ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ನ.23ರಿಂದ 30ರ ತನಕ ನಡೆಯಲಿದೆ. ನ.28ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವೈಭವದ ಮನ್ಮಹಾರಥೋತ್ಸವ ನೆರವೇರಲಿದೆ. ಉತ್ಸವದ ಮೊದಲನೇ ದಿನ ಸಾಂಪ್ರದಾಯಿಕ ವಿಧಿ-ವಿಧಾನದ ಮೂಲಕ ಧ್ವಜಮರವನ್ನು ತಂದು ನೆಡುವುದರ ಮೂಲಕ ಅಂಕುರಾರ್ಪಣೆಯೊಂದಿಗೆ ಆರಂಭಗೊಂಡಿತು. ಎರಡನೇ ದಿನ ಗಜಾರೋಹಣ ಉತ್ಸವ, ಯಾಗಶಾಲೆಯಲ್ಲಿ ಪುಣ್ಯಾಹ ಜಾತ್ರೋತ್ಸವ ವೈಭವ ಹೋಮ, ರಾತ್ರಿ ಸಲಾಂ ಮಂಗಳಾರತಿ ದಿನ ಗಜಾರೋಹಣ, ಅಶ್ವಾರೋಹಣ ನಡೆಯುತ್ತದೆ. ಮೂರನೆಯ ದಿನ ಅಶ್ವಾರೋಹಣ, ಓಲಗ ಮಂಟಪದಲ್ಲಿ ಪೂಜೆ ನಗರೋತ್ಸವ ನಡೆಯುತ್ತದೆ. ನಾಲ್ಕನೆಯ ದಿನ ಮಯೂರ ವಾಹನ ಉತ್ಸವ, ರಾತ್ರಿ ರಂಗಪೂಜೆ ನಡೆಯುತ್ತದೆ. ಐದನೆಯ ದಿನ ಪುಷ್ಪಕ ಸಿಂಹಾರೋಹಣ ಉತ್ಸವ, ರಂಗಪೂಜೆ ಜರುಗುತ್ತದೆ. ಈ ದಿವಸ ಅಮ್ಮನವರು ಮೂಲಸ್ಥಾನವಾದ ಸಮುದ್ರ ದಂಡೆಯ ದೇವಿಕೆರೆ ತೊಪ್ಪಲು ಕಟ್ಟೆಗೆ ತೆರಳುತ್ತಾರೆ. ಆರನೆಯ ದಿನ ಮನ್ಮಹಾರಥೋತ್ಸವ, ಏಳನೆಯ ದಿನ ಓಕುಳಿ ಮತ್ತು ಚೂರ್ಣೋತ್ಸವ ನಡೆಯುತ್ತದೆ. ಎಂಟನೇ ದಿನ ಧ್ವಜಾವರೋಹಣ, ಅಂಕುರ ಪ್ರಸಾದ ವಿನಿಯೋಗ ರಾತ್ರಿ ನಗರೋತ್ಸವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ನಿಸರ್ಗ, ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಣಕು ಸಂಸತ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ ಜಿ ಮತ್ತು ಉಪನ್ಯಾಸಕ ವೃಂದದವರು ಮತ್ತು ಇ ಎಲ್ ಸಿ ಕ್ಲಬಿನ ಮಾರ್ಗದರ್ಶಕ ಉಪನ್ಯಾಸಕಿ ಸಂಧ್ಯಾ ನಾಯಕ ಅಭಿನಂದಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ತೃತೀಯ ಮತ್ತು ದ್ವಿತೀಯ ಬಿಎ 29 ವಿದ್ಯಾರ್ಥಿಗಳಿಗೆ ಮೂರು ದಿನಗಳ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಾಸದಲ್ಲಿ ಸ್ಥಳಗಳಾದ ಮೈಸೂರು ಸೋಮನಾಥಪುರ ಶ್ರೀರಂಗಪಟ್ಟಣ ತಲಕಾಡು ಈ ಸ್ಥಳಗಳ ಐತಿಹಾಸಿಕ ವಿವರವನ್ನು ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮೋಹನ್ ಕುಮಾರ್ ಮಕ್ಕಳಿಗೆ ಮಾಹಿತಿ ನೀಡಿದರು. ಈ ತಂಡದಲ್ಲಿ ಉಪನ್ಯಾಸಕರಾದ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರಭಾಕರ್, ಜಲಕನ್ಯೆ ಹಾಗೂ ಶಾಮಲಾ ಅವರು ಉಪಸ್ಥಿತರಿದ್ದರು.
ಬೈಂದೂರು: ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ವಿಚಾರದಲ್ಲಿ ಉಂಟಾದ ಆರ್ಥಿಕ ಗೊಂದಲದಿಂದಾಗಿ ಸರೀಗ್ ಎಂಬುವವರು ಕಣ್ಣೂರು ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಬಗ್ಗೆ ಓಂ ಭಾರತ್ ಇಂಡಿಯಾ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಓಂ ಭಾರತ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ರಾಜೀವ್ ಕುಮಾರ್ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದು, ಸಾಜು ಎಂಬುವವರು ಪಾರ್ಟ್ನರ್ ಆಗಿದ್ದಾರೆ. ಸರೀಗ್ ಎಂಬುವವರು ದೂರಿನಲ್ಲಿ ತಿಳಿಸಿದಂತೆ ಕ್ರಿಕೆಟ್ ಅಕಾಡೆಮಿ ಹೆಸರಿನಲ್ಲಿ ಯಾವುದೇ ಹಣ ಸ್ವೀಕರಿಸಿಲ್ಲ. ಬದಲಾಗಿ ವಿಲ್ಲಾ ನಿರ್ಮಿಸಿಕೊಡುವ ಯೋಜನೆಗೆ ಓಂ ಭಾರತ್ ಇಂಡಿಯಾ ಸಂಸ್ಥೆಯಲ್ಲಿ ಸರೀಗ್ ಎಂಬ ವ್ಯಕ್ತಿ ಹಣ ಹೂಡಿಕೆ ಮಾಡಿದ್ದರು. ಈ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ರಾಜೀವ್ ಕುಮಾರ್ ಮತ್ತು ಸರೀಗ್ ಎಂಬ ವ್ಯಕ್ತಿಯ ನಡುವೆ ನಡೆದಿರುವ ವ್ಯವಹಾರದಲ್ಲಿ, ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ಕ್ರಿಕೆಟರ್ ಶ್ರೀಶಾಂತ್ ಅವರು ಇದ್ದಾರೆ ಎಂಬು ಬಿಂಬಿಸಿ ದೂರು ನೀಡಲಾಗಿದೆ. ಆದರೆ ಅವರಿಬ್ಬರೂ ಈ ವ್ಯವಹಾರದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪಾಲುದಾರಿಕೆ ಅಥವಾ ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರಾಗಿ ಮುಸ್ತಾಕ್ ಅಹ್ಮದ್ ಬೆಳ್ವೆ ಹಾಗೂ ಕಾರ್ಯದರ್ಶಿಯಾಗಿ ಝಹೀರ್ ನಾಖುದಾ ಗಂಗೊಳ್ಳಿ ಆಯ್ಕೆಯಾಗಿದ್ದಾರೆ. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಘಟಕದ ಮಹಾಸಭೆ ಉಡುಪಿಯ ಮಣಿಪಾಲ್ ಇನ್ ಹೋಟೆಲಿನಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಬೆಳ್ವೆ ಮುಸ್ತಾಕ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೌ ಫಝಲ್ ಅಹ್ಮದ್ ಕಂಡ್ಲೂರ್ ಇವರ ಕುರಾನ್ ಪಠಣ ದೊಂದಿಗೆ ಸಭೆ ಆರಂಭವಾಯಿತು. ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕ ಹಾಗು ಬಂದಂತ ಅತಿಥಿಗಳನ್ನು ಸ್ವಾಗತಿಸಿದರು. ಮೌ ಝಮಿರ್ ಅಹ್ಮದ್ ರಷಾದಿ ವರದಿ ಮಂಡಿಸಿದರು. ಸಯ್ಯದ್ ಅಜ್ಮಲ್ ಲೆಕ್ಕ ಪತ್ರ ಮಂಡನೆ ಮಾಡಿದರು. ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ಪಡೆದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬ್ ಹಾಗು ಸಮಾಜ ಸೇವಕರಾದ ಡಾ ಮೊಹಮ್ಮದ್ ರಫೀಕ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಗ್ರಿಬ್ ನಮಾಜಿನ ನಂತರ 2024-25 ರ ಸಾಲಿನ ನೂತನ ಜಿಲ್ಲಾ ಅಧ್ಯಕ್ಷ ಹಾಗು ಇತರ ಪದಾಧಿಕಾರಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನ.27ರಂದು ದೇವರ ಶ್ರೀಮನ್ಮಹಾರಥೋತ್ಸವ (ಕೊಡಿ ಹಬ್ಬ) ನ.27ರಂದು ನಡೆಯಲಿವೆ. ಕೋಡಿ ಹಬ್ಬದ ಪ್ರಯುಕ್ತ ನ.21ರಂದು ಧ್ವಜಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನ.24ರಂದು ರಂಗೋತ್ಸವ, ಶತರುದ್ರಾಭಿಷೇಕ, ಕುಂಜರವಾಹನೋತ್ಸವ, ನ.25ರಂದು ಅಶ್ವವಾಹನೋತ್ಸವ, ನ.26ರಂದು ಸಿಂಹವಾಹನೋತ್ಸವ, ನ.27ರಂದು ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀಮನ್ಮಹಾರಥೋತ್ಸವ, ನ.28ರಂದು