ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಂಕರನಾರಾಯಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಕೇಶ್ ಆರ್.ಜಿ. ಅವರು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ಯೋಜನಾಧಿಕಾರಿರಾಘವೇಂದ್ರ ಗುಡಿಗಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕನ್ನಡ ಉಪನ್ಯಾಸಕರಾದ ಸತೀಶ್ ಎಂ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶಿಸ್ತು, ಶ್ರದ್ಧೆ ಮೊದಲಾದ ಗುಣ ಮೈಗೂಡಿಸಿಕೊಂಡಾಗ ಯಶಸ್ವಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಕ್ರೀಡೆ ಇದೆಲ್ಲವನ್ನು ಕಲಿಸುವ ಶಕ್ತಿ ಹೊಂದಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್ ಹೇಳಿದರು. ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ 11ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ ಕ್ರೀಡೆ, ಕಲೆ, ಸಂಸ್ಕ್ರತಿ, ಸೇರಿದಂತೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಎಲ್ಲಾ ಸಂಗತಿಗಳನ್ನು ಗುರುಕುಲ ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಪಥಸಂಚಲನ, ಕರಾಟೆಯಲ್ಲಿ ವಿದ್ಯಾರ್ಥಿಗಳು ತೋರಿದ ಪ್ರದರ್ಶನ ಹೆಮ್ಮೆ ಪಡುವಂತಹದ್ದು. ಗುರುಹಿರಿಯರಲ್ಲಿ ಗೌರವ, ಶಿಕ್ಷಕರಿಗೆ ತಲೆಬಾಗುವಿಕೆ ವಿದ್ಯಾರ್ಥಿಯ ಉನ್ನತಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಕೆ. ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಜಂಟಿ ಟ್ರಸ್ಟಿ ಅನುಪಮ ಎಸ್. ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಶಾಯಿಜು ಕೆ.ಆರ್.ನಾಯರ್ ಉಪಸ್ಥಿತರಿದ್ದರು. ಗುರುಕುಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರ್ಜಿ ಸಮಿತಿ ಮುಂದೆ ಯಕ್ಷಗಾನ ಪ್ರದರ್ಶನದ ತನಿಕೆಯ ಕುರಿತಾಗಿ ಅರ್ಜಿ ಇದೆ ಎನ್ನೋವ ಕಾರಣಕ್ಕೆ ನೆಹರು ಮೈದಾನದಲ್ಲಿ ಯಕ್ಷಗಾನಕ್ಕೆ ಅವಕಾಶ ಇಲ್ಲಾ ಎನ್ನೋದು ಸರಿಯಲ್ಲ. ಇಲ್ಲದ ಸಮಸ್ಯೆ ಸೃಷ್ಟಿಮಾಡಿ ಪರಿಹಾರಕ್ಕೆ ಪ್ರಯತ್ನ ಮಾಡಬೇಕಾದ ಸ್ಥಿತಿ ಯಕ್ಷಗಾನಕ್ಕೆ ಬಂದಿದ್ದು ದುರಂತ ಎಂದು ಮಾಜಿ ಸಂಸದ ಹಾಗೂ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ವಿಷಾದ ವ್ಯಕ್ತ ಪಡಿಸಿದರು. ‘ಯಕ್ಷಗಾನ ಕಲೆ ಉಳಿವಿಗಾಗಿ ಕರೆ, ಯಕ್ಷಗಾನ ಆಟಕ್ಕಿಲ್ಲದ ನೆಹರು ಮೈದಾನ’ ಬಗ್ಗೆ ಕುಂದಾಪುರ ಪದವಿಪೂರ್ವ ಕಾಲೇಜ್ ಕಲಾ ಮಂದಿರದಲ್ಲಿ ಕಲಾವಿರರ ಹಾಗೂ ಯಕ್ಷಗಾನ ಅಭಿಮಾನಿಗಳ ಸಮಾವೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಮೈದಾನದಲ್ಲಿ ಕಾನೂನು ಮುರಿಯಲು ಯಕ್ಷಗಾನ ಪ್ರದರ್ಶವೇ ಆಗಬೇಕಿಂದಿಲ್ಲ. ಖಾಲಿ ಮೈದಾನದಲ್ಲೂ ಬೇಕಾದರೂ ಕೂಡಾ ಅನಾಹುತಗಳು ನಡೆಯುತ್ತದೆ. ಕಾನೂನು ಪಾಲನೆ ವ್ಯವಸ್ಥೆ ಮಾಡಿಕೊಡಬೇಕು. ಮಂತ್ರಿ, ಮಹೋದಯರ ರಕ್ಷಣೆಗೆ ಪೋಲಿಸರ ನಿಯುಕ್ತಿ ಮಾಡಿದ ಹಾಗೆ ನೆಹರ ಮೈದಾನದಲ್ಲಿ ಯಕ್ಷಗನಾ ಪ್ರದರ್ಶನ ಕಾನೂನು ವ್ಯವಸ್ಥೆ ತಾಲೂಕು ಅಡಳಿತ ಜವಾಬ್ದಾರಿ ಜೊತೆ ಸ್ಚಚ್ಛತಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬೈಂದೂರು ಉಪ್ಪುಂದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದೊಂದಿಗೆ ಉಪ್ಪುಂದದ ಮಾತೃಶ್ರಿ ಸಭಾಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರುಗಿತು. ಲಯನ್ಸ್ ಜಿಲ್ಲಾ ಗವೆರ್ನೆರ್ ಕಾರ್ಯಕ್ರಮಗಳ ಸಂಯೋಜಕ ಲಯನ್ ವಿ.ಜಿ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಸಾದ್ ನೆತ್ರಾಲಯದ ನೇತ್ರ ತಜ್ಞ ಡಾ ಅಕ್ಷಯ್, ನಾಗರಾಜ್ ಗಾಣಿಗ, ಶರತ್ ಕುಮಾರ್ ಶೆಟ್ಟಿ, ಮೊಹಮ್ಮದ್ ಹನಿಫ಼್, ದಿನಕರ ಶೆಟ್ಟಿ ಮುಖ್ಯ ಉಪಸ್ಥಿತರಿದ್ದರು. ಬೈಂದೂರು ಉಪ್ಪುಂದ ಲಯನ್ಸ್ ಅಧ್ಯಕ್ಷ ಡಾ. ವೆಂಕಟೇಶ ಉಪ್ಪುಂದ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಲಯನ್ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಲಯನ್ ದಿವಾಕರ್ ಶೆಟ್ಟಿ ವಂದಿಸಿದರು ಮುನ್ನೂರು ಮಂದಿ ಶಿಬಿರದ ಸದುಪಯೊಗ ಪಡೆದುಕೊಂಡರು
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಅವಕಾಶ ಮಾಡಿಕೊಡಬೇಕೆಂದು ಯಕ್ಷಗಾನ ಅಭಿಮಾನಿಗಳು, ಸಮಾನ ಮನಸ್ಕ ಸಂಘ-ಸಂಸ್ಥೆ ಹೋರಾಟಕ್ಕೆ ಅಣಿಯಾಗುತ್ತಿವೆ. ಒಂದೆಡೆ ಯಕ್ಷಗಾನ ಅಭಿಮಾನಿ ರಾಮಕೃಷ್ಣ ಹೇರ್ಳೆ ನೇತೃತ್ವದಲ್ಲಿ ಪತ್ರ ಚಳವಳಿ ಆರಂಭಿಸಿದ್ದರೇ, ಮತ್ತೊಂದೆಡೆ ಕುಂದಾಪುರದಲ್ಲಿ ಯಕ್ಷಾಭಿಮಾನಿಗಳ ಸಮಾವೇಶ ನ.