Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ರಾಜ್ಯ ಸರಕಾರ ವಿವಿಧ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗಳಿಸಿ ಸುತ್ತೋಲೆ ಹೊರಡಿಸಿದ್ದು ಉಡುಪಿ ಜಿಲ್ಲಾಧಿಕಾರಿ  ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ವರ್ಗಾವಣೆಗೊಂಡು ನೂತನ ಡಿಸಿಯಾಗಿ ಹೆಪ್ಸಿಭಾ ರಾಣಿ ನೇಮಕಗೊಂಡಿದ್ದಾರೆ. ಪ್ರಿಯಾಂಕಾ ಫ್ರಾನ್ಸಿಸ್ ಅವರು ಪ್ರವಾಸೋದ್ಯಮ ಇಲಾಖಾ ನಿರ್ದೇಶಕಿಯಾಗಿ ನೇಮಕಗೊಂಡಿದ್ದು, ಉಡುಪಿಗೆ ಹುಬ್ಬಳ್ಳಿ ಧಾರವಾಡದಲ್ಲಿ ಸ್ಪೆಷಲ್ ಪರ್ಪಸ್ ವೆಹಿಕಲ್ ನಿರ್ದೇಶಕಿಯಾಗಿದ್ದ ಹೆಪ್ಸಿಕಾ ಅವರು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸುತ್ತೋಲೆ ಹೊರಡಿಸಿದ್ದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ವರ್ಗಾವಣೆಗೊಂಡು ನೂತನ ಡಿಸಿಯಾಗಿ ಹೆಪ್ಸಿಭಾ ರಾಣಿ ನೇಮಕಗೊಂಡಿದ್ದಾರೆ. ಪ್ರಿಯಾಂಕಾ ಫ್ರಾನ್ಸಿಸ್ ಅವರು ಪ್ರವಾಸೋದ್ಯಮ ಇಲಾಖಾ ನಿರ್ದೇಶಕಿಯಾಗಿ ನೇಮಕಗೊಂಡಿದ್ದು, ಉಡುಪಿಗೆ ಹುಬ್ಬಳ್ಳಿ ಧಾರವಾಡದಲ್ಲಿ ಸ್ಪೆಷಲ್ ಪರ್ಪಸ್ ವೆಹಿಕಲ್ ನಿರ್ದೇಶಕಿಯಾಗಿದ್ದ ಹೆಪ್ಸಿಕಾ ಅವರು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಹಿರಿಯ ಪತ್ರಕರ್ತ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಅವರಿಗೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ನೀಡುವ ಪ್ರತಿಷ್ಠಿತ ತುಳುನಾಡ ಮಾಧ್ಯಮ ಸಿರಿ ಪ್ರಶಸ್ತಿಯನ್ನು ಫೆ.೯. ರಂದು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಪ್ರದಾನಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ, ಮಾಧ್ಯಮ ವಿಷಯದ ತರಬೇತಿದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಪತ್ರಕರ್ತರ ಸಂಘಟನೆಯ ನೇತಾರರಾಗಿ, ಮಾಧ್ಯಮದ ಬಂಧುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಅವರ ಮಾಧ್ಯಮ ರಂಗದ ಅನನ್ಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಚಿವ ಯು.ಟಿ ಖಾದರ್, ಶಾಸಕ ವೇದವ್ಯಾಸ ಕಾಮತ್, ಎ.ಸಿ. ಭಂಡಾರಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳ ೨೪ ಮಂದಿ ಸಾಧಕರಿಗೆ ಪತ್ರಿಕೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ನೀಡಳಾಗುತ್ತಿದೆ ಎಂದು ಪತ್ರಿಕೆಯ ಸಂಪಾದಕ ಎಸ್. ಆರ್. ಬಂಡಿಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಂತ್ರ, ಸ್ತೋತ್ರ ಪಠಣಕ್ಕೆ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಇರುವುದರ ಜತೆಗೆ ಅವುಗಳಿಂದ ಹೊಮ್ಮುವ ಶಕ್ತಿಯುತವಾದ ತರಂಗಗಳಿಗೆ ಪ್ರಕೃತಿ ವಿಕೋಪಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಇದೆ. ಸನಾತನವಾದ ಮಂತ್ರಗಳು ಸಂಖ್ಯಾ ಶಾಸ್ತ್ರವನ್ನು ಅವಲಂಬಿಸಿವೆ. ಹಾಗಾಗಿ ಅವು ನಿರ್ದಿಷ್ಟ ಸಖ್ಯಾಗುಣಕಗಳಲ್ಲಿ ರಚನೆಯಾಗಿವೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಪಡುವರಿಯ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಭಜನಾ ಮಂಡಳಿ, ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಆಂದೋಲನ ಇವರ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಮುದ್ರದ ಅಧಿದೇವತೆ ನಾರಾಯಣ. ನಾರ ಎಂದರೆ ನೀರು, ಅಯನ ಎಂದರೆ ಚಲನೆ. ನೀರಿನ ಚಲನೆ ಇತಿಮಿತಿಯಲ್ಲಿದ್ದರೆ ಜಗತ್ತಿಗೆ ಕ್ಷೇಮ. ಅದನ್ನು ನಿಯಂತ್ರಿಸುವವನು ಶ್ರೀಮನ್ನಾರಾಯಣ. ಅವನಿಗೆ ಪ್ರಕೃತಿ ನಿಯಮವನ್ನು ಮೀರಿ ಅದನ್ನು ನಿಯಂತ್ರಿಸುವ ಶಕ್ತಿ ಇದೆ. ವಿಷ್ಣು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಶಾಲೆಗಳು ಸಮರ್ಪಕವಾಗಿ ಮುನ್ನಡೆಯಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಆರ್ಥಿಕವಾಗಿ ಪ್ರಬಲರಾದವರು ಗಳಿಸಿದ ಒಂದಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವುರಿಂದ ಶಾಲೆ ಹಾಗೂ ಊರು ಅಭಿವೃದ್ಧಿ ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಪೂರಕ ವಾತಾವರಣ ಕಲ್ಪಿಸಿಕೊಟ್ಟಿದೆ ಎಂದು ಉಪ್ಪುಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಗೋವಿಂದ ಬಾಬು ಪೂಜಾರಿ ಅಭಿಪ್ರಾಯಪಟ್ಟರು. ಬಿಜೂರು ಗ್ರಾಮದ ಸಾಲಿಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಸ್ಕೂಲ್‌ಬ್ಯಾಗ್ ಹಾಗೂ ನೋಟ್‌ಬುಕ್ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನದ ಅಗತ್ಯತೆ ಇದೆ. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ನಮ್ಮ ಜೀವನ ಉತ್ತಮವಾಗಲು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಿಸಲಾಯಿತು. ಸಿಆರ್‌ಪಿ ಸುಬ್ರಹ್ಮಣ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೀಜಾಡಿ ಸರ್ವೀಸ್ ರೋಡ್ ಕಾಮಗಾರಿ ವಿಳಂಬ ಧೋರಣೆ ಕುರಿತು ಹಲವು ದಿನಗಳಿಂದ ಹೋರಾಟ ಸಮಿತಿ ನೇತೃತ್ವದಲ್ಲಿ ಅನೇಕ ಸಭೆಗಳಾಗಿದ್ದವು. ಇದರ ದೂರಿನಂತೆ ಫೆ.2 ರಂದು ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನಿಸ್ಸ್ ನೇತೃತ್ವದ ನವಯುಗ ತಂಡ ಸ್ಥಳ ಪರಿಶೀಲನೆ ನಡೆಸಿ ಫೆ,೪ ರಂದು ಕಾಮಗಾರಿ ಕೃಗೊತ್ತಿಕೊಳ್ಳುವಂತೆ ಡಿಸಿಯವರು ಅದೇಶಿಸಿದ್ದರು. ಸೋಮವಾರ ಸಂಜೆ ಕುಂದಾಪುರ ಪ್ರಭಾರ ಎಸಿ ಅರುಣಾಪ್ರಭಾ ನೇತೃತ್ವದಲ್ಲಿ ಎನ್‌ಎಚ್‌ಐನ ಯೋಜನಾ ನೀರ್ದೇಶಕ ಸ್ಯಾಮ್ ಸಂಗ್ ವಿಜಯಕುಮಾರ್ ಮತ್ತು ನವಯುಗ ಚೀಪ್ ಪ್ರೋಜೆಕ್ಟ್ ಮೇನೆಜರ್ ಶಂಕರರಾವ್, ಎಂಜಿನಿಯರ್ ರಾಘವೇಂದ್ರ ಇವರನ್ನೋಳಗೊಂಡ ತಂಡ ಬೇಟಿ ನೀಡಿ ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಸರ್ವೆ ಕಾರ್ಯ ನಡೆಸಿ ಫೆ.೧೦ರಿಂದ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತದೆ ಎಂದು ತಿಳಿಸಿದರು. ಎನ್‌ಎಚ್‌ಐನ ಯೋಜನಾ ನೀರ್ದೇಶಕರ ಮೇಲೆ ಸ್ಥಳೀಯರ ಅಕ್ರೋಶ: ರಾಷ್ಟ್ರೀಯ ಹೆದ್ದಾರಿ ಅರೆಬರೆ ಕಾಮಗಾರಿಯಿಂದ ಅಕ್ರೋಶಗೊಂಡ ಬೀಜಾಡಿ ಸರ್ವೀಸ್ ರೋಡ್ ಹೋರಾಟ ಸಮಿತಿ ಮುಖಂಡ ನಾರಾಯಣ ಬಂಗೇರ ಬೀಜಾಡಿ ಇವರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ,ಫೆ.3: ಮಣೂರಿನ ಚಿಕ್ಕನಕೆರೆಯಲ್ಲಿ ಜ. 26ರ ರಾತ್ರಿ ನಡೆದ ಅಮಾಯಕ ಯುವಕರಿಬ್ಬರ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕೋಟ ಬಸ್ ನಿಲ್ದಾಣ ಸಮೀಪದ ಸಂತೆ ಮಾರ್ಕೆಟ್ ಹತ್ತಿರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ವಿಧಾನ ಪರಿಷತ್ ವಿಪಕ್ಷ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಇದುವರೆಗೂ ನಾನು ಏನು ಮಾತನಾಡಿಲ್ಲ. ನನ್ನೂರ ಇಬ್ಬರು ಹುಡುಗರ ಕೊಲೆ ನಡೆದಿದ್ದು ಬಹಳಷ್ಟು ನೋವು ನೀಡಿದೆ. ಪೊಲೀಸ್ ತನಿಖೆಗೆ ತೊಂದರೆಯಾಗಬಾರದೆಂದು ಯಾವುದೇ ಹೇಳಿಕೆ ನೀಡದೆ ಸುಮ್ಮನಿದ್ದೇನೆ. ಹೀಗಿದ್ದರೂ ಪೊಲೀಸರು ಇದುವರೆಗೂ ಆರೋಪಿಗಳನ್ನು ಹಿಡಿದಿಲ್ಲ. ಫೆ.೬ರವರೆಗೆ ನಾನು ಮಾತನಾಡಲ್ಲ. ಅಷ್ಟರವರೆಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ನಾನು ಮುಖಮಂತ್ರಿಗಳಲ್ಲಿ ಈ ಬಗ್ಗೆ ಚರ್ಚಿಸಲಿದ್ದೇನೆ ಎಂದರು. ರಾಕೇಶ್ ಮಲ್ಲಿ ಮಾತನಾಡಿ ಯತೀಶ್ ನನ್ನೊಂದಿಗಿದ್ದ ಒಳ್ಳೆಯ ಹುಡುಗ. ಇಬ್ಬರು ಹುಡುಗರ ಕೊಲೆ ಖಂಡನೀಯವಾದುದು. ಪೊಲೀಸರು ಆರೋಪಿಗಳನ್ನು ತಕ್ಷಣ ಹಿಡಿಯಬೇಕು. ನಾನು ಸರಕಾರದ ಮಟ್ಟದಲ್ಲಿ ಮಾತನಾಡಲಿದ್ದೇನೆ ಎಂದರು. ನ್ಯಾಯವಾದಿ ಶ್ಯಾಮ ಸುಂದರ ನಾರಿ, ಸಾಸ್ತಾನ ಸಿ.ಎ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಶಿರೂರು ಘಟಕದಿಂದ ಫೆ. 