Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಫಿಲಿಪ್ಸ್ ಲೈಟಿಂಗ್ಸ್‌ನ ಸಂಶೋಧನಾ ಮುಖ್ಯಸ್ಥ ನೆದರ್‌ಲ್ಯಾಂಡ್ಸ್‌ನ ಕ್ಯಾರೆಲ್ ಡ್ರಯೆಲ್ ಲೈಟಿಂಗ್ಸ್‌ನ ಭಾರತದ ಮುಖ್ಯಸ್ಥ ಡಾ. ಐರೋಡಿ ನರೇಂದ್ರನಾಥ ಉಡುಪರ ಜತೆಯಲ್ಲಿ ಗುರುವಾರ ಮರವಂತೆಗೆ ಭೇಟಿ ನೀಡಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನದಿಂದ ಫಿಲಿಫ್ಸ್ ಇಂಡಿಯದ ಸಹಯೋಗದಲ್ಲಿ ಅಲ್ಲಿನ ಹರಿಶ್ಚಂದ್ರ ಮಾರ್ಗಕ್ಕೆ 2014-15ರಲ್ಲಿ ಅಳವಡಿಸಿದ ಕೇಂದ್ರೀಕೃತ ಸೋಲಾರ್ ಬೀದಿದೀಪ ಯೋಜನೆಯ ಪ್ರಸಕ್ತ ಸ್ಥಿತಿಯನ್ನು ಉಭಯರು ಪರಿಶೀಲಿಸಿದರು. ಅದರ ಉಪಯುಕ್ತತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಕೆ. ಎ. ಅನಿತಾ. ಉಪಾಧ್ಯಕ್ಷ ಗಣೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಕೆ. ಎ. ಸುಗುಣಾ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ನರಸಿಂಹ ಶೆಟ್ಟಿ ಮತ್ತು ಎಸ್. ಜನಾರ್ದನ ವ್ಯವಸ್ಥೆಯ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡರು. ಕೇಂದ್ರೀಕೃತ ವ್ಯವಸ್ಥೆಯು ಎಲ್ಲೆಡೆ ಚಾಲ್ತಿಯಲ್ಲಿರುವ ಏಕ ಘಟಕ ವ್ಯವಸ್ಥೆಗಿಂತ ಭಿನ್ನ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸೋಲಾರ್ ಮೊಡ್ಯೂಲ್, ಬ್ಯಾಟರಿ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿಯವರಿಗೆ ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಡುಗೆ ನಡೆಸಲಾಯಿತು. ಭಾರತೀಯ ಜೀವ ವಿಮಾ ನಿಗಮದ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ಅವರು ಕೆ. ಕರುಣಾಕರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ, ಭಾರತೀಯ ಜೀವ ವಿಮಾ ನಿಗಮಕ್ಕೆ ನೀಡಿದ ಸೇವೆಯನ್ನು ಪ್ರಶಂಸಿದರು. ಎಡಿಎಂ ಸುರೇಶ್ ಬಾಬು, ಉಪ ಶಾಖಾಧಿಕಾರಿ ಗುರುರಾಜ್, ಅಭಿವೃದ್ಧಿ ಅಧಿಕಾರಿಗಳಾದ ಗಣೇಶ್ ಅಡಿಗ, ವಿವೇಕ್ ನಾಯಕ್ ಕೆ.ಜಿ. ರಾಜೇಶ್ ನಿವೃತ್ತರನ್ನು ಅಭಿನಂದಿಸಿ ಮಾತನಾಡಿದರು. ಶ್ರೀಮತಿ ರತ್ಯಾ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಗಿರಿಧರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಅರಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ. ವಿವಾಹ ಇಲ್ಲದಿದ್ದರೆ ಕುಟುಂಬ ಕಳಚುವ ಸಾಧ್ಯತೆಗಳಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೧ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳಕಾರ್ಯ, ಶುಭವಿವಾಹವೆಂದು ಸಂಭೋಧಿಸುತ್ತಾರೆ. