯ ಬರೆದು ಬಂದಿದ್ದ. ದುಷ್ಚಟಗಳಿಗೆ ಬಲಿಯಾದ ಕಾಮುಕನಿಗೆ ಹೆಣ್ಣುಮಗಳೊಬ್ಬಳು ಬಲಿಯಾಗಬೇಕಾಯಿತು. ಕತ್ತು ಹಿಸುಕಿ ಕೊಂದರೂ ಏನೂ ಆಗಿಲ್ಲವೆಂಬಂತೆ ತಿರುಗಾಡಿಕೊಂಡಿದ್ದ ದುರುಳನನ್ನು ಪೊಲೀಸರು ಕೊನೆಗೂ ಬಲೆಗೆ ಬೀಳಿಸಿದರು. ಜೈಲಿಗೂ ಅಟ್ಟಿದರು. ಸಾಕ್ಷಾಧಾರ ನಾಶಪಡಿಸಿದನೆಂಬ ಕಾರಣಕ್ಕೆ ಆತನೊಂದಿಗೆ ಜೈಲಿಗೆ ಸೇರಿದ್ದ ಆತನ ಸ್ನೇಹಿತ ಅಕ್ಷಯ್‌ಗೆ ಈಗ ಹೊರಬಂದಿದ್ದಾನೆ. ಆದರೆ ಇಂತಹ ಕಾಮುಕರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದಾಗಲೇ ಉಳಿದವರಿಗೂ ಒಂದಿಷ್ಟು ಭಯ ಹುಟ್ಟಲು ಸಾಧ್ಯವಿದೆ. ಅಷ್ಟು ಮಾತ್ರವಲ್ಲದೇ ಸಮಾಜದಲ್ಲಿ ಸೇರಿಕೊಂಡಿರುವ ಇಂತಹ ಪೊಲಿಗಳ ಬಗೆಗೆ ಪೊಲೀಸರು ಒಂದು ಕಣ್ಣಿಡದಿದ್ದರೇ ಇಂತಹ ಪ್ರಕರಣಗಳು ಮರುಕಳಿಸುವ ಸಾಧ್ಯತೆಯೂ ಇದೆ. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.

ಅಕ್ಷತಾಳ ನೆನಪಲ್ಲಿ ಹೇನಬೇರಿಗೆ ಅಭಿವೃದ್ಧಿ ಭಾಗ್ಯ?
ಸರಣಿ ದನಗಳ ಸಾವಿನಿಂತ ಸುದ್ದಿಯಾಗಿದ್ದ ಹೇನಬೇರು ಪ್ರದೇಶಕ್ಕೆ ಸಾಲು ಸಾಲಾಗಿ ಬಂದು ಹೋಗಿದ್ದ ರಾಜಕಾರಣಿಗಳ ಕಾರು ಧೂಳೆಬ್ಬಿಸಿತ್ತೇ ಹೊರತು ಈ ಭಾಗದ ಅಭಿವೃದ್ಧಿ ಭಾಗ್ಯವನ್ನು ಕರುಣಿಸಿರಲಿಲ್ಲ. ಅಕ್ಷತಾ ದೇವಾಡಿಗಳ ಸಾವಿನ ಬಳಿಕ ಮನೆಯ ಮಕ್ಕಳ ರಕ್ಷಣೆಯ ಬಗೆಗೆ ಭಯಭೀತರಾದ ಜನತೆ ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜನಪ್ರತಿನಿಧಿಗಳನ್ನು ಪಟ್ಟು ಹಿಡಿದರು. ಹಾಗಾಗಿಯೇ ರಸ್ತೆ, ಬೀದಿದೀಪ, ಇತ್ತಿಚಿಗೆ ಬಸ್ ಸೌಲಭ್ಯ ಸೇರಿದಂತೆ ಒಂದಿಷ್ಟು ಮೂಲಭೂತ ಸೌಲಭ್ಯಗಳು ಬೈಂದೂರು ಶಾಸಕರ ಮೂಲಕ ಈ ಭಾಗಕ್ಕೆ ಬಂದವು. ಒಂದು ಮಟ್ಟಿನ ಸುಧಾರಣೆಗಳೂ ಆಗಿದ್ದವು. ಬಹುಶಃ ಅಕ್ಷತಾಳೂ ಇದನ್ನೇ ನಿರೀಕ್ಷಿಸಿದ್ದಳೇನೊ. ಕುಂದಾಪ್ರ ಡಾಟ್ ಕಾಂ.

ವರ್ಷವಾದರೂ ಮುಗಿಯದ ಸಾವಿನ ಮನೆಯ ರಾಜಕೀಯ:
ಹೇನಬೇರು ಅಕ್ಷತಾಳ ಪ್ರಕರಣದಲ್ಲಿ ನೈಜ ಆರೋಪಿಯನ್ನು ಜೈಲಿಗೆ ಅಟ್ಟಲಾಗಿದೆ. ಸುಳ್ಳ ಮಾಹಿತಿಯನ್ನು ನೀಡಿದನೆಂಬ ಕಾರಣಕ್ಕೆ ಜೈಲು ಸೇರಿದ್ದ ಆರೋಪಿಗೆ ಆರು ತಿಂಗಳ ಬಳಿಕ ಬೇಲ್ ದೊರೆದಿದೆ. ಇಷ್ಟು ಬಿಟ್ಟರೆ ಪ್ರಕರಣದಲ್ಲಿ ಇನ್ನಾರೂ ಭಾಗಿಯಾಗಿಲ್ಲ ಎಂದು ಸ್ವತಃ ತನಿಕೆ ನಡೆಸಿರುವ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರೇ ತಿಳಿಸಿದ್ದರು. ಮಾತ್ರವಲ್ಲದೇ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಂತೆ ಸಾರ್ವಜನಿಕರ ಒತ್ತಡ ಇದ್ದದ್ದು ಬಿಟ್ಟರೇ, ಯಾವುದೇ ಪಕ್ಷದ ಯಾವೊಬ್ಬ ರಾಜಕಾರಣಿಗಳಿಂದಲೂ ಬೆರೆ ತರಹದ ಒತ್ತಡ ಇದ್ದಿರಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದರು. ಇಷ್ಟಾಗಿಯೂ ಸ್ಥಳೀಯ ಪತ್ರಿಕೆಯೊಂದನ್ನು ದಾಳವನ್ನಾಗಿಸಿಕೊಂಡ ಕೆಲವರು ವಿನಾಕಾರಣ ಅಕ್ಷತಾಳ ಪ್ರಕರಣದಲ್ಲಿ ಆಕೆಗೆ ಕುಟುಂಬಕ್ಕೆ ನೆರವಾಗಿದ್ದವರನ್ನೇ ತೇಜೋವಧೆ ಮಾಡಲು ನಿಂತರು. ನಿರಂತರವಾಗಿ ಪತ್ರಿಕೆಯ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತಮ್ಮ ಕಾರ್ಯ ಸಾಧಿಸಿಕೊಂಡರು. ಅಕ್ಷತಾಳ ಸಾವಿನ ಬಳಿಕವೂ ಪದೇ ಪದೇ ಅದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟದ್ದು ಬೈಂದೂರಿನ ಇತಿಹಾಸದಲ್ಲಿ ಅಕ್ಷತಾಳ ಕರಾಳ ನೆನಪಿನೊಂದಿಗೇ ಉಳಿದುಕೊಂಡ ದುರಂತವೇ ಸರಿ. \ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ\

ಇದನ್ನೂ ಓದಿ:
ಬೈಂದೂರು ಕಾಲೇಜು ವಿದ್ಯಾರ್ಥಿನಿಯ ನಿಗೂಢ ಸಾವು. ಕೊಲೆ ಶಂಕೆ – http://kundapraa.com/?p=3247
► ಅಕ್ಷತಾ ಕೊಲೆ ಪ್ರಕರಣ: ಸಮಗ್ರ ತನಿಕೆಗೆ ಆಗ್ರಹ, ಬೈಂದೂರು ಬಂದ್ – http://kundapraa.com/?p=3342
ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಸಾವು: ಪ್ರತಿಭಟನೆ, ಚುರುಕುಗೊಂಡ ತನಿಕೆ – http://kundapraa.com/?p=3253
► ಅಕ್ಷತಾ ಸಾವು: ಎರಡನೇ ದಿನವೂ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ – http://kundapraa.com/?p=3265
ವಿದ್ಯಾರ್ಥಿನಿ ಅಕ್ಷತಾ ಕೊಲೆ ಆರೋಪಿ ಬಂಧನ – http://kundapraa.com/?p=3281
► ಆರಿದ ಅಕ್ಷತಾ ಎಂಬ ಬೆಳಕು ಮತ್ತು ಹೊಲಸು ರಾಜಕೀಯ – http://kundapraa.com/?p=3593
ಅಕ್ಷತಾ ಪ್ರಕರಣ ಶೀಘ್ರ ಭೇದಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ: ಶಾಸಕ ಗೊಪಾಲ ಪೂಜಾರಿ – http://kundapraa.com/?p=3308
► ಬೈಂದೂರು ಅಕ್ಷತಾ ದೇವಾಡಿಗ ಕೊಲೆ ಪ್ರಕರಣ: ಎರಡನೇ ಆರೋಪಿ ಅಕ್ಷಯ್ ಗೆ ಜಾಮೀನು – http://kundapraa.com/?p=10164

ಅಕ್ಷತಾ ಮನೆಗೆ ಸಂಸದ ಯಡಿಯೂರಪ್ಪ ಭೇಟಿ – http://kundapraa.com/?p=3336
► ಅಕ್ಷತಾ ಮನೆಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭೇಟಿ – http://kundapraa.com/?p=3333
ಮೃತ ಅಕ್ಷತಾ ಮನೆಗೆ ಮಾಜಿ ಸಚಿವ ವೀರಪ್ಪ ಮೊಯ್ಲಿ ಭೇಟಿ – http://kundapraa.com/?p=3295
► ಅಕ್ಷತಾ ಮನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ಭೇಟಿ – http://kundapraa.com/?p=3320

► ಅಕ್ಷತಾ ಕುಟುಂಬಕ್ಕೆ ನವೋದಯ ಟ್ರಸ್ಟ್‌ನಿಂದ 1ಲಕ್ಷ ರೂ. ಹಸ್ತಾಂತರ – http://kundapraa.com/?p=3273
ಮೃತ ಅಕ್ಷತಾ ದೇವಾಡಿಗ ಹೆತ್ತವರಿಗೆ ಧನಸಹಾಯ – http://kundapraa.com/?p=5013
► ರತ್ನಾ ಕೊಠಾರಿ, ಅಕ್ಷತಾ ದೇವಾಡಿಗ ಕುಟುಂಬಕ್ಕೆ ಪರಿಹಾರ ವಿತರಣೆ – http://kundapraa.com/?p=4205
ಹೇನಬೇರು ರಸ್ತೆಗೆ ಬಂತು ಸೋಲಾರ್ ದೀಪ – http://kundapraa.com/?p=4189
► ಬೈಂದೂರು ಹೇನಬೇರಿಗೆ ಬಂತು ಸರಕಾರಿ ಬಸ್ಸು. ಒಂದು ವರ್ಷದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಆದ್ಯತೆ – http://kundapraa.com/?p=14985

 

Exit mobile version