ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸಮಿಶ್ರ ಸರಕಾರಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ದೇಶದಲ್ಲಿ ಸುಭದ್ರವಾದ ಒಂದು ಪಕ್ಷದ ಸರಕಾರ ರಾಜ್ಯ ಹಾಗೂ ದೇಶದಲ್ಲಿ ಬರಬೇಕಿದೆ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ಹೇಳಿದರು. ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಈ ಚುನಾವಣೆ ಮುಂದಿನ ಐದು ವರ್ಷಕ್ಕಷ್ಟೇ ಅಲ್ಲ. ಬದಲಿಗೆ ಮುಂದಿನ ತಲೆಮಾರಿಗೆ ಎಂದು ಭಾವಿಸಬೇಕಿದೆ. ಎರಡು ತಲೆಮಾರುಗಳ ಮಾಡಿಕೊಂಡಿರುವ ನಷ್ಟವನ್ನು ತುಂಬಿಕೊಡಬೇಕಿದ್ದರೆ ಮತ್ತೆ ಬಿಜೆಪಿ ಪಕ್ಷವನ್ನೇ ಬೆಂಬಲಿಸಬೇದೆ. ಬಿಜೆಪಿಯನ್ನು ಹೊರಗಿಡಬೇಕು ಎಂಬ ಏಕೈಕ ದುರುದ್ದೇಶದಿಂದ ಸಂಮಿಶ್ರ ಸರಕಾರಗಳು ಜನರ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮೂರು ಎಂಪಿ ಸ್ಥಾನಗಳನ್ನು ಪಡೆದುಕೊಂಡ ಪಕ್ಷ ಇಂದು ಕರಾವಳಿ ಭಾಗದಲ್ಲಿ ಸ್ವರ್ಧಿಸುತ್ತಿರುವುದು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲು ಮಾತ್ರ. ಶಿವಮೊಗ್ಗ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಲೆಕ್ಕಾಚಾರ ಮಾಡಿಕೊಂಡು ಮೈತ್ರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು, ವಾಟ್ಸಪ್ ಫೇಸ್ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮತಯಾಚನೆ ಮಾಡುವುದು ಮಾದರಿ ನೀತಿ ಸಂಹಿತೆಯಂತೆ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಎದುರಿಸಬೇಕಾದ್ದರಿಂದ ಈ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ ಎಂದು ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ್‌ಕುಮಾರ್ ಹೇಳಿದರು. ಅವರು ಗುರುವಾರ ಚುನಾವಣೆಗೆ ಪೂರ್ವಭಾವಿಯಾಗಿ ಬೈಂದೂರು ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೀಗೆ ಹೇಳಿದರು. ಚುನಾವಣೆಯ ಅಕ್ರಮಗಳನ್ನು ತಡೆಯಲು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರೂರು, ದಳಿ ಹಾಗೂ ಹೊಸಂಗಡಿ ಭಾಗದಲ್ಲಿ ಮೂರು ಚೆಕ್‌ಪೋಸ್ಟ್‌ಗಳಿದ್ದು ವಾಹನಗಳನ್ನು ತಪಾಸಣೆ ನಡೆಸುತ್ತಾರೆ. ಪ್ರೈಯಿಂಗ್ ಸ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ ದಿನದ ಎಲ್ಲಾ ಹೊತ್ತಿನಲ್ಲಿ ಕಾರ್ಯನಿರ್ವಹಿಸುತ್ತದೆ. ಚುನಾವಣೆಗೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ವಾಹನಗಳಿಗೆ ಅಂಟಿಸುವಂತಿಲ್ಲ. ಮತದಾನದ ದಿನ ಪೋಲಿಂಗ್ ಸ್ಟೇಷನ್‌ನ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುವಂತಿಲ್ಲ ಈ ಮೊದಲಾದ ಮಾಹಿತಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಮುವಾದಿ ಪಕ್ಷಗಳನ್ನು ದೂರವಿಡಬೇಕು ನೆಲೆಯಲ್ಲಿ ಜಾತ್ಯಾತೀತ ತತ್ವದಡಿ ಇರುವ ಎಲ್ಲರೂ ಒಂದಾಗಬೇಕು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಇರಬೇಕು ಎಂಬ ಕಾರಣಕ್ಕೆ ದೇಶದ ಎಲ್ಲಾ ಭಾಗಗಳಲ್ಲಿಯೂ ಜಾತ್ಯಾತೀತರು ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟಗಿರಿ ನಾಡಗೌಡ ಹೇಳಿದರು. ಅವರು ಗುರುವಾರ ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಕರಾವಳಿಯಲ್ಲಿ ಮೀನುಗಾರರ ಅಭ್ಯುದಯಕ್ಕೆ ರಾಜ್ಯ ಸರಕಾರ ವಿವಿಧ ಹಂತದಲ್ಲಿ ನೆರವಾಗುತ್ತಿದೆ. ೧೪೭ ಕೋಟಿ ರೂ. ಡಿಸೇಲ್ ಸಬ್ಸಿಡಿ ನೀಡಲಾಗುತ್ತಿದೆ. ಕೇಂದ್ರ ಸರಕಾರ ಸೀಮೆಎಣ್ಣೆ ಕಡಿತಗೊಳಿಸಿದ ಬಳಿಕ ರಾಜ್ಯ ಸರಕಾರವೇ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿರಿಸಿ ಸುಮಾರು ೨೦ ಕೋಟಿಯ ತನಕ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ಮೀನುಗಾರಿಕಾ ಬೋಟಿಗೆ ಪ್ರತಿ ವರ್ಷ ೮-೯ ಕೋಟಿ ರೂ. ಒಟ್ಟು ಸಬ್ಸಿಡಿ ನೀಡಲಾಗುತ್ತಿದೆ. ಮೀನುಗಾರಿಕಾ ಬೋಟುಗಳ ಟ್ರ್ಯಾಕ್ ಮಾಡಲು ಇಸ್ರೋದಿಂದ ತಯಾರಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ‘ದೇಶದಲ್ಲಿ ನಡೆಯುತ್ತಿರುವ ವ್ಯಾಪಾರಿ ಪ್ರವೃತ್ತಿಯ ರಾಜಕಾರಣಿಗಳ ಆಡಳಿತದಿಂದ ಪ್ರಜಾತಂತ್ರ ವ್ಯವಸ್ಥೆ ಅರ್ಥ ಕಳೆದುಕೊಂಡಿದೆ. ಅದರ ಸ್ಥಾನದಲ್ಲಿ ಪ್ರಜೆಗಳ ಆಡಳಿತ ಅಥವಾ ಪ್ರಜಾಕೀಯ ನೆಲೆಗೊಳಿಸಬೇಕು ಎನ್ನುವುದು ಚಿತ್ರನಟ ಉಪೇಂದ್ರ ಸಾರಥ್ಯದ ‘ಉತ್ತಮ ಪ್ರಜಾಕೀಯ ಪಕ್ಷ’ದ ಉದ್ದೇಶ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ವೆಂಕಟೇಶ ಆರ್. ಹೇಳಿದರು. ಬುಧವಾರ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಚುನಾವಣೆ ಮತ್ತು ರಾಜಕೀಯದಲ್ಲಿ ಹಣ ಮತ್ತು ತೋಳ್ಬಲ ಮೇಲುಗೈ ಸಾಧಿಸುತ್ತಿವೆ. ಅಭ್ಯರ್ಥಿ ಚುನಾವಣೆ ಗೆಲ್ಲಲು ಹಣ ಹೂಡಿದಾಗ ಗೆದ್ದ ಬಳಿಕ ಲಾಭಸಹಿತ ಹಿಂಪಡೆಯುವ ಅನಿವಾರ್ಯತೆ ಇದ್ದೇ ಇರುತ್ತದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಮಾಡುವ ದುಷ್ಪರಿಣಾಮವನ್ನು ಕಾಣುತ್ತಿದ್ದೇವೆ. ಭ್ರಷ್ಟಾಚಾರದ ಸಾಂಸ್ಥೀಕರಣ ಆಗಿಬಿಟ್ಟಿದೆ. ಪ್ರಜಾಕೀಯ ಇದಕ್ಕೆ ಪರ್ಯಾಯ ಎನಿಸಿದೆ. ಅದು ಜನರ ಆಶೋತ್ತರಗಳನ್ನು, ಬೇಡಿಕೆಗಳನ್ನು ಈಡೇರಿಸುವ ಆಡಳಿತ ನೀಡಲು ಬದ್ಧವಾಗಿದೆ. ಅದು ಯಾವುದೇ ಪ್ರಣಾಳಿಕೆಯನ್ನು ಹೊಂದಿಲ್ಲ. ಪ್ರಚಾರಕ್ಕೆ ವೆಚ್ಚ ಮಾಡುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ಅದರ ಗುರಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಎಪ್ರಿಲ್ 16ರಿಂದ 19ರ ತನಕ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಜರುಗಲಿದೆ. ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ಆದ್ವರ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ದಿನಾಂಕ ಎ.16ರ ಮಂಗಳವಾರ ಬೆಳಿಗ್ಗೆ ಸಾಮೂಹಿಕ ದೈವ ದೇವರ ಪ್ರಾರ್ಥನೆ, ಮಹಾಸಂಕಲ್ಪ, ಧ್ವಜಾರೋಹಣ, ಗಣಹೋಮ ಮೊದಲಾದ ಧಾರ್ಮಿಕ ಕಾರ್ಯಗಳು, ಸಂಜೆ ವಿವಿಧ ಹೋಮ ಹವನಾದಿಗಳು ಇರಲಿವೆ. ಎ.17ರ ಬುಧವಾರ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಎ.18ರ ಗುರುವಾರ ಬೆಳಿಗ್ಗೆ ಬಿಂಬ ಶುದ್ಧಿ ಹೋಮ, ಕಲಶ ಸ್ಥಾಪನೆ, ಸಂಜೆ ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಸಹಿತ ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದೆ. ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಧ್ಯಾಯ ಜನಾರ್ದನ್ ಇದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಮೊದಲಾದವರು ವೇದಿಕೆಯಲ್ಲಿದ್ದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತಿ ಅಗತ್ಯ. ಸರಕಾರಿ ಶಾಲೆಗಳಲ್ಲಿ ಅವಶ್ಯವಾದ ಮೂಲಭೂತ ಸೌಕರ್ಯವನ್ನು ಒದಗಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರವೂ ಮುಖ್ಯವಾದುದು ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹೇಳಿದರು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದ ಇದರ ಪ್ರತಿಭಾ ಪುರಸ್ಕಾರ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಲೆಯಲ್ಲಿ ಹಳೆವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಂದಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿರುವು ಸಂತಸದ ವಿಷಯ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಪಲ್ಲವಿ ಇಡೂರು, ರಾಘವೇಂದ್ರ ಉಪ್ಪುಂದ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಗ್ರಾಮಸ್ಥರಾದ ಶ್ರೀನಿವಾಸ ಉಬ್ಜೇರಿ, ಉಪ್ಪುಂದ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಶ್ರೀಗಣೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಜಿ.…
ಕುಂದಾಪ್ರ ಡಾಟ್ ಕಾಂ ವರದಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವೇ ಮತದಾನ. ಯಾವುದೇ ಧರ್ಮ, ಅಂತಸ್ತು, ಲಿಂಗ ಬೇಧವಿಲ್ಲದೇ ಪ್ರತಿಯೊಬ್ಬ ನಾಗರೀಕರೂ ಸಮಾನವಾಗಿ ಪಡೆದಿರುವ ಮತದಾನದ ಹಕ್ಕು , ತಮ್ಮ ಆಯ್ಕೆಯ ಯೋಗ್ಯ ಪ್ರತಿನಿಧಿಯನ್ನು ಆರಿಸಲು ದೊರೆತಿರುವ ಮುಕ್ತ ಸ್ವಾತಂತ್ರ. ಈ ಮತದಾನ ಪ್ರಕ್ರಿಯೆಯಲ್ಲಿ, ಮತದಾರರು ಚಲಾಯಿಸುವ ಮತ ತಮ್ಮ ಆಯ್ಕೆಯ ವ್ಯಕ್ತಿಗೆ ದೊರೆತಿದೆ ಎಂಬುದನ್ನು ಖಾತರಿ ಪಡಿಸಲು ಚುನಾವಣಾ ಆಯೋಗ ಒದಗಿಸಿರುವ ವಿವಿ ಪ್ಯಾಟ್ (Voter Verifiable Paper Audit Trail) ಯಂತ್ರ ಮತದಾನದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸುತ್ತದೆ. ಹಿಂದೆ ಮತದಾನ ಸಂದರ್ಭದಲ್ಲಿ ಮತಪತ್ರಗಳನ್ನು ಬಳಸುತ್ತಿದ್ದು, ಇದರಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿತ್ತು