Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಛಾಯಾ ಸಿ ಪೂಜಾರಿ ತಮಿಳುನಾಡು ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಗಿದ್ದಾಳೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ ಶಿಕ್ಷಣ ವಿಭಾಗ) ಚಾಮರಾಜನಗರದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿಜೇತಳಾಗಿ ಛಾಯಾ ಚಿನ್ನದ ಪದಕ ಪಡೆದಿದ್ದಳು. ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರುಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಸ್‌ಕೆಪಿಎ ದ.ಕ -ಉಡುಪಿ ಜಿಲ್ಲೆ ಕುಂದಾಪುರ – ಬೈಂದೂರು ವಲಯದ ವತಿಯಿಂದ ನ15 ಬುಧವಾರ ಮಕ್ಕಳದಿನಾಚರಣೆ ಅಂಗವಾಗಿ ಶ್ರೀ ಕೆ.ಎಸ್.ಎಸ್.ಸರಕಾರಿ ಪ್ರೌಢಶಾಲೆ ಹಕ್ಲಾಡಿಯಲ್ಲಿ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಶಾಲಾ ಚಿತ್ರಕಲಾ ಶಿಕ್ಷಕರಾದ ರಾಜಶೇಖರ್ ಎಮ್.ತಾಳಿಕೋಟೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಕೆಪಿಎ ಕುಂದಾಪುರ – ಬೈಂದೂರು ವಲಯದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಉಪ್ಪುಂದ ವಹಿಸಿದ್ದರು. ಈ ಸಂಧರ್ಭ ಶ್ರೀ.ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಡಾ. ಕಿಶೋರ್ ಶೆಟ್ಟಿ, ಎಸ್‌ಕೆಪಿಎ ಕುಂದಾಪುರ, ಬೈಂದೂರು ಇದರ ನಿಕಟಪೂರ್ವ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ‌ಮಠ, ಕಾರ್ಯಕ್ರಮದ ಸಂಯೋಜಕರು ನಮ್ಮ ವಲಯದ ಸದಸ್ಯರುಗಳಾದ ರಘುರಾಮ್ ಸಿ.ಜೆ, ವಿಶ್ವನಾಥ್ ಸುಮುಖ, ಶಾಲಾ ಶಿಕ್ಷಕ ವೃಂದದವರು,ವಲಯದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ದಿವಾಕರ್ ಶೆಟ್ಟಿ ಸ್ವಾಗತಿಸಿದರು ಹಾಗೂ ಚಂದ್ರಕಾಂತ್ ವಂದಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅವರೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೋಮವಾರ ಗಂಗೊಳ್ಳಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಹಾನಿಯಾದ ಬೋಟುಗಳ ಮಾಲಿಕರಿಗೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದರು. ಗಂಗೊಳ್ಳಿ ದೋಣಿ ದುರಂತದಲ್ಲಿ 8 ದೋಣಿಗಳು ಸಂಪೂರ್ಣ ಹಾನಿಯಾಗಿದ್ದು, 2 ದೋಣಿಗಳು ಭಾಗಶಃ ಹಾನಿ, 2 ಡಿಂಗಿ ಹಾಗೂ ಮೀನುಗಾರಿಕೆ ಬಲೆ ಹಾನಿಯಾಗಿದೆ. ಈ ಅವಘಡದಿಂದ ಮೀನುಗಾರರು ಆಘಾತಗೊಂಡಿದ್ದಾರೆ. ಈಗಾಗಲೇ ತೂಫಾನ್, ಚಂಡಮಾರುತ ಹಾಗೂ ಇನ್ನಿತರೆ ಕಾರಣಗಳಿಂದ ಮೀನುಗಾರಿಕೆ ನಡೆಸದೆ ಆರ್ಥಿಕವಾಗಿ ನಷ್ಟ ಅನುಭವಿಸಿ ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಪ್ರಸ್ತುತ ಅಗ್ನಿ ಅವಘಡದಲ್ಲಿ ಹಾನಿಗೊಳಗಾದ ದೋಣಿಗಳಿಗೆ ರೂ.10 ಕೋಟಿ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತದ ಗಡಿ ಭದ್ರತಾ ಪಡೆಗೆ ಸೇರ್ಪಡೆಗೊಂಡು, ಪಂಜಾಬ್ನ ಬಿಎಸ್ಎಫ್ ಶಿಬಿರದಲ್ಲಿ 11 ತಿಂಗಳ ಕಾಲ ತರಬೇತಿ ಮುಗಿಸಿ, ದೇಶದ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡು ಮೊದಲ ಬಾರಿಗೆ ಊರಿಗೆ ಆಗಮಿಸಿದ ಹೆಮ್ಮಾಡಿ ಸುನೀತಾ ಪೂಜಾರಿ ಅವರಿಗೆ ಊರವರ ಪರವಾಗಿ ಹೆಮ್ಮಾಡಿ ರಿಕ್ಷಾ ನಿಲ್ದಾಣದ ಬಳಿ ಆಯೋಜಿಸಲಾದ ಹುಟ್ಟೂರ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಗೃಹ ರಕ್ಷಕ ದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್, ಪತ್ರಕರ್ತ ಕೆ.