ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.28: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಗಸ್ಟ್ 28ರಂದು ಅಂಗನವಾಡಿ, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯುಸಿ ಮತ್ತು ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ. ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪ್ರತಿಭೆ ಅನಾವರಣಗೊಳ್ಳಬೇಕಾದರೆ ಅವರು ಅನುಸರಿಸುವ ಮಾರ್ಗ ಸಮರ್ಪಕವಾಗಿರಬೇಕು ಈ ದಿಸೆಯಲ್ಲಿ ನಮ್ಮ ಪ್ರತಿ ಕಾರ್ಯಕ್ಕೆ ದೇವರ ದಯೆ ಕರುಣಿಸುತ್ತಾನೆ ಇದಕ್ಕೆ ಪುರಕವಾಗಿ ಸುಶ್ಮಿತಾ ಬಹುಮುಖ ಪ್ರತಿಭೆಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀರಮಣ ಉಪಾಧ್ಯ ಹೇಳಿದರು. ಆನೆಗುಡ್ಡೆ ಶ್ರೀವಿನಾಯಕ ದೇಗುಲದಲ್ಲಿ ಇತ್ತಿಚಿಗೆ ಕಲಾವಿಸ್ಮಯ ಕಲಾತಂಡದ ಸಂಸ್ಥಾಪಕಿ ಸುಶ್ಮಿತಾ ಸಾಲಿಗ್ರಾಮ ಅವರ ಸಾಹಿತ್ಯ ಹಾಗೂ ಸಂಯೋಜನೆಯಲ್ಲಿ, ಕೀರ್ತನ್ ಪೂಜಾರಿ ಅವರು ಹಾಡಿರುವ ಶರಣೆಂಬೆ ವಿನಾಯಕ ಕನ್ನಡ ಭಕ್ತಿಗೀತೆಯನ್ನು ಆ.26ರಂದು ಲೋಕಾಪರ್ಣೆಗೊಳಿಸಿ ಮಾತನಾಡಿದ ಅವರು ತನ್ನ ಕಾರ್ಯಕ್ಷೇತ್ರದಲ್ಲಿ ಶ್ರದ್ಧೆ ಇದ್ದರೆ ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರಲ್ಲದೆ ಸುಶ್ಮಿತಾ ಬಹುಮುಖ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು. ಗೀತೆಯ ಸಾಹಿತ್ಯ ಮತ್ತು ಸಂಯೋಜನೆ ಸುಶ್ಮಿತಾ ಸಾಲಿಗ್ರಾಮ ಕಾರ್ಯಕ್ರಮ ಸಂಯೋಜಿಸಿದರು. ಇದೇ ವೇಳೆ ಕಲಾವಿಸ್ಮಯ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತಿಗೀತೆಯನ್ನು ಅನಾವರಣಗೊಳಿಸಲಾಯಿತು. ಸುಶ್ಮಿತಾ ಇವರ ಪೋಷಕರಾದ ಕೃಷ್ಣಮೂರ್ತಿ ಮರಕಾಲ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದ.ಕ – ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ ಇದರ ಕುಂದಾಪುರ – ಬೈಂದೂರು ಘಟಕದ ಅಧ್ಯಕ್ಷರಾಗಿ ನಾವುಂದ ಸ್ಮಾರ್ಟ್ ಟೆಕ್ ಮಾಲಿಕ ಮಹೇಶ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ಎಂ2ಕೆ ಮೊಬೈಲ್ ಕುಂದಾಪುರದ ಕರುಣಾಕರ ಆಚಾರ್ಯ ಮರವಂತೆ ಆಯ್ಕೆಯಾಗಿದ್ದಾರೆ. ಇತ್ತಿಚಿಗೆ ಕುಂದಾಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮೊಬೈಲ್ ರಿಪೇರಿ ಮತ್ತು ಮಾರಾಟಗಾರ ಯೂನಿಯನ್ ರಚಿಸುವ ಕುರಿತು ನಿರ್ಣಯಿಸಲಾಯಿತು. ಸಭೆಯಲ್ಲಿ ಪ್ರಸ್ತುತ ಮೊಬೈಲ್ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವವರ ಸಂಕಷ್ಟ ಹಾಗೂ ಅದಕ್ಕೆ ಪರಿಹಾರ ಮಾರ್ಗೋಪಾಯ ಮತ್ತು ಇತ್ತೀಚಿನ ಅನಾರೋಗ್ಯಕರ ಸ್ಪರ್ಧೆ ಎಲ್ಲರ ಆರ್ಥಿಕ ಕುಂಟಿತಕ್ಕೆ ಕಾರಣವಾಗುತ್ತಿದೆ ಅನ್ನುವ ಅಭಿಪ್ರಾಯ ಮೂಡಿತು. ಇದೆಲ್ಲದಕ್ಕೂ ಪರಿಹಾರ ಸಂಘಟನೆ ಒಂದೇ ಎನ್ನುವ ತೀರ್ಮಾನಕ್ಕೆ ಬಂದು ಉಡುಪಿ ಯೂನಿಯನ್ ಮಾರ್ಗದರ್ಶನದಲ್ಲಿ ತಾಲೂಕು ಸಮಿತಿ ರಚಿಸಲಾಯಿತು. ಗೌರವಧ್ಯಕ್ಷರಾಗಿ ಇರ್ಷಾದ್ ಕ್ಲಾಸಿಕ್ ಮೊಬೈಲ್ ಕುಂದಾಪುರ, ಗೌರವ ಸಲಹೆಗಾರರಾಗಿ ಪ್ರಕಾಶ್ ಪೈ ಮಹಾಮ್ಮಯಿ ಮೊಬೈಲ್ ಕೊಟೇಶ್ವರ, ಮಾಚ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ 13 ಫಲಾನುಭವಿ ಆಧಾರಿತ ಯೋಜನೆಗಳಾದ ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ, ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ, ಮರಣ ಪರಿಹಾರ ನಿಧಿ, ವೈದ್ಯಕೀಯ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಸಾಧನೆ ಯೋಜನೆ, ನಿರುದ್ಯೋಗ ಭತ್ಯೆ ಮತ್ತು ಅಂಧ ಮಹಿಳೆಗಾಗಿ ಶಿಶುಪಾಲನಾ ಭತ್ಯೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೆಜಿಲ್‌ಕಿಟ್ ಯೋಜನೆ ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿಚಾಲಿತ ವೀಲ್‌ಚೇರ್‌ಗಳ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಆನ್‌ಲೈನ್ ಸೇವಾಸಿಂಧು ತಂತ್ರಾಂಶದ ಮೂಲಕ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿ https://sevasindhu.karnataka.gov.in/ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನಕದಾಸರ ಭಕ್ತಿಯ ಸ್ವರೂಪ, ಸಮಾನತೆಯ ಪ್ರಜ್ಞೆ, ಅಹಿಂಸಾನೆಲೆ, ಧಾರ್ಮಿಕ ಆಚರಣೆಗಳ ನಿರಾಕರಣೆ, ಅವರ ಸಮಾಜ ಸುಧಾರಣೆಯ ಅಂಶಗಳು ಇಂದಿಗೂ ಪ್ರಸ್ತುತ. ಕನಕದಾಸರು ತಮ್ಮ ಕೃತಿಗಳ ಮೂಲಕ ಕುಲಕ್ಕಿಂತ ಗುಣಕ್ಕೆ ಪ್ರಾಮುಖ್ಯತೆ ನೀಡಿ, ಜಾತಿಬೇಧ, ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸಿ, ಸಮಾನತೆ, ಮಾನವೀಯತೆ, ನೈತಿಕತೆ ಮುಂತಾದ ಸಾರ್ವಕಾಲಿಕ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಧಾಕರ್ ದೇವಾಡಿಗ ಬಿ. ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ, ರಾಷ್ಟçಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ‘ಕನಕದಾಸರು – ವರ್ತಮಾನದ ಮುಖಾಮುಖಿʼ ಎಂಬ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕನಕದಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕಾರಿಯಾಗಿದೆ. ಶಿಸ್ತುಬದ್ಧ ಜೀವನ ನಡೆಸುವುದಕ್ಕೆ ಇದು ದಾರಿದೀಪ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಭಾಗಿಯಾಗಿ ಸೇವೆ ಮಾಡುವ ಮೂಲಕ ನಾವೆಲ್ಲರೂ ಒಂದು ಎಂಬ ಭಾವ ಮೂಡುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್ ಸಿಂಧ್ಯ ಮಂಗಳವಾರ ನುಡಿದರು. ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಕುಂದಾಪುರ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಬನ್ನಿಸ್, ಕಬ್ಸ್ ಮತ್ತು ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ಸ್ ರೋವರ್ಸ್ ನೂತನ ದಳಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ 75 ವರ್ಷಗಳ ಇತಿಹಾಸವಿದೆ. ಇದು ಮಕ್ಕಳಲ್ಲಿ ನಾಯಕತ್ವವನ್ನು ಬೆಳೆಸುತ್ತದೆ. ಮಕ್ಕಳು ಭಗವಂತನ ಮೇಲೆ ನಂಬಿಕೆ ಹೊಂದಿ ಶ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ, ನಡೆದಂತಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಕರ್ನಾಟಕದ ಮೂಲನಿವಾಸಿ ಮಾಜಿ ಸೈನಿಕರ ಮಕ್ಕಳಿಂದ “ಜನರಲ್ ಕೆ.