ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಶ್ರೇಯಸ್ಸಿಗಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಜಡ್ಕಲ್ ಕ್ರಾಸ್‌ನಿಂದ ಕೊಲ್ಲೂರು ದೇವಳದ ತನಕ ಪಾದಯಾತ್ರೆ ಹಾಗೂ ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಯಿತು. ಜಡ್ಕಲ್ ಕ್ರಾಸ್‌ನಿಂದ ಕೊಲ್ಲೂರು ದೇವಳದ ತನಕ ಅಮ್ಮನೆಡೆಗೆ ನಮ್ಮ ನಡಿಗೆ ಕಾಲ್ನಡಿಗೆ ಜಾಥದಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ದೇವಳದಲ್ಲಿ ನಾಯಕರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ತಾರನಾಥ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪುಪ್ಪರಾಜ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಮಾಜಿ ಸದಸ್ಯ ಪ್ರಕಾಶ್ ಟಿ. ಮೆಂಡನ್, ತಾಪಂ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ರಾಜ್ಯ ಕಾರ್ಯಕಾರಿಣಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದ ಎಲ್ಲಾ ವರ್ಗದ ಬಡವರನ್ನು ಗುರುತಿಸಿ ಅವರನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಲಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದೊಂದಿಗೆ ಆರಂಭಗೊಂಡ ಸಹಕಾರಿ ಚಳುವಳಿಯ ಆಶಯಗಳು ಸಹಕಾರಿ ಸಂಸ್ಥೆಗಳ ಮೂಲಕ ಸಾಕಾರಗೊಳ್ಳಲಿ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಅವರು ಗೊಳಿಹೊಳೆ ಮೂರುಕೈ ಬಳಿ ತಾಯಿ ಮರ್ಲಚಿಕ್ಕು ಕಾಂಪ್ಲೆಕ್ಸ್‌ನಲ್ಲಿ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ದಿ. ಜಿ.ಎಸ್. ಆಚಾರ್ಯ ಹಾಗೂ ದಿ. ಎಸ್. ರಾಮ ಪೂಜಾರಿ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು. ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆಯನ್ನು ನೀಡಿ ಯಶಸ್ಸನ್ನು ಕಾಣುವಂತಾಗಲಿ. ಎಂದವರು ಹಾರೈಸಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಭಾಸ್ಕರ್ ಕಾಮತ್ ಉಡುಪಿ ಕಂಪ್ಯೂಟರ್‌ಗೆ ಚಾಲನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೧೬-೨೦೧೭ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಹುಣ್ಸೆಮಕ್ಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರ ಕೋಲ್ಲೂರು ಇದರ ಮಾಜಿ ಧರ್ಮದರ್ಶಿಗಳಾದ ಎನ್. ಮಂಜಯ್ಯ ಶೆಟ್ಟಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಔಪಚಾರಿಕ ಶಿಕ್ಷಣವನ್ನಲ್ಲದೆ , ಸಮಾಜದಲ್ಲಿನ ವಿವಿಧ ವಿಷಯಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಮ್.