ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಂಧಿ ಜಯಂತಿ ಪ್ರಯುಕ್ತ ಮಾದಕ ವಸ್ತುಗಳ ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಅವುಗಳನ್ನು ನಿಯಂತ್ರಿಸುವ ಕುರಿತಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರಶಸ್ತಿ ಪುರಸ್ಕೃತ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಧೂಮಪಾನ, ಮಧ್ಯಪಾನ ಮತ್ತು ಡ್ರಗ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳು ಕಿರುನಾಟಕವನ್ನು ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಮತ್ತು ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕರಾದ ಜಯಶೀಲ್ ಕುಮಾರ್, ರಕ್ಷಿತ್ ರಾವ್ ಗುಜ್ಜಾಡಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಹೇಶ್ ಬಾಬು ಕಾರ್ಯಕ್ರಮವನ್ನು ಸಂಯೋಜಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ, ಹಿರಿಯ ನಾಗರಿಕರ ವೇದಿಕೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಕುಂದಾಪುರದ ಹೊಟೇಲ್ ಪಾರಿಜಾತ ಸ್ನೇಹ ಸಭಾಂಗಣದಲ್ಲಿ ಜರುಗಿತು. ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕರ ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಹಿರಿಯರ ದಿನವನ್ನು ಆಚರಿಸುವ ಅಗತ್ಯ ಇತ್ತೇ ಇನ್ನುವ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜ. ಆದರೆ ಇಂದು ಹಿರಿಯ ನಾಗರಿಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಹಾಗೂ ಅವರಿಗೆ ಸಾಮಾಜಿಕ ಬೆಂಬಲ ಸೂಚಿಸಲು ಸರಕಾರ ಈ ಕಾನೂನುನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಚಿಕ್ಕಿಂದಿನಲ್ಲೇ ಸಂಸ್ಕ್ರತಿಯ ಬಗ್ಗೆ ಅರಿವು ಉಂಟು ಮಾಡುವ ಬಗ್ಗೆ ಜಾಗೃತಿ ಮೂಡಿಸಿದರೆ ಇಂತಹ ಕಾನೂನುನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲವಾಗಿತ್ತು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಖರ ಸಂಚಿಕೆಯಲ್ಲಿ ಸಂಘಟಿತ ಪ್ರಯತ್ನವಿದೆ. ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಒಳನೋಟ ವ್ಯಕ್ತವಾಗಿದೆ. ಸಾಹಿತ್ಯದ ಕುರಿತು ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಪ್ರಜೆಯಾಗಿ ಗುರುತಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೊಸ ದಿಗಂತ ಕನ್ನಡ ದಿನಪತ್ರಿಕೆ ಮಂಗಳೂರು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಎಸ್. ಪ್ರಕಾಶ ಹೇಳಿದರು. ಅವರು ೨೦೧೬-೧೭ನೇ ಶೈಕ್ಷಣಿಕ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರವನ್ನು ಅನಾವರಣಗೊಳಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಭಾರತೀಯ ಮಹಿಳೆಯರಿಗೆ ವಿಶ್ವದಾದ್ಯಂತ ಗೌರವ ಸ್ಥಾನಮಾನವಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಯ ಪರಂಪರೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ ಎಂದು ಮುಖ್ಯ ಅತಿಥಿಗಳಾದ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಹೇಳಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಸೀತರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಚನಾತ್ಮಕ ಮತ್ತು ಸಕಾರಾತ್ಮಕತೆ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ, ನಿವೃತ್ತಿಯಾದರೂ ಖಾಲಿತನ ಕಾಡದು. ನಮ್ಮ ಜೀವನದ ಒಂದು ಭಾಗವಾಗಿ ನಾವು ಮಾಡುವ ವೃತ್ತಿ ಬದುಕಿಗೆ ಮಾತ್ರ ನಿವೃತ್ತಿ ಸೀಮಿತವಾಗಿರುತ್ತದೆಯೇ ಹೊರತು ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಜೀವನಕ್ಕಲ್ಲ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಬೈಂದೂರು ಅಂಚೆ ಕಛೇರಿಯಲ್ಲಿ ಸ್ವಯಂ ಸೇವಾ ನಿವೃತ್ತಿ (ವಿಆರ್‌ಎಸ್) ಪಡೆದ ಅಂಚೆಪೇದೆ (ಪೋಷ್ಟ್‌ಮ್ಯಾನ್) ಎಸ್. ಶಾಂತಾನಂದ ಪ್ರಭು ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಭು ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು. ಸಾಮಾನ್ಯರೊಂದಿಗೆ ಬೆರೆಯುವುದು, ಅವರ ನೋವು ನಲಿವುಗಳಲ್ಲಿ ಭಾಗಿಯಾಗುವುದರಿಂದ ಜನರ ಹೃದಯಕ್ಕೆ ಹತ್ತಿರವಾಗಬಲ್ಲರು ಮತ್ತು ಸರಳವಾಗಿ ಜನರ ಮಧ್ಯೆ ಹೋಗುವುದರಿಂದಲೇ ಜನಮನ್ನಣೆ ಗಳಿಸಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಶಾಂತಾನಂದ ಪ್ರಭು ಇವರು ಕ್ರೀಯಾಶೀಲ ವ್ಯಕ್ತಿತ್ವ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಜನಪರ ನಿಲುವನ್ನು ಹೊಂದಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಅಂಚೆ ಅಧೀಕ್ಷಕ ರಾಜಶೇಖರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸತ್ಯನಾರಾಯಣ ಹೊಳೆಬಾಗ್ಲು ಕೊಡುಗೆಯಾಗಿತ್ತ ಸುಮಾರು ರೂ. ೧ ಲಕ್ಷ ಮೌಲ್ಯದ ಸ್ಮಾರ್ಟ್‌ಕ್ಲಾಸ್ ತಂತ್ರಜ್ಞಾನ ವ್ಯವಸ್ಥೆಯನ್ನು ಅವರು ಮಂಗಳವಾರ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು ಶಾಲೆಯ ಹಳೆ ವಿದ್ಯಾರ್ಥಿಗಳು ಕಲಿತ ಶಾಲೆಯ ಋಣ ತೀರಿಸಬೇಕಾದರೆ ಅಲ್ಲಿನ ಅಗತ್ಯಗಳನ್ನು ಈಡೇರಿಸುವ ಮೂಲಕ ಶಾಲೆ ಗುಣಮಟ್ಟದ ಶಿಕ್ಷಣ ನೀಡಲು ಕಾರಣರಾಗಬೇಕು ಎಂದರು. ಶಿಕ್ಷಣ ಇಲಾಖೆಯ ಪರವಾಗಿ ಕೊಡುಗೆಯನ್ನು ಸ್ವೀಕರಿಸಿದ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಮಾತನಾಡಿ ಮರವಂತೆ ಶಾಲೆಯ ಹಳೆವಿದ್ಯಾರ್ಥಿ ಸಂಘ ಸಕ್ರಿಯವಾಗಿದ್ದು ಕಳೆದ ವರ್ಷದಿಂದ ಬಸ್ ವ್ಯವಸ್ಥೆ ಕಲ್ಪಿಸಿದೆ. ಹಳೆ ವಿದ್ಯಾರ್ಥಿಯಾಗಿರುವ ಸತ್ಯನಾರಾಯಣ ಈಗ ನೀಡಿರುವ ಸ್ಮಾರ್ಟ್‌ಕ್ಲಾಸ್ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಬಹುದಾಗಿದೆ. ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಕೆಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನುನೆರ ಕಾರ್ಯಗತಗೊಳಿಸಲು ಹಿಂದೆ ಇಲ್ಲಿ ಕಲಿತು ಉತ್ತಮ ಸ್ಥಿತಿಯಲ್ಲಿರುವ ಹಳೆ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದು ಹೇಳಿ ದಾನಿಗೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಅ.4: ಬಡಗುತಿಟ್ಟಿನ ಯಕ್ಷಗಾನದ ಧ್ರುವತಾರೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ನಿನ್ನೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇಂದು ಮೃತದೇಹವನ್ನು ಚಿಟ್ಟಾಣಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಉಡುಪಿಂದ ಆರಂಭಿಸಿ ಸಾಲಿಗ್ರಾಮ, ಕೋಟ, ಕುಂದಾಪುರ, ಬೈಂದೂರು ಸೇರಿದಂತೆ ವಿವಿಧೆಡೆ ಅವರ ಅಪಾರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಯಕ್ಷಗಾನದ ಬಡಗುತಿಟ್ಟು ಶೈಲಿಯ ಮೇರು ಕಲಾವಿದರು ಚಿಟ್ಟಾಣಿಯವರು ಕೌರವ, ದುಷ್ಟಬುದ್ದಿ, ಭಸ್ಮಾಸುರ, ಕೀಚಕ, ಮಾಗದ, ಕರ್ಣ, ರುದ್ರಕೋಪ, ಕಂಸನ ಪಾತ್ರಗಳಲ್ಲಿ ವಿಂಚಿದ್ದರು. ‘ಚಿಟ್ಟಾಣಿ ಘರಾಣಾ’ ಎಂದೇ ರಾಮಚಂದ್ರ ಹೆಗಡೆ ಶೈಲಿ ಹೆಸರುವಾಸಿಯಾಗಿತ್ತು. ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಯಕ್ಷಗಾನ ಕಲಾವಿದ ಇವರು. ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಬಡಗುತಿಟ್ಟು ಶೈಲಿಯಲ್ಲಿ ನವರಸಗಳನ್ನೂ ಹೊರಹೊಮ್ಮಿಸುತ್ತಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ಹುಟ್ಟೂರಿನಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಡಗುತಿಟ್ಟಿನ ಯಕ್ಷಗಾನದ ಧ್ರುವತಾರೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅನಾರೋಗ್ಯದಿಂದ ದೈವಾಧಿನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಹ ತ್ಯಜಿದ್ದಾರೆ. ಯಕ್ಷಗಾನದ ಬಡಗುತಿಟ್ಟು ಶೈಲಿಯ ಮೇರು ಕಲಾವಿದರು ಚಿಟ್ಟಾಣಿಯವರು ಕೌರವ, ದುಷ್ಟಬುದ್ದಿ, ಭಸ್ಮಾಸುರ, ಕೀಚಕ, ಮಾಗದ, ಕರ್ಣ, ರುದ್ರಕೋಪ, ಕಂಸನ ಪಾತ್ರಗಳಲ್ಲಿ ವಿಂಚಿದ್ದರು. ‘ಚಿಟ್ಟಾಣಿ ಘರಾಣಾ’ ಎಂದೇ ರಾಮಚಂದ್ರ ಹೆಗಡೆ ಶೈಲಿ ಹೆಸರುವಾಸಿಯಾಗಿತ್ತು. ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಯಕ್ಷಗಾನ ಕಲಾವಿದ ಇವರು. ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಬಡಗುತಿಟ್ಟು ಶೈಲಿಯಲ್ಲಿ ನವರಸಗಳನ್ನೂ ಹೊರಹೊಮ್ಮಿಸುತ್ತಿದ್ದರು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಚಿಟ್ಟಾಣಿ ರಾಮಚಂದ್ರ ಹೆಗಡೆ ಜನವರಿ 1, 1933ರಲ್ಲಿ ಜನಿಸಿದರು. ತಮ್ಮ 7ನೇ ವರ್ಷದಲ್ಲಿಯೇ ಯಕ್ಷಗಾನದಲ್ಲಿ ನಟಿಸಲು ಆರಂಭ ಮಾಡಿದರು. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆಬಿಟ್ಟ ರಾಮಚಂದ್ರ ಹೆಗಡೆ ಕೇವಲ 14ನೇ ವರ್ಷಕ್ಕೇ ಪ್ರಮುಖ ಪಾತ್ರಗಳನ್ನ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಮೂವರು…