ಎಸ್ ತಿಮ್ಮಯ್ಯ” ನಗದು ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಲಯನ್ಸ್ ಕುಂದಾಪುರ ಸಿಟಿ ಸೆಂಟರ್ ಕುಂದಾಪುರ, ರೋಟರಿ ಮಿಡ್ ಟೌನ್ ಕುಂದಾಪುರ, ಶೌರ್ಯ ವಿಪತ್ತು ನಿರ್ವಹಣೆ ಘಟಕ ತಲ್ಲೂರು, ಕೆ.ಎಮ್.ಸಿ. ರಕ್ತ ನಿಧಿ ಮಣಿಪಾಲ ಸಹಭಾಗಿತ್ವದಲ್ಲಿ ತಲ್ಲೂರಿನಲ್ಲಿ ಬೃಹತ್ ರಕ್ತದಾನ ಶಿಬಿರ ಇತ್ತೀಚಿಗೆ ನಡೆಯಿತು. ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಕಿಶನ್ ಹೆಗ್ಡೆ ಉದ್ಘಾಟನೆ ನರವೇರಿಸಿ, ಮಾತನಾಡಿ, ರಕ್ತದ ಅನಿವಾರ್ಯತೆ ನಿಗಿಸುವಲ್ಲಿ ರಕ್ತದಾನಕ್ಕೆ ಯುವಕರು ಮುಂದಾಗಬೇಕೆಂದು ಎಂದು ಕರೆ ನೀಡಿದರು. ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ಅವರು ಸಭೆಯ ಅಧ್ಯಕ್ಷತೆಯನ್ನು, ವಹಿಸಿದ್ದರು. ಮುಖ್ಯಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಜಯಕುಮಾರ್ ಗಾಣಿಗ, ಸುಕುಮಾರಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯಕ್, ಆನಂದ ಬಿಲ್ಲವ ಉಪ್ಪಿನಕುದ್ರು, ಅಭಯಹಸ್ತ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ತಾಲೂಕು ಯುವ ಜನ ಸೇವೆ ಮತ್ತು ಕ್ರೀಡಾ ಧಿಕಾರಿ ಕುಸುಮಾಕರ ಶೆಟ್ಟಿ, ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಣೆ ತಿಂಗಳ ಶುಭ ಮಂಗಳವಾರ ಭಾದ್ರಪದ ಮಾಸದ ಗೌರಿ ತದಿಗೆಯಂದು ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕಿಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಮಹಿಳಾ ಸಿಬ್ಬಂದಿಗಳಿಗೆ ಬಳೆಗಾರರಿಂದ ಗಾಜಿನ ಬಳೆ ತೊಡಿಸಿ, ಗೌರಿ ಪೂಜೆ ಮಾಡಿ ವಿಶೇಷ ಸಿಹಿ ಊಟದೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಳೆಗಾರರಿಗೆ ಸಂಪ್ರದಾಯದಂತೆ ಮರ್ಯಾದೆಯೊಂದಿಗೆ ಅಕ್ಕಿ, ಕಾಯಿ, ಎಲೆ, ಅಡಿಕೆ, ಬಾಳೆ ಹಣ್ಣು, ಬಳೆಯ ಹಣ ನೀಡಿ ಗೌರವಪೂರ್ವಕ ಧನ್ಯವಾದಗಳನ್ನು ತಿಳಿಸುವ ಪರಿಪಾಠ ಮಕ್ಕಳಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಬಳೆ ತೊಡಿಸುವುದರ ಹಿಂದಿನ ವೈಜ್ಞಾನಿಕ ಮಹತ್ವ ತಿಳಿಸಿ, ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದರು. ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಯವರು ಮತ್ತು ಎಲ್ಲಾ ನಿರ್ದೇಶಕರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬದ ಯತಾರ್ಥ ಆಚರಣೆಗೆ ಅಭಿನಂದನೆ ತಿಳಿಸಿ ಎಲ್ಲರಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆರಿ. ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದರಲ್ಲಿ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಫಲಿತಾಂಶ:14 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಪ್ರಣವ್ ಎಸ್ – ಟ್ರಯಥ್ಲಾನ್-ಎ (ಪ್ರಥಮ), ಸುಭಾಷ್ – ಟ್ರಯಥ್ಲಾನ್-ಸಿ (ದ್ವಿತೀಯ), ಆದರ್ಶ್ – ಟ್ರಯಥ್ಲಾನ್- (ಪ್ರಥಮ), ಮೇಘಾ – ಟ್ರಯಥ್ಲಾನ್- ಸಿ (ಪ್ರಥಮ), ಸುಜಾತ – ಟ್ರಯಥ್ಲಾನ್-ಸಿ (ದ್ವಿತೀಯ) 16 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕೃಷ್ಣ -…