ರತ್ನಾಕರ ಶೆಟ್ಟಿ ವಲಯ ಅಧ್ಯಕ್ಷರು, ಲಯನ್ಸ ೩೧೭ಸಿ, ಸೂರಪ್ಪ ಹೆಗ್ಡೆ, ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣ್ಸೆಮಕ್ಕಿ, ಚಂದ್ರ ಆಚಾರ್ಯ, ಅಧ್ಯಕ್ಷರು, ಪ್ರಗತಿ ಯುವಕ ಮಂಡಲ, ಹುಣ್ಸೆಮಕ್ಕಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೊಜನಾಧಿಕಾರಿ ರಾಮಚಂದ್ರ ಆಚಾರ್ ಶಿಬಿರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆಂಜನೇಯ ಅವರು ತಾಲೂಕಿನ ಮೂರೂರು ಹಾಡಿಯಲ್ಲಿ ಮರ್ಲಿ ಕೊರಗ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಮೆರವಣಿಗೆಯಲ್ಲಿ ಸಚಿವರನ್ನು ಸಂಜೆಯ ವೇಳೆ ಹಾಡಿಯೊಳಕ್ಕೆ ಸ್ವಾಗತಿಸಲಾಯಿತು. ಹಾಳೆಯ ಮುಟ್ಟಾಳೆ ಧರಿಸಿದ ಸಚಿವರಿಗೆ ಮಲ್ಲಿಗೆಯ ಹಾರ ಹಾಕಲಾಯಿತು. ಹಾರಕ್ಕೆ ಗುಡ್ಡಗಾಡು ಪ್ರದೇಶದಲ್ಲಿರುವ ಕೆಂಪು ಬಣ್ಣದ ಕೇಪುಳ ಹೂವನ್ನೂ ನೇಯಲಾಗಿತ್ತು. ಸಚಿವರೊಂದಿಗೆ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಯನ್ನೂ ಸಚಿವರು ನೀಡಿದರು. ಮರ್ಲಿ ಮನೆಮಂದಿಯೊಂದಿಗೆ ವಿಶೇಷ ವಾಗಿ ಬೆರೆತ ಸಚಿವರು, ಅಡುಗೆ ಕೋಣೆಗೆ ಕೂಡ ಹೋಗಿ ಅಲ್ಲಿ ಅಡುಗೆ ತಯಾರಿ ಮಾಡುವುದನ್ನು ಅಲ್ಲಿಯೇ ನಿಂತು ವೀಕ್ಷಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್,ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾ ಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಗ್ರಾ.ಪಂ.…
ಬೈಂದೂರು ಮುರೂರು ಕೊರಗ ಕಾಲೋನಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ೫೦ಕ್ಕೂ ಜಾತಿಗಳಿದ್ದು ಆ ಪೈಕಿ ೩೫ಜಾತಿ ಸಮುದಾಯ ನಾಡಿನಲ್ಲಿ, ೧೫ ಜಾತಿ ಸಮುದಾಯದ ಜನರು ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅನಾದಿಕಾಲದಿಂದ ಅರಣ್ಯ ತಪ್ಪಲು ಪ್ರದೇಶದಲ್ಲಿ ನೆಲೆಸಿರುವ, ಮೃದು ಸ್ವಭಾವದ ಕಡಿಮೆ ಸಂಖ್ಯೆಯಲ್ಲಿರುವ ಕೊರಗ ಹಾಗೂ ಬುಡಕಟ್ಟು ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಇತರೆ ಜಾತಿಯೊಂದಿಗೆ ಸ್ವರ್ಧಿಸಲು ಕಷ್ಟಸಾಧ್ಯವಾಗುತ್ತಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂಗೆ ಮನವಿ ಮಾಡಲಾಗುವುದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಅವರು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕಾಲ್ತೋಡು ಗ್ರಾ.