ಕುಂದಾಪ್ರ ಡಾಟ್ ಕಾಂ ವರದಿ. ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುವ ತಿಂಗಳ ಕಥಾ ಓದು ಕಾರ‍್ಯಕ್ರಮ ಮತ್ತು ಸಂವಾದದ ಹಿರಿಮೆಯನ್ನು ಎತ್ತಿ ಹಿಡಿಯುವ ಸೂರ್ಯನ ನೆರಳು ನಾಟಕಗಳನ್ನು ಒಟ್ಟಿಗೆ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಮೂಲಕ ಕುಂದಾಪುರ ಸಮುದಾಯವು ಗಾಂಧಿಯನ್ನು ಮತ್ತೊಮ್ಮೆ ಚರ್ಚೆಯ ತೆಕ್ಕೆಗೆ ತೆಗೆದುಕೊಂಡಿತು. ಬೋಳುವಾರರ ಪಾಪು ಗಾಂಧಿ ಬಾಪೂ ಗಾಂಧಿ ಆದ ಕತೆಯಲ್ಲಿನ ಗಾಂಧಿಯ ಬದುಕಿನ ಮೂರು ಮುಖ್ಯ ಕಾಲಘಟ್ಟವನ್ನು ಪ್ರತಿನಿಧಿಸುವ ಕತೆಗಳನ್ನು ಡಾ. ರಶ್ಮಿ ಕುಂದಾಪುರ ರವರು ಫ್ಲಿಫ್ ಚಾರ್ಟಗಳ ನೆರವಿನಿಂದ ಸೊಗಸಾಗಿ ವಾಚಿಸಿದರು. ವೈದ್ಯ ವೃತ್ತಿಯಲ್ಲಿರುವವರು ಕೆಲವು ಸೂಕ್ಷ್ಮ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಾಗ ಫ್ಲಿಫ್ ಚಾರ್ಟುಗಳನ್ನು ಬಳಸುತ್ತೇವೆ. ಸದ್ಯಕ್ಕೆ, ಗಾಂಧಿಯೂ ಸೂಕ್ಷ್ಮ ಸಂಗತಿಯೇ ಎನ್ನುತ್ತಾ ಆರಂಭಿಸಿದ ಡಾ. ರಶ್ಮಿಯವರು ಕತೆಯ ನಂತರವೂ ಗಾಂಧಿಯ ಈ ಕತೆಯನ್ನು ಓದಲು ಆರಂಭಿಸಿದ ಮೇಲೆ ತನ್ನ ಬದುಕು ಭಾವಗಳ ಮರುಸಂಘಟನೆಗೆ ಹೇಗೆ ಕಾರಣವಾಯಿತು ಎಂಬುದನ್ನೂ ಹಂಚಿಕೊಂಡರು. ಕಥಾ ಓದಿಗೆ ಡಾ. ಹಯವದನ ಮೂಡುಸಗ್ರಿ, ರಾಘವೇಂದ್ರ ಬೈಂದೂರು ಇನ್ನಿತರರು ಪ್ರತಿಕ್ರಿಯಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕಾರಂತ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ ಆದರೆ ಕಾರಂತ ಥೀಂ ಪಾರ್ಕ್‌ನಲ್ಲಿ ನಿರಂತರವಾಗಿ ನಡೆಯುವ ಕಾರ್ಯಕ್ರಮಗಳ ಮೂಲಕ ಜೀವಂತವಾಗಿರುವಂತೆ ಭಾಸವಾಗುತ್ತದೆ. ಅದರಲ್ಲೂ ಅಕ್ಟೋಬರ್ ೧ರಿಂದ ೧೦ರ ವರೆಗೆ ನಡೆಯುವ ಕಾರತೋತ್ಸವ ಕಾರ್ಯಕ್ರಮಗಳು ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿಚಾರಗಳಿಂದ ಕೂಡಿದ್ದು ಕಾರಂತರ ವಿಚಾರಗಳನ್ನು ಅರಿಯಲು ಮತ್ತಷ್ಟು ನೆರವಾಗುತ್ತದೆ ಎಂದು ಕೋಟ ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಗಣೇಶ್ ಹೊಳ್ಳ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಅಕ್ಟೋಬರ್ ೧ರಿಂದ ೧೦ರವರೆಗೆ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ ೧೩ನೇ ವರುಷದ ಸಂಭ್ರಮ ತಂಬೆಲರು ೨೦೧೭ ಕಾರ್ಯಕ್ರಮದ ಪ್ರಥಮ ದಿನದ ಕಾರ್ಯಕ್ರಮವಾಗಿ ಕಾರಂತರಿಗೆ ಪಂಚನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಲೋಕೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶುಭ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕೋಟೇಶ್ವರ ಧ್ವಜಪುರದ ಸ್ಥಾಪಕ ಅಧ್ಯಕ್ಷರಾಗಿ ವಕ್ವಾಡಿ ರಾಕೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ವಕ್ವಾಡಿ ಯುವಶಕ್ತಿ ಮಿತ್ರ ಮಂಡಳಿಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಮಂಗಳೂರಿನ ಪ್ರತಿಷ್ಠಿತ ಯೋಗ ಸತ್ಸಂಗದ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ, ನಮ್ಮ ಕಲಾಕೇಂದ್ರ ಕೋಟೇಶ್ವರ, ಹಟ್ಟಿಯಂಗಡಿ ಸಿದ್ಧಿವಿನಾಯಕ ಯಕ್ಷಗಾನ ಮೇಳ ಮೊದಲಾದ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿ ಕೊಂಡಿರುವ ಇವರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
