ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಇಂಡಿಯಾ ಲಿಟ್ರಸಿ ಮಿಷನ್ ಅಡಿಯಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಕುಂದಾಪುರ ಸರಕಾರಿ ಪ. ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಅರುಣಕುಮಾರ್ ಶೆಟ್ಟಿಯವರಿಗೆ ಪ್ರಧಾನಿಸಲಾಯಿತು. ಸನ್‌ರೈಸ್ ಕ್ಲಬ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರೋಟರಿ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿದು. ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್. ಮಂಜುನಾಥ ಸನ್ಮಾನಿತರನ್ನು ಪರಿಚಯಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ ಕುಮಾರ ಶೆಟ್ಟಿಯವರು ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಯ ಈ ಗೌರವ, ನನ್ನನ್ನು ಇನ್ನಷ್ಟು ಹೆಚ್ಚು ಪಾವಿತ್ರ್ಯತೆಯಿಂದ ಶಿಕ್ಷಕ ವೃತ್ತಿ ನಿಭಾಯಿಸಲು ಪ್ರೇರಣೆ ನೀಡಿದೆ ಎಂದರು. ಕಾರ್ಯದರ್ಶಿ ನಾಗೇಶ ನಾವುಡ ವಂದಿಸಿದರು. ಸದಸ್ಯರಾದ ಸದಾನಂದ ಉಡುಪ, ಉಲ್ಲಾಸ ಕ್ರಾಸ್ತ, ಬಿ.ಎಂ. ಚಂದ್ರಶೇಖರ, ಸತೀಶ ಎನ್. ಶೇರೆಗಾರ್, ಎಲ್.ಜೆ. ಫೆರ್ನಾಂಡೀಸ್, ಕೆ.ಹೆಚ್. ಚಂದ್ರಶೇಖರ, ಗಜಾನನ ಭಟ್, ಕಲ್ಪನಾ ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಬಿಲ್ಲವ ಸಮಾಜ ಸೇವಾ ಸಂಘ ಇದರ ಇಧೀನ್ ಘಟಕ ಕುಂದಾಪುರ ತಾಲೂಕು ಬಿಲ್ಲವ ಮಹಿಳಾ ಘಟಕ ಎರಡು ವರ್ಷ ಅಧಿಗೆ ಅಧ್ಯಕ್ಷೆಯಾಗಿ ಕುಂದಾಪುರ ಲಯನೆಸ್ ಕ್ಲಾಬ್ ಮಾಜಿ ಅಧ್ಯಕ್ಷಕೆ ವೀಣಾ ರಾಜೀವ ಕೋಟ್ಯಾನ್ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರು-ಪ್ರೇಮಾ ಆನಂದ್, ಅನುಪಮಾ ಕಿಶೋರ್, ಕುಸುಮಾ ಗೋಪಾಲ್, ಗಿರಿಜಾ ಮಾಣಿ ಗೋಪಾಲ್, ಕಾರ‍್ಯದರ್ಶಿ-ಸೀಜಾ ಸುರೇಶ್ ಸಾಲ್ಯಾನ್, ಜೊತೆ ಕಾರ‍್ಯದರ್ಶಿ-ಸುನೇತ್ರಾ ಸತೀಶ್ ಕೋಟ್ಯಾನ್, ಖಜಾಂಚಿ-ಶೋಭಾ ಮೋಹನ್ ಪೂಜಾರಿ, ಕ್ರೀಡಾ ಕಾರ‍್ಯದರ್ಶಿ-ಗುಲಾಬಿ ಜಯಸೂರ್ಯ, ಕಮಲಾ ಶ್ರೀನಿವಾಸ್, ಶೋಭಾ ಬಸವ ಪೂಜಾರಿ, ಶೈಲಾ ಗಂಗಾಧರ್, ಸಾಂಸ್ಕೃತಿಕ ಕಾರ‍್ಯದರ್ಶಿ-ಸುಗುಣಾ ಮಹಾಬಲ, ಲಲಿತಾ ಭಾಸ್ಕರ್, ಶರ್ಮಿಳಾ, ಸುಧಾ ರತ್ನಾಕರ್, ಸಂಘಟನಾ ಕಾರ‍್ಯದರ್ಶಿ-ಕಾವೇರಿ, ಸುಶೀಲಾ, ಆನಂದಿ, ಸುಶೀಲಾ ಶಂಕರ್, ಗೌರವ ಸಲಹೆಗಾರರು-ಕುಂದಾಪುರ ಪುರಸಭೆ ಕೌನ್ಸಿಲರ್ ಗುಣರತ್ನಾ, ಗೋಪಾಡಿ ಗ್ರಾಪಂ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಹೇಮಾ ಬಾಬು ಪೂಜಾರಿ, ಕುಂಭಾಶಿ ಗ್ರಾಪಂ ಸದಸ್ಯೆ ರಾಧಾದಾಸ್, ಲಲಿತಾ ಸುವರ್ಣ, ಶಶಿಕಲಾ ಬಿಜೂರು ಆಯ್ಕೆ ಆಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಬಿ. ಪ್ರಕಾಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸೀತಾರಾಮ್ ಹೇರಿಕುದ್ರು, ಉಪಾಧ್ಯಕ್ಷರಾಗಿ ರಾಜ ಮಠದಬೆಟ್ಟು, ಕಾರ್ಯದರ್ಶಿಯಾಗಿ ರಮೇಶ ಮಕ್ಕಿ ಹಳೆಅಳಿವೆ, ಜೊತೆ ಕಾರ್ಯದರ್ಶಿಯಾಗಿ ಶರತ್ ಕೋಟೇಶ್ವರ, ಲೆಕ್ಕ ಪರಿಶೋಧಕರಾಗಿ ಸಂತೋಷ ಕೋಟೇಶ್ವರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧೀರ್ ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಮುಖ್ಯ ಸಲಹೆಗಾರರಾಗಿ ಚಂದ್ರಶೇಖರ, ಕರುಣಾಕರ, ಜನಾರ್ಧನ, ಸುರೇಶ ರೋಯಲ್, ನಾಗರಾಜ, ಸದಸ್ಯರಾಗಿ ಗಣೇಶ ಡಿ. ನಾಯಕ್, ಸುಧೀರ್ ಬಿ. ಕುಂದರ್, ರತ್ನಾಕರ ಗಾಣಿಗ, ಅಣ್ಣಯ್ಯ ಹೋಬಳಿದಾರ್, ಗಣೇಶ ವಡೇರಹೋಬಳಿ, ರಘು, ಕಿರಣ್ ಮೆಂಡನ್, ನಿತ್ಯಾನಂದ, ವಿಜೇಂದ್ರ, ಪ್ರಜ್ವಲ್, ದೀಕ್ಷಿತ್, ಪವನ್, ರಂಜಿತ್, ರಾಜೇಂದ್ರ ಶೇಟ್, ರಾಘವೇಂದ್ರ ಕೋಟೇಶ್ವರ, ವೀಣಾ ಪ್ರಕಾಶ, ವಿನಯ ಹೇರಿಕುದ್ರು, ಪೂರ್ಣಿಮಾ ಕೋಟೇಶ್ವರ, ಸುಶೀಲ ಮರವಂತೆ, ರತ್ನ ಕೋಟೇಶ್ವರ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಕಾಲಘಟ್ಟದಲ್ಲಿ ಸರಕಾರ ಕ್ರೀಡೆಗೆ ನೀಡುತ್ತಿರುವ ಬೆಂಬಲ ಬಹಳ ಕಡಿಮೆ. ಆ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಉಪ್ಪುಂದ ಯುವ ಉದ್ಯಮಿ ಬಿ.ಎಸ್ ಸುರೇಶ ಶೆಟ್ಟಿ ಹೇಳಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಎಜುಕೇಶ್ನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ, ನಮ್ಮ ನಾಲ್ಕು ಸಂಸ್ಥೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಪ್ರಾಮುಖ್ಯತೆ ನೀಡುತ್ತಿದು, ವಿದ್ಯಾರ್ಥಿಗಳು ಸಂಸ್ಥೆ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆ ಎಂದರು. ಕುಂದಾಪುರ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಚಟುವಟಿಕೆಗಳ ಸಂಚಾಲಕ ನಾಗರಾಜ ಶೆಟ್ಟಿ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಬಿ ನಾಯಕ್ ಶುಭಾಶಂಸನೆ ಮಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲೆಲ್ಲೂ ಅಸ್ಪೃಷ್ಯಹತೆ ತಾಂಡವಾಡುತ್ತಿದ್ದ ಕಾಲಘಟ್ಟದಲ್ಲಿ ಅವರ್ಣಿಯರು ದೇವಸ್ಥಾನ ಪ್ರವೇಶ ನಿಷೇಧ ನಡುವೆಯೂ ದೇವಸ್ಥಾನಗಳ ಸ್ಥಾಪಿಸಿ, ಮೌನ ಕ್ರಾಂತಿ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿದ ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಕುಂದಾಪುರ ತಾಲೂಕು ಆಡಳಿತ, ರಾಷ್ರೀಯ ಹಬ್ಬಗಳ ದಿನಾಚರಣಾ ಸಮಿತಿ, ಕುಂದಾಪುರ ತಾಲೂಕು ಪಂಚಾಯತ್ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ, ಮಾತನಾಡುತ್ತಿದ್ದರು. ಶ್ರೀ ನಾರಾಯಣ ಗುರು ಬಿಲ್ಲವ ಸಮುದಾಯಕ್ಕೆ ಸೀಮಿತವಾಗಿರದೆ, ದೀನ-ದಲಿತರ, ಹಿಂದುಳಿದವರ ಗುರುವಾಗಿದ್ದರು. ಶಿಕ್ಷಣಿಕ, ಸಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ಮೂಲಕ ಸಮಾಜಕ್ಕೆ ಸಮಾನತೆ ಸಾರಾ ಬೋಧಿಸಿದರು. ಅವರ ತತ್ವ ಸಿದ್ದಾಂತ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸರಕಾರ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಅಭಿನಂದೀಯ ಎಂದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಬಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಸರ್ವರ ಹಿತವೂ ಅಡಗಿದೆ.