ಸಿ. ರಾಜೇಶ್ ಅವರು ಮಾತನಾಡಿ ನಾವೆಲ್ಲ ಈ ದಿನ ನಿಶ್ಚಿಂತೆಯಿಂದ ಮನೆಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಆಚರಿಸುತ್ತಿರುವುದಕ್ಕೆ ದೇಶದ ಗಡಿಯಲ್ಲಿ ಹಗಲಿರುಳು ಕಾಯುವ ಯೋಧರು ಕಾರಣ. ಸೇನೆಗೆ ಸೇರುವ ಮೂಲಕ ಹೆಮ್ಮಾಡಿಯ ಹೆಮ್ಮೆಯಾಗಿರುವ ಸುನೀತಾ ಪೂಜಾರಿ ಅವರನ್ನು ಗೌರವಿಸುವುದರೊಂದಿಗೆ ಹೆಮ್ಮಾಡಿಯ ಜನ ಈ ದಿನ ಅರ್ಥಪೂರ್ಣ ದೀಪಾವಳಿ ಆಚರಿಸಿದ್ದಾರೆ ಹೇಳಿದರು. ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಮಾತನಾಡಿ, ಈ ಇಬ್ಬರು ಯುವತಿಯರು ಊರಿನ ಇನ್ನಷ್ಟು ಮಕ್ಕಳಿಗೆ, ಯುವಕರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತ್ತಿಚಿಗೆ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಯೋಧ ಬೈಂದೂರಿನ ಮಣಿಕಂಠ ಹೋಬಳಿದಾರ್ ಅವರು, 100ಮೀ. ಓಟವನ್ನು 10.23 ಸೆಕೆಂಡುಗಳಲ್ಲಿ ಪೂರೈಸಿ ‘ಭಾರತದ ಅತ್ಯಂತ ವೇಗದ ಓಟಗಾರ’ ಎಂಬ ದಾಖಲೆ ಮಾಡಿರುವುದನ್ನು ಗುರುತಿಸಿ, ಭಾನುವಾರ ಬೈಂದೂರಿನ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅವರಿಗೆ ಹುಟ್ಟೂರ ಸನ್ಮಾನ ನೆರವೇರಿಸಲಾಯಿತು. ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ್ದ 21 ವರ್ಷದ ಮಣಿಕಂಠ ಹೋಬಳಿದಾರ್ ಅವರು, 100ಮೀ. ಓಟದ ಸೆಮಿಫೈನಲ್ನಲ್ಲಿ 10.23 ಸೆಕೆಂಡುಗಳಲ್ಲಿ ಓಡಿ ‘ಭಾರತದ ಅತ್ಯಂತ ವೇಗದ ಓಟಗಾರ’ ದ ದಾಖಲೆ ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೊದಲು 10.26 ಸೆಕೆಂಡುಗಳಲ್ಲಿ ಓಡಿದ್ದ ದಾಖಲೆಯನ್ನು ಅವರು ಮುರಿದಿದ್ದರು. ಮಣಿಕಂಠ ಅವರನ್ನು ಬೈಂದೂರು ಬೈಪಾಸ್ನಿಂದ ಮೆರವಣಿಗೆಯಲ್ಲಿ ಸ್ವಾಗತಿಸಿಕೊಂಡು, ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಅವರನ್ನು ಅಭಿನಂದಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.13: ಮೀನುಗಾರಿಕಾ ಬೋಟುಗಳಿಗೆ ಬೆಂಕಿ ತಗುಲಿ ಬೋಟುಗಳು ಸುಟ್ಟು ಕರಕಲಾಗಿರುವ ಘಟನೆ ಇಂದು ಮುಂಜಾನೆ ತಾಲೂಕಿನ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯ ಬಂದರಿನಲ್ಲಿ ನಡೆದಿದೆ. ಘಟನೆಯಲ್ಲಿ 7 ಬೋಟು, 2 ದೋಣಿ, 2 ಬೈಕ್, ಜನರೇಟರ್ ಹಾಗೂ ಮೀನುಗಾರಿಕಾ ಸಲಕರಣೆಗಳಿಗೆ ಬೆಂಕಿ ತಗುಲು ಸುಟ್ಟು ಕರಕಲಾಗಿದೆ. ದುರ್ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಕುಂದಾಪುರ ಬೈಂದೂರು ಹಾಗೂ ಇತರೆಡೆಯ ಅಗ್ನಿಶಾಮಕ ದಳ ತಂಡ, ಬಂದರು ಠಾಣೆ ಪೊಲೀಸರು, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜೆಯ ವೇಳೆ ಸಿಡಿಸಿದ ಪಟಾಕಿಯಿಂದ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಇದ್ದು, ತನಿಕೆಯ ಬಳಿಕ ಕಾರಣ ತಿಳಿಯಲಿದೆ.

