Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಸಾಂಸ್ಕೃತಿಕ ಕಲಾಕುಟುಂಬ ’ಲಾವಣ್ಯ’ದ ೪೦ನೇ ವರ್ಷಾಚರಣೆಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಡಿ. ಪಡುವರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ದೇವಾಡಿಗ ಕೆರೆಕಟ್ಟೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಉಪಾಧ್ಯಕ್ಷರಾಗಿ ಸುನಿಲ್ ಕುಮಾರ್, ಬಾಲಕೃಷ್ಣ ಬೈಂದೂರು, ದಿನಕರ್ ಹೋಬಳಿದಾರ್, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಕಾಶ್, ಬಿ. ಕೃಷ್ಣಮೂರ್ತಿ ಕಾರಂತ್, ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಸಂಚಾಲಕರಾಗಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ಟರ್) ಹುಂಚನಿ ಇವರನ್ನು ಆಯ್ಕೆ ಮಾಡಲಾಯಿತು. ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿ ಡಾ. ಎಚ್. ಶಾಂತಾರಾಮ ಮಣಿಪಾಲ, ಉಪ್ಪುಂದ ಚಂದ್ರಶೇಖರ ಹೊಳ್ಳ, ಬಾಲಚಂದ್ರ ವಿ. ಆರ್., ಪಿ. ಸುಖಾನಂದ ಶೆಟ್ಟಿ, ಅನಿಲ್ ಕುಮಾರ್ ಶ್ಯಾನುಭಾಗ್, ಉಪ್ಪುಂದ ವೆಂಕಟೇಶ ಪ್ರಭು, ಕಂಚಿಕಾನ್ ರವೀಂದ್ರ ಕಿಣಿ, ರಾಜೇಂದ್ರ ಕೆ. ಹೆಜ್ಜಾಲ್, ಡಾ. ಎ.ಎಸ್.ಉಡುಪ, ಗುರುರಾಜ್ ರಾವ್, ಬಿ. ಉಮೇಶ ಕುಮಾರ್, ಅಶೋಕ ಕುಮಾರ್ ಬಾಡ ಆಯ್ಕೆಯಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ್. ಬಿ. ದಾವೆ ಹಾಗೂ ಅವರ ಪತ್ನಿ ಮೀನಾ ಎ. ದಾವೆ ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಮಾಜಿ ಸಚಿವರನ್ನು ದೇವಳದವತಿಯಿಂದ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೆದೂರು ಸ್ಪೂರ್ತಿಧಾಮದಲ್ಲಿ ಮಹಾತ್ಮ ಗಾಂದೀಜಿಯವರ ಜನ್ಮದಿನದ ಪ್ರಯುಕ್ತ ಒಂದು ದಿನದ ವಿಶೇಷ ಸ್ವಚ್ಚತಾ ಕಾರ್ಯಕ್ರಮ ಮತ್ತು ಶ್ರಮದಾನವನ್ನು ಬೈಂದೂರು ಸರಕಾರಿ ಪ್ರಥಮ ದರ್ಜಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ ರೆಂಜರ‍್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ  ನಡೆಯಿತು. ಸ್ಪೂರ್ತಿ ಸಂಸ್ಥೆಯ ರೂವಾರಿ ಡಾ. ಕೇಶವ ಕೋಟೇಶ್ವರ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೋ ಬಿ. ಎ. ಮೇಳಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಎನ್‌ಎಸ್‌ಎಸ್ ಯೋಜನಾಧಿಕಾರಿ ರವಿಚಂದ್ರ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯಶಾಸ್ತ್ರ ವಿಭಾಗ ಉಪನ್ಯಾಸಕ ವೆಂಕಟರಮಣ, ವಾಣಿಜ್ಯಶಾಸ್ತ್ರ ವಿಭಾಗ ಜ್ಯೋತಿ, ವಾಣಿಜ್ಯಶಾಸ್ತ್ರ ವಿಭಾಗ ಶ್ವೇತಾ ಮತ್ತು ಇತರೇ ವಿಭಾಗದ ಉಪನ್ಯಾಸಕ ವೃಂದದವರು ಸಹಕರಿಸಿದರು. ಕಾಲೇಜಿನ ರೋವರ್ ಮತ್ತು ರೆಂಜರ‍್ಸ್ ಘಟಕದ ಅಧಿಕಾರಿ ನಾಗೇಶ್ ವಂದಿಸಿದರು. ಶಿಬಿರಾರ್ಥಿ ಸಂಪ್ರೀತ್ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಛಾಯಾಚಿತ್ರಕಾರ ನಿತೀಶ್ ಪಿ. ಬೈಂದೂರು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೇ ಛಾಯಾಗ್ರಹಣ ಕ್ಷೇತ್ರದಲ್ಲಿ ತೋರುತ್ತಿರುವ ಸಾಧನೆಯನ್ನು ಪರಿಗಣಿಸಿ ಇತ್ತಿಚಿಗೆ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಸಹಕಾರದಲ್ಲಿ ಡಾ| ಕೋಟ ಶಿವರಾಮ ಕಾರಂತರ ನೆನಪಲ್ಲಿ ಮಿತ್ರಮಂಡಳಿ ಕೋಟ ಆಯೋಜಿಸಿದ ವಿಂಶತಿ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ‘ಡಾ. ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ’ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನಕ್ರೆ ಜಾರ್ಜ್ ಕ್ಯಾಸ್ತೆಲಿನೋ, ಮಹಮ್ಮದಾಲಿ ಅಬ್ಬಾಸ್, ಶ್ರೀವರ್ಮ ಅಜ್ರಿ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಗಿರಿಧರ ನಾಯಕ್, ಯೋಗೀಶ್ ಡಿ.ಎಚ್, ಸಮದ್ ಖಾನ್, ಪಂಚಮಿ ಮಾರೂರು, ರಕ್ಷಾ ಆರ್.ಶೆಣೈ, ಆಶ್ವಿತಾ ಎಂ. ಉಪಸ್ಥಿತರಿದ್ದರು. ಪತ್ರಕರ್ತ, ಸಂಘಟಕ ಶೇಖರ ಅಜೆಕಾರು ಕಾರ್ಯಕ್ರಮ ಸಂಘಟಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಉಡುಪಿ, ಭಂಡಾರ್‌ಕಾರ್ಸ್ ಕಾಲೇಜ್ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ಗುರುವಾರ ಜರಗಿತು. ರಾಜ್ಯ ಮೀನುಗಾರಿಕೆ, ಯುವಜನ ಸಬಲೀಖರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಮಣಿಪಾಲ ಎಕಾಡಮಿ ಆಪ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಭಂಡಾರ್‌ಕಾರ್ಸ್ ಕಾಲೇಜ್ ಪ್ರಾಮಶುಪಾಲ ಡಾ.ನಾರಾಯಣ ಶೆಟ್ಟಿ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪದನಿಮಿತ್ತ ಸಹ ನಿರ್ದೇಶಕ ನಾಗೇಂದ್ರ ಮಧ್ಯಸ್ಥ ಎಸ್., ಉಪಸ್ಥಿತರಿದ್ದರು. ಡಯಟ್ ಉಡುಪಿ ಪ್ರಾಂಶುಪಾಲ ಹಾಗೂ ಉಪನಿರ್ದೇಶಕ ಶೇಖರ್ ಸ್ವಾಗತಿಸಿದರು, ವಡೇರಹೋಬಳಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.ಉಪ ಪ್ರಾಂಶುಪಾಲ ಚಂದ್ರಶೇಖರ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾದಾನದಷ್ಟೇ ರಕ್ತದಾನ ಶ್ರೇಷ್ಠವಾದುದು. ಜಾತಿ, ಮತ ಬೇಧವಿಲ್ಲದೆ ರಕ್ತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಕರಾವಳಿ ಪರಿಸರದಲ್ಲಿ ರಕ್ತದಾನಕ್ಕೆ ಹೊಸ ಆಯಾಮ ನೀಡುತ್ತಿರುವ ಹಾಗೂ ಆರೋಗ್ಯಕ್ಕೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ನಾಡೋಜ ಡಾ. ಜಿ. ಶಂಕರ್‌ರವರ ಪ್ರಯತ್ನ ಉಲ್ಲೇಖನೀಯ. ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆಯಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿ ಹೇಳಿದರು. ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮೊಗವೀರ ಯುವ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಆಡಳಿತ ಉಡುಪಿ, ಕೆ.ಎಂ.ಸಿ. ಆಸ್ಪತ್ರೆ ರಕ್ತನಿಧಿ ಮಣಿಪಾಲ ಸಹಯೋಗದಲ್ಲಿ ಬುಧವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾಲೇಜ್ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಮೊಗವೀರ ಯುವ ಸಂಘಟನೆ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ನನಗೆ ದೂರು ಕೊಡಿ. ಸಾರ್ವಜನಿಕರು ಯಾರೇ ಅರ್ಜಿ, ಮನವಿ ಸಲ್ಲಿಸಿದರೂ ತಿಂಗಳೊಳಗೆ ಅವರ ಸಮಸ್ಯೆ ಪರಿಹಾರ ಮಾಡಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಾಕೀತು ಮಾಡಿದ್ದಾರೆ. ಅವರು ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲತ್ತು ವಿತರಿಸಿ ಮಾತನಾಡುತ್ತಿದ್ದರು. ಸರಕಾರದ ವ್ಯವಸ್ಥೆ ಹಾಗೂ ಸೌಲಭ್ಯಗಳು ನಾಗರಿಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಸಭೆ ನಡೆಸಲಾಗುತ್ತದೆ. ರಾಜ್ಯ ಸರಕಾರ ಜನ ಕಲ್ಯಾಣಕ್ಕಾಗಿ ಹಲವಾರು ಯೋಜನೆ ನೀಡಿದ್ದು, ಅದನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ಸಾಮಾನ್ಯರ ಕೆಲಸಗಳಿಗೆ ಲಂಚ ಕೇಳಿದರೆ ಸುಮ್ಮನಿರೋದಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗೆ ಶೀಘ್ರ ಸ್ಪಂದಿಸುವಂತೆ ಸೂಚಿಸಿದರು. ಇದೇ ಸಂಸರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ವಿತರಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ. ಶ್ರೀಲತಾ ಸುರೇಶ್ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾರ್ಕಳ: ಅವಕಾಶಗಳೇ ಭಾಗ್ಯದ ಬಾಗಿಲು, ನಾನು ಕೂಡಾ ಸಿಕ್ಕಿದ ಅವಕಾಶ ಬಳಸಿಕೊಂಡು ರಾಷ್ಟ್ರಪತಿಗಳ ವರೆಗೆ ಹೋಗಲು ಹಿರಿಯ ಆಶೀರ್ವಾದ ಪ್ರೇರಣೆಯೇ ಕಾರಣ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಪಂಚಮಿ ಮಾರೂರು ಹೇಳಿದರು. ಅವರು ಕಾರ್ಕಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಮಿತ್ರ ಮಂಡಳಿ ಕೋಟ ಅರ್ಪಿಸಿದ ಐದು ಜಿಲ್ಲಾ ವ್ಯಾಪ್ತಿಯ 20 ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾನಧ್ಯಕ್ಷೆ ಅನುಜ್ಞಾ ಭಟ್ ಅವರನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಿತ್ರ ಮಂಡಳಿ, ಕೋಟ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸ್‌ನೆಸ್ ಮ್ಯಾನೇಜ್‌ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿದ್ದವು. ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಂಸ್ಕೃತಿಯತ್ತ ವಿಶೇಷ ಒಲವನ್ನು ತೋರಿಸ ಬೇಕು. ಹಳೆಬೇರು ಆಗಿರುವ ಹಿರಿಯರ ಮಾರ್ಗದರ್ಶನದೊಂದಿಗೆ ಬೆಳೆಯುವ ಹೊಸ ಚಿಗುರಾಗಿ ಬೆಳದು ಬೆಳಗ ಬೇಕು ಎಂಧು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿಯ ಸನ್ನಿಧಿಯಲ್ಲಿ ಇಂದು ಚಂಡಿಕಾ ಹವನ ಜರಗಿತು. ವೇದಮೂರ್ತಿ ದಾಮೋದರ ಆಚಾರ್ಯ ನೇತೃತ್ವದಲ್ಲಿ ಹವನದ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿ, ಹರಕೆ ಸೀರೆಗಳ ಏಲಂ, ಶ್ರೀದೇವರಿಗೆ ಮಹಾಪೂಜೆ ಬಳಿಕ ಗ್ರಾಮ ಪುರುಷ ದರ್ಶನ ಸೇವೆ ಮತ್ತು ಮಹಾಸಮಾರಾಧನೆ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಸೇವಾದಾರರು, ಭಕ್ತರು ಹಾಗೂ ಊರಿನ ಹತ್ತು ಸಮಸ್ತರು ಹವನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಪತ್ನಿ ಸಮೇತರಾಗಿ ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚಂಡಿಕಾಹೋಮ ಸೇವೆ ಮಾಡಿಸಿದರು. ಈ ಸಂದರ್ಭ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ದಂಪತಿಗಳು, ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ದಂಪತಿಗಳು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ, ಕ್ಷೇತ್ರ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ತೋಳಾರ್ ಕೊಲ್ಲೂರು, ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಂಚನೂರು ರವಿ ಗಾಣಿಗ ಮತ್ತಿತರರು ಜತೆಯಲ್ಲಿದ್ದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಮಾಜಿ ಸಚಿವರನ್ನು ದೇವಳದವತಿಯಿಂದ ಗೌರವಿಸಿದರು.

Read More