ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನರ್ಸರಿ, ಪೂರ್ವ ಪ್ರಾಥಮಿಕ ಶಾಲೆಗಳು ಮಕ್ಕಳ ಮನಸ್ಸನ್ನು ಅರಳಿಸುವ ತಾಣವಾಗಬೇಕು. ಶಿಕ್ಷಣದ ಜಗತ್ತು ತೆರೆದುಕೊಳ್ಳುವ ಮೊದಲು ಮಗುವಿನ ಮನಸ್ಸು ತೆರೆದುಕೊಳ್ಳಬೇಕು. ಅಂತಹ ಪರಿಸರವನ್ನು ಸೃಷ್ಟಿಸಿರುವ ಇಂತಹ ಶಾಲೆಗಳು ಅಭಿನಂದನೆಗೆ ಅರ್ಹ ಎಂದು ಶಿಕ್ಷಣ ತಜ್ಞ ಶ್ರೀಪತಿ ಹೇರ್ಳೆ ಹೇಳಿದರು. ಅವರು ಕೋಟೇಶ್ವರದ ಕೆನರಾ ಕಿಡ್ಸ್ ಶಾಲೆಯ ವಠಾರದಲ್ಲಿ ನಡೆದ ಕ್ಯಾನ್ ಕಿಡ್ಸ್ ಡೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಣ ಸಂಸ್ಥೆಯ ಸಂಚಾಲಕಿ ವಿನಂತಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಶಾಲಾ ಶಿಕ್ಷಣ ನಿರ್ದೇಶಕಿ ರಜನಿ ಉಪಾಧ್ಯ ವರದಿ ವಾಚಿಸಿದರು. ಸವಿತಾ ಆರ್ ಐತಾಳ್ ಉಪಸ್ಥಿತರಿದ್ದರು. ಶಿಕ್ಷಕಿ ಸುಜಾತಾ ಶೆಟ್ಟಿ ವಂದಿಸಿದರು.ಕಾರ್ಯಕ್ರಮದ ಅನಂತರ ಮುದ್ದು ಮಕ್ಕಳ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ.ಎಸ್.ಬಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಗುರುಗಳ ಅನುಗ್ರಹ, ಹಿರಿಯರ ಅವಿರತ ಶ್ರಮ ನಮಗೆ ಬೆನ್ನೆಲುಬಾಗಿದೆ. ಕ್ರಿಕೆಟ್ ಪಂದ್ಯಾಟದ ಆಯೋಜನೆಯಿಂದ ಇತರ ಊರುಗಳ ಸಮಾಜ ಬಾಂಧವರ ಪರಿಚಯದಿಂದ ಯುವ ಸಮುದಾಯದ ತಂಡ ರೂಪುಗೊಳ್ಳುತ್ತದೆ. ಆ ಮೂಲಕ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ವಯಂ ಸೇವಕರನ್ನು ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಸಿದ್ದಾಪುರ ಸಂಯುಕ್ತ ಜಿ.ಎಸ್.ಬಿ ಸಮಾಜದ ಆಧ್ಯಕ್ಷ ಗೋಪಿನಾಥ ಕಾಮತ್ ಆಶಿಸಿದರು. ಅವರು ಬಸ್ರೂರಿನ ಸರಕಾರಿ ಪ್ರೌಡಶಾಲೆಯ ಮೈದಾನದಲ್ಲಿ ಬಸ್ರೂರು ಜಿ.ಎಸ್.ಬಿ ಸಭಾ ಆಶ್ರಯದಲ್ಲಿ ಹಾಗೂ ಚಿತ್ತಾರ ಕ್ಯಾಶ್ಯೂ ವಂಡಾರು ಇವರ ಪ್ರಾಯೋಜಕತ್ವದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರಿಗೆ ಸೀಮಿತ ಓವರುಗಳ 30 ಗಜಗಳ ಕ್ರಿಕೆಟ್ ಪಂದ್ಯಾಟ “ಆಮ್ಗೆಲೆ ಟ್ರೋಫಿ-2017″ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಹರಿಓಂ ಎಸ್‌ವಿಎಸ್ ಗಂಗೊಳ್ಳಿ ತಂಡ ವಿಜೇತ ತಂಡವಾಗಿ ಪ್ರಥಮ ಬಹುಮಾನವಾದ ರೂ 11,777 ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನವನ್ನು ಕೊಂಕಣ್ ಎಕ್ಸ್‌ಪ್ರೆಸ್ ಕೋಟೇಶ್ವರ ರೂ 7,777 