ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯಕ್ತಿಯ ಪರಿವರ್ತನೆ ಆದರೆ ಊರು, ದೇಶದ ಪರಿವರ್ತನೆ ಆಗುತ್ತದೆ. ವ್ಯಕ್ತಿ ನಡೆಸುವ ಧಾರ್ಮಿಕ ಕಾರ್ಯಗಳು ಅವನ ಅಹಂಕಾರವನ್ನು ಅಳಿಸಿ ಅವನ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ನಾವುಂದ ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾ ದೇಗುಲ ಸಮರ್ಪಣೆ, ನೂತನ ಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳಿಂದ ನಾವುಂದ ಪರಿಸರದ ಜನರ ಸ್ಥಿತಿಗತಿಯ ನಿಕಟ ಪರಿಚಯ ತಮಗಿದೆ ಎಂದ ವೀರೇಂದ್ರ ಹೆಗ್ಗಡೆ ಆಗ ಇಲ್ಲಿ ಆರ್ಥಿಕ, ಶೈಕ್ಷಣಿಕ ಬಡತನ ಇತ್ತು. ೩೦ ವರ್ಷಗಳಿಂದೀಚೆಗೆ ಇಲ್ಲಿ ಅದ್ಭುತ ಪ್ರಗತಿ ಆಗಿದೆ. ಜನರ ಜೀವನ ಶೈಲಿ, ಆಹಾರ, ವಿಹಾರ, ಸಂಸ್ಕಾರಗಳಲ್ಲಿ ಧನಾತ್ಮಕ ಬದಲಾವಣೆ ಆಗಿದೆ. ಅದು ಮತ್ಸ್ಯಾವತಾರದ ಮತ್ಸ್ಯದ ಬೆಳವಣಿಗೆಯಂತೆ ಭಾಸವಾಗುತ್ತಿದೆ. ಇಲ್ಲಿಯ ಜನ ಹಳ್ಳಿಯಿಂದ ನಗರಗಳಿಗೆ ಹೋಗಿ ದುಡಿದು, ಊರಿನ ಕಾರ್ಯಗಳಿಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ರಜಾರಂಗು 2019 ಇದರ 25ನೇ ದಿನ ಜ್ಞಾನ ರಂಜನಾ ಶಿಬಿರದಲ್ಲಿ ಯಕ್ಷಗಾನ ಕಾರ್ಯಾಗಾರ ಜರುಗಿತು. ಯಕ್ಷದೇಗುಲ ಬೆಂಗಳೂರು ವತಿಯಿಂದ ನಡೆದ ಕಾರ್ಯಾಗಾರವನ್ನು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಉದ್ಘಾಟಿಸಿ ಮಾತನಾಡಿ ಅಬ್ಬರದ ವೇಷಭೂಷಣ, ಪ್ರಬುದ್ಧ ಮಾತುಗಾರಿಕೆ, ನೃತ್ಯ, ಹಾವ-ಭಾವ-ತಾಳ-ಅಭಿನಯವನ್ನು ಒಳಗೊಂಡಿರುವ ಯಕ್ಷಗಾನ ಪರಿಪೂರ್ಣ ಕಲಾ ಪ್ರಾಕಾರ ಎಂದು ಹೇಳಿದರು. ಶಿಬಿರಾರ್ಥಿಗಳಿಗೆ ರಂಗದಲ್ಲಿ ಚೌಕಿ ಮನೆಯಲ್ಲಿ ವೇಷ ತಯಾರಾಗುವ ಬಗೆ ರಂಗದಲ್ಲಿಯೇ ತೋರಿಸುವ ಮೂಲಕ ಅಭಿನಯದಲ್ಲಿ ಪ್ರವೇಶ, ಮುದ್ರೆಗಳು, ತಾಳಗಳು, ಯಾವ ವೇಷಗಳನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ತರಬೇತಿ ನೀಡಲಾಯಿತು. ಯಕ್ಷದೇಗುಲ ಬೆಂಗಳೂರು ಇದರ ಸಂಘಟಕ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಸುಜಯೀಂದ್ರ ಹಂದೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಹೆರಿಯ ಮಾಸ್ಟರ್, ಛಾಯಾಚಿತ್ರಗ್ರಾಹಕ ಪಾಂಡುರಂಗ ಕೋಮೆ ಉಪಸ್ಥಿತರಿದ್ದರು. ಪ್ರಣಮ್ಯಾ ಸ್ವಾಗತಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ ಪ್ರವೇಶಿಸಬಾರದು ಎಂದು ರಾಜ್ ನ್ಯೂಸ್‌ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ನ್ಯೂಸ್ ಟೈಮ್‌ನ ಶತಕದ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಪತ್ರಿಕೋದ್ಯಮದ ಮೇಲೆ ರಾಜಕೀಯ ಹೆಚ್ಚು ಪ್ರಭಾವ ಬೀರುತ್ತಿದೆ. ಆದ್ದರಿಂದ ಪತ್ರಕರ್ತ ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಸೀಮಿತವಾಗದೇ ಸ್ವಾತಂತ್ರ್ಯ ವಾಗಿ ಕೆಲಸ ಮಾಡಬೇಕು. ಅಲ್ಲದೆ ಪತ್ರಕರ್ತರು ಮಾಡುವ ಎಲ್ಲ ಚಟುವಟಿಕೆಗಳು ಮತ್ತು ಹೇರುವ ಅಲೋಚನೆಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಪತ್ರಕರ್ತರಾದವನಿಗೆ ಅಹಂಕಾರವಿರಬೇಕು, ಅದು ವಿಷಯ ಜ್ಞಾನದ್ದಾಗಿರಬೇಕು. ಆದರೆ ಅದು ಎಂದೂ ದುರಂಕಾರದ ಸ್ವರೂಪ ಪಡೆಯಬಾರದು. ಅಧ್ಯಯನ ಹಾಗೂ ವಿದ್ವತ್ತಿನ ಹೊರತು ಬೇರೆ ಯಾವುದೂ ಪತ್ರಕರ್ತನಾದವನನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಧುರೀಣ ಹಾಗೂ ಪ್ರಗತಿಪರ ಕೃಷಿಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ದಕ್ಷಿಣಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರಾಗಿ, ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಮೈಸೂರಿನಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಡಿಪ್ಲೋಮ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ, ಜೆಎಸ್‌ಎಸ್ ಮಹಾವಿದ್ಯಾಪೀಠವು ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಸ್ಥಾಪನೆ ಮಾಡಿದ್ದು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಗೊಂಡ ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ 2019-20 ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾಗಶಃ ಮತ್ತು ಪೂರ್ಣ ಅಂಧತ್ವವುಳ್ಳ ಅಭ್ಯರ್ಥಿಗಳು ಇಂಗ್ಲೀಷ್ ಬ್ರೈಲ್ ಭಾಷೆಯ ಜ್ಞಾನ ಹೊಂದಿದ್ದಲ್ಲಿ ಆದ್ಯತೆಯನ್ನು ನೀಡಲಾಗುವುದು. ಪಾಲಿಟೆಕ್ನಿಕ್‌ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಸೌಲಭ್ಯವಿದೆ. ಪ್ರವೇಶಕ್ಕೆ ಅರ್ಜಿಗಳನ್ನು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಮೈಸೂರು (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಹಾಗೂ ಎಸ್‌ಸಿ/ಎಸ್‌ಟಿ/ಸಿ1 ವರ್ಗದವರಿಗೆ ರೂ.50) ನಗದು ಅಥವಾ ಡಿಡಿ/ ಎಂಒ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಡಿಕೆರೆ ಮತ್ತು ಕೋಟೆಕೆರೆಗಳ ಮೀನು ಪಾಶುವಾರು ಹಕ್ಕನ್ನು 2019-20 ನೇ ಮೀನುಗಾರಿಕೆ ಫಸಲಿ ವರ್ಷದಿಂದ 2023-24 ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ ಗರಿಷ್ಟ 5 ವರ್ಷಗಳಿಗೆ ಸರ್ಕಾರದ ನಿಯಮ, ಷರತ್ತು ಮತ್ತು ನಿಬಂಧನೆಗೊಳಪಟ್ಟಂತೆ ಅರ್ಹ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಗುತ್ತಿಗೆ ನೀಡಲಾಗುವುದು. ಗುತ್ತಿಗೆ ಪಡೆಯಲಿಚ್ಛಿಸುವ ಅರ್ಹ ಮೀನುಗಾರರ ಸಹಕಾರ ಸಂಘದವರು ಮಾತ್ರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮೇ 23 ರ ಒಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ-೨, ಕುಂದಾಪುರ, ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08254-230534 ಅನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಂಕರ ಜಯಂತಿ ಆಚರಣೆಯು ಬಹಳ ಪವಿತ್ರವಾದ ಕಾರ್ಯ. ಮನುಕುಲದ ಉದ್ಧಾರಕ್ಕೆ ಧಾರ್ಮಿಕ, ಸಂಸ್ಕೃತಿಯನ್ನು ಎತ್ತಿ ಹಿಡಿದು ಹೊಸ ಚರಿತ್ರೆ ಬರೆದ ಪುಣ್ಯತಮ ವ್ಯಕ್ತಿಯ ಕಾರ್ಯ, ಅಳಿವಿನಂಚಿನಲ್ಲಿದ್ದ ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಯಾವುದೇ ಯುದ್ಧಗಳನ್ನು ಮಾಡದೇ ತರ್ಕಗಳ ಮೂಲಕ ಅನ್ಯ ಧರ್ಮದ ಲೋಪ ದೋಷಗಳ ತಿಳಿಸಿ ತರ್ಕಗಳಲ್ಲಿ ಗೆಲ್ಲುದರ ಜೊತೆ ಮನ ಪರಿವರ್ತನೆ ಮಾಡಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಶ್ರೀ ಶಂಕರರು ಕಾರಣರು, ಶ್ರೀ ಶಂಕರರು ಸಾಕ್ಷತ್ ದೇವರ ಅವತಾರವಾಗಿದ್ದು, ಮನುಕುಲದ ಉದ್ಧಾರಕ್ಕೆ ಶ್ರೀ ಶಂಕರರ ಕೊಡುಗೆ ಅಪಾರವಾದುದ್ದು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ದಕ್ಷಿಣಾಮ್ನಾಯ ಇವರ ಪ್ರಾಂತೀಯ ಧರ್ಮಧಿಕಾರಿಗಳಾದ ವೇದಮೂರ್ತಿ ಬಡಾಕೆರೆ ಲೋಕೇಶ ಅಡಿಗ ಹೇಳಿದರು. ಅವರು ಶಾಂಕರ ತತ್ವ ಪ್ರಸರಣಾ ಸಮಿತಿ ಬೈಂದೂರು ತಾಲೂಕು ಇವರ ವತಿಯಿಂದ ಉಪ್ಪುಂದ ಸುವಿಚಾರ ಬಳಗ ಟ್ರಸ್ಟ್‌ನ ಸಹಯೋಗದಲ್ಲಿ ಉಪ್ಪುಂದ ಶ್ರೀ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಭಾನುವಾರ ಸಂಜೆ ನಡೆದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಸತತ 9 ನೇ ಬಾರಿ ಸಿ.ಬಿ.ಎಸ್.ಇ. 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 26 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 42 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು ಪಾಲಕರ ಮತ್ತು ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿದ್ದು ಸುತ್ತಮುತ್ತಲಿನ ಪರಿಸರದಲ್ಲಿ ದಾಖಲೆಯ ಫಲಿತಾಂಶವಾಗಿರುತ್ತದೆ. ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಒಡಹುಟ್ಟಿದ ಅಣ್ಣನನ್ನೆ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಗೈದು ಪೈಶಾಚಿಕ ಕೃತ್ಯ ನಡೆಸಿದ್ದ ಘಟನೆ ಹಸಿಯಾಗಿರುವಾಗಲೇ ಅಣ್ಣ ತಮ್ಮಂದಿರ ಜಗಳ ತಪ್ಪಿಸುವ ಸಚಿದರ್ಭ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆದಿದ್ದ ಅವರ ಭಾವ ಭಾನುವಾರ ರಾತ್ರಿ ತಮ್ಮ ಮನೆಯ ಬಳಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ವಂಡ್ಸೆ ಮೂಲದ ಬಾಬು (47) ಮೃತಪಟ್ಟ ದುರ್ದೈವಿ ಬಿಜೂರು ಗ್ರಾಮದ ಬವಳಾಡಿ ಮೇಲ್ಮಕಿ ಚೌಕಿ ಕುಪ್ಪು ಕೊರಗ ಪುತ್ರನಾದ ಸಂತೋಷ (೨೦) ಮೇ. ೨ರ ತಡರಾತ್ರಿ ಕುಡಿದ ಮತ್ತಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ತನ್ನ ಒಡಹುಟ್ಟಿದ ಅಣ್ಣನಾದ ನಾಗರಾಜ ಎಂಬುವವನನ್ನು ತನ್ನ ತಂದೆಯ ಊರುಗೋಲಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸುತ್ತಿದ್ದಾಗ, ಅದನ್ನು ತಪ್ಪಿಸಲು ಹೋದ ಅವನ ಬಾವ (ನಾಗರಾಜನ ತಂಗಿಯ ಗಂಡ) ಬಾಬುವಿನ ಮೇಲೂ ಹಲ್ಲೆ ಮಾಡಿದ್ದನು, ತೀವ್ರ ಹಲ್ಲೆಗೊಳಗಾದ ನಾಗರಾಜ ಅದೇ ದಿನ ತಡರಾತ್ರಿ ಮೃತಪಟ್ಟರೇ, ಆತನ ಬಾವನಾದ ಬಾಬು ಅವನನ್ನು ಚಿಕಿತ್ಸೆಗಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿತ್ತು. ಆತನನ್ನು ತಪಾಸಣೆ ಮಾಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಲಾಂತರದಲ್ಲಿ ನಮ್ಮ ಸಮಾಜದಲ್ಲಿ ಅಗಾಧವಾದ ಬದಲಾವಣೆಗಳು ಆಗಿವೆ. ಹೊಸ ವಿಚಾರಗಳು ಅದರಲ್ಲಿ ಪ್ರವೇಶ ಪಡೆದಿವೆ. ಇಂದು ರಚಿಸುವ ಸಾಹಿತ್ಯ ಅದನ್ನು ಪ್ರತಿಬಿಂಬಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಪರಿಷತ್ತಿನ ಆಶ್ರಯದಲ್ಲಿ ಖಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್ ಅವರು ರಚಿಸಿರುವ ’ಪ್ರಾಪ್ತಿ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಆಧುನಿಕ ಬದುಕಿನ ಶೈಲಿಯಿಂದ ಬಂಜೆತನ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಂಜೆತನ, ಪ್ರಣಾಳ ಸಂತಾನ ಮತ್ತು ಮಕ್ಕಳ ದತ್ತು ಸ್ವೀಕಾರದ ಸುತ್ತ ಹೆಣೆದಿರುವ ಪ್ರಕಾಶ್ ಅವರ ಕಾದಂಬರಿ ಹೊಸ ವಸ್ತುವನ್ನು ಓದುಗರ ಮುಂದಿರಿಸುತ್ತದೆ. ಅದರ ಕುರಿತಾದ ನೈತಿಕ, ಸಾಮಾಜಿಕ ಪ್ರಶ್ನೆಗಳ ಚರ್ಚೆಯನ್ನು ಹುಟ್ಟುಹಾಕುತ್ತದೆ. ಸರಳ ಭಾಷೆ, ಆಕರ್ಷಕ ಶೈಲಿ, ಕಣ್ಣಿಗೆ ಕಟ್ಟುವಂತಹ ಸನ್ನಿವೇಶಗಳ ಚಿತ್ರಣ ಓದುಗರನ್ನು…
