ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಶಿಕ್ಷಣದ ಕುರಿತಾಗಿ ವಿಶೇಷ ಅಧ್ಯಯನ ನಡೆಸಲು ಜರ್ಮನಿಯಿಂದ ಆಗಮಿಸಿದ್ದ ಯೂವಾಗ್ ಮತ್ತು ಪಾವೆಲ್ ಭೇಟಿ ನೀಡಿ ಶಾಲಾ ಶೈಕ್ಷಣಿಕ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ ಶಾಲಾ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿ ಜರ್ಮನಿಯ ಶಿಕ್ಷಣ ವ್ಯವಸ್ಥೆ, ಅಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ, ಆಚಾರ-ವಿಚಾರಗಳ ಕುರಿತಾಗಿ ಬಹಳ ಕುತೂಹಲದಿಂದ ಪ್ರಶ್ನಿಸಿ ಅರಿತುಕೊಂಡರು. ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಜರ್ಮನಿಗರನ್ನು ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್. ವಂದಿಸಿದರು. ಸಹಶಿಕ್ಷಕರಾದ ಜಯಲಕ್ಷ್ಮೀ ಬಿ., ಜಯರಾಮ ಶೆಟ್ಟಿ, ವಿಜಯ ಶೆಟ್ಟಿ, ಗೌರವ ಶಿಕ್ಷಕಿ ಚೈತ್ರಾ ಆರ್., ಪ್ರತಿಮಾ, ಕಿಮ್ ಗ್ನೈಡರ್ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನ ಇಂದು (ಜ.12) ಬರದಿಂದ ಸಾಗುತ್ತಿದೆ. 6 ಕ್ಷೇತ್ರಗಳ 16 ಮಂದಿ ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳು ಭವಿಷ್ಯ ಜ.14ರಂದು ನಿರ್ಧಾರವಾಗಲಿದೆ. ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದ್ದು, ಕೃಷಿಕರ ಕ್ಷೇತ್ರದ 6 ಅಭ್ಯರ್ಥಿಗಳು ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿ ಕ್ಷೇತ್ರದ ಓರ್ವರು ಅವಿರೋಧ ಆಯ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಕೃಷಿಕರ ಕ್ಷೇತ್ರದ 6 ಸ್ಥಾನಗಳು ಹಾಗೂ ವರ್ತಕರ ಪ್ರತಿನಿಧಿ ಕ್ಷೇತ್ರದ 1 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕ್ಷೇತ್ರಗಳು: ಶಿರೂರು, ಕಂಬದಕೋಣೆ, ಕಿರಿಮಂಜೇಶ್ವರ, ತ್ರಾಸಿ, ವಂಡ್ಸೆ, ಅಂಪಾರು, ಸಿದ್ದಾಪುರ, ಹಾಲಾಡಿ, ಹೊಂಬಾಡಿ-ಮಂಡಾಡಿ, ತೆಕ್ಕಟ್ಟೆ, ಕುಂದಾಪುರ. ವರ್ತಕರ ಪ್ರತಿನಿಧಿ, ಟಿಎಪಿಸಿಎಂಸಿ ಅವಿರೋಧವಾಗಿ ಆಯ್ಕೆಗೊಂಡವರು: ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕ್ಷೇತ್ರ ಮೀಸಲು ಮಹಿಳೆ) ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕ್ಷೇತ ಅನುಸೂಚಿತ ಪಂಗಡ), ಗಣೇಶ್ ಶೇರಿಗಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕನ್ನುಕರೆ: ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪ ರಾ.ಹೆ 66ರಲ್ಲಿ ಕಾರೊಂದು ಡಿವೈಡರ್ ಏರಿ ವಿರುದ್ಧ ದಿಕ್ಕಿಗೆ ಬಂದು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ. ವ್ಯಾಗನರ್ ಕಾರಿನಲ್ಲಿದ್ದ ಕೇರಳ ಮೂಲದ ಶಿಬು (32) ಮೃತಪಟ್ಟವರು. ಅವರ ಜತೆ ಕಾರಿನಲ್ಲಿದ್ದ ರಿಜೇಶ್ ಹಾಗೂ ಪ್ರಮೋದ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೇರಳದಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಮಾರುತಿ ವ್ಯಾಗನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕವನ್ನು ಏರಿ ವಿರುದ್ಧ ದಿಕ್ಕಿಗೆ ಸಾಗಿದ ಪರಿಣಾಮವಾಗಿ ಪುಣೆಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಫಾರ್ಚೂನಾರ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ವ್ಯಾಗನರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಫಾರ್ಚೂನಾರ್ ಕಾರಿನ ಬಲಭಾಗ ನಜ್ಜುಗುಜ್ಜಾಗಿದೆ. ಫಾರ್ಚೂನಾರ್ ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಕೈಕಾಲು ತೊಳೆಯಲು ತೆರಳಿದ್ದ ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ನಿವಾಸಿ ತುಳಸಿ ಹೆಚ್.ಆರ್ (56) ಮೃತ ದುರ್ದೈವಿ. ಬಿಜಾಡಿ ಗ್ರಾಮದ ಹೊದ್ರಾಳಿ ಎಂಬಲ್ಲಿನ ತಮ್ಮ ಸ್ವಂತ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ತುಳಸಿ ಅವರು, ದೇವರ ದರ್ಶನಕ್ಕಾಗಿ ಕೋಟೇಶ್ವರಕ್ಕೆ ದೇವಸ್ಥಾನಕ್ಕೆ ತೆರಳುವ ಮುಂಚೆ ಅಲ್ಲಿನ ಕೆರೆಗೆ ಕೈಕಾಲು ಮುಖ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಕೆರೆಯ ಸುತ್ತಮುತ್ತ ಯಾರೂ ಇಲ್ಲದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾಕಿಹೋಗಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಉದಯ ನಾಯ್ಕ ಕೆ | ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ವಿಟ್ಲ ಶ್ರೀರಾಮ ಮಂದಿರದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ ಹಾಗೂ ಪುರುಷರ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಮಂಜುನಾಥ ಮರಾಠಿ ಹೊಸೇರಿ ವೇಯ್ಟ್ ಲಿಪ್ಟಿಂಗ್‌ನಲ್ಲಿ ಚಿನ್ನದ ಪದಕವನ್ನು ಹಾಗೂ ದೇಹದಾಡ್ಯ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ 62ಕೆ.ಜಿ. ವಿಭಾಗದಲ್ಲಿ 245ಕೆ.ಜಿ. ಭಾರ ಎತ್ತುವುದರ ಮೂಲಕ ತಮ್ಮದೇ ಹೆಸರಿನಲ್ಲಿರುವ ಹಳೆಯ ದಾಖಲೆಯನ್ನ (240ಕೆ.ಜಿ.) ಮುರಿದಿರುವ ಮಂಜುನಾಥ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ವೇಯ್ಟ್ ಲಿಫ್ಟರ್ ಪ್ರಶಸ್ತಿಯನ್ನೂ ಬಾಚಿಕೊಳ್ಳುವ ಮೂಲಕ ಹ್ಯಾಟ್ರಿಕ್ ಪದಕವನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇತ್ತಿಚಿಗೆ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ವೇಯ್ಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನ 69ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಪ್ಟರ್ ಪ್ರಶಸ್ತಿಯನ್ನೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಸರಕಾರ ಕನ್ನಡ ಮಾಧ್ಯಮದ ಪ್ರತಿ ವಿದ್ಯಾರ್ಥಿಯ ಮೇಲೆ ವರ್ಷಕ್ಕೆ ಇಪ್ಪತ್ತು ಸಾವಿರದಷ್ಟು ಹಣ ಖರ್ಚು ಮಾಡುತ್ತಿದ್ದರೂ, ಒಟ್ಟು ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ಈ ಭಾಗದ ೫ ಕನ್ನಡ ಮಾಧ್ಯಮ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕೊಡಮಾಡುವ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಕನ್ನಡ ಮಾಧ್ಯಮ ಶಾಲೆಗಳು ಇಂದು ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಕನ್ನಡ ಮಾಧ್ಯಮ ಶಾಲೆಗಳನ್ನೂ ಮಾದರಿ ವಿದ್ಯಾಸಂಸ್ಥೆಗಳಾಗಿ ಕಟ್ಟಬೇಕಿದೆ. ಉತ್ತಮ ಶಿಕ್ಷಣ ದೊರೆತರೆ ಕನ್ನಡ ಮಾಧ್ಯಮ ಮಕ್ಕಳು ಸೋಲುವ ಪ್ರಶ್ನೆಯೇ ಇಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಬೇಕಿದ್ದರೇ ಇಂದಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಬೇಕಿದೆ. ಸ್ವಾಭಿಮಾನ, ಶ್ರದ್ಧೆಯಿಂದ ಓದು ಮನನ ಮಾಡುವುರಿಂದ ಪರೀಕ್ಷೆಯಲ್ಲಿ ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಪ್ರತೀ ತಿಂಗಳೂ ಮೊದಲ ಭಾನುವಾರ ನಡೆಸುವ ತಿಂಗಳ ಕಥಾ ಓದು ಮಾಲಿಕೆಯಲ್ಲಿ ಡಿಸೆಂಬರ್ ತಿಂಗಳ ಈ ಭಾನುವಾರ ರಂಗನಿರ್ದೇಶಕರಾದ ವಾಸುದೇವ ಗಂಗೇರ ಅವರು ಸಾಹಿತಿ ವಸುಧೇಂದ್ರ ಅವರ ಜೀವನದ ಘಟನೆಗಳನ್ನಾಧರಿಸಿದ ಸರಳ ಪ್ರಬಂಧ ನಮ್ಮಮ್ಮ ಅಂದ್ರೆ ನಂಗಿಷ್ಟ” ದ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ಸ್ವಅನುಭವವನ್ನು ತನ್ನದೇ ಅನುಭವವೆನ್ನುವ ರೀತಿಯಲ್ಲಿ ಅಲ್ಲದೇ ಅದು ಕೇಳುಗರ ಅನುಭವವೂ ಆಗುವಂತೆ ನಿಜದ ಅರ್ಥದಲ್ಲಿ ಕಟ್ಟಿ ಕೊಡುವಲ್ಲಿ ಗಂಗೇರ ಅವರು ಯಶಸ್ವಿಯಾದರು. ಅವರ ಭಾಷಾ ಪರಿಪಕ್ವತೆ, ವೇಗ, ಓದಿನ ಶೈಲಿ ಕೇಳುಗರಿಗೆ ಪದಗಳೇ ದೃಶ್ಯಗಳಾಗಿ ಕಣ್ಮುಂದೆ ಹಾದುಹೋದಂತೆ ಭಾಸವಾಯಿತು. ಈ ಕುರಿತು ಎಲ್ಲರೂ ತಮ್ಮ ಅನುಭವವನ್ನು ಹಂಚಿಕೊಂಡರು. ಜನವರಿ ತಿಂಗಳ ಈ ಭಾನುವಾರ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ವಿನಾಯಕ ಅವರು ಸಾಹಿತಿ ಶ್ರೀನಿವಾಸ ವೈದ್ಯ ಅವರ ರಚನೆಯಾದ ಗಧೇ ಪಂಚವೀಸಿ” ಕಥೆಯ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ವಿಭಿನ್ನ ಭಾಷಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ರಾಜಾಡಿ ಸೇತುವೆ ಬಳಿ ಕಾರು-ಟ್ರ್ಯಾಕ್ಸಿ ಹಾಗೂ ಬಸ್ಸಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮುರುಡೇಶ್ವರ ಕಡೆಗೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ತೆರಳುತ್ತಿದ್ದ ಖಾಸಗಿ ವಾಹನವು ಮುಂದೆ ಸಾಗುತ್ತಿದ್ದ ಟ್ರಾಕ್ಸ್‌ಗೆ ಢಿಕ್ಕಿ ಹೊಡಿದು ಬಳಿಕ ಕುಂದಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ವಾಹನಗಳು ಕಾರು ಹಾಗೂ ಬಸ್ಸಿನ ಮುಂಭಾಗ, ಟ್ರಾಕ್ಸ್‌ನ ಹಿಂಭಾಗ ಜಖಂಗೊಂಡಿದೆ. ಬಸ್ಸು ಟ್ರಾಕ್ಸ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅಫಘಾತದಿಂದಾಗಿ ಗಂಟೆಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಕುಂದಾಪುರ ಸಂಚಾರಿ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರೀಡರ್ಸ್ ಆಂಡ್ ರೈಟರ್ಸ್ ಕ್ಲಬ್ ಮತ್ತು ಡಾ.ಹೆಚ್.ಶಾಂತಾರಾಂ ಕನ್ನಡ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಒಂದು ದಿನದ ವಿಚಾರಸಂಕಿರಣ ಬೆರ್ಟೋಲ್ಟ್ ಬ್ರೆಕ್ಟ್ ಬಗ್ಗೆ ತಿಳಿದುಕೊಳ್ಳೋಣ ಕುರಿತು ಒಂದು ದಿನದ ವಿಚಾರಸಂಕಿರಣ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಜರ್ಮನಿ ದೇಶದ ತ್ಂತ್ರಜ್ನರ ಕಾರ್ಯವೈಖರಿಯನ್ನು ಸಮಯಪ್ರಜ್ನೆಯನ್ನು ಹೊಗಳಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ದಿಕ್ಚೂಚಿ ಭಾಷಣ ಮಾಡಿ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಡಾ.ಟಿ.ಕೆ.ರವೀಂದ್ರನ್ ಮಾತನಾಡಿ ಬಂಡವಾಳಶಾಹಿಯ ಒಡಲಲ್ಲೆ ಅಂತರ್ಗತವಾಗಿರುವ ಜರ್ಮನಿಯಂತಹ ದೇಶದಲ್ಲಿನ ಆಗಿನ ಸನ್ನಿವೇಶವನ್ನು ಕುರಿತಂತೆ ಅಲ್ಲಿನ ಲೇಖಕ ಬ್ರೆಕ್ಟ್‌ನ ಬರಹಗಳು ಮುಖಾಮುಖಿಯಾಗಿವೆ. ಅವನ ಬದುಕು ಬರಹ ಮತ್ತು ಅದ್ಭುತ ನಾಟಕಗಳು ಸಂವೇದನಾಶೀಲವಾಗಿ ವಸ್ತುನಿಷ್ಠವಾಗಿ ಹುಟ್ಟಿಕೊಂಡಿದ್ದು ಇದೇ ಯುರೋಪಿಯನ್ ಸಮಾಜವಾದ, ಬಂಡವಾಳಶಾಹಿ ದೇಶಗಳಲ್ಲಿ. ಆಗಿನ ಯುರೋಪಿಯನ್ ದೇಶಗಳ ಒಡಲಲ್ಲಿ ಮಾಹಾಯುದ್ಧಗಳು, ಅರಾಜಕತೆ, ಸರ್ವಾಧಿಕಾರ, ನಾಜಿ ಸಿದ್ಧಾಂತ, ಬಾಂಬಿನ ಸದ್ದುಗಳ ಪ್ರಭಾವ ಎಷ್ಟಿತ್ತೆಂದರೆ ಅವನ ನಾಟಕಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಶನ್ (ರಿ.) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಬ್ಯಾರೀಸ್ ಪ್ರೌಢಶಾಲೆ ಮತ್ತು ಪಿ.ಯು.ಕಾಲೇಜು ಕೋಡಿ ಇವರ ಜಂಟಿ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಮಾಹಿತಿ ಕಾರ್ಯಕ್ರಮ ಬ್ಯಾರೀಸ್ ಪ್ರೌಢಶಾಲೆ ಮತ್ತು ಪಿ.ಯು.ಕಾಲೇಜು ಕೋಡಿಯಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ, ರಾಜಶೇಖರ ವಿ ಪಾಟೀಲ ಕುಂದಾಪುರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಇದರ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಚ್. ರವಿಶ್ಚಂದ್ರ ಶೆಟ್ಟಿ, ಸಹಾಯಕ ಸರಕಾರಿ ಅಭಿಯೋಜಕರಾದ ಸಂದೇಶ ಭಂಡಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಹಾಜಿ ಮಾಸ್ತರ್ ಮೊಹಮ್ಮದ್, ಬ್ಯಾರೀಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ|| ಸಮೀರ್, ಬ್ಯಾರೀಸ್ ಶಿಕ್ಷಕ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಸಿದ್ದಪ್ಪ, ಬ್ಯಾರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ…