ಪಂ ವ್ಯಾಪ್ತಿಯ ಮುರೂರು ಕೊರಗ ಕಾಲೋನಿಯಲ್ಲಿ ವಾಸ್ತವ್ಯಕ್ಕಾಗಿ ಬಂದಿದ್ದ ಅವರು ಆದಿವಾಸಿ ಮನೆ ಬಾಗಿಲಿಗೆ ಸರಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಷ್ಠೆಗೆ ಮತ್ತೊಂದು ಹೆಸರು ಕೊರಗರು. ಅವರೊಂದಿಗೆ ಅವರೊಂದಿಗೆ ದಿನಪೂರ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್. ಎಸ್. ಪದವಿಪೂರ್ವ ಕಾಲೇಜು, ವಿಜಯಪುರ ಜಂಟಿ ಆಶ್ರಯದಲ್ಲಿ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಜನಪದ ಗಾಯನ ವಿಭಾಗದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘನಾ ಎ. ಅವರು ಪ್ರಥಮ ಸ್ಥಾನಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕ ವೃಂದ ಅಭಿನಂದಿಸಿರುತ್ತಾರೆ. ಮೇಘನಾ ಶಿಕ್ಷಕರಾದ ರಾಮದಾಸ್ ಮತ್ತು ಸುಮನಾ ದಂಪತಿಯವರ ಪುತಿಯಾಗಿರುತ್ತಾರೆ.
ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ. ಸ್ಥಳದಲ್ಲೇ ಬೀಡು ಬಿಟ್ಟ ಅಧಿಕಾರಿಗಳು ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಗ್ರಾಮ ಮುರೂರು ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ವಾಸ್ತವ್ಯದ ಕಾರಣದಿಂದಾಗಿ ಸುದ್ದಿಯಾಗುತ್ತಿದೆ. ಆದರೆ ನೂರಾರು ವರ್ಷಗಳಿಂದ ವಾಸವಿರುವ ಇಲ್ಲಿನ ಮೂಲ ನಿವಾಸಿಗಳ ಬದುಕು ಹಾಗೂ ಮೂಲ ಸೌಕರ್ಯಗಳ ಸ್ಥಿತಿಗತಿ ಒಂದಿಷ್ಟು ಬದಲಾಗಿಲ್ಲ. ಭದ್ರವಿಲ್ಲದ ಸೂರು, ಸೋರುವ ಮಾಡು, ಶೌಚವಿಲ್ಲದ ಮನೆ, ಆಧುನಿಕ ತಂತ್ರಜ್ಞಾನದ ಬಾತ್‌ರೂಮ್! ವಿದ್ಯುತ್ ಎಲ್ಲದ ಮನೆ, ಕರೆಂಟಿದ್ದರೂ ತಪ್ಪದ ಗೋಳು, ಇದರೊಟ್ಟಿಗೆ ಹಕ್ಕುಪತ್ರ ಇಲ್ಲದ ಒಂದೆರಡು ಮನೆ, ಕೂಲಿ ಹೊಟ್ಟೆಪಾಡಿನ ದಾರಿ, ಕಣ್ಣು ಚಾ, ಸಾಸುವೆ ಬೇಕಿದ್ದರೂ ನಾಲ್ಕಾರು ಕಿ.ಮೀ ನಡೆಯುವ ಅನಿವಾರ್ಯತೆ. ಇದು ಮೂರೂರು ಕೊರಗ ಕಾಲನಿ ಯಥಾವತ್ ಚಿತ್ರಣ. ಮೂಲ ನಿವಾಸಿಗಳ ಸಂಪಕಷ್ಟದ ಬದುಕಿನ ಸಂಪೂರ್ಣ ಚಿತ್ರಣವೂ ಹೌದು. [quote font_size=”14″ bgcolor=”#ffffff” bcolor=”#dd3333″ arrow=”yes” align=”right”] ಜಿಲ್ಲೆಯಲ್ಲಿ ಮೂಲನಿವಾಸಿಗಳ ಸ್ಥಿತಿಗತಿ ಏನು? ಜಿಲ್ಲೆಯಲ್ಲಿ 276 ಮೂಲನಿವಾಸಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯ ಸರ್ಕಾರ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ. ಹಾಗೂ ಶೇ. ೩ ಬಡ್ಡಿದರದಲ್ಲಿ ೩ ರಿಂದ ೧೦ ಲಕ್ಷ ರೂ. ಸಾಲ, ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣ, ಪ್ರತಿ ಲೀ. ಹಾಲಿಗೆ ೫ ರೂ. ಪ್ರೋತ್ಸಾಹ ಧನ ಸೇರಿದಂತೆ ಕೃಷಿಕರ ಕಲ್ಯಾಣಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕೃಷಿಕರು ಇದರ ಸದುಪಯೋಗ ಪಡೆದು, ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಕುಂದಾಪುರ, ಆರ್ .ಕೆ ಸಂಜೀವ ರಾವ್ ಜನ್ಮ ಶತಾಬ್ದಿ ಸಂಸ್ಮರಣಾ ಸಮಿತಿ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಇವರ ಸಂಯುಕ್ತ ಆಶ್ರಯದಲಿ, ಡಾ. ಡಿ. ವೀರೇಂದ್ರ ಹಗ್ಡೆಯವರ ಮಾರ್ಗದರ್ಶನದಲ್ಲಿ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶಬರಿಮಲೆ ಯಾತ್ರೆಗೆ ತಮಿಳುನಾಡಿನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯಪ್ಪಸ್ವಾಮಿ ವೃತಧಾರಿಯೋರ್ವರಿಗೆ ಬೀದಿ ನಾಯಿಯೊಂದು ಸಾಥ್ ನೀಡಿದ್ದು 600ಕಿ.