ಕುಂದಾಪ್ರ ಡಾಟ್ ಕಾಂ ವರದಿ. ಶಂಕರನಾರಾಯಣ: ಶಂಕರನಾರಾಯಣ ಮೆಸ್ಕಾಂ ಉಪ ವಿಭಾಗ ಕಛೇರಿಗೆ ಅವಶ್ಯವಿರುವ ಸರಕಾರಿ ಜಮೀನು ಲಭವಿಲ್ಲವೆಂಬ ನೆಪವಿರಿಸಿಕೊಂಡು, ಇಲಾಖಾ ಅನುದಾನಗಳಿದ್ದರೂ ಸ್ವಂತ ಕಟ್ಟಡ ನಿರ್ಮಿಸದೇ ಉಪವಿಭಾಗ ಕೇಂದ್ರವನ್ನು ಎತ್ತಂಗಡಿ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 2013ರಿಂದ ಶಂಕರನಾರಾಯಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಮೆಸ್ಕಾಂ ಉಪವಿಭಾಗ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಡಿಮ್ಡ್ ರಹಿತ ಸರಕಾರಿ ಜಮೀನು ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಪತ್ರ ಬರೆದಿದೆ. ಮೆಸ್ಕಾಂ ಉಪ ವಿಭಾಗಕ್ಕೆ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾಟ್ರರ್ಸ್, ಕಂಬ ಟಿಸಿ ವಯರು ದಾಸ್ತಾನು ಇಡಲು ಗೋದಾಮು, ವಿದ್ಯುತ್ ಬಿಲ್ಲು ಕಟ್ಟಲು ಕೌಂಟರ್ ಅವಶ್ಯಕತೆ ಇದೆ. ಸಹಾಯಕ ಕಾರ್ಯನಿರ್ವಾಹಕ (ಎಇಇ) ಇಂಜಿನಿಯರ್ ಹುದ್ದೆಯನ್ನು ಹೊಂದಿರುವ ಈ ಉಪ ವಿಭಾಗವು ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಜೆ.ಇ ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ – ಹರ್ಕಾಡಿ, ಅಮವಸೆಬೈಲ್, ಶೇಡಿಮನೆ, ಮಾಡಾಮಕ್ಕಿವರೆಗೆ ಸುಮಾರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊರೋನಾ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಶಾಸಕರನ್ನು ಸದ್ಯ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್‌ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಭಾರತ ಸರ್ಕಾರದ ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮಶನ್ ಇನ್ಫ್ರಾಸ್ಟ್ರುಕ್ಚರ್ ಪ್ರೊಟೆಕ್ಷನ್ ಸೆಂಟರ್ ವತಿಯಿಂದ ನೀಡಲ್ಪಡುವ ಇಂಟರ್ನ್ಶಿಪ್ ಗೂ ಆಯ್ಕೆಯಾಗಿದ್ದಾರೆ. ಅಡ್ವಾನ್ಸಡ್ ಸ್ಕಿಲ್ ಡೆವಲಮೆಂಟ್ ತರಬೇತಿ ಕೇಂದ್ರವು ಈ ಕೋರ್ಸ್ ನ ಗ್ರ್ಯಾಂಡ್ ಫೈನಲ್ ನಡೆಸಿತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಾರ್ಥ್ ಜೆ ಶೆಟ್ಟಿ 827 ವಿದ್ಯಾರ್ಥಿಗಳಿಗೆ ನಡೆಸಿದ ಫೈನಲ್ ಸ್ಪರ್ಧೆಯಲ್ಲಿ ಆಗ್ರ ಹತ್ತು ವಿಜೇತರೊಳಗೆ ಸ್ಥಾನ ಪಡೆಯೋದು ಹೆಮ್ಮೆಯ ವಿಷಯವಾಗಿದ್ದು, ಇಂತಹ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭಹಾರೈಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಸಾಮೂಹಿಕ ಉಪನಯನ, ಸತ್ಯನಾರಾಯಣ ಪೂಜೆ, ರಾಮ ನವಮಿಯನ್ನು ವ್ಯಾಸರಾಜ ಕಲಾ ಮಂದಿರದಲ್ಲಿ ಆಚರಿಸಲಾಯಿತು. ಸಮಾಜದ 22 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಮಠದ ಅರ್ಚಕ ವಿಜಯ ಪೆಜತ್ತಾಯ ಪೂಜಾ ವಿಧಿ ವಿಧಾನ ನಡೆಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಆಗಮಿಸಿದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು ಸ್ವಾಗತಿಸಿದರು. ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ ಬೀಜಾಡಿ ಪರಿಚಯಿಸಿ, ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನೂತನ ವೈದ್ಯಕೀಯ ಅಧೀಕ್ಷಕರಾಗಿ ಡಾ. ನಾಗರಾಜ ಎಸ್. ಅವರು ಅಧಿಕಾರ ಸ್ವೀಕರಿಸಿದರು. ಡಾ. ನಾಗರಾಜ ಎಸ್. ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿ.ಎ.ಎಮ್.ಎಸ್. ಪದವಿ ಪಡೆದು ಸ್ನಾತಕೋತ್ತರ ಹಾಗೂ ಪಿಎಚ್.ಡಿ. ಪದವಿಗಳನ್ನು ಗುಜರಾತ್ ಆಯುರ್ವೇದ ಯುನಿವರ್ಸಿಟಿಯಲ್ಲಿ ಪಡೆದಿರುತ್ತಾರೆ. ಇವರು ರೋಗನಿಧಾನ ವಿಭಾಗದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಅಧ್ಯಯನ ಕೇಂದ್ರದ ಸಹಾಯಕ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 21ವರ್ಷಗಳಿಂದ ಕಾಲೇಜು ಹಾಗೂ ಆಸ್ಪತ್ರೆಯ ವಿವಿಧ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿ ಕಾಲೇಜು ಹಾಗೂ ಆಸ್ಪತ್ರೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಬೈಂದೂರು ತಾಲೂಕಿನ ಯಡ್ತರೆಯವರಾದ ಡಾ. ನಾಗರಾಜ ಅವರು ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ ಅವರಿಂದ ಡಾ ನಾಗರಾಜ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂಡಿಯನ್ ಸೀನಿಯರ್ ಛೇಂಬರ್ ಉಪ್ಪುಂದ ಲೀಜನ್‌ನ ನೂತನ ಅಧ್ಯಕ್ಷರ ಪದಪ್ರದಾನ ಸಮಾರಂಭ ಬೈಂದೂರು ಒತ್ತಿನಣೆ ಕ್ಷಿತಿಜ ನೇಸರಧಾಮ ಪ್ರವಾಸಿ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅರವಿಂದ ರಾವ್ ಕೇದಿಗೆ ಮಾತನಾಡಿ, ‘ವಿ ಫಾರ್ ವಿಕ್ಟರಿ’ ಎಂಬ ಘೋಷವಾಕ್ಯದೊಂದಿಗೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳೋಣ ಎಂದರು. ನಿಕಟಪೂರ್ವ ಅಧ್ಯಕ್ಷರಾದ ಸೀನಿಯರ್ ಉದಯ್ ಡಿ. ಆರ್ ನೂತನ ಅಧ್ಯಕ್ಷ ಎನ್. ಕೆ ಬಿಲ್ಲವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್, ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ನವೀನ್ ಐಪಿಪಿ ಗಿರೀಶ್ ಶ್ಯಾನುಭಾಗ್, ನಿಕಟಪೂರ್ವ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ನೂತನ ಖಜಾಂಚಿ ಸೀನಿಯರ್ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸೀನಿಯರ್ ಶ್ರೀಕಾಂತ್ ಕಾಮತ್ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಲಶಕ್ತಿ ಯೋಜನೆಯ ಮೂಲಕ ಮಳೆ ನೀರನ್ನು ಸಂಗ್ರಹಿಸಿ ಜಿಲ್ಲೆಯಲ್ಲಿ ಅಂರ್ತಜಲ ಮಟ್ಟವನ್ನು ವೃಧ್ದಿಸಲು ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ನಡದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಗ್ರಾಮಗಳಲ್ಲಿರುವ ಕೆರೆಗಳ ಹೊಳೆತ್ತುವಿಕೆ , ಬಾವಿಗಳ ನಿರ್ಮಾಣ, ಕೊಳವೆ ಬಾವಿಗಳಿಗೆ ಜಲ ಮರುಪೂರಣ , ತೋಡುಗಳ ನಿರ್ಮಾಣ ಮಾಡುವ ಮೂಲಕ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂರ್ತಜಲವನ್ನು