ಹಾಗೂ ಶಾಶ್ವತ ಫಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರಬೇಕು. ಪರಿಸರದ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಜನರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಮಾಜದ ಕಟ್ಟಕಡೆಯ ಜನರನ್ನು ಗುರುತಿಸುವ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ಅಧಿಕಾರಿ ಕೆ.ರಾಮಚಂದ್ರ ಮಯ್ಯ ಹೇಳಿದರು. ಅವರು ಕೊಡಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಜರಗಿದ ಕೊಡಪಾಡಿಯ ಸವ್ಯಸಾಚಿ ಯುವಕ ಮಂಡಲದ ೧೬ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಪತ್ರಕರ್ತ ಬಿ.ರಾಘವೇಂದ್ರ ಪೈ, ಉಡುಪಿ ಸವಿತಾ ಸಮಾಜದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಸಾಲಿಯಾನ್, ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಶುಭಾಶಂಸನೆಗೈದರು. ಇದೇ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಬೈಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ವೀಣಾ, ತಾಯಿ ಮಾರಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಗಾಣಿಗ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಶಿಕ್ಷಕ-ರಕ್ಷಕ ಸಂಘದ ಉದ್ಘಾಟನೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ ಉದ್ಘಾಟಿಸಿ, ವ್ಯವಹಾರ ಮುಖಿಯಾದ ಜಗತ್ತಿನಲ್ಲಿ ಬದುಕುತ್ತಿರುವ ನಮ್ಮ ಮಕ್ಕಳು ಜ್ಞಾನಮುಖಿಯಾಗಬೇಕು, ಶೈಕ್ಷಣಿಕ ತ್ರಿಕೋಣದ ಮೂರು ಅಂಶಗಳು ವಿದ್ಯಾರ್ಥಿ, ರಕ್ಷಕ ಮತ್ತು ಶಿಕ್ಷಕ. ವಿದ್ಯಾಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ರಕ್ಷಕರೊಂದಿಗೆ ಕಳೆಯುತ್ತಿರುವ ಸ್ಥಿತಿಯಲ್ಲಿ ಅವರಲ್ಲಿ ಒಳ್ಳೆಯ ಬುದ್ಧಿ ಮತ್ತು ಸದಾಚಾರಗಳನ್ನು ಬೆಳೆಸಬೇಕು ಎಂದು ಹೇಳಿದರು. ಕಾಲೇಜಿನ ಸಂಚಾಲಕ ಬಿ. ಎಮ್. ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಪ್ರೊ. ದೋಮ ಚಂದ್ರಶೇಖರ್ ಪ್ರಸ್ತಾವಿಕ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿದರು. ಕಾಲೇಜ್ ಕನ್ನಡ ವಿಭಾಗ ಮುಖ್ಯಸ್ಥರಾದ ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕರಾದ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾವುಂದ ಗ್ರಾಮದ ಕಂತಿಹೊಂಡ ಎಂಬಲ್ಲಿನ 10 ಎಕ್ರೆ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ‍್ಸ್ ಸ್ಥಾಪಿಸಿರುವ ಮಿಕ್ಸಿಂಗ್ ಪ್ಲಾಂಟ್‌ನಿಂದ ಪರಿಸರದ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ವಿರುದ್ಧ ಬುಧವಾರ ಪ್ರತಿಭಟನೆ ನಡೆಯಿತು. ಸಂಸ್ಥೆ ಈ ನಿವೇಶನದಲ್ಲಿ ಸಾಮಗ್ರಿ ದಾಸ್ತಾನು ಮಾಡಲಾಗುವುದೆಂದು ತಿಳಿಸಿ, ಆ ಉದ್ದೇಶಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಪಡೆದಿತ್ತು. ಆದರೆ ಅಲ್ಲಿ ಬೃಹತ್ ಯಂತ್ರ್ರಗಳನ್ನು ಸ್ಥಾಪಿಸಿಕೊಂಡು ಜಲ್ಲಿ ಪುಡಿ ಮಾಡಲಾಗುತ್ತಿದೆ. ಜಲ್ಲಿ ಮತ್ತು ಟಾರು ಬೆರೆಸಲಾಗುತ್ತಿದೆ. ಜಲ್ಲಿಪುಡಿ ಮತ್ತು ಜಲ್ಲಿ ಬೆರೆಸಿ ವೆಟ್ ಮಿಕ್ಷ್ಚರ್ ತಯಾರಿಸಲಾಗುತ್ತಿದೆ. ಇಲ್ಲಿ ಸೃಷ್ಟಿಯಾಗುವ ಜಲ್ಲಿ, ಸಿಮೆಂಟಿನ ಧೂರು ಇಡೀ ಪರಿಸರವನ್ನು ವ್ಯಾಪಿಸಿ, ಮನೆಗಳಿಗೆ ಪ್ರವೇಶಿಸುತ್ತದೆ. ಉಸಿರಾಟದೊಂದಿಗೆ ಜನರ ದೇಹ ಪ್ರವೇಶಿಸುವ ಈ ಧೂಳಿನಿಂದ ಹಲವರಲ್ಲಿ ಕೆಮ್ಮು, ಉಬ್ಬಸ ಕಾಣಿಸಿಕೊಂಡಿದೆ. ಸಾಮಗ್ರಿಗಳ ಅವಿರತ ಸಾಗಾಟಕ್ಕಾಗಿ ಸಂಸ್ಥೆ ಬಳಸಿಕೊಳ್ಳುತ್ತಿರುವ ಅರೆಹೊಳೆ-ಉಳ್ಳೂರು ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು, ಸಣ್ಣ ವಾಹನ, ಜನ ಸಂಚಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವ್ಯವಹಾರ ಅಧ್ಯಯನ ಉತ್ಸವ ಸ್ಪರ್ಧಾ- 17 ಯಶಸ್ವಿಯಾಗಿ ಜರುಗಿತು. ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸಾಕಷ್ಟು ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ಸ್ಪರ್ಧೆಯನ್ನು ಎದುರಿಸುವ ನಿಟ್ಟಿನಲ್ಲಿ ಸಾಕಷ್ಟು ವಿದ್ಯಾರ್ಹತೆ, ಕೌಶಲದ ಜೊತೆಗೆ ಪ್ರಸ್ತುತ ಜಗತ್ತಿನ ಕುರಿತು ಜ್ನಾನ ಸಂಪಾದನೆಯು ಅತ್ಯಂತ ಅತ್ಯಗತ್ಯವಾಗಿರುತ್ತದೆ. ಈ ದಿಶೆಯಲ್ಲಿಕಠಿಣ ಪರಿಶ್ರಮ, ಚುರುಕುತನ, ಆಸಕ್ತಿ ಮತ್ತು ಆತ್ಮವಿಶ್ವಾಸಗಳನ್ನು ನಮ್ಮದಾಗಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಹೇಳಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿಕುಂದಾಪುರಕೆರಿಯರ್‌ಕೋಚಿಂಗ್‌ಕೇಂದ್ರದರಾಜೇಶ್ ಶೆಟ್ಟಿಅವರುಸಿಎ-ಸಿಪಿಟಿ ಮತ್ತು ಅಯ್‌ಪಿಸಿಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರಾಜ್ಯದಲ್ಲಿ 1 ಕೋಟಿಗೂ ಮಿಕ್ಕು ಕೃಷಿ ಕೂಲಿಕಾರರು ಇದ್ದಾರೆ. ಸ್ವಂತ ನಿವೇಶನ ಹೊಂದಿಲ್ಲದವರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಕ್ಕುಗಳ ಬಗ್ಗೆ ಜಾಗೃತಿ, ತಿಳಿವಳಿಕೆ ಮೂಡದ ಹೊರತು ಬೇಡಿಕೆ ಈಡೇರದು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ ಹೇಳಿದರು. ಅವರು ತೆಕ್ಕಟ್ಟೆ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಸಿಐಟಿಯು) ತಾಲೂಕು ಸಮಿತಿ ನೇತೃತ್ವದಲ್ಲಿ ಜರಗಿದ ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶದಲ್ಲಿ ಮಾತನಾಡಿದರು. ನಿವೇಶನಕ್ಕೆ ಆಗ್ರಹಿಸಿ ಸಂಘಟನೆಯ ನೇತೃತ್ವದಲ್ಲಿ ರಾಜಾದ್ಯಂತ ಹೋರಾಟ ನಡೆಯುತ್ತಿದೆ. ಬಡವರಿಗೆ ಭೂಮಿ ಹಕ್ಕು ನೀಡುವಲ್ಲಿ ಸರಕಾರದ ವಿಳಂಬ ಧೋರಣೆಯ ಬಗ್ಗೆ ಅರ್ಜಿದಾರರು ಯೋಚಿಸಬೇಕಾಗಿದೆ. ಉಳ್ಳವರಿಗೆ ಮತ್ತೂಂದಿಷ್ಟು ಲಭ್ಯತೆ ಆಗುತ್ತಿದೆ. ಇಲ್ಲದವನಿಗೆ ಏನು ಇಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತೆಕ್ಕಟ್ಟೆ ಗ್ರಾಮ ಸಮಿತಿ ಕಾರ್ಯದರ್ಶಿ ಕಾರ್ಮಿಕ ಮುಖಂಡ ಸತೀಶ ಕುಮಾರ ತೆಕ್ಕಟ್ಟೆ, ಕೃಷಿ ಕೂಲಿಕಾರರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೇರಿಕಾದಂತಹ ಶ್ರೀಮಂತ ದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿರುವ ಸಾಫ್ಟ್‌ಬಾಲ್‌ನಂತಹ ಕ್ರೀಡೆಯನ್ನು ಕುಂದಾಪುರ ಪರಿಸರಕ್ಕೆ ಪರಿಚಯಿಸಿ, ಸಾಫ್ಟ್‌ಬಾಲ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಕಾಲೇಜಿನ ಸಾಧನೆ ಸ್ತುತ್ಯಾರ್ಹ. ವಿದ್ಯಾರ್ಥಿಗಳು ಜೀವನಕ್ಕೆ ಎಲ್ಲಿ ಬೆಲೆ ಸಿಗುತ್ತದೆಯೋ ಅಲ್ಲೇ ತಮ್ಮ ಗುರಿಯ ಸಾಧನೆಗೆ ಅಂಕುರ ಸ್ಥಾಪಿಸಬೇಕು. ಸಧೃಡ ಯುವಜನತೆಯ ಸೃಷ್ಟಿಗೆ ಕ್ರೀಡೆ ಸಹಕಾರಿ ಎಂದು ಉಡುಪಿ ಪೂರ್ಣಪ್ರಜ್ಞಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಹೇಳಿದರು. ಅವರು ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ, ವೈದ್ಯಾಧಿಕಾರಿ ಡಾ. ಹೆಚ್. ಎಸ್. ಮಲ್ಲಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹತ್ತಾರು ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ನಡೆಯುತ್ತಿದೆ. ಸಹಸ್ರಾರು ಭಕ್ತರು ತಮ್ಮ ಸಮೀಪದ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರು. ಶಿವರಾತ್ರಿ ಉಪವಾಸವನ್ನು ಕೈಗೊಂಡು ಕೃತಾರ್ಥರಾದರು. ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶವಿದ್ದರೇ ಗುಜ್ಜಾಡಿಯ ಗುಹೇಶ್ವರ ದೇವಾಲಯದಲ್ಲಿ ಗುಹೆಯ ಒಳಗೆ ದೇವರ ದರ್ಶನ ಪಡೆಯವ ಅವಕಾಶ ಭಕ್ತರದ್ದಾಗಿತ್ತು. ಐತಿಹಾಸಿಕ ಹಾಗೂ ಐತಿಹ್ಯವಿರುವ ಶಿವಾಲಯಗಳಿಗೆ ಭಕ್ತ ದಂಡು ಹರಿದು ಬಂದಿತ್ತು. ವಣಕೊಡ್ಲುವಿನಲ್ಲಿ ಶಿವರಾತ್ರಿಯಂದು ಮಾತ್ರ ಸ್ವರ್ಶಪೂಜೆ ಮಾಡುವ ಅವಕಾಶವಿರುವುದರಿಂದ 2-3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತ ಬಳಿಕ ದರ್ಶನ ಪಡೆಯುವಂತಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಐತಿಹಾಸಿಕ ಶ್ರೀ ಸೇನೇಶ್ವರ ದೇವಾಲಯ, ಪಡುವರಿಯ ಶ್ರೀ ಸೋಮೇಶ್ವರ ದೇವಾಲಯ, ಕಿರಿಮಂಜೇಶ್ವರದ ಶ್ರೀ ಅಗಸ್ತೇಶ್ವರ ದೇವಾಲಯ, ಹೆರಂಜಾಲಿನ ಶ್ರೀ ಗುಡೆಮಹಾಲಿಂಗೇಶ್ವರ ದೇವಾಲಯ, ಮರವಂತೆ ಶ್ರೀ ಗಂಗಾಧರೇಶ್ವರ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧಿದೇವ ಶ್ರೀ ಮಹಾಲಿಂಗೇಶ್ವರ ನಿಷ್ಠೆಯಿಂದ ನಂಬಿದ ಭಕ್ತಾದಿಗಳ ಕನಸು ನನಸು ಮಾಡಿದ ಸಾಕಾರ ಮೂರ್ತಿ. ನಂಬಿದ ಭಕ್ತರ ಬಾಳಿನ ಬದುಕಿನಲ್ಲಿ ಸಂತೃಪ್ತಿಯ ನೆಲೆಯನ್ನು ನೀಡಿದ ಚೈತನ್ಯ ಸ್ವರೂಪಿ. ತೆಕ್ಕಟ್ಟೆಯಿಂದ 2.5ಕಿ.ಮೀ ದೂರದಲ್ಲಿರುವ ಪ್ರಾಚೀನ ಶಿವಾಲಯವು ಸುಮಾರು 11-12ನೇ ಶತಮಾನದ್ದು ಎಂದು ಅಂದಾಜಿಸಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ದೇವಾಲಯವು ಉಚ್ಛ್ರಾಯ ಸ್ಥಿತಿಯಲ್ಲಿದ್ದುದರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ೧೪೨೮ರಲ್ಲಿ ಬಾರಕೂರಿನ ರಾಜರುಗಳಿಂದ ದೇವಳಕ್ಕೆ ದಾನ, ಉಂಬಳಿ ನೀಡಿರುವ ಬಗ್ಗೆ ಶಾಸನಗಳಿವೆ. ಪುರಣ ಪುರಷರಾದ ಶ್ರೀ ಶೃಂಗೇರಿ ಜಗದ್ಗುರು ಪರಮಪೂಜ್ಯ ಸ್ವಾಮೀಜಿಯವರಿಂದ ಪುನಃ ಪ್ರತಿಷ್ಠೆಗೊಂಡಿರುವ ಐತಿಹ್ಯವಿದೆ ಈ ದೇವಾಲಯಕ್ಕಿದೆ. ದೇವಸ್ಥಾನದಲ್ಲಿ ಆಗಮೋಕ್ತ ವಿಧಿವಿಧಾನಗಳಿಂದ ನಿತ್ಯಪೂಜೆ ಜರುಗುತ್ತಿದೆ. ಉಳ್ತೂರು ಸೀಮೆಯ ಆರಾಧ್ಯ ದೇವರಾಗಿರುವ ಶ್ರೀ ಮಹಾಲಿಂಗೇಶ್ವರನನ್ನು ವೋಳತ್ತೂರು ಕೇರಿಯ ಮಹಾದೇವ, ಮತಾನಾಡುವ ಮಹಾಲಿಂಗ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿರುವುದು ಕ್ಷೇತ್ರದ ಮಹಿಮೆಯನ್ನು ಸಾರಿ ಹೇಳುತ್ತದೆ. ಒಂದು…
