ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರು ವಿದ್ಯಾನಗರದಲ್ಲಿ ಮಾ.13, 14ರಂದು ನಡೆದ 2ನೇ ರಾಜ್ಯ ಮಟ್ಟದ ಮಾಸ್ಟರ್ಸ್ಸ್ಪೋಟ್ಸ್ 2021 ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಸಿಬ್ಬಂದಿ ಬಿಜೂರು ಶಂಕರ ಪೂಜಾರಿ ಕಾಡಿನತಾರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಂಕರ ಪೂಜಾರಿ ಅವರು 40ರಿಂದ 45 ವರ್ಷದೊಳಗಿನ ವಯೋಮಿತಿಯಲ್ಲಿ ನಡೆದ 100ಮೀಟರ್ ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕ ಪಡೆದುಕೊಂಡು ಹೈದರಬಾದ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮೂಲತಃ ಬಿಜೂರಿನವರಾದ ಶಂಕರ ಪೂಜಾರಿ ಅವರು ಪ್ರಸ್ತುತ ಯಡ್ತಾಡಿ ಸೈಬ್ರಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಅವರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದ ಜನಸಂಖ್ಯೆಯ ಶೇಕಡಾ 50 ಭಾಗ ಮಹಿಳೆಯರು ಇದ್ದು, ಸಮಾಜದಲ್ಲಿ ಆಥಿ೯ಕ, ಸಮಾಜಿಕ,ದೌಜ೯ನ್ಯ ಲೈಂಗಿಕ ಕಿರುಕುಳ ಇತ್ಯಾದಿ ಶೋಷಣೆಗೆ ಒಳಗಾಗುತ್ತಿದ್ದು ಇಂತಹ ದೌಜ೯ನ್ಯಗಳವಿರುದ್ಧ ಮಹಿಳೆಯರು ಸಂಘಟಿತ ಹೋರಾಟಕ್ಕೆ ಮುಂದಾಗ ಬೇಕು ಎಂದು ಜನವಾದಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ದೇವಿ ಅಭಿಪ್ರಾಯ ಪಟ್ಟರು. ಅವರು ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಜರಗಿದ ತಾಲೂಕು ಜನವಾದಿ ಮಹಿಳಾ ಸಂಘಟನೆಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ತಾಲೂಕು ಸಂಚಾಲಕಿ ಸಿಂಗಾರಿ ನಾವುಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಶೀಲಾವತಿ ಹಡವು,ಜಯಶ್ರೀ ಪಡುವರಿ,ನಾಗರತ್ನ ನಾಡ, ನಾಗರತ್ನ ಪಡುವರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಸಂಚಾಲಕ ಸಮಿತಿಗೆ ನಾಗರತ್ನ ನಾಡ, ಮನೋರಮ ಭಂಡಾರಿ, ನಾಗರತ್ನ ಪಡುವರಿ, ಜಯಶ್ರೀ ಪಡುವರಿ, ವಸಂತಿ ಯಡ್ತರೆ, ಸಾವಿತ್ರಿ ಹೆಮ್ಮಾಡಿ, ಸರಸ್ವತಿಬೈಂದೂರು,ಸಿಂಗಾರಿ ನಾವುಂದ, ಶೋಭಾ.ವಿ.ನಾಯಕ್ ಮುಬಾರಕ್ ಶಿರೂರು ಇವರನ್ನು ನವಾ೯ನುಮತದಿಂದ ಆಯ್ಕೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ರಿ .ದೊಡ್ಡೋಣಿ ಕೋಟೇಶ್ವರ ವತಿಯಿಂದ 14ನೇ ವರ್ಷದ ಮಹಾ ಶಿವರಾತ್ರಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯ ಭಾಸ್ಕರ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಗವಿಕಲತೆಯಿಂದ ಬಳಲುತ್ತದ್ದರು ನೂರಾರು ಜನರಿಗೆ ಸ್ಪೂರ್ತಿಯಾಗಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಲಲಿತಾ ಕೊರೊಡಿ ಹಾಗೂ ಕೋಟೀಲಿಂಗೇಶ್ವರ ದೇವಸ್ಥಾನದ ತಟ್ಟಿರಾಯ ಹೊತ್ತು ಕುಣಿವ ತೆರೆಮರೆಯ ವ್ಯಕ್ತಿಗಳಾದ ಶ್ರೀಧರ ದೇವಾಡಿಗ ಹಾಗು ಸುಬ್ರಹ್ಮಣ್ಯ ಗಾಣಿಗ್ ಇವರನ್ನು ಗುರುತಿಸಿ ಗೌರವಿಸಲಾಯಿತು. ಮುಖ್ಯ ಅಥಿತಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಿತ್ರ ಕ್ಲಿನಿಕ್ನ ಡಾ ಅಶೋಕ ಶೆಟ್ಟಿ , ಕೋಟೇಶ್ವರ ಪಂಚಾಯತ್ನ ಅಧ್ಯಕ್ಷರಾದ ಕೃಷ್ಣ ಗೊಲ್ಲ ಬೀಜಾಡಿ ಗ್ರಾಮ ಪಂಚಾಯತ್ ನ ಸದಸ್ಯರಾದ ಪ್ರಸನ್ನ ದೇವಾಡಿಗ, ಶ್ರೀ ನೀರೇಶ್ವಾಲ್ಯ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರಾದ ಉಮೇಶ್ ಎಮ್ ಕುಮಾರ್ ದೊಡ್ಡೋಣಿ, ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ರಾಘವೇಂದ್ರ ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನಲ್ಲಿ ಜನ ಮನ್ನಣೆ ಗಳಿಸಿರುವ ಮಯೂರ ಸಮೂಹ ಸಂಸ್ಥೆಗಳು ಇದೀಗ ಕುಂದಾಪುರದಲ್ಲಿ ಆಹಾರೋದ್ಯಮ ಸಂಸ್ಥೆಗಳನ್ನು ಆರಂಭಿಸುತ್ತಿದ್ದು, ಮಾರ್ಚ್ 19ರಂದು ಬೆಳಿಗ್ಗೆ 10-30ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಮಯೂರ ಗ್ರೂಫ್ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ. ಜಿ.