ಮೀ ಅವರೊಂದಿಗೆ ತೆರಳಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ವೃತಧಾರಿ ಪ್ರವಾಸದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆ ಯಾತ್ರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ನವೀನ್ ಅವರನ್ನು ನಾಯಿ ಹಿಂಬಾಲಿಸುತ್ತಿದ್ದಾಗ ಈ ಮಾಹಿತಿ ತಿಳಿದಿದೆ. ಕೇರಳದ ಕೋಳಿಕೋಡ್ ಮೂಲದವರಾಗಿರುವ ನವೀನ್ ಡಿಸೆಂಬರ್ ೭ರಂದು ಯಾತ್ರೆ ಆರಂಭಿಸಿದ್ದಾರೆ. ಆರಂಭದಲ್ಲಿ ಹಲವು ಬೀದಿ ನಾಯಿಗಳಂತೆ ಇದು ಹಿಂಬಾಲಿಸುತ್ತಿರಬೇಕು ಎಂದುಕೊಂಡು ಅದನ್ನ ಓಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ಅನೇಕ ಸಲ ಪ್ರಯತ್ನಿಸಿದರೂ ಅದು ಹೋಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. 600 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಅವರು 17 ದಿನಗಳ ಕಾಲ ಕಾಲ್ನಡಿಗೆ ಮುಗಿಸಿದ್ದು, ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಶ್ವಾನ ಇವರನ್ನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿ ಉದ್ಯೋಗಿಯಾಗಿರುವ ನವೀನ್, ಈ ಶ್ವಾನದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಸ್ಮಯಕಾರಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಳದಲ್ಲಿ ಎಳ್ಳು ಅಮವಾಸ್ಯೆಯ ಪ್ರಯುಕ್ತ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿದವು. ದಟ್ಟ ಕಾನನದ ನಡುವೆ ಸುಮಾರು ಐವತ್ತು ಅಡಿಗಳಷ್ಟು ದೂರದ ಕಡುಗಲ್ಲು ಗುಹೆಯಲ್ಲಿನ ಶ್ರೀ ಕೇಶವನಾಥ ಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆಯಂದು ದೇವರಿಗೆ ವಿಶೇಷ ಪೂಜೆ, ಬೆಳಿಗ್ಗೆಯಿಂದ ಸಂಜೆಯತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನೂರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಕೆರಾಡಿಯ ಶಶಿಧರ ಮಿತ್ರವೃಂದ ನೇತೃತ್ವದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಳದ ಅರ್ಚಕ ರಾಘವೇಂದ್ರ ಕುಂಜತ್ತಾಯ ಹಾಗೂ ಶಶಿಧರ ಮಿತ್ರವೃಂದದ ಸಂಚಾಲಕ ದಿವ್ಯಾಧರ ಶೆಟ್ಟಿ ಕೆರಾಡಿ ಮತ್ತವರ ತಂಡದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ► ಮೂಡುಗಲ್ಲು: ವಿಸ್ಮಯಕಾರಿ ಗುಹಾಂತರ ಕೇಶವನಾಥ ದೇವಾಲಯ – http://kundapraa.com/?p=1522 ► ಬೆಳ್ಕಲ್ ಗೋವಿಂದ ತೀರ್ಥದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ. ಅಸಂಖ್ಯ…