ಮಾನವೀಯತೆಯ ಬಾಷೆ ನಮ್ಮದಾಗಬೇಕು.ಸಾಹಿತ್ಯದಿಂದ ಮಹಾಮಾನವರಾಗುವ ಚಮತ್ಕಾರ ಸಾಧ್ಯವಿದೆ. ಮಾತೃಬಾಷೆಯ ಮೇಲಿರುವಷ್ಟೆ ಗೌರವ ಅಭಿಮಾನ ರಾಷ್ಟ್ರಬಾಷೆಯ ಬಗೆಗೆ ಕೂಡ ಇರಬೇಕು ಎಂದು ಕುಂದಾಪುರದ ಭಂಡಾರ್‌ಕರ‍್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಎಮ್. ಗೊಂಡ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ಭಾರತ ಸರಕಾರದ ಯುವ ಕಾರ‍್ಯಾಲಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ (ರಿ)ಗಂಗೊಳ್ಳಿ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ನಮ್ಮ ದೇಶ ಭಾಷೆಯನ್ನು ಉಳಿಸುವ ಕಾಯುವ ಸೈನಿಕರನ್ನು ಸ್ಮರಿಸಿಕೊಳ್ಳಬೆಕು ಅವರ ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಅವರು ಹೇಳಿದರು, ಸರಸ್ವತಿ ವಿದ್ಯಾಲಯದ ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ,ಯುವಕ ಮಂಡಲದ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವೃತಾಚರಣೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಕೋಟಿ ತೀರ್ಥದಲ್ಲಿ ಗಂಗಾಪೂಜೆ, ಶೇಷಪೂಜೆ, ನಂತರ ಅನಂತ ಕಲಶವನ್ನು ಪುರಮೆರವಣಿಗೆಯೊಂದಿಗೆ ದೇವಳಕ್ಕೆ ತಂದು ಸ್ಥಾಪಿಸಿ ಕಲ್ಪೋಕ್ತ ಪೂಜೆ,ಗ್ರಂಥಿ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಚತುರ್ದಶ ನಮಸ್ಕಾರಗಳು,ಮಹಾ ಸಂತರ್ಪಣೆ ನಡೆದವು. ರಾತ್ರಿ ಅಷ್ಟಾವಧಾನ ಸೇವೆ ಜರಗಿತು. ಧಾರ್ಮಿಕ ವಿಧಿವಿಧಾನ ದೇವಳದ ಅರ್ಚಕರಾದ ವೇ.ಮೂ.ಶ್ರೀನಿವಾಸ ಭಟ್ ಹಾಗೂ ವೇ.ಮೂ.ಪ್ರಶಾಂತ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಈ ಸಂಧರ್ಭದಲ್ಲಿ ದೇವಳದ ಮೋಕ್ತೇಸರರು,ಹತ್ತು ಸಮಸ್ತರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು. ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶೀ ವೃತಾಚರಣೆಯಂದು ಅಲಂಕೃತ ದೇವರು.
ಕುಂದಾಪ್ರ ಡಾಟ್ ಕಾಂ ಮಾಹಿತಿ. ಉದ್ಯೋಗಾಕಾಂಕ್ಷಿಗಳ ಬಹು ನಿರೀಕ್ಷಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 (ಜಿಪಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್ 15, 2016 ಶುಲ್ಕ ಪಾವತಿಸಲು ಕೊನೆ ದಿನ: ಅಕ್ಟೋಬರ್ 18, 2016 ಸಹಾಯವಾಣಿ: 080-23460460 ಮಾಹಿತಿಗೆ : http://kea.kar.nic.in 815 ಪಂಚಾಧಿಯಿತಿ ಅಭಿವೃದ್ಧಿ ಅಧಿಧಿಕಾರಿ (ಪಿಧಿಡಿಒ) ಮತ್ತು 809 ಗ್ರಾ.