ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿಯ ಚುರುಕುತನ ಹಾಗೂ ಪಶ್ಚಿಮ ಘಟ್ಟ ಭಾಗದ ನಯವಂತಿಕೆ ಕುಂದಾಪ್ರ ಕನ್ನಡಿಗರಲ್ಲಿ ಬೆರೆತಿದ್ದು ವಿಶ್ವದಾದ್ಯಂತ ಉದ್ಯಮ ಹಾಗೂ ಕಲಾ ಜಗತ್ತಿನ ಮೂಲಕ ಹೆಸರು ಮಾಡಲು ಸಾಧ್ಯವಾಗಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇಲ್ಲಿನ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನ ಶಾರದಾ ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ಜರುಗಿದ ಹ್ವಾಯ್ ಬನಿ ಕೂಕಣಿ ಸ್ನೇಹ ಸಮ್ಮಿಲನ – 2019ನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆಯ ಕಾರಣದಿಂದಾಗಿ ವಿಶ್ವದ ಎಲ್ಲಿಗೇ ಹೋದರು ಅವಿಭಜಿತ ಕುಂದಾಪುರದವರನ್ನು ಗುರುತಿಸುತ್ತಾರೆ. ಇಲ್ಲಿನ ಹತ್ತಾರು ಸಾಧಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಕುಂದಾಪುರ ಕ್ಷೇತ್ರದಂತೆಯೇ ಬೈಂದೂರು ಕ್ಷೇತ್ರವೂ ಮೂಲಭೂತ ಸೌಕರ್ಯಗಳನ್ನು ಹೊಂದುವುದಲ್ಲದೇ ಎಲ್ಲಾ ಆಯಾಮಗಳಲ್ಲಿಯೂ ಪ್ರಗತಿ ಸಾಧಿಸಬೇಕಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದವರು ಭರವಸೆಯಿತ್ತರು. ಗಲ್ಫ್ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದನಾಡಿನ ಜೀವನ ಸಂಸ್ಕೃತಿಯ ಪ್ರತೀಕವಾಗಿಹ ನೆಲಪರ – ಜೀವಪರವಾದ ಕುಂದಾಪ್ರ ಕನ್ನಡದ ಭಾಷಾ ಪರಂಪರೆಯು, ಆಧುನಿಕತೆಯ ನಾಗಾಲೋಟದಲ್ಲಿ ತನ್ನ ಮೂಲ ಸೊಗಡನ್ನು ಕಳಚಿಕೊಳ್ಳುತ್ತಿರುವುದು ದುರಂತ. ಯಥೇಚ್ಚ ಬಳಕೆಯೊಂದಿಗೆ ಪದಗುಚ್ಚಗಳ ಸಂಗ್ರಹಕಾರ್ಯ ನಡೆದಾಗಲೇ ಕುಂದಾಪ್ರ ಕನ್ನಡ ಬರಡಾಗದೇ ಸದಾ ಫಲವತ್ತಾಗಿರಲು ಸಾಧ್ಯ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಎ. ಎಸ್. ಎನ್ ಹೆಬ್ಬಾರ್ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ’ವಿಶ್ವ ಕುಂದಾಪ್ರ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತದ ಶಾಸಕ ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಮಾತನಾಡಿ .ಪ್ರಕೃತಿ ಸಹಜವಾಗಿಯೇ ಗಡಸುತನ – ಚುರುಕುತನವನ್ನು ತನ್ನೊಳಗೆ ಆಲಂಗಿಸಿಕೊಂಡಿರುವ ಕುಂದಾಪ್ರ ಕನ್ನಡವು ಆಡಂಬರರಹಿತವಾದ ಹೃದಯಾಂತರಾಳದ ಭಾಷೆ ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಶುಭಶಂಸನೆ ಗೈದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಾಶ್ಚಾಮಾತ್ಯ ಆಹಾರ ಪದ್ದತಿಯ ಅತೀಯಾದ ಆಕ್ರಮಣದಿಂದಾಗಿ ನಮ್ಮ ಪರಂಪರಾಗತ ಮತ್ತು ಸಾಂಪ್ರಾದಾಯಿಕ ಆಹಾರ ಶೈಲಿಯಲ್ಲಿ ಗಣನೀಯ ಬದಲಾವಣೆ ಕಂಡು ಬಿರುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕಾಗಿ ದೇಶಿಯ ಆಹಾರ ಪದ್ಧತಿಯ ಜಾಗ್ರತ ಕಾರ್ಯಕ್ರಮ ಅತ್ಯಂತ ಅನಿವಾರ್ಯ ಮತ್ತು ಉಪಯುಕ್ತ ಎಂದು ಡಾ. ರಾಜೇಶ್ ಬಾಯರಿ ಹೇಳಿದರು. ಗುರುಕುಲ ವಿದ್ಯಾಸಂಸ್ಥೆಯ ೭ನೇ ವರ್ಷ ಆಯೋಜಿಸಿದ್ದ ಸಸ್ಯಾಮೃತ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ದೇಶಿಯ ಆಹಾರ ಪದಾರ್ಥಗಳಲ್ಲಿ ಸಸ್ಯಗಳು ಎಲೆಗಳು ಬೇರುಗಳು ಮುಂತಾದವುಗಳು ಪ್ರದಾನ ಪಾತ್ರವನ್ನು ವಹಿಸುತ್ತಿವೆ. ನಮ್ಮ ಮನೆಯಂಗಳದಲ್ಲಿ ಕಾಣುವ ಅನೇಕ ಔಷಧಿಯುಕ್ತ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ವಿಶಿಷ್ಟವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ರೋಗಕ್ಕೂ ಅದಕ್ಕೆ ಸಂಬಂಧಪಟ್ಟ ಸಸ್ಯ ನೇರ ಮತ್ತು ಪರೋಕ್ಷ ನಿರ್ಮೂಲನಾ ಗುಣವನ್ನು ಹೊಂದಿದೆ. ಪ್ರತಿನಿತ್ಯವೂ ನಾವು ಸಸ್ಯಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗುರುಕುಲ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನುಷ್ಯ ಸಂಬಂಧಗಳು ಮೂಲೆ ಗುಂಪಾಗುತ್ತಿರುವ ಈ ಕಾಲಘಟ್ಟದಲ್ಲಿ ಧಾರ್ಮಿಕ – ಸಾಮಾಜಿಕ – ಸಾಂಸ್ಕೃತಿಕ ಸಮಾನತೆಯನ್ನು ಕಾಯ್ದುಕೊಳ್ಳಲು ಬಸವಾದಿ ಶಿವಶರಣರು ಪ್ರತಿಪಾದಿಸಿದ ಮಾನವೀಯ ಹೋರಾmದ ಅನಿವಾರ್ಯತೆ ಇದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಕೆ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು. ಇವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಹಮತ ವೇದಿಕೆಯ ಸಹಯೋಗದಲ್ಲಿ ನಡೆದ ‘ಮತ್ತೆ ಕಲ್ಯಾಣ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಬಹುತ್ವದ ಪರಿಕಲ್ಪನೆ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವ ಜಾಗತೀಕರಣದ ಈ ಸಂದರ್ಭ, ಸಂಕುಚಿತಗೊಂಡ ಮನಸ್ಸುಗಳು ಇದಿರುಗೊಳ್ಳಬೇಕಾದದ್ದು ಅಂತರಂಗದ ಪ್ರತಿಭಟನೆಗೇ ವಿನಃ ಬಹಿರಂಗದ ಪ್ರತಿಭಟನೆಗಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಮಾತನಾಡಿ, ಡಾಂಬಿಕ ಬದುಕಿಗೆ ತೆರೆದುಕೊಂಡ ಪ್ರಸ್ತುತ ಸಮಾಜದಲ್ಲಿ ಮಠ-ಮಂದಿರ – ಮಸೀದಿಗಳ ನಿರ್ಮಾಣದ ಬದಲಾಗಿ ವೈಚಾರಿಕ ಮನಸ್ಸುಗಳು ನಿರ್ಮಾಣಗೊಳ್ಳಬೇಕಿದೆ. ಮಾನವೀಯತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಘು ನಾಯ್ಕರವರು ರೋಲ್ ಎಂಡ್ ರಿಲೆವೆನ್ಸ್ ಆಪ್ ಕಾರ್ಪೋರೇಟ್ ಇ-ಲರ್ನಿಂಗ್ ಇನ್ ಎನ್‌ಹೆನ್ಸಿಂಗ್ ದಿ ಇಫೆಕ್ಟಿವ್‌ನೆಸ್ ಆಪ್ ಟ್ರೈನಿಂಗ್ ಎಂಡ್ ಡೆವಲಪ್‌ಮೆಂಟ್ : ಎ ಸ್ಟಡಿ ವಿದ್ ರೆಫರೆನ್ಸ್ ಟು ಸೆಲೆಕ್ಟೆಡ್ ಕಂಪ್ಯೂಟರ್ ಸಾಪ್ಟ್‌ವೇರ್ ಎಂಡ್ ಸರ್ವೀಸಸ್ ಫರ್ಮ್ಸ್ ಇನ್ ಕರ್ನಾಟಕ ಮಹಾ ಪ್ರಬಂದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಪಿ.ಎಸ್ ಯಡಪಡಿತ್ತಾಯರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿರುತ್ತಾರೆ. ಇವರು ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಕುಪ್ಪಯ್ಯ ನಾಯ್ಕ ಸುಶೀಲ ದಂಪತಿಯ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ 2019-20ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಯಡ್ತರೆ ಹಾಗೂ ಕಾರ್ಯದರ್ಶಿಯಾಗಿ ಚಂದ್ರ ಪೂಜಾರಿ ಯಡ್ತರೆ ಮರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹೆರಿಯ ದೇವಾಡಿಗ, ಗುರುಪ್ರಕಾಶ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪಿ. ಯಡ್ತರೆ, ಶಿವ, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಲೆಕ್ಕ ಪರಿಶೋಧಕರಾಗಿ ಸುರೇಶ ಬಟ್ವಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಶಾಂ ಶೇಟ್, ರವೀಂದ್ರ ಜೆ, ರವೀಂದ್ರ ಶಾನುಭೋಗ್, ಕಾರ್ಯಕ್ರಮ ಉಸ್ತುವಾರಿಯಾಗಿ ಸಂಜಯ ಬೈಂದೂರು, ಶಂಕರ ಮೊಗವೀರ, ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವನಮಹೋತ್ಸವ ಕೇವಲ ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ರಕ್ಷಿಸಬೇಕು, ಅವು ಬೆಳೆದ ನಂತರ ನಮ್ಮನ್ನು ರಕ್ಷಿಸುತ್ತವೆ. ಹಸಿರು ನಮ್ಮ ಜೀವನಾಡಿಯಾಗಬೇಕು. ಆಗ ಮಾತ್ರ ವಿಪತ್ತುಗಳಿಂದ ನಾವು ಮತ್ತು ಇಡೀ ಜೀವ ಸಂಕುಲ ಬದುಕಲು ಸಾಧ್ಯವಾಗುತ್ತದೆ ಬೈಂದೂರು ಉಪವಲಂii ಅರಣ್ಯಾಧಿಕಾರಿಗಳಾದ ಸದಾಶಿವ ಕೆ. ಅವರು ನುಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇಲ್ಲಿನ ಇಕೋ ಕ್ಲಬ್, ಎನ್‌ಎಸ್‌ಎಸ್ ಹಾಗೂ ಬೈಂದೂರು ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಕೋ ಕ್ಲಬ್‌ನ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಕಾಲೇಜಿನ ಇಕೋ ಕ್ಲಬ್ ಗಿಡಗಳನ್ನು ನೆಟ್ಟು ಬೆಳೆಸಿ, ಉಳಿಸುವುದರೋಂದಿಗೆ, ಯುವಜನರಲ್ಲಿ ಹಸಿರಿನ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಗಳು ಸಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ರಘು ನಾಯ್ಕ ನುಡಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ನಾಗರಾಜ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ವಿನೋದ್ ಬಸುಪಟ್ಟದ್, ಮೋಹನ್‌ಕುಮಾರ್, ಮೀನಾಕ್ಷಿ, ಶಿವಕುಮಾರ ಪಿ.ವಿ. ಮತ್ತು ಉಪವಲಯಾ ಅರಣ್ಯಾಧಿಕಾರಿಗಳಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬದುಕಿಗೂ, ಚೆಸ್ ಆಟಕ್ಕೂ ಸಾಮ್ಯತೆ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆಗಳನ್ನು ಇರಿಸುವ ಮೂಲಕ ಮಾತ್ರ ಯಶಸ್ಸು ಸಾಧಿಸಬಹುದು ಎನ್ನುವುದು ಚೆಸ್ ಕಲಿಸುವ ಪಾಠ. ವಿದ್ಯಾರ್ಥಿಗಳು ಬದುಕಿಗೆ ಅನ್ವಯವಾಗುವ ಚೆಸ್ ಆಟದ ನಿಯಮ ಮತ್ತು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ತ್ರಾಸಿಯ ಡಾನ್ ಬೋಸ್ಕೊ ಶಾಲೆಯ ಆಡಳಿತಗಾರ ಫಾ. ಲಿಯೋ ಪಿರೇರಾ ಹೇಳಿದರು. ಶಾಲೆಯಲ್ಲಿ ನಡೆದ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳ ಜಿಲ್ಲಾ ಮಟ್ಟದ ‘ಮಾಸ್ಟರ್ ಮೂವ್-2019’ ಚೆಸ್ ಪಂದ್ಯಾವಳಿ ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಪಾದಿಸಿದ ಅವರು ವಿದ್ಯಾರ್ಥಿಗಳು ಕ್ರೀಡೆಯ ಜತೆಗೆ ಪರಿಸರ ಸಂರಕ್ಷಣೆಯ ಚಾಂಪಿಯನ್‌ಗಳಾಗಬೇಕು ಎಂದು ಆಶಿಸಿದರು. ಸಮಾರೋಪದ ನುಡಿಗಳನ್ನಾಡಿದ ಪ್ರಾಂಶುಪಾಲ ಫಾ. ಮ್ಯಾಕ್ಷಿಂ ಡಿಸೋಜ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾದ ಎಲ್ಲರನ್ನು, ಮುಖ್ಯವಾಗಿ ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ಅಧಿಕಾರಿಗಳನ್ನು ಸ್ಮರಿಸಿದರು. ಪಂದ್ಯದ ಪ್ರಧಾನ ತೀರ್ಪುಗಾರ ಪ್ರಸನ್ನ ರಾವ್ ಮತ್ತು ಸಹಾಯಕ ತೀರ್ಪುಗಾರರನ್ನು ಗೌರವಿಸಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿ ಐ ಟಿ ಯು)ವಿನ ೪೩ನೇ ವಾರ್ಷಿಕ ಮಹಾಸಭೆಯು ಹಂಚು ಕಾರ್ಮಿಕರ ಭವನದಲ್ಲಿ ಕಾಮ್ರೇಡ್ ಕೆ.ಲಕ್ಷ್ಮಣರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. P ರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ ಐ ಟಿ ಯುವಿನ ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಸಂಘದ ಕಾಮ್ರೇಡ್ ಕೆ ಪ್ರಕಾಶ ಚಾಲಕರನ್ನು ಉದ್ದೇಶಿಸಿ ಮಾತನಾಡಿತ್ತಾ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನಿತಿಯಿಂದ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿನ ಕೇಂದ್ರ ಸರಕಾರ ಜಾರಿಗೆ ತಂದಿರುವ ರಸ್ತೆ ಸಾರಿಗೆ ಸುರಕ್ಷ ಮಸುದೆ ಕಾಯ್ದೆಯನ್ನು ಇಂದು ಕೇಂದ್ರ ಸರಕಾರ ಇಂದು ಜಾರಿ ಮಾಡಿರುವುದರಿಂದ ಸಣ್ಣ ಸಣ್ಣ ತಪ್ಪುಗಳಿಗೆ ಅಧಿಕ ದಂಡ ನೀಡುವಂತಾಗಿದೆ. ಇರಿಂದಾಗಿ ಚಾಲಕರಿಗೆ ಹಿಂದಿಗಿಂತಲು ಈಗ ಕಷ್ಟಗಳು ಹೆಚ್ಚಾಗಿವೆ ಇನ್ನು ಕೆಲವು ಕಡೆ ಟ್ಯಾಕ್ಷಿಗಳಿಗೆ ಅಧಿಕ ಟೋಲ್‌ಗಳನ್ನು ವಸೂಲಿ ಮಾಡುತ್ತಿದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು. ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಆಯಾ ದಿನಗಳು ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‍ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ಜರುಗಲಿವೆ. ವಿರಾಸತ್‍ನಲ್ಲಿ ದಿನವೊಂದಕ್ಕೆ ಎರಡು ಅವಧಿ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ನಡೆಯಲಿದೆ. ನ.14ರಂದು ಆಳ್ವಾಸ್ ವಿದ್ಯಾರ್ಥಿಸಿರಿ, ಅದೇ ದಿನ ಸಾಯಂಕಾಲ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ಕೃಷಿಸಿರಿ’ ಉದ್ಘಾಟನೆಗಳು ನಡೆಯಲಿವೆ. ನ.15ರಂದು ಆಳ್ವಾಸ್ ನುಡಿಸಿರಿ ಉದ್ಘಾಟನೆಗೊಳ್ಳಲಿದ್ದು, ನ.17ರಂದು ಮಧ್ಯಾಹ್ನ ಸಮಾರೋಪಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಶ ನೀಡಲಾಗುವುದು. ಅರ್ಥವತ್ತಾಗುವಂತೆ…
