ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ನಡೆದ ಶತಮಾನದ ನಮನ ವಿಶೇಶೋಪನ್ಯಾಸದಲ್ಲಿ ಡಾ. ದೇ ಜವರೇಗೌಡರ ಕುರಿತು ಕನ್ನಡ ಪ್ರಾಧ್ಯಪಕ ಹಾಗೂ ಪ್ರಾಚಾರ್ಯರಾದ ಡಾ. ಸಿ. ಪಿ ಕೃಷ್ಣ ಕುಮಾರ್ ಮಾತನಾಡಿದರು. ಕನ್ನಡದ ಶತಪುರುಷರೆಂದೇ ಹೆಸರಾಗಿರುವ ಇವರು ಚೆನ್ನರಾಯ ಪಟ್ಟಣದ ಒಂದು ಕುಗ್ರಾಮದವರು. ತಮ್ಮ ವೈಯಕ್ತಿಕ ಜೀವನ ಹೋರಾಟದ ನಡುವೆಯೂ ಕನ್ನಡ ಪರವಾದ ಪ್ರಬಲ ಹೋರಾಟರಾಗಿ ಗುರುತಿಸಿಕೊಂಡವರು. ಉತ್ತಮ ಆಡಳಿತಗಾರ, ಶಿಕ್ಷಣತಜ್ಙ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ, ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಜವರೇಗೌಡರು ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪದವಿ ವಿಬಾಗದ ಟಿ. ಎನ್. ಎ. ಖಂಡಿಗೆ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಿಲ್ಲಿಸಿ, ಭೂ ಸುಧಾರಣೆ ಚಳುವಳಿ ಪ್ರಾರಂಭ ಮಾಡಿದ ದೇವರಾಜ ಅರಸರು ಭಾರತದಲ್ಲಿ ಸಾರ್ವಕಾಲಿಕ ಮಾದರಿ ರಾಜಕರಣಿಯಾಗಿ ಮಿಂಚಿದವರು ಎಂದು ಬಿ. ಎಲ್ ಶಂಕರ್ ತಿಳಿಸಿದರು. ಅವರು ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-೨೦೧೬ ರ ಎರಡನೇ ದಿನದ ‘ಶತಮಾನದ ನಮನ ಡಿ. ದೇವರಾಜ್ ಅರಸು’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಹಳ್ಳಿಗಳಲ್ಲಿ ಯಾರು ಸೋಮಾರಿಗಳಾಗಬಾರದು ಎಂಬ ಸದ್ದೂದೇಶದಿಂದ ನಿರುದ್ಯೋಗಿಗಳಿಗೆಲ್ಲ ಉಪಹಾರ ಗೃಹದಲ್ಲಿ ಕೆಲಸ ಕೊಡಿಸಿ ಮಾನವ ಕಲ್ಯಾಣ ಮಾಡಿದ ಪ್ರಾಮಣಿಕವಾಗಿ ರಾಜಕಾರಣಿ ಎಂದು ತಿಳಿಸಿದರು. ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ್ ಅರಸರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಖಾಸಗಿಯಾಗಿ ಬಡ್ಡಿ ವ್ಯವಹಾರ ಮಾಡುವವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದ ದೇವರಾಜ ಅರಸರದ್ದು ಭಾರತದಲ್ಲಿ ಶತಮಾನ ಕಳೆದರು ನೆನಪು ಮಾಡುವಂತಹ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಮ್ಮೇಳನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನೂ ಕೂಡ ಬಹುಮುಖ್ಯ. ಅವರ ಆಶೋತ್ತರಗಳನ್ನು ಈಡೇರಿಸುವುದು ರಾಜಕಾರಣಿಗಳ ಮುಖ್ಯ ಗುರಿಯಾಗಬೇಕು. ದುರಾದೃಷ್ಟವಶಾತ್ ಇಂದಿನ ರಾಜಕಾರಣಿಗಳಿಗೆ ಜನಪರ ಕಾಳಜಿಗಿಂತ ಸ್ವಹಿತಾಸಕ್ತಿಗಳೇ ಮುಖ್ಯವಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ರಾಜಕೀಯ ಕ್ಷೇತ್ರದಲ್ಲಾಗಬೇಕಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು. ರಾಜಕೀಯ ಹಾಗೂ ರಾಜಕಾರಣಗಳ ಬಗ್ಗೆ ಜನರ ನಿರೀಕ್ಷೆಗಳು ಬದಲಾಗಬೇಕಿವೆ. ತಾನು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಪ್ರತಿಯೊಬ್ಬ ಪ್ರಜೆಯೂ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ಅವರ ಯೋಜನೆಗಳು, ಆಶೋತ್ತರಗಳ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳುವಂತಾಗಬೇಕು. ಆದರೆ ಇಂದು ಹೆಚ್ಚಿನ ಸಂದರ್ಭಗಳಲ್ಲಿ ತೀರಾ ವೈಯಕ್ತಿಕ ಕುಶಲೋಪರಿಗಳಿಗೆ ರಾಜಕಾರಣಿಗಳ ಹಾಗೂ ಶ್ರೀಸಾಮಾನ್ಯನ ಸಂಬಂಧ ಸೀಮಿತವಾಗುತ್ತಿದೆ. ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಬ್ಬ ಪ್ರಬಲ ನಾಯಕನ ಅವಶ್ಯಕತೆ ನಮಗಿದೆ. ಇಂದಿನ ರಾಜಕಾರಣ, ಚಳುವಳಿಗಳಿಗೆ ಮುಂದೆ ಯಾರಿದ್ದಾರೆಂಬುದು ಮುಖ್ಯವಾಗುವುದಿಲ್ಲ. ಹಿಂದೆ ಯಾರಿದ್ದಾರೆಂಬುದು ಮಾತ್ರ ಮುಖ್ಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವ್ಯಕ್ತಿಯೋರ್ವ ಪ್ರಾಮಾಣಿಕತೆ, ನಿಸ್ವಾರ್ಥಪರತೆ, ಸಾತ್ವಿಕತೆ, ವೃತ್ತಿಗೌರವವನ್ನು ಹೊಂದಿರುವುದೇ ನಿಜವಾದ ಧರ್ಮ. ಜಪ-ತಪ, ಹೋಮ ಹವನ, ಪೂಜೆ ಪುನಸ್ಕಾರಗಳು ಧಾರ್ಮಿಕ ಆಚರಣೆಗಳಷ್ಟೇ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಮಠದ ವೀರೇಶಾನಂದ ಸ್ವಾಮಿ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಧರ್ಮದ ಕುರಿತು ಮಾತನಾಡಿದರು. ಸ್ವಾಮೀಜಿಗಳು, ಸಂನ್ಯಾಸಿಗಳು ಮಾತ್ರವೇ ಧರ್ಮವನ್ನು ಆಚರಿಸಬೇಕೆಂಬ ತಪ್ಪು ಕಲ್ಪನೆಯಿದೆ. ಆದರೆ ಧರ್ಮದ ಆಚರಣೆ ಕೇವಲ ಸಂನ್ಯಾಸಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಮನುಷ್ಯನೂ ತನ್ನ ನಿಜವಾದ ಧರ್ಮವನ್ನು ಆಚರಿಸುವಂತಾಬೇಕು. ಧರ್ಮವೆಂಬುದು ಶೂರರಿಗೇ ಹೊರತು ಹೇಡಿಗಳಿಗಲ್ಲ ಎಂದರು. ಯಾವ ಸಮಾಜದಲ್ಲಿ ಶ್ರೇಷ್ಠ ತತ್ವಗಳು ಅನುಷ್ಠಾನಗೊಳ್ಳುತ್ತವೆಯೋ ಅದು ಅತ್ಯಂತ ಶ್ರೇಷ್ಠತಮ ಸಮಾಜವಾಗುತ್ತದೆ. ಒಬ್ಬ ಅತ್ಯುತ್ತಮ ವ್ಯಕ್ತಿಯ ಅಂತರಂಗದ ಸಾಮರ್ಥ್ಯ, ಪರಿಪೂರ್ಣತೆಯಿಂದ ಸಮಾಜಕ್ಕೆ ಉತ್ತಮ ಸಂಸ್ಕೃತಿ ದೊರೆಯಬಲ್ಲದು. ಉನ್ನತ ಸಂಸ್ಕಾರಗಳು ಸಮಾಜಕ್ಕೆ ದೊರೆಯದೇ ಹೋದರೆ ಒಬ್ಬ ವ್ಯಕ್ತಿಯ ಜೊತೆಗೆ ಅವನ ಭವಿಷ್ಯದ ಪೀಳಿಗೆಯೂ ಅದಕ್ಕೆ ಬಲಿಯಾಗುತ್ತದೆ. ಆದ್ದರಿಂದ ಸನಾತನ ಧರ್ಮದ ಆಚರಣೆ ತುಂಬಾ ಮುಖ್ಯವಾಗುತ್ತದೆ.…
ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಗುರುವಿನ ಆಟ, ಮಂತ್ರದ ಆಟ, ಗಾಳಿಯ ಆಟ, ಸಿದ್ಧಪ್ಪನ ಆಟ. ಈ ಚಮತ್ಕಾರ ಆಟ ಶಿವನು ಬಲ್ಲನು ತಿಳಿಯಿರಿ? ಎನ್ನುತ್ತಾ ಸಣ್ಣ ಗುಂಡೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ತೇಲಿಸಿ ಗಣಪತಿ, ಆಂಜನೇಯ, ಶಿವಲಿಂಗ, ಬಸವಣ್ಣನ ಮೂರ್ತಿ ತೆಗೆದು ತೋರಿಸುತ್ತಿದ್ದರೆ ಜನ ನಿಬ್ಬೆರಗಾಗಿ ನೋಡುತ್ತಿದ್ದರು. ಆಳ್ವಾಸ್ ನುಡಿಸಿರಿಗೆ ಆಗಮಿಸಿದ್ದ ಸುಡುಗಾಡು ಸಿದ್ಧರ ತಂಡ ಕ್ಯಾಂಪಸ್ನಲ್ಲಿ ನಡೆದು ಸಾಗುತ್ತಿದ್ದವರನ್ನು ಅವರತ್ತ ಸೆಳೆಯುತ್ತಾ, ತಮ್ಮ ಕೈಚಳಕ ತೋರುತ್ತಾ ಸುಡುಗಾಡು ಸಿದ್ಧರ ಕಲಾ ಪ್ರಕಾರಗಳನ್ನು ತೆರೆದಿಟ್ಟರು. ಹೊಸಪೇಟೆಯ ಕಲಾವಿದ ವಿರೂಪಾಕ್ಷಪ್ಪ ಅವರು ಎಳೆಂಟು ಗೋಲಿಗಳನ್ನು ಒಂದೊಂದಾಗಿ ನುಂಗುತ್ತಿದ್ದರು. ಅದರ ಮಧ್ಯೆಯೇ ಜನರ ಗಮನ ಹಿಡಿದಿಟ್ಟುಕೊಳ್ಳಲು ಸುತ್ತ ಕುಳಿತ ಇತರೆ ಕಲಾವಿದರು ತಮ್ಮ ಜೋಳಿಗೆಗಳಿಂದ ಬರುತ್ತಿದ್ದ ‘ಕುಯ್ ಕುಯ್’ ಸದ್ದನ್ನು ಅಡಗಿಸುತ್ತಿದ್ದರು. ಬಳಿಕ ನುಂಗಿದ ಎಲ್ಲಾ ಗೋಲಿಗಳನ್ನು ಕಲಾವಿದ ಗಂಟಲಿನಿಂದ ವಾಪಸ್ ತೆಗೆದು ವೀಕ್ಷಕರನ್ನು ಅಚ್ಚರಿ ಪಡಿಸಿದರು. ವಿರೂಪಾಕ್ಷಪ್ಪ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು. ಬದುಕಿಗಾಗಿ ಹಿರಿಯರ ಬಳುವಳಿಯಾಗಿ ಬಂದ ಸುಡುಗಾಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕುಸುಮಾ ಫೌಂಡೇಶನ್ ನಾಗೂರು ಆಯೋಜಿಸುತ್ತಿರುವ ಕುಸುಮಾಂಜಲಿ- ೨೦೧೬ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಮ್ಮಿಕೊಂಡ ಹಮ್ಮಿಕೊಂಡ ಗಾನಕುಸುಮ ಸಂಗೀತ ಕಾರ್ಯಕ್ರಮದ ಅಂತಿಮ ಸುತ್ತಿನ ಸೀನಿಯರ್ ವಿಭಾಗದಲ್ಲಿ ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರದ ವಿಜಯಲಕ್ಷ್ಮಿ, ಬಿ.ಬಿ ವಿಜೇತರಾಗಿದ್ದರೇ, ಜೂನಿಯರ್ ವಿಭಾಗದಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ನ ಬಿ.