Read More

ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್‌ನಲ್ಲಿ ‘ಸ್ಮಾರ್ಟ್ ದೀಪಾವಳಿ’ ಆಚರಿಸಲಾಗುತ್ತಿದ್ದು, ಹಬ್ಬದ ಸಂಭ್ರಮದೊಂದಿಗೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಇಎಂಐ ಸೌಲಭ್ಯ, ಐಪೋನ್ ಖರೀದಿಗೆ 0 ಡೌನ್ ಪೇಮೆಂಟ್, ಪ್ರತಿ ಮೊಬೈಲ್ ಖರೀದಿಗೆ ಜೊತೆಗೆ ಲಕ್ಕಿ ಕೂಪನ್, ಮೆಗಾ ಎಕ್ಸ್’ಚೆಂಚ್ ಆಫರ್, ಉಚಿತ ಸ್ಕ್ರೀನ್ ಬದಲಾವಣೆ ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ದೀಪಾವಳಿಯ ಅಂಗವಾಗಿ ನ.08ರಿಂದ ಆರಂಭಗೊಂಡ ಈ ಆಫರ್ ನ.15ರ ತನಕ ಇರಲಿದೆ. ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರಿನ ಪಂಚಾಯತ್ ಕಟ್ಟಡದಲ್ಲಿರುವ ‘ಪ್ರೀತಿ ಮೊಬೈಲ್ಸ್’ ಮಳಿಗೆ, ಬೈಂದೂರು ಬಂಕೇಶ್ವರ ರಸ್ತೆಯ ಪಂಚಾಯತ್ ಕಟ್ಟಡದಲ್ಲಿನ ಮಳಿಗೆ ಅಥವಾ ಆಂಜನೇಯ ದೇವಸ್ಥಾನದ ಬಳಿಕ ಶೇಷಾದ್ರಿ ಕಾಂಪ್ಲೆಕ್ಸ್ ಮಳಿಗೆಗೆ ಭೇಟಿ ನೀಡಬಹುದಾಗಿದೆ.ಕರೆ ಮಾಡಿ: +919961087889, 7829378889

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಶಿಕಾರಿಪುರ ಶಾಸಕ, ಬಿಜೆಪಿಯ ಹಾಲಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ನೇಮಕಗೊಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಜಯೇಂದ್ರ ಅವರನ್ನು ನೇಮಕಗೊಳಿಸಿದ ಆದೇಶ ಪ್ರಕಟಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಿಟಿ ರವಿ ಹೆಸರು ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆಗಿರುವ ಬಿ.ವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದೆ. ವಿಜಯೇಂದ್ರ ಯುವ ನಾಯಕರಾಗಿರುವ ಕಾರಣ ಕಾರ್ಯಕರ್ತರ ಪಡೆ ಇನ್ನಷ್ಟು ಬಲವಾಗುವ ಜತೆಗೆ ಪಕ್ಷ ಸಂಘಟನಾ ಸಾಮರ್ಥ್ಯವು ಹೆಚ್ಚಾಗುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಇದರ ಜೊತೆ ಪ್ರಬಲ ಸಮುದಾಯವಾದ ಲಿಂಗಾಯತ ಮತಬ್ಯಾಂಕ್ ರಕ್ಷಣೆ, ಸಮುದಾಯದ ನಾಯಕರ ವಲಸೆ ತಡೆಗೂ ಬ್ರೇಕ್ ಬೀಳುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ನಂತರ ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸವ ವಸತಿ ಯೋಜನೆಯ ಬಾಕಿ ಉಳಿದ ಕೆಲಸಕ್ಕೆ ಕಂತು ಬಿಡುಗಡೆ ಮಾಡಲು ಹಣದ ಬೇಡಿಕೆ ಇರಿಸಿದ ಆರೋಪದಡಿ ತಾಲೂಕಿನ ಕಾವ್ರಾಡಿ ಪಂಚಾಯತಿಯ ಕಾರ್ಯದರ್ಶಿ ಗೋಪಾಲ ದೇವಾಡಿಗ ಎಂಬುವವರನ್ನು ಉಡುಪಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವ ವಸತಿ ಯೋಜನೆಯ ಕಂತು ಬಿಡುಗಡೆಗೊಳಿಸಲು ಜಾವೇದ್ ಕಾರ್ವಾಡಿ ಎಂಬುವವರಿಂದ, ಪಂಚಾಯತ್ ಕಾರ್ಯದರ್ಶಿ ಗೋಪಾಲ ದೇವಾಡಿಗ 15,000 ರೂ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಆರೋಪಿಯನ್ನು ಟ್ರಾಪ್ ಮಾಡಿ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್.ಪಿ ಸೈಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ಮಲ್ಲಿಕಾ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್, ಸತೀಶ್ ಆಚಾರ್ಯ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ಹಾಗೂ ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ* ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಂದಾಪುರದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮದರ್ ತೆರೆಸದ ವಿದ್ಯಾರ್ಥಿಗಳಾದ ಶುಭನ್ ಕಿರಿಯ ಪ್ರಾಥಮಿಕ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮೆಹರಾನ್ ಕಿರಿಯ ಪ್ರಾಥಮಿಕ ವಿಭಾಗದ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರೌಢ ವಿಭಾಗದ ಜಾನಪದ ನೃತ್ಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಹಾಗೂ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಜನಪದ ನೃತ್ಯ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಹೆಮ್ಮೆ…

Read More