Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಎನ್‌ಐಟಿ ಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್‌ನ ಪ್ರವೇಶಕ್ಕಾಗಿ ನಡೆದ ಜೆಇಇ ಮೈನ್‌ನ ಬಿ – ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಟಿ. ದೇವಾಡಿಗ 96.5 ಅಂಕ ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಹಾಗೆಯೇ ಆರ್ಕಿಟೆಕ್ಚರ್ ಡ್ರಾಯಿಂಗ್‌ನಲ್ಲಿ 99.7 ಅಂಕ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿನಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟ-2020-21ನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾದ ರಾಜೇಂದ್ರ ತೋಳಾರ್ ಇತ್ತೀಚೆಗೆ ಉದ್ಘಾಟಿಸಿದರು. ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟ್ರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಶ್ರೀ ಶಾರದಾ ಕಾಲೇಜು ಬಸ್ರೂರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು. ಕುಸ್ತಿ ಪಂದ್ಯಾಟದ ಫಲಿತಾಂಶ: 57 ಕೆ.ಜಿ ವಿಭಾಗ- ಪ್ರಥಮ- ಶ್ರೀನಿವಾಸ,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಮಹಮ್ಮದ್ ಸಯೀದ್,ಎಕ್ಷಲೆಂಟ್ ಪದವಿಪೂರ್ವಕಾಲೇಜು,ಸುಣ್ಣಾರಿ,ತೃತೀಯ- ಸುದೀಪ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ 61ಕೆ.ಜಿ ವಿಭಾಗ- ಪ್ರಥಮ-ರವೀಶ್,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಸುದೀಪ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ದೀನದಯಾಳ್ ನಿಶಾದ್,ಮಹಾತ್ಮಗಾಂಧಿ ಪದವಿ ಪೂರ್ವಕಾಲೇಜು,ಉಡುಪಿ. 65 ಕೆ.ಜಿ ವಿಭಾಗ- ಪ್ರಥಮ-ಅಜಯ್‌ಕುಮಾರ್,ಸರಕಾರಿ ಪದವಿ ಪೂರ್ವಕಾಲೇಜು,ಕುಂದಾಪುರ, ದ್ವಿತೀಯ-ಅವಿನಾಶ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ವರುಣ್, ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ 70 ಕೆ.ಜಿ ವಿಭಾಗ- ಪ್ರಥಮ-ಪ್ರಿನ್ಸನ್‌ಡಿಸೋಜಾ,ಶ್ರೀ ಶಾರದಾಕಾಲೇಜು ಬಸ್ರೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಸಾಂಪ್ರದಾಯಿಕ ಕ್ರೀಡೆಗಳ ಪಂದ್ಯಾಟವನ್ನು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಉದ್ಘಾಟಿಸಿದರು. ಇನ್ಫೋಸಿಸ್ ಕಂಪೆನಿ ಉದ್ಯೋಗಿ ಮತ್ತು ಪೂರ್ವ ವಿದ್ಯಾರ್ಥಿ ಶಿವಪ್ರಸಾದ್ ವಕ್ವಾಡಿ ಮಾತನಾಡಿ, ವಿದ್ಯುನ್ಮಾನ ಯುಗದ ಭರಾಟೆಯಲ್ಲಿ ಸಾಂಪ್ರದಾಯಿಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಕೈಂಕರ್ಯದಲ್ಲಿ ತೊಡಗಿರುವುದು ಸ್ತುತ್ಯಾರ್ಹ. ಇಂತಹ ಗ್ರಾಮೀಣ ಕ್ರೀಡೆಗಳು ಪರಿಸರ ಕಾಳಜಿಯನ್ನು ಮೂಡಿಸುವುದರ ಜೊತೆಗೆ ಮಾನವ ಸಂಬಂಧವನ್ನು ವರ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ.ಎನ್., ಕ್ರೀಡಾ ಸಂಘದ ಕಾರ್ಯದರ್ಶಿಯಾದ ಲಕ್ಷ್ಮೀಶ ಮಂಜ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿ ಸುಪ್ರೀತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಚ್. ಎಮ್. ಎಮ್. ಆಂಗ್ಲ ಪ್ರಾಥಮಿಕ ಶಾಲೆ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ವಿಶ್ವ ಕರಾಟೆ ಫೆಡರೇಶನ್ ಐದನೇ ಡಾನ್ ಬ್ಲ್ಯಾಕ್ ಬೆಲ್ಟ್ ಶಿಹಾನ್ ಕೀರ್ತಿ ಜಿ. ಕೆ. ಮತ್ತು ತಂಡದವರಿಂದ ಸ್ವಆತ್ಮ ರಕ್ಷಣೆ ಕಲೆಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸರ್ವತ್ ಪರ್ವೀನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲೆ ಶುಭಾ ಕೆ. ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್, ಪ್ರೌಢ ಶಾಲಾ ಸಂಯೋಜಕರಾದ ಚಂದ್ರಶೇಖರ್, ಗೈಡ್ಸ್ ಶಿಕ್ಷಕಿ ರೇಖಾ ಕೆ. ಯು. ಉಪಸ್ಥಿತರಿದ್ದರು. ಕಂಪ್ಯೂಟ್ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಇತ್ತಿಚೆಗೆ ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು. ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ ಡಿಸೋಜಾ, ಕೋಶಾಧಿಕಾರಿ ಕೆರೋಲ್ ಗೊನ್ಸಾಲ್ವಿಸ್ ನಡೆಸಿಕೊಟ್ಟರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಸಚೇತಕಿ ಸಿಸ್ಟರ್ ಆಶಾ ಶುಭ ಕೋರಿದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಜೂಲಿಯಾನ ಮಿನೇಜಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್‌ಕ್ರಾಸ್ ಘಟಕ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ‘ನೆರೆಹೊರೆ – ಯುವಸಂಪತ್ತು’ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಂ.ಗೊಂಡ ಅವರು ಇಂದಿನ ದಿನಗಳಲ್ಲಿ ನೀರಿನ ಅಭಾವ ಮಿತಿಮೀರಿದೆ ಎಲ್ಲಿ ನೋಡಿದರೂ ಅಂತರ್ಜಲ ಮಟ್ಟ ಕುಸಿದು ನಗರ ಗ್ರಾಮ ಎಂಬ ಭೇದವೆನ್ನದೆ ನೀರಿನ ಕೊರತೆ ಅತಿದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆ ನೀಗಿಸುವ ಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ನಡೆಯುತ್ತಿರುವ ಮಳೆಕೊಯ್ಲು ಕುರಿತ ವಿಷಯ ಇಂದಿನ ವಿದ್ಯಾರ್ಥಿಗಳಿಗೆ ತೀರಾ ಅಗತ್ಯವಾಗಿದೆ. ಇದು ಖಂಡಿತ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಕಾರ್ಯಕ್ರಮವಾಗಿದೆ. ವಿದ್ಯಾಥಿಜೀವನದಲ್ಲಿ ಕೇವಲ ಅಂಕಗಳಿಗೆ ಮೀಸಲಾಗಿರದೇ ಯಾವುದೇ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಅವಕಾಶಗಳನ್ನು ಉಪಯೋಗಿಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ವಿಜ್ಞಾನ ಸಮಾವೇಶ- 2021 ದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಕಿರಿಯರ ವಿಭಾಗದಲ್ಲಿ ಮಂಡಿಸಿದ ‘ಸುಸ್ಥಿರ ಜೀವನಕ್ಕೆ ಯೋಗ್ಯ ತಂತ್ರಜ್ಞಾನ’ ಎಂಬ ಪ್ರಬಂಧವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ, ವಿಜ್ಞಾನ ಶಿಕ್ಷಕಿ ಚೈತ್ರಾ ಶೆಟ್ಟಿ, ನಿರ್ಮಲಾ ಪೂಜಾರಿ ಮಾರ್ಗದರ್ಶನದಲ್ಲಿ ಶಿವಾನಿ ಪ್ರಭಾಕರ ಪೂಜಾರಿ ಮತ್ತು ಅಪೇಕ್ಷಾ ಸ್ಥಳೀಯ ಗುಡಿ ಕೈಗಾರಿಕೆಯಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಕ್ಷೇತ್ರ ಅಧ್ಯಯನ ನಡೆಸಿ ಜಿಲ್ಲಾ ಮಟ್ಟದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಕುಂಭಾಶಿ ಗ್ರಾಮದ ಕೊರಗ ಸಮುದಾಯದ ಕುಲಕಸುಬಾದ ಬುಟ್ಟಿ ಹೆಣೆಗೆಯುವುದನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕ್ಷೇತ್ರ ಅಧ್ಯಯನದ ವೇಳೆ ಈ ಕುಲಕಸುಬು ಅವನತಿಯತ್ತ ಸಾಗುತ್ತಿರುವುದನ್ನು ಗುರುತಿಸಿದ್ದರು. ಬೆತ್ತ, ಬಿದಿರು, ಬಿಳುಲುನಂತಹ ಕಚ್ಚಾ ಸಾಮಗ್ರಿಗಳ ಕೊರತೆ, ಪ್ಲಾಸ್ಟಿಕ್ ಮತ್ತು ರಬ್ಬರ್ ಬುಟ್ಟಿಗಳ ಬಳಕೆ ಹೆಚ್ಚಳ, ಮಾರಾಟ ಸೌಲಭ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ನ ಬೈಂದೂರು ಶಾಖೆಗೆ ಯಡ್ತರೆಯಲ್ಲಿರುವ ಸ್ವಂತ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಬೈಂದೂರು ಚರ್ಚ್ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಈಚೆಗೆ ಶಿಲಾನ್ಯಾಸ ಮಾಡಿದರು. ನೂತನ ಕಟ್ಟಡ ನಿರ್ಮಾಣವಾದ ಮೇಲೆ ಬಾಡಿಗೆ ಕಟ್ಟಡದಲ್ಲಿರುವ ಶಾಖೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿ ಅಲ್ಮೇಡಾ ತಿಳಿಸಿದರು. ಉಪಾಧ್ಯಕ್ಷ ಕಿರಣ್ ಲೋಬೊ, ನಿರ್ದೇಶಕಿ ಶಾಂತಿ ಪಿರೇರಾ, ಫಿಲಿಪ್ ಡಿಕೊಸ್ತಾ, ವಿಲ್ಫ್ರೆಡ್ ಮಿನೇಜೆಸ್, ಪ್ರಕಾಶ ಲೋಬೊ, ಡಯಾನಾ ಡಿ. ಆಲ್ಮೇಡಾ, ಶಾಂತಿ ಕರ್ವಾಲ್ಲೊ, ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜ, ಎಇಒ ಮೇಬಲ್ ಪುರ್ಟಾಡೊ, ಬೈಂದೂರು ಶಾಖಾ ಪ್ರಬಂಧಕಿ ವಿನಿತಾ ಡಿಸೋಜ, ಗುತ್ತಿಗೆದಾರ ಕ್ಲೆಮೆಂಟ್ ರೋಡ್ರಿಗಸ್, ಎಂಜಿನಿಯರ್ ರವೀಂದ್ರ ಕಾವೇರಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಹಾರದಲ್ಲಿ ಗುಣಮಟ್ಟ, ಗ್ರಾಹಕರ ಬಗೆಗೆ ಕಾಳಜಿ, ಸ್ವಚ್ಛತೆ ಹಾಗೂ ಕೈಗೆಟಕುವ ದರ ಈ ಸೂತ್ರಗಳಿಂದ ಕಳೆದ 45 ವರ್ಷಗಳಿಂದ ಆಹಾರೋದ್ಯಮ ಕ್ಷೇತ್ರದಲ್ಲಿ ಗೋಪಾಡಿ ಶ್ರೀನಿವಾಸ ರಾವ್ ಅವರು ಯಶಸ್ಸು ಕಾಣಲು ಸಾಧ್ಯವಾಗಿದೆ. ಕುಂದಾಪುರದಲ್ಲಿಯೂ ಆರಂಭಿಸಲಾಗಿರುವ ಅವರ ಉದ್ಮವೂ ಯಶಸ್ಸು ಗಳಿಸಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟರು. ಮಯೂರ ಸಮೂಹ ಸಂಸ್ಥೆಗಳು ಕುಂದಾಪುರ ಪುರಸಭಾ ರಸ್ತೆಯಲ್ಲಿರುವ ಜಿ.ಎಸ್.ಆರ್ ಸ್ಕ್ವೇರ್ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಆರಂಭಿಸಿದ ಕೇಕ್‌ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಸಂಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಜಿ.ಎಸ್.ಆರ್ ಸ್ಕ್ವೇರ್ ನಾಮಫಲಕ ಅನಾವರಣಗೊಳಿಸಿದರು. ಕುಂದಾಪುರ ವಿನಯ ಆಸ್ಪತ್ರೆಯ ಡಾ|ಎನ್.ವಿಶ್ವನಾಥ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಶುಭಹಾರೈಸಿದರು. ಮಯೂರ ಗ್ರೂಫ್ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಮೂಲಕ 9 ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಘವೇಂದ್ರ, ನಿಖಿಲ್, ಮಂಜುನಾಥ್ ಶೆಟ್ಟಿ, ವಿನಯ್ ಚಿನ್ನದ ಪದಕ, ಸುಶಾಂತ್, ತನ್ಮಯ್ ಗಡಿಯಾರ್, ಕಾರ್ತಿಕ್ ಭಟ್, ದಿಶಾನ್ ಡಿ ಶೆಟ್ಟಿ, ಕೌಶಿಕ್ ಮೇರ್ಡಿ ಬೆಳ್ಳಿ ಪದಕ, ಸೂರಜ್ ಆರ್., ಶ್ರೀವತ್ಸ ಕಾಮತ್,ಸುದೀಪ್, ವರುಣ್ ಹೇರಂಭ ಆರ್ ನಾಕ್ ಕಂಚಿನ ಪದಕವನ್ನು ಗಳಿಸುವುದರ ಮೂಲಕ 14 ಪದಕಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಜೇತ ತಂಡದೊಂದಿಗೆ ಕಾಲೇಜಿನ ಪ್ರಾಶುಂಪಾಲರಾದ ಗಣೇಶ ಮೊಗವೀರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ಗಾಣಿಗ, ತರಬೇತುದಾರ ಕೃಷ್ಣ ಮೊಗವೀರ ಉಪಸ್ಥಿತರಿದ್ದರು.…

Read More