ಪಂ. ಕಾರ್ಯಧಿದರ್ಶಿ ಗ್ರೇಡ್-1 ಹುದ್ದೆ ಸೇರಿ ಒಟ್ಟು 1624 ಹುದ್ದೆಗಳನ್ನು ಸ್ಪರ್ಧಾಧಿತ್ಮಕ ಪರೀಕ್ಷೆ ಮೂಲಕ ನೇರ ನೇಮಧಿಕ ಮಾಡಿಕೊಳ್ಳಲಾಗುತ್ತಿದೆ. ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹುದ್ದೆಗಳ ಜಿಲ್ಲಾವಾರು ಹಂಚಿಕೆ: ಒಟ್ಟು 815 ಪಿಡಿಒ ಹುದ್ದೆಗಳ ಪೈಕಿ 177 ಹುದ್ದೆಗಳನ್ನು ಹೈದರಬಾದ್ ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ. ಅಂತೆಯೇ 809 ಗ್ರಾ.ಪಂ. ಕಾರ್ಯದರ್ಶಿ ಹುದ್ದೆಗಳಲ್ಲಿ 171ಹುದ್ದೆಗಳನ್ನು ಹೈದರಬಾದ್ -ಕರ್ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕುಸುಮಾ ಫೌಂಡೇಶನ್ ಆಯೋಜಿಸಲಾಗುತ್ತಿರುವ ವಿನೂತನ ಕಾರ್ಯಕ್ರಮ ‘ಗಾನಕುಸುಮ – 2016’ ಸಂಗೀತ ಸ್ವರ್ಧೆಯ ನೊಂದಾವಣಿಗೆ ಪ್ರತಿ ವರ್ಷದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಕುಂದಾಪುರ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸಂಗೀತದ ಬಗೆಗೆ ಸಾಮಾನ್ಯ ಜ್ಞಾನ, ಅಭಿರುಚಿ ಹಾಗೂ ಆಸಕ್ತಿ ಇರುವ 20ರ ವಯೋಮಾನದೊಳಗಿನ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿಯ ಚಿತ್ರಗೀತೆಗಳನ್ನು ಹಾಡಲು ಅವಕಾಶವಿದೆ. ಮೂರು ಹಂತಗಳಲ್ಲಿ ಸ್ವರ್ಧೆ ನಡೆಯಲಿದ್ದು ಒಟ್ಟು ಸ್ವರ್ಧಿಗಳಲ್ಲಿ 12 ಮಂದಿಯನ್ನು ಸೆಮಿಪೈನಲ್‌ಗೆ, 6 ಮಂದಿಯನ್ನು ಫೈನಲ್ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಫೈನಲ್‌ನಲ್ಲಿ ಆಯ್ಕೆಯಾದ ಓರ್ವರನ್ನು ‘ಗಾನಕುಸುಮ 2016’ ಎಂದು ಘೋಷಿಸಲಾಗುವುದು ಮತ್ತು ಫೈನಲ್ ಹಂತ ಪ್ರವೇಶಿಸಿದ 6 ಮಂದಿಗೆ ಕುಸುಮಾಂಜಲಿ 2016 ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರೊಂದಿಗೆ ಹಾಡಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 05ನೇ ತಾರೀಕಿನ ಒಳಗಾಗಿ ಶಾಲಾ ಕಾಲೇಜಿನ ಮೂಲಕ ನೀಡಲಾಗಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಜ್ಞಾನಸ್ಫೋಟದ ಯುಗದಲ್ಲಿ ನಾವಿದ್ದೇವೆ. ಈ ಜ್ಞಾನವನ್ನು ಸಮಾಜಕ್ಕೆ ಕೊಡಬೇಕಾದಲ್ಲಿ ಇಂದಿನ ಯುವ ಜನಾಂಗದ ಕರ್ತವ್ಯ. ಈ ನಿಟ್ಟಿನಲ್ಲಿ ಜ್ಞಾನವಂತರಾಗಿ ಬೆಳೆಯಬೇಕು ಎಂದು ಕೋಣಿ ಶಿವಾನಂದ ಕಾರಂತರು ಹೇಳಿದರು. ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಶ್ರೀ ಕಾರಂತರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಜ್ಞಾನಾರ್ಜನೆಯಿಂದ ಮಾತ್ರ ಉತ್ತಮ ಸಮಾಜದ ಸೃಷ್ಟಿ ಸಾಧ್ಯವಿದೆ ಎಂದರು. ನಿವೃತ್ತ ಪ್ರಾಂಶುಪಾಲ, ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಹಿರಿಯ ಉಪನ್ಯಾ ರಮಾಕಾಂತ ರೇವಣ್‌ಕರ್ ಶೈಕ್ಷಣಿಕ ವರ್ಷದ ಎಲ್ಲಾ ಸಕಲ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯ ನಾಗೇಶ್ ಶಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ನಿಶ್ಮಾ ಕಾರ್ಯಕ್ರಮ ನಿರೂಪಿಸಿದರು.