ಇದನ್ನು ಸರಿಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆಯನ್ನು ಜಾರಿಗೆ ತಂದಿತು, ಇದರಿಂದ ಶೀಘ್ರದಲ್ಲಿ ಮತದಾನ ಮುಗಿದು ಮತ್ತು ಅತ್ಯಂತ ನಿಖರವಾಗಿ ಮತ್ತು ತ್ವರಿತಗತಿಯಲ್ಲಿ ಅಭ್ಯರ್ಥಿಯ ಆಯ್ಕೆ ಘೋಷಣೆ ನಡೆಯಲು ಸಾದ್ಯವಾಯಿತು. ಆದರೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಅಪಪ್ರಚಾರದಿಂದ ಮತದಾರರು ಗೊಂದಲಕ್ಕೊಳಗಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೊಟ್ಟ ಭರವಸೆಗಳನ್ನು ಈಡೇರಿಸಿ ಜನರಲ್ಲಿ ವಿಶ್ವಾಸ ಮೂಡಿಸಿರುವುದಲ್ಲದೇ, ವಿಶ್ವದ ಮುಂದೆ ಭಾರತ ತಲೆಯೆತ್ತುವಂತೆ ಮಾಡಿದ್ದಾರೆ. ಹಾಗಾಗಿ ನಮ್ಮ ನಾಯಕನ ಹೆಸರನ್ನು ಹೇಳಿಯೇ ಚುನಾವಣೆ ಎದುರಿಸಲು ನಮಗೆ ಹೆಮ್ಮೆ ಇದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿದರು. ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿಯ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದಲ್ಲಿ ೩೦೦ ಲೋಕಸಭಾ ಕ್ಷೇತ್ರಗಳನ್ನು, ಕರ್ನಾಟಕದಲ್ಲಿ ಕನಿಷ್ಠ ೨೨ ಲೋಕಸಭಾ ಕ್ಷೇತ್ರಗಳನ್ನು ಗೆದ್ದು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದರು. ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಭ್ರಷ್ಟಾಚಾರ ಮುಕ್ತ ಸರಕಾರ, ಶ್ರೀಸಾಮಾನ್ಯರಿಗೆ ತಲುಪುವಂತಹ ಅಭಿವೃದ್ಧಿ ಕಾರ್ಯ, ದೇಶದ ಗಡಿಗಳ ರಕ್ಷಣೆ, ವಿದೇಶದಲ್ಲಿ ಭಾರತದ ಗೌರವ ಹೆಚ್ಚುವ ರೀತಿಯಲ್ಲಿ ಮುನ್ನಡೆಯುದಾಗಿ ಹೇಳಿದ್ದರು. ಅದರಂತೆಯೇ ನಡೆದಿದ್ದಾರೆ. ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ ಎಂದರು. ಕುಮಾರಸ್ವಾಮಿ ನೇತೃತ್ವದ ಭ್ರಷ್ಟಾಚಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದಲ್ಲಿ 300 ಲೋಕಸಭಾ ಕ್ಷೇತ್ರಗಳನ್ನು, ಕರ್ನಾಟಕದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬೈಂದೂರಿನ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಭ್ರಷ್ಟಾಚಾರ ಮುಕ್ತ ಸರಕಾರ, ಶ್ರೀಸಾಮಾನ್ಯರಿಗೆ ತಲುಪುವಂತಹ ಅಭಿವೃದ್ಧಿ ಕಾರ್ಯ, ದೇಶದ ಗಡಿಗಳ ರಕ್ಷಣೆ, ವಿದೇಶದಲ್ಲಿ ಭಾರತದ ಗೌರವ ಹೆಚ್ಚುವ ರೀತಿಯಲ್ಲಿ ಮುನ್ನಡೆಯುದಾಗಿ ಹೇಳಿದ್ದರು. ಅದರಂತೆಯೇ ನಡೆದಿದ್ದಾರೆ. ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ ಎಂದರು. ಕುಮಾರಸ್ವಾಮಿ ನೇತೃತ್ವದ ಭ್ರಷ್ಟಾಚಾರ ಸರಕಾರದಿಂದ ಜನರು ಬೇಸತ್ತಿದ್ದಾರೆ. ಸಚಿವ ರೇವಣ್ಣ ಕಾಮಗಾರಿಯೇ ನಡೆಸದೇ ಸರಕಾರದ ಹೊಡೆಯುವ ಕೆಲಸ ಮಾಡಿದ್ದಾರೆ. ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಮೋದಿ ಅಲೆ ಇದ್ದು, ಮೈತ್ರಿ ಅಭ್ಯರ್ಥಿಗಳಿಗೆ ಕಂಟಕ ಎದುರಾಗಿದೆ. ನಿಶ್ಚಿತವಾಗಿ ಈ ಭಾರಿ ಬಹುಮತದಿಂದ ಬಿಜೆಪಿ…