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೇಸಿಐ ಉಪ್ಪುಂದ ಇವರ ನೇತೃತ್ವದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ’ಗೋ ಗ್ರೀನ್ ವೀಕ್’ ಪರಿಸರ ಸಪ್ತಾಹ ಹೇರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಗೋಕುಲ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ’ಪರಿಸರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಈ ಜಗತ್ತು ಕೇವಲ ಮಾನವನಿಗೆ ಮಾತ್ರ ಸೇರಿದ್ದಲ್ಲ. ಹಾಗಾಗಿ ಪರಿಸರ ಮಾಲಿನ್ಯವನ್ನು ನಿರಂತರವಾಗಿ ಮಾಡುತ್ತಿರುವ ನಾವುಗಳು ಎಚ್ಚೆತ್ತುಕೊಳ್ಳಬೇಕು. ಅರಣ್ಯ ನಾಶದಂತಹ ವಿನಾಶಕಾರಿ ನಡಿಗೆಗಳಿಂದ ಮನುಷ್ಯ ಆರೋಗ್ಯಪೂರ್ಣ ಪರಿಸರಕ್ಕೆ ಕಂಟಕಪ್ರಾಯನಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಅಭಿವೃದ್ದಿ ಎಂಬುವುದು ಪರಿಸರಕ್ಕೆ ಪೂರಕವಾಗಿರಬೇಕೆ ಹೊರತು ಅದನ್ನು ಹಾಳುಗೆಡಹುದಲ್ಲ. ಆಧುನಿಕತೆಯ ಭರಾಟೆಯಲ್ಲಿ ಪ್ರಜ್ಞಾವಂತಿಕೆಯನ್ನು ನಾವುಗಳು ಕಳೆದುಕೊಳ್ಳುತ್ತಿದ್ದೇವೆನೋ ಎನ್ನುವ ಭಾವನೆ ಮೂಡುತ್ತಿದೆ. ಪ್ರಕೃತಿಯನ್ನು ಅನುಸರಿಸಿ ನಡೆದರೆ ಮಾತ್ರ ನಮ್ಮ ಅಸ್ಥಿತ್ವ ಉಳಿಯಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶ್ರೀ ಮಾರಿಕಾಂಬ ಯುತ್ ಕ್ಲಬ್ ಕಳವಾಡಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿರಂತರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ರತ್ತೂಬಾಯಿ ಜನತಾ ಹೈಸ್ಕೂಲಿನ ಮುಖ್ಯೋಪಧ್ಯಾಯ ಜಿ.ಎಸ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೈಂದೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ಗೋವಿಂದ ಪಟವಾಲ್, ಮಹಂತೇಶ್, ರತ್ತೂಬಾಯಿ ಜನತಾ ಹೈಸ್ಕೂಲಿನ ಶಿಕ್ಷಕರಾದ ಆನಂದ ಮದ್ದೋಡಿ, ಮಂಜು ಕಾಳವಾರ್ಕರ್, ಶ್ರೀ ಮಾರಿಕಾಂಬಾ ಯುತ್ ಕ್ಲಬ್ ಅಧ್ಯಕ್ಷ ಕೃಷ್ಣ ಚಂದನ್, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮೀನುಗಾರಿಕೆ ಮಾಡುವ ಸಮಯ ನದಿಯ ತಳದಲ್ಲಿಸಿಲುಕಿಕೊಂಡಿದ್ದ ಬಲೆಯನ್ನು ಬಿಡಿಸಲು ಹೋದ ಮಿನುಗಾರ ಆಯತಪ್ಪಿ ನದಿಗೆ ಉರುಳಿದ ದಾರುಣ ಘಟನೆ ಗಂಗೊಳ್ಳಿ ಪಂಚಗಂಗಾವಳಿಯ ತಟದಲ್ಲಿ ನಡೆದಿದೆ. ಭಟ್ಕಳ ಮೂಲದ ರಾಜೇಶ್ ಖಾರ್ವಿ ಎಂಬವರೇ ಮೃತ ಪಟ್ಟ ದುರ್ದೈವಿ ಯಾಗಿದ್ದು ಕಳೆದ ಕೆಲವು ಸಮಯದಿಂದ ಅವರು ಗಂಗೊಳ್ಳಿ ಗುಡ್ಡಿಕೇರಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಮೀನುಗಾರಿಕೆ ತೆರಳಿದ ಅವರು ಮೀನುಗಾರಿಕೆಯನ್ನು ಮುಗಿಸಿ ಹಿಂತಿರುಗುವಾಗ ನದಿಯ ಆಳದಲ್ಲಿ ಸಿಲುಕಿಕೊಂಡ ಬಲೆಯನ್ನು ಬಿಡಿಸಲುಯತ್ನಿಸಿದಾಗ ಅವಘಡವು ಸಂಭವಿಸಿತ್ತು. ತಕ್ಷಣ ಸಮೀಪದಲ್ಲಿದ್ದ ಇತರ ಮೀನುಗಾರರು ಅವರನ್ನು ರಕ್ಷಿಸಲು ಯತ್ನಿಸದ್ದರೂ ಅದು ಸಾಧ್ಯವಾಗಿರಲಿಲ್ಲಾ ಇಲ್ಲಿ ನೀರು ಅಳವಾದ ಸುಳಿಯನ್ನು ಹೊಂದಿರುವುದರಿಂದ ಅವರ ಮೃತ ದೇಹ ಕೂಡಲೇ ಪತ್ತೆಯಾಗಿರಲಿಲ್ಲ. ಹುಡುಕಾಟ ನಡಸಿದ ಬಳಿಕ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಸೇರಿದಂತೆ ಇತರರು ಭೇಟಿನೀಡಿ ಪರಿಶೀಲಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ವಿಜೇತೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಶ್ಯಾನುಭಾಗ್ ಅವರನ್ನು ಶ್ರೀ ಬಸವೇಶ್ವರ ದೇವಸ್ಥಾನ ಮೇಲ್‌ಗಂಗೊಳ್ಳಿ, ಓಂ ಶ್ರೀ ಮಾತೃ ಮಂಡಳಿ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಇವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗುಜ್ಜಾಡಿಯ ಅವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಮೇಲ್‌ಗಂಗೊಳ್ಳಿ, ಓಂ ಶ್ರೀ ಮಾತೃ ಮಂಡಳಿ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಇವರ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಯು. ರವೀಂದ್ರ ಶ್ಯಾನುಭಾಗ್, ಗೀತಾ ಆರ್.ಶ್ಯಾನುಭಾಗ್, ಮಾಜಿ ಮಂಡಳ ಪ್ರಧಾನ ಬಿ.ಸದಾನಂದ ಶೆಣೈ, ಸಮಾಜಸೇವಕ ಜಿ.ಗಣಪತಿ ಶಿಪಾ, ದೇವಸ್ಥಾನದ ಪ್ರಧಾನ ಅರ್ಚಕ ಜಗದೀಶ ಎಂ.ಜಿ., ದೇವಸ್ಥಾನದ ಅಧ್ಯಕ್ಷ ಶ್ರೀಧರ ಎನ್, ಕಾರ್ಯದರ್ಶಿ ಶಂಕರ ಎಂ.ಜಿ., ಮಾತೃ ಮಂಡಳಿ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ಈಶ್ವರ ಜಿ. ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಲಯದ ಸ. ಹಿ. ಪ್ರಾ. ಶಾಲೆ ವಸ್ರೆ ಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಬೈಂದೂರು ವಿಭಾಗದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು, ಮತು ಶಿಕ್ಷಕ ಗಣಪತಿ ಹೋಬಳಿದಾರ್ ಉದ್ಘಾಟಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ, ಇಂದಿನ ಮಕ್ಕಳೆಲ್ಲಿ ಪೋಷಕರು ಈ ಬಗ್ಗೆ ಜಾಗೃತಿಯನ್ನು ಮೂಡಿಸಿ ಎಂದು ತಿಳಿಸಿದರು . ವಸ್ರೆ ಒಕ್ಕೂಟದ ಅಧ್ಯಕ್ಷರಾದ ರಾಮ ಗಾಣಿಗರವರು ಅಧ್ಯಕ್ಷತೆಯನ್ನು ವಹಿಸಿದರು . ಶ್ರೀ . ಕ್ಷೇ. ಧ . ಗ್ರಾ. ಯೋಜನೆಯ ಮೇಲ್ವಿಚಾರಕರಾದ ಪ್ರಕಾಶ್ರವರು ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ನಮ್ಮ ಪರಿಸರ ಸ್ವಚ್ಚವಾಗಿರುತ್ತದೆಂದು ಪ್ರಾಸ್ತವಿಕ ಮಾತನ್ನು ಆಡಿದರು. ಸಭೆಯಲ್ಲಿ ಶಿಕ್ಷಕರಾದ ವೆಂಕಟೇಶ್‌ರವರು ಒಕ್ಕೂಟದ ಪದಾಧಿಕಾರಿಗಳಾದ ಸುಮಲತಾ, ನಾಗರತ್ನ, ಲಕ್ಷಣ ಗಾಣಿಗ ಉಪಸ್ಥಿತರಿದ್ದರು. ಗ್ರಾಮದ ಸೇವಾಪ್ರತಿನಿಧಿಯಾದ ಶೋಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಗೋಪಾಲ ಪೂಜಾರಿಯವರು ಸ್ವಾಗತಿಸಿದರು, ಮತ್ತು ಸುಬ್ಬಯ್ಯ ಸರ್ವರನ್ನು ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕ್ಷಿತಿಜ ಇಕೋ ಕ್ಲಬ್ ಇವರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಷಿತಿಜ ಇಕೋ ಕ್ಲಬ್‌ನ ಸಂಚಾಲಕಿ ಹಾಗೂ ಶಿಕ್ಷಕಿ ಮುಕ್ತಾ .ಬಿ ನಾಯ್ಕ ಪ್ರಾಸ್ತಾವಿಕ ಭಾಷಣದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗುತ್ತಿದ್ದು ಅವುಗಳನ್ನು ಸುಟ್ಟು ಹಾಕಿದರು ಅದರಿಂದ ಕೆಟ್ಟ ವಾಸನೆಗಳು ನಮ್ಮ ದೇಹಕ್ಕೆ ಹರಡುತ್ತದೆ. ಇದರಿಂದ ನಮಗೆ ನಾನಾ ರೀತಿಯ ಕಾಯಿಲೆಗಳು ಉಂಟಾಗುವ ಸಂಭವ ಇರುತ್ತದೆ ಎಂದರು. ಹಾಗೇ ಇತ್ತೀಚ್ಚಿನ ದಿನಗಳಲ್ಲಿ ಗಿಡಮರಗಳ ಸಂಖ್ಯೆಗಳು ಕಡಿಮೆಯಾಗುತ್ತಿದ್ದು, ಮರಗಿಡಗಳಿಂದ ತಂಪಾದ ಗಾಳಿಗಳಿಂದ ನಮ್ಮ ಮನಸು ಹಗುರ ವಾಗುತ್ತದೆ. ಆದರೆ ಮರಗಿಡ ಇಲ್ಲ. ನಾವೂ ಸಮಾರಂಭಗಳಿಗೆ ಕೊಡುಗೆಗಳನ್ನು ನೀಡುತ್ತೇವೆ ಆದರೆ ಪರಿಸರಕ್ಕೆ ಯಾವುದೇ ಕೊಡುಗೆ ಗಳನ್ನು ನೀಡುವುದಿಲ್ಲಾ, ಅವುಗಳು ಮಾತ್ರ ನಮಗೆ ತಂಪಾದ ಗಾಳಿ, ಹಣ್ಣುಗಳನ್ನು, ಕಾಯಿಗಳನ್ನು ಕೊಡುತ್ತದೆ. ನಾವು ಕನಿಷ್ಟ ಮನೆಗಳಲ್ಲಿ ಒಂದು ಗಿಡಗಳನ್ನು ಬೆಳಸಬೇಕು ಎಂದರು. ಈ ಸಂದರ್ಭದಲ್ಲಿ ಮಂಜುನಾಥ ಪಟಗಾರ್, ಯಶೋಧ ಟೀಚರ್, ಸಂತೋಷ ಭಂಡಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಮನುಷ್ಯನು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಉತ್ತಮ ಆಹಾರವನ್ನು ಸೇವಿಸಿ ಪರಿಸರದ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ಆರೋಗ್ಯ ಭದ್ರತೆ ಮಾಡಿಕೊಳ್ಳಬೇಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ನೀಡಿದೆ ಎಂದು ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಸಂಪೂರ್ಣ ಸುರಕ್ಷಾ ಯೋಜನೆ ಕುರಿತು ಮಾಹಿತಿ ನೀಡಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಸಂಪೂರ್ಣ ಸುರಕ್ಷಾ ಯೋಜನೆ ಕುರಿತು ಮಾಹಿತಿ ನೀಡಿ ಮಾತನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ…

Read More