ಎಸ್.ಆರ್ ಸ್ಕ್ವೇರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಪುರಸಭಾ ರಸ್ತೆಯಲ್ಲಿರುವ ಜಿ.ಎಸ್.ಆರ್ ಸ್ಕ್ವೇರ್ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಕೇಕ್ವಾಲ ಬೇಕರಿ ಉತ್ಪನ್ನಗಳ ಮತ್ತು ಈಶಾನ್ಯ ದೇಶಿಯ ಆಹಾರ, ಐಸ್ ಕ್ರೀಮ್, ಸ್ಮೂತೀಸ್’ ಇತ್ಯಾದಿ ಖಾದ್ಯಗಳು ಕುಂದಾಪುರದ ಜನರ ಸೇವೆಗೆ ಲಭ್ಯವಾಗಲಿದೆ ಎಂದರು. ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ, ಸ್ವಚ್ಛತೆ ಮತ್ತು ಪರಿಶುದ್ದತೆಗೆ ಮೊದಲ ಆದ್ಯತೆ, ಕೈಗೆಟಕುವ ದರ, ತೆರೆದಿಟ್ಟ ಪಾಕಶಾಲೆ, ಕಣ್ಣೆದುರೆ ಮಾಡಿಕೊಡುವ ಕೇಕ್ಗಳು ಮುಂತಾದ ವಿಶಿಷ್ಟತೆಗಳನ್ನು ಹೊಂದಿರುವ ಕೇಕ್ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ವಿಶೇಷತೆಯಾಗಿದೆ ಎಂದರು. ಗ್ರಾಹಕರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಯೂರ ಗ್ರೂಫ್ಸ್ ಶುಚಿತ್ವಕ್ಕೆ ಮೊದಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ , ಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು. ವೇದಮೂರ್ತಿ ಶಾರ್ಕೆ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಪಂಚವಿಂಶತಿ, ಕಲಶ ಸ್ಥಾಪನೆ , ಪರಿವಾರಕ್ಕೆ ಕಲಶ, ಅಧಿವಾಸ ಹೋಮ, ಕಲಾತತ್ವ ಹೋಮ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಅದೇ ದಿನ ಮದ್ಯಾಹ್ನ 2.30ರಿಂದ ಯಕ್ಷಗಾನ ತಾಳಮದ್ದಲೆ ರಾವಣ ಮೋಕ್ಷ ಕಾರ್ಯಕ್ರಮ ಸಂಜೆ 7 ಗಂಟೆಯಿಂದ ಶ್ರೀ ರಾಘವೇಂದ್ರ ಭಜನಾ ಮಂಡಳಿ ವಂಡ್ಸೆಯ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30 ಕ್ಕೆ ರಂಗಪೂಜೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇಂತಹ ಬೆಲೆ ಬಾಳುವ ವಸ್ತುಗಳ ಬಗ್ಗೆ ಜ್ಞಾನ ಇರದಿದ್ದರೆ, ಅದನ್ನು ರಕ್ಷಣೆ ಮಾಡಲಾಗುವುದಿಲ್ಲ ಎಂದು ಐಎಫ್ಎಸ್ ಅಧಿಕಾರಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ರಾಜ್ಯ ಔಷಧಿಯ ಸಸ್ಯಗಳ ಪ್ರಾಧಿಕಾರದ ಸಿಇಒ ಸುದರ್ಶನ್ ಜಿ.ಎ ಹೇಳಿದರು. ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಾಂಪ್ರದಾಯಿಕ ಔಷಧಗಳ ಆರ್ಕೈವ್ (ಎಟಿಎಂಎ) ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಂಚೂಣಿಯ ಅರಣ್ಯ ಸಿಬ್ಬಂದಿಗಳಿಗೆ ನಡೆದ ಔಷಧಿಯ ಸಸ್ಯಗಳ ಕುರಿತ ಮಾಹಿತಿ ಕಾರ್ಯಾಗಾರದ ಉದ್ಘಾಟಕರಾಗಿ ಮಾತನಾಡಿದ ಅವರು, ಅರಣ್ಯಾಧಿಕಾರಿಗಳು, ಅರಣ್ಯ ಸಿಬ್ಬಂದಿಗಳನ್ನು ಒಟ್ಟುಗೂಡಿಸಿ ಇಂತಹ ಮಾಹಿತಿ ಕಾರ್ಯಾಗಾರಗಳನ್ನು ಮಾಡುವುದು ಅವಶ್ಯಕ. ಈ ಮೂಲಕ ರೈತರಿಗೆ ಸಸ್ಯಗಳನ್ನು ನೀಡುವಾಗ ಅದರ ಮಹತ್ವ ಹಾಗೂ ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಬಹುದು’…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಕಾಲೇಜಿನಲ್ಲಿ ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಎಂ.ಬಿ.