೧೩ ಜರುಗಲಿದೆ. ತಾಲೂಕು ಆಡಳಿತ ಹಿಂದಿನಂತೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೋರಾಟದ ಮಾರ್ಗವನ್ನು ಹಿಡಿಯಬೇಕಾಗುತ್ತದೆ ಎಂಬ ಸಂದೇಶವನ್ನು ಈಗಾಗಲೇ ಯಕ್ಷಾಭಿಮಾನಿಗಳು ರವಾನಿಸಿದ್ದಾರೆ. 6 ತಿಂಗಳು ಕಳೆದರೂ ತಕರಾರು ಪತ್ರಕ್ಕೆ ಉತ್ತರವಿಲ್ಲ. ಕುಂದಾಪುರ ತಹಸೀಲ್ದಾರ್ ಅವರಿಗೆ ಅರ್ಜಿ ಸಮಿತಿ ತಗಾದೆ ಪತ್ರ ಬಂದು ಆರು ತಿಂಗಳು ಕಳೆದರೂ, ತಹಸೀಲ್ದಾರ್ ವಿವರಣೆ ನೀಡಿ ಉತ್ತರಿಸದ ಬಗ್ಗೆ ಯಕ್ಷಗಾನ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದು, ಗಾಯತ್ರಿ ನಾಯ್ಕ್ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಜಿ.ಎಂ.ಬೋರ್ಕರ್ ಬಂದು ಎರಡು ತಿಂಗಳು ಕಳೆದರೂ ಅರ್ಜಿಯನ್ನೇ ನೋಡದಿರಲಿಲ್ಲ. ಪರಿಶೀಲಿಸಿ, ಉತ್ತರ ಬರೆಯುತ್ತೇನೆ ಎನ್ನುವ ಮೂಲಕ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಯಕ್ಷಗಾನ ತಿರುಗಾಟ ಆರಂಭವಾಗಿದ್ದು,…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಇಲ್ಲಿನ ಚಿತ್ತೂರು ಗ್ರಾ.ಪಂ ವ್ಯಾಪ್ತಿಯ ವಂಡ್ಸೆ ನಂದ್ರೊಳ್ಳಿ ರಸ್ತೆ ಬಳಿಯ ನ್ಯಾಗಲ ಮನೆ ಕಿಂಡಿ ಅಣೆಕಟ್ಟಿಗೆ ಹಾಕಲಾದ ಫೈಬರ್ ಹಲಗೆಯ ಬದಿ ಒಡೆದು ನೀರು ಹರಿದು ಹೋಗುತ್ತಿದ್ದು, ಕೃಷಿಕಾರ್ಯಕ್ಕಾಗಿ ನಿಲ್ಲಿಸಲಾಗಿದ್ದ ನೀರು ಪೋಲಾಗುತ್ತಿದೆ. ಕಳೆದ ವರ್ಷ ಈ ಕಾಮಾಗಾರಿಯನ್ನು ಆರಂಭಿಸಲಾಗಿತ್ತು. ಈಗ ಈ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಮಂಗಳವಾರದಂದು ಈ ಅಣೆಕಟ್ಟಿನ ಕಿಂಡಿಗೆ ಪೈಬರ್‌ನ ಹಲಗೆಗಳನ್ನು ಅಳವಡಿಸಲಾಗಿತ್ತು. ಆದರೆ ಫೈಬರ್ ಹಲಗೆ ಹಾಕಿದ ಮೂರೇ ದಿನದಲ್ಲಿ ಫೈಬರ್‌ನ ಒಂದು ಭಾಗ ಒಡೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿಗೆ ಐದು ವರ್ಷಗಳ ಕಾಲ ನಿರ್ವಹಣೆ ಹೊಣೆಯಿದ್ದು, ಐದು ವರ್ಷಗಳ ಕಾಲ ಏನೆ ಸಮಸ್ಯೆ ಬಂದರೂ ಅದರ ನಿರ್ವಹಣೆ ನಮ್ಮದಾಗಿರುತ್ತದೆ. ಈಗ ಅಳವಡಿಸಲಾದ ಫೈಬರ್ ಹಲಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಇದರ ಸಾಮರ್ಧ್ಯವನ್ನು ಅರಿಯುವ ಉದ್ದೇಶವನ್ನು ಹೊಂದಿ ಅಳವಡಿಸಲಾಗಿದೆ. ಇದು ಯಶಸ್ವಿಯಾಗದ ಹಿನ್ನೆಲೆ ಇದಕ್ಕೆ ಬೇರೆ ಸದೃಡ ಹಲಗೆಯನ್ನು ಅಳವಡಿಸುತ್ತೇವೆ. – ಕಾಮಗಾರಿ ನಡೆಸಿದ ಗುತ್ತಿಗೆದಾರ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಇಬಿಎಸಿ ತರಗತಿಯ ವಿದ್ಯಾರ್ಥಿ ನಾಗೇಂದ್ರ ಮೊಗವೀರ ಅವರು ಚಿಕ್ಕಬಳ್ಳಾಪುರದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ತ್ರೋಬಾಲ್‌ನಲ್ಲಿ ಜಯಗಳಿಸುವ ಮುಖೇನ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಕರ್ನಾಟಕದ ಪರವಾಗಿ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಅವರು ಮಾರ್ಗದರ್ಶನ ನೀಡಿದ್ದರು.ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಉಪನ್ಯಾಸಕ ಮತ್ತು ಸಿಬ್ಬಂದಿವರ್ಗ ಇಬ್ಬರ ಸಾಧನೆಯನ್ನು ಅಭಿನಂದಿಸಿದೆ. ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಯಚೂರಿನಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಎದುರಿಸುತ್ತಿರುವ ಫ್ರೌಡಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕುಂದಾಪುರ ವಿವಿಧ ಕಾಲೇಜಿನ ಎಬಿವಿಪಿ ಮುಂದಾಳುಗಳು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶಿಕ್ಷಣ ಸಚಿವರಾಗಿದ್ದುಕೊಂಡೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಆಘಾತಕಾರಿಯಾಗಿದ್ದು ಕೂಡಲೇ ನೈತಿಕ ಹೊಣೆ ಹೊತ್ತು ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಮನವಿ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರಕ್ಕೆ ಆರಂಭಕ್ಕೆ ಕೆಲವೊಂದು ಸಮಸ್ಯೆಗಳು ಎದುರಾಗಿದ್ದು, ಅದನ್ನು ಸರಿಪಡಿಸಿ ವಿದ್ಯುತ್ ಕೇಂದ್ರದ ಕಾರ್ಯಾಚರಣೆಗೆ ಆರಂಭಿಸಲಾಗಿದೆ. ಅತಿ ಹೆಚ್ಚು ಆದಾಯ ಬರುತ್ತಿರುವ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯುಂಟಾಗದೆ ಉತ್ತಮ ರೀತಿಯಲ್ಲಿ ವಿದ್ಯುತ್ ವಿತರಣೆ ಮಾಡಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್‌ಗಂಗೊಳ್ಳಿ ಬಳಿ ನಿರ್ಮಾಣಗೊಂಡಿರುವ ಗಂಗೊಳ್ಳಿ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ವಿದ್ಯುತ್ ವಿತರಣಾ ಕೇಂದ್ರ ಕಾರ್ಯಾರಂಭ ಮಾಡಲು ಬಹಳಷ್ಟು ಪ್ರಯತ್ನಗಳು ನಡೆದಿದೆ. ಎಲ್ಲರ ಪ್ರಯತ್ನದ ಫಲವಾಗಿ ಗಂಗೊಳ್ಳಿ ವಿದ್ಯುತ್ ವಿತರಣಾ ಕೇಂದ್ರ ಜನರ ಸೇವೆಗೆ ಲಭ್ಯವಾಗಿದ್ದು, ಅಧಿಕಾರಿಗಳು ಈ ಕೇಂದ್ರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ…