ಚೂರ್ಣೋತ್ಸವ, ಅವಭೃತ ಸ್ನಾನ ಕಾರ್ಯಕ್ರಮ, ಸ್ಥಳೀಯ ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ಭಜನೆ ಹಾಗೂ ಮಂಗಲೋತ್ಸವ ಕಾಠ್ಯಕ್ರಮ ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮ:ನ.24ರಂದು ಪುತ್ತೂರು ಬಾಲವನ ಮಹಿಳಾ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ, ನ.25ರಂದು ಶಿವಾನಂದ ಸಂಗಡಿಗರಿಂದ ಗಾನೋಪಾಸನ, ನ.26ರಂದು ಬೆಂಗಳೂರು ಗೋಪಿ ಮತ್ತು ಬಳಗದವರಿಂದ ನಗೆ ಹಬ್ಬ ನ.27ರಂದು ಅರೆಹೊಳೆ ನಂದಗೋಕುಲ ಕಲಾವಿದರಿಂದ ನೃತ್ಯವರ್ಷಾ, ನ.28ರಂದು ವಿದುಷಿಭಾಗೀರಥಿ ಎಂ. ರಾವ್ ಅವರ ಶಿಷ್ಯರಿಂದ ನೃತ್ಯ ಸೌರಭ (ಚಿಣ್ಣರ ಚಿಲಿಪಿಲಿ) ಕಾರಕ್ರಮಗಳು ಪ್ರತಿದಿನ ರಾತ್ರಿ 8 ಗಂಟೆಯಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ ಎನ್ನುವುದು ನಮ್ಮ ಕೈಯಲ್ಲಿರುವ ಶಕ್ತಿಯುತವಾದ ಅಸ್ತ್ರ. ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಉತ್ಸಾಹಕರಾಗಿದ್ರೆ ಅವಕಾಶಗಳು ಸಿಕ್ಕೇ ಸಿಗುತ್ತದೆ ಎಂದು ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆ. ಪಿ ಹೇಳಿದರು. ಅವರು ಇಲ್ಲಿನ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ “ಅರ್ಧಂಬರ್ಧ ಪ್ರೇಮಕಥೆ” ಚಲನಚಿತ್ರದ ಪ್ರಚಾರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಏನೇ ಕೆಲಸ ಮಾಡಿದರು ಪ್ರೀತಿ ಇಂದ ಮಾಡಿ ಮತ್ತು ಎಷ್ಟೇ ಕಷ್ಟ ಬಂದರು ಸಾಧಿಸುವ ಛಲ ನಿಮ್ಮಲ್ಲಿರಬೇಕು ಎಂದರು. ಓದುವುದರ ಜೊತೆ ಜೊತೆಗೆ ನಮ್ಮನ್ನ ನಾವು ಬೇರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಸೋತಾಗ ಕುಗ್ಗಬಾರದು ಗೆದ್ದಾಗ ಹಿಗ್ಗಾಬಾರದು ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆಯೆ ಮುಖ್ಯ ಎಂದು ಭಂಡಾರಕಾರ್ಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುವ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಶ್ವಸ್ತ ಮಂಡಳಿಯ ಹಿರಿಯ ಸದಸ್ಯರಾದ ಯು.ಎಸ್. ಶೆಣೈ, ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರಂಭಗೊಂಡ ಪ್ರತಿಭಟನೆ ಮುಂದುವರಿದಿದ್ದು, ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ. ಅರುಣ್ ಕೆ. ಅವರು ಭೇಟಿನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ಮಾತನಾಡಿ, ವೈದ್ಯಾಧಿಕಾರಿಗಳ ವಿರುದ್ಧದ ಆರೋಪಗಳಿಗೆ ತಜ್ಞ ವೈದ್ಯರ ತಂಡ ರಚಿಸಿ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತಜ್ಞರ ತಂಡ ವರದಿ ಸಲ್ಲಿಸಲು ಒಂದು ವಾರ ಬೇಕಿದ್ದು, ಅಲ್ಲಿಯ ತನಕ ಪ್ರತಿಭಟನೆಯನ್ನು ಕೈಬಿಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, ವೈದ್ಯರ ಕರ್ತವ್ಯ ಲೋಪವಿದ್ದರೇ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಕ್ರಮಗೊಳ್ಳಬೇಕಿದೆ. ಈ ಪ್ರಕರಣವಲ್ಲದೇ ಹಿಂದೆ ಯಾವುದೇ ಇಂತಹ ಘಟನೆ ಆಗಿದ್ದರೂ ಸಂತ್ರಸ್ಥರು ಮನವಿ ಸಲ್ಲಿಸಿ. ಅದರ ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜನತಾ ದರ್ಶನದ ಮೂಲಕ ದೂರುದಾರರು ಹಾಗೂ ಅಧಿಕಾರಿಗಳನ್ನು ಮುಖಾಮುಖಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ದೈನಂದಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದ್ದು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು. ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜನಸಾಮಾನ್ಯರು ತಮ್ಮ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ರಾಜಧಾನಿ ಅಲೆದಾಟ ತಪ್ಪಿಸುವ ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ಸೇರಿ ದೂರು ದಾಖಲಿಸಿಕೊಂಡು ತಕ್ಷಣಕ್ಕೆ ಸಾಧ್ಯವಾಗುವ ದೂರುಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುವ ವ್ಯವಸ್ಥೆ ಜನತಾ ದರ್ಶನದ ಮೂಲಕ ಆಗಲಿದೆ. ಎಲ್ಲಾ ದೂರುಗಳನ್ನು ಪೋರ್ಟೆಲ್‌ನಲ್ಲಿ ದಾಖಲಿಸಿ ವಿಲೇಮಾಡಲಾಗುತ್ತಿದೆ. ತಕ್ಷಣಕ್ಕೆ ಪರಿಹರಿಸಲಾಗದ ದೂರುಗಳನ್ನು ಸರಕಾರ ಹಾಗೂ ಸಂಬಂಧಿತ ಇಲಾಖೆಗೆ ಕಳುಹಿಸಲಾಗುತ್ತದೆ ಎಂದರು. ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಬಳಿಗೆ ಅಧಿಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆಗೆ ಆಸ್ಪತ್ರೆಯ ಹೆರಿಗೆ ತಜ್ಞ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಮುಂದೆ ಕುಟುಂಬಿಕರು ಹಾಗೂ ಊರಿನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಂಗೊಳ್ಳಿಯ ಗುಡ್ಡದಕೇರಿಯ ಶ್ರೀನಿವಾಸ ಖಾರ್ವಿ ಎಂಬುವವರ ಪತ್ನಿ ಜ್ಯೋತಿ ಖಾರ್ವಿ ಹೆರಿಗಾಗಿ ನ.17ರಂದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಡಾ. ಚಂದ್ರ ಮೊಗವೀರ ಎಂಬುವವರು ಹೆರಿಗೆ ಮಾಡಿಸಿದ್ದು, ಈ ವೇಳೆ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು. ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಸಾವು ಸಂಭವಿಸಿದೆ ಎಂದಿದ್ದರು. ಆಸ್ಪತ್ರೆಗೆ ದಾಖಲು ಮಾಡಿದಾಗ ಗರ್ಭಿಣಿಗೆ ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಕೇಳಿರಲಿಲ್ಲ. ಎಂಟೂವರೆ ತಿಂಗಳಿನ ವೇಳೆ ಸ್ಕಾನಿಂಗ್ ಮಾಡದ ಕಾರಣ ಈಗ ಸ್ಕ್ಯಾನಿಂಗ್ ಮಾಡಿ ಎಂದು ಮನೆಯವರು ಒತ್ತಾಯಿಸಿದರೂ ವೈದ್ಯರು ಸ್ಕಾನಿಂಗ್ ಮಾಡಿಸಲಿಲ್ಲ. ಅಲ್ಲದೇ ಉಡಾಫೆಯಿಂದ ಮಾತಾಡಿದ್ದಾಗಿ ಕುಟುಂಬಿಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಿಕರು…