ಎ ಹಾಗು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ, ವಿದ್ಯಾರ್ಥಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿವಿಧ ಸಾಹಸ ಕಲೆಗಳನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಜಾಗೃತರಾಗಲು ಇಂತಹ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಕರಾಟೆ ಅಸೋಸಿಯೇಷನ್ ಕರ್ನಾಟಕ ಇದರ ಕಾರ್ಯದರ್ಶಿ, ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಅಧ್ಯಕ್ಷರು, ಹಾಗು 5 ಡಾನ್ ಬ್ಲಾಕ್ ಬೆಲ್ಟ್ , ವರ್ಲ್ಡ್ ಕರಾಟೆ ಫೆಡರೇಶನ್ ತರಬೇತುದಾರ ಕೀರ್ತಿ ಜಿ.ಕೆ ಅವರು, ಅನಿರೀಕ್ಷಿತವಾಗಿ ನಡೆಯುವ ಘಟನೆ ಸಂದರ್ಭದಲ್ಲಿ ಹೇಗೆ ಪಾರಾಗಬೇಕು, ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎನ್ನುವ ಕುರಿತು ಸ್ವಯಂ ರಕ್ಷಣೆ ಕೌಶಲ ಪ್ರಾತ್ಯಕ್ಷಿಕೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ, ಕರಾಟೆ ಇಂಡಿಯ ಸಂಸ್ಥೆಯ ಸರ್ಟಿಫೈಡ್ ಕೋಚ್.ಅಕ್ಷಯ್ ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ವಿದ್ಯೋದಯ ಪದವಿಪೂರ್ವ ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಬ್ರಮಣ್ಯ ಶಾಸ್ತ್ರಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು, ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯ 70 ಕೆಜಿ ವಿಭಾಗದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪೂರ್ಣೇಶ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕವೃಂದ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಕ್ರೀಡಾ ಶಿಕ್ಷಣದ ಜೊತೆ ಜೊತೆಯಲ್ಲಿ ವ್ಯಕ್ತಿತ್ವ ವಿಕಸನದ ಕಡೆಗೂ ಗಮನಹರಿಸಬೇಕು ಎಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಡುಪಿ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಮತ್ತು ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿಯ ಅಧ್ಯಕ್ಷರಾದ ಸುಧಾಕರ್ ಖಾರ್ವಿದೀಪ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು. ಜಿ ಎಸ್ ವಿ ಎಸ್ ಅಸೋಸಿಯೇಷನ್ನಿನ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಶುಭಾಶಂಸನೆಗೈದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್ ಎರಡನೇ ಅಲೆಯು ಪ್ರಾರಂಭವಾಗಿದ್ದು, ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ. ಅವರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ, ಎರಡನೇ ಹಂತದ ಕೋವಿಡ್ ಲಸಿಕೆ ಪಡೆದು ಮಾತನಾಡಿದರು. ಸಾರ್ವಜನಿಕರು ಜಾಗೃತರಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಪಿಂಗ್ ಮಾಲ್ಗಳಲ್ಲಿ, ಅಂಗಡಿಗಳಿಗೆ ತೆರಳುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೆ ಅಂಗಡಿಗೆ ಬರುವ ಸಾರ್ವಜನಿಕರ ಪ್ರವೇಶವನ್ನು ಅಂಗಡಿ ಮಾಲೀಕರು ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿ ಮಾಲೀಕರ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು 72 ಗಂಟೆಯ ಮೊದಲಿನ ಕೊರೊನಾದ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಬೇಕು. ಹೊರ ರಾಜ್ಯಗಳಿಂದ ನೆಗೆಟಿವ್ ವರದಿಯನ್ನು ತಾರದೆ ಬಂದವರ ಬಗ್ಗೆ ಸಾರ್ವಜನಿಕರು…