2 ರ ರಾಷ್ಟ್ರೀಯ ಭಾವೈಕ್ಯತಾ ದಿನದ ಅಂಗವಾಗಿ ಶಿರೂರು ಪರಿಸರದ ವಿವಿಧ ಶಾಲೆಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಭಾವೈಕ್ಯತೆಯ ಪ್ರಮಾಣ ವಚನ ಬೋಧಿಸಲಾಯಿತು. ಸುಮಾರು ೫೪ ಶಾಲೆಗಳು ಹಾಗು ೧೬ ಸಂಘಸಂಸ್ಥೆಗಳಲ್ಲಿ ಸುಮಾರು ೩೫೦೦೦ ಜನರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಈ ಸಂದರ್ಭ ಶಿರೂರು ಜೆಸಿಐ ಪದಾಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಬಿಜೂರು ಸಾಲಿಮಕ್ಕಿಯ ಚಂದ್ರ ದೇವಾಡಿಗ ತೇರ್ಗಡೆಯಾಗಿದ್ದಾರೆ. ಬಿಜೂರು ಸಾಲಿಮಕ್ಕಿಯವರಾದ ಚಂದ್ರ ದೇವಾಡಿಗ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿಮಕ್ಕಿ ಬಿಜೂರು, ಪ್ರೌಢ ಶಿಕ್ಷಣವನ್ನು ಸರಕಾರಿ ಜ್ಯೂನಿಯರ್ ಕಾಲೇಜು ಉಪ್ಪುಂದ ಹಾಗೂ ಪದವಿ ಶಿಕ್ಷಣವನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮುಗಿಸಿದ್ದು, ಇದೀಗ ಯಾವುದೇ ಕೋಚಿಂಗ್ ಇಲ್ಲದೇ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚಂದ್ರ ದೇವಾಡಿಗ ಅವರು ಸಾಲಿಮಕ್ಕಿ ಓಣಿಮನೆ ನಾರಾಯಣ ದೇವಾಡಿಗ ಹಾಗೂ ನಾಗಮ್ಮ ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಅರೆಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ನಾವುಂದ ನಾಲ್ಕನೆ ಅವಧಿಗೆ ಅವಿರೋಧವಾಗಿ ಪನರಾಯ್ಕೆಗೊಂಡಿರುತ್ತಾರೆ. ಸಂಘದ ಉಪಾಧ್ಯಕ್ಷರಾಗಿ ದೇವಕಿ ಕೆ. ಚಂದನ್ ಹಾಗೂ ನಿರ್ದೇಶಕರುಗಳಾಗಿ ವಿವೇಕಾನಂದ ಆಚಾರ್, ಸುರೇಶ್ ಪೂಜಾರಿ, ರಾಜು ಎನ್. ದೇವಾಡಿಗ, ಕಮಲಾ ದೇವಾಡಿಗ, ಬೇಬಿ ಪೂಜಾರಿ ಬೇಡಿತ್ಲು, ಶಾರದಾ ಪೂಜಾರಿ, ಬೇಬಿ ಪೂಜಾರಿ ಚೋದ್ರಿಯಂಗಡಿ, ಮುತ್ತು, ಇಂದಿರಾ ದೇವಾಡಿಗ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನಿಯುಕ್ತರಾಗಿರುವ ಕಾವ್ರಾಡಿ ಪ್ರದೀಪ್‌ಕುಮಾರ ಶೆಟ್ಟಿ ಅವರು ಬುಧವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ಧನ್ ತೋನ್ಸೆ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಅವರ ಶಿಫಾರಾಸಿನನ್ವಯ ಈ ನೇಮಕಾತಿ ನಡೆದಿದೆ. ಹಿಂದೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪ್ರದೀಪ್ ಶೆಟ್ಟಿ ರಾಜಕೀಯ ಕ್ಷೇತ್ರವಲ್ಲದೆ, ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರೀಯರಾಗಿದ್ದಾರೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ನರಸಿಂಹಮೂರ್ತಿ, ದೇವಾನಂದ ಶೆಟ್ಟಿ ಹಳ್ನಾಡು, ಸಂತೋಷ್ ಶೆಟ್ಟಿ ಹಕ್ಲಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್‌ಕುಮಾರ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಸದಸ್ಯ ವಾಸುದೇವ ಪೈ ಸಿದ್ದಾಪುರ, ವಾಸುದೇವ ಯಡಿಯಾಳ, ಚಂದ್ರಶೇಖರ ಪೂಜಾರಿ…

Read More