ಅನೀಶ್ ವಿಜೇತರಾಗಿದ್ದಾರೆ. ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಿತು. ಸೆಮಿಫೈನಲ್ ಸುತ್ತಿನಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ೧೫ ಗಾಯಕರನ್ನು ಫೈನಲ್ ಸ್ಪರ್ಧೆಗೆ ಆಯ್ಕೆಯಾದರೇ, ಫೈನಲ್ನಲ್ಲಿ ಇಬ್ಬರು ಆಯ್ಕೆಯಾದರು. ಸ್ಪರ್ಧೆಯ ತಿರ್ಪುಗಾರರಾಗಿ ಪ್ರಸಿದ್ಧ ಸಂಗೀತ ಬಾಲಚಂದ್ರ, ಉಡುಪಿ, ಗಾಯಕ ರಾಘವೇಂದ್ರ ಐತಾಳ ಬ್ರಹ್ಮಾವರ, ಗಾಯಕ ಪಲ್ಲವಿ ತುಂಗಾ ಕಾರ್ಯನಿರ್ವಹಿಸಿದರು. ಕುಸುಮಾಂಜಲಿ ೨೦೧೬ ರ ಚಾನೆಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರು ಲಕ್ಷ್ಮಣ ಪೂಜಾರಿ ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಕುಸುಮಾವತಿ ಎಸ್. ಶೆಟ್ಟಿ, ನಿವೃತ್ತ ಶಿಕ್ಷಕಿ…
ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಯಾವುದೇ ಕಾರ್ಯಕ್ರಮದ ಯಶಸ್ಸು ಅಲ್ಲಿನ ಸಂಘಟಕರಷ್ಟೇ ಸ್ವಯಂಸೇಕರ ಮೇಲೆಯೂ ಅವಲಂಬಿಸಿದೆ. ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿಯೂ ಆಳ್ವಾಸ್ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಒಗ್ಗಟ್ಟಾಗಿ ದುಡಿಯುತ್ತಿರುವ ಘಲವಾಗಿ ಪ್ರತಿವರ್ಷಯೂ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿವೆ. ಆಳ್ವಾಸ್ ನುಡಿಸಿರಿಗೆ ದೂರ ದೂರದ ಊರುಗಳಿಂದ ಬರುವವರುನ್ನು ಮೊದಲು ಸ್ವಾಗತಿಸಿಕೊಳ್ಳುವುದು ವಿದ್ಯಾಗಿರಿ ಕ್ಯಾಂಪಸ್ ಆರಂಭದಲ್ಲಿಯೇ ಇರುವ ನೊಂದಣಿ ಕೇಂದ್ರ. ಮೂರು ದಿನದ ನುಡಿಸಿರಿಯಲ್ಲಿ ಪ್ರತಿಯೊಬ್ಬರನ್ನೂ ಸ್ವಾಗತಿಸಿಕೊಂಡು ಅವರಿಗೆ ವಸತಿ ವ್ಯವಸ್ಥೆ ಮಾಡಿ, ಅಗತ್ಯ ಮಾಹಿತಿ ನೀಡುವ ಜವಾಬ್ದಾರಿಯನ್ನು ಸ್ವಾಗತ ಸಮಿತಿಯ ಒಂದು ತಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನುಡಿಸಿರಿಗೆ ವಿವಿಧ ಜಿಲ್ಲೆಗಳಿಂದ ಬರುವವರಿಗಾಗಿ ಮೂರು ದಿನಗಳ ಕಾಲ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು ಬೆಳಿಗ್ಗೆ ೫ರಿಂದ ರಾತ್ರಿ ೧೧ಗಂಟೆಯ ತನಕವೂ ಕಾರ್ಯಾಚರಿಸುತ್ತಿದೆ. ಆನ್ಲೈನ್ ಮೂಲಕವೂ ನೊಂದಣಿ ಮಾಡಿಕೊಳ್ಳುವುದಕ್ಕೆ ಮೂರು ತಿಂಗಳ ಹಿಂದೆಯೇ ಅವಕಾಶ ಮಾಡಿಕೊಟ್ಟು ಅವರ ಮಾಹಿತಿ ಕಲೆಹಾಕಿ ಅಗತ್ಯ ವ್ಯವಸ್ಥೆಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನ ಉದ್ಯೋಗ ನೀಡಲು ಸರಕಾರ ಮುಂದಾಗಿರುವುದರಿಂದ ಜನರು ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗಿದೆ. ಜನರು ಈ ಯೋಜನೆಯಡಿ ಹೆಸರನ್ನು ನೊಂದಾಯಿಸಿಕೊಂಡು ಈ ಯೋಜನೆ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು. ಈ ಯೋಜನೆಯಡಿ ನೀಡಲಾಗುತ್ತಿರುವ ಕೂಲಿ ಹಣವನ್ನು ಹೆಚ್ಚಿಸಲು ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೧೭-೧೮ನೇ ಸಾಲಿನ ಕಾರ್ಮಿಕ ಆಯ-ವ್ಯಯವನ್ನು ತಯಾರಿಸುವ ಬಗ್ಗೆ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯತ್ನ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗಾಗಿ ಗ್ರಾಮದಲ್ಲಿ ವಾರ್ಡ್ಸಭೆ ಮತ್ತು ಗ್ರಾಮಸಭೆಯನ್ನು ಆಯೋಜಿಸಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ…
ಮೂಡುಬಿದಿರೆ: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಯ ಆಗುಹೋಗುಗಳನ್ನು ಅರಿಯುವ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ `ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ವಿಚಾರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು. ತಮಿಳು ಭಾಷೆ-ನಾಳೆಗಳ ನಿರ್ಮಾಣ ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ. ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ ಮಾಡುವ ಮೊದಲು ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ವಾಸ್ತವದಲ್ಲಿ ನಮ್ಮಿಂದ ಮಾಡಲಾಗದ ಕಾರ್ಯವನ್ನು ತಮ್ಮ ಕಾವ್ಯಗಳ ಮೂಲಕ ಕವಿಗಳು ಮಾಡುತ್ತಾರೆ. ಭಾಷೆಗೆ ಆ ಅಂತಸ್ಸತ್ವ ಇದೆ. ಹೀಗಾಗಿ ನಾವು ಭಾಷೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ನಾವು ಒಳ್ಳೆಯ ಬೀಜಗಳನ್ನು ಬಿತ್ತಿದರೆ ನಾಳೆ ಅದು ಸದೃಢ ಹೆಮ್ಮರವಾಗಲು ಸಾಧ್ಯ. ಆದ್ದರಿಂದ ತುಂಬಾ ಜಾಗೃತಪ್ರಜ್ಞೆಯಿಂದ ನಾವು ಭಾಷೆ-ಸಂಸ್ಕೃತಿಯ ಕೆಲಸವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು. `ತಮಿಳರು ತಮ್ಮ ಭಾಷೆಯನ್ನು…