ವೃದ್ದಿಸುವನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡಿ ಈ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವಕಾಶವಿದ್ದು, ಇದರಿಂದ ಮಾನವ ದಿನಗಳ ಸೃಷ್ಠಿ ಸಹ ಸಾಧ್ಯವಾಗಲಿದೆ ಎಂದು ಎಲ್ಲಾ ಅಧಿಕಾರಿಗಳಿಗೆ ದಿನಕರ ಬಾಬು ಸೂಚನೆ ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೆ 65 ಕೆರೆಗಳ ಹೊಳು ತೆಗೆಯಲಾಗಿದೆ ಎಂದರು. ಕೋವಿಡ್ ಲಸಿಕೆ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಗುರುವಾರ 274 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ 127, ಕುಂದಾಪುರ 91, ಕಾರ್ಕಳ ತಾಲೂಕಿನ 53 ಹಾಗೂ ಹೊರ ಜಿಲ್ಲೆಯಿಂದ ಬಂದ 3 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 274 ಪ್ರಕರಣಗಳಲ್ಲಿ 123 ಸಿಂಟಮಿಕ್ ಹಾಗೂ 151 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 30 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 244 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 1165 ಸಕ್ರಿಯ ಪ್ರಕರಣಗಳಿವೆ. ಒಂದು 3270 ಮಂದಿಯನ್ನು ಪರೀಕ್ಷಿಸಲಾಗಿದ್ದು, 193 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ ► ರಾಜ್ಯದಲ್ಲಿ ಹಾಫ್ ಲಾಕ್‌ಡೌನ್ ಘೋಷಣೆ. ಹೊಸ ಮಾರ್ಗಸೂಚಿಯಲ್ಲೇನಿದೆ ನೋಡಿ – https://kundapraa.com/?p=47569 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಿ.ಎಡ್ ಪರೀಕ್ಷೆಯಲ್ಲಿ ಶೇಕಡಾ100 ಫಲಿತಾಂಶ ಪಡೆಯುವದರೊಂದಿಗೆ, ವಿಶೇಷ ಸಾಧನೆ ಮಾಡಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 76 ವಿದ್ಯಾರ್ಥಿಗಳಲ್ಲಿ, 72 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬ್ಯಾರೀಸ್ ಸಮೂಹದ ಛೇರ್ಮನ್‌ರಾದ ಸಯ್ಯದ್ ಮಹಮದ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್, ವಿಶ್ವಸ್ತರು, ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇಂದು (ಎ.22) ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಯಾವೆಲ್ಲ ಅಂಗಡಿಗಳು ತೆರೆದಿರಬೇಕು ಎಂಬುದರ ಬಗ್ಗೆ ತಿಳಿಸಿದೆ. ಹೊಸ ಆದೇಶ ಮೇ 4ರವರೆಗೆ ಜಾರಿಯಲ್ಲಿರಲಿದೆ. ನಿರ್ಬಂಧಿಸಲಾದ ಚಟುವಟಿಕೆಗಳು: ಎಲ್ಲಾ ಸಿನೆಮಾ ಹಾಲ್ಗಳು, ಶಾಪಿಂಗ್ ಮಾಲ್ಗಳು, ಜಿಮ್ ಗಳು , ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್ ,ಚಿತ್ರಮಂದಿರಗಳು, ಬಾರ್ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು ಮತ್ತು ಅಂತಹುದೇ ಸ್ಥಳಗಳು ಮುಚ್ಚಲ್ಪಡುತ್ತವೆ. ಯಾರಿಗೆಲ್ಲ ಅನುಮತಿ?/ಕುಂದಾಪ್ರ ಡಾಟ್ ಕಾಂ/ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು 1) ಪಡಿತರ ಅಂಗಡಿಗಳು (ಪಿಡಿಎಸ್)ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿಗಳು , ಹಣ್ಣುಗಳು ಮತ್ತು…
