Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಗಾಣಿಗ ಸೇವಾ ಸಂಘ ಬೈಂದೂರು ಘಟಕ, ಉಪ್ಪುಂದ ಘಟಕ, ಗಂಗೊಳ್ಳಿ ಘಟಕ, ಹೆಮ್ಮಾಡಿ ಘಟಕ, ಬಸ್ರೂರು ಘಟಕ, ಗಾಣಿಗ ಯುವ ಸಂಘಟನೆ ಕೋಟೇಶ್ವರ, ಗಾಣಿಗ ಯುವ ಸಂಘಟನೆ ತೆಕ್ಕಟ್ಟೆ, ಗಾಣಿಗ ಯುವ ಸಂಘಟನೆ ಕುಂದಾಪುರ, ಗಾಣಿಗ ಯುವ ಸಂಘಟನೆ ಆಜ್ರಿ-ನೇರಳಕಟ್ಟೆ ಇವರ ಸಹಕಾರದೊಂದಿಗೆ ಕುಂದಾಪುರ ನವೀಕೃತ ಶ್ರೀ ವ್ಯಾಸರಾಜ ಮಠದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು. ವೇದಮೂರ್ತಿ ವಿಜಯ ಪೇಜತ್ತಾಯ ಧಾರ್ಮಿಕ ವಿಧಿವಿದಾನ ನೆರವೇರಿಸಿದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಜಿ.ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೋಟಲ್ ಉದ್ಯಮಿ ಚಂದ್ರಯ್ಯ ಬೆಂಗಳೂರು, ಮುಂಬೈ ಉದ್ಯಮಿ ವಿಜಯೇಂದ್ರ ಹಾಗೂ ಸಮಾಜ ಭಾಂದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಲಂಬೇರು ಚಂದನ ಸೋಮಲಿಂಗೇಶ್ವರ ಭಜನಾ ಮಂದಿರ ಇಲ್ಲಿನ ತಂಡದವರಿಂದ ಕುಣಿತ ಭಜನೆ ಮತ್ತು ಶ್ರೀನಿವಾಸ ಚೇರ್ಕಾಡಿ ಇವರಿದಂದ ಹರಿಸಂರ್ಕೀತನೆ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಯುವ ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ಹಾಡುಗಳ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬೆಂಗಳೂರಿನ ವಿರಶೈವ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿದೆ. ಗಂಡ್ ಹಡಿ ಗಂಡ್ ಆಲ್ಬಂನಲ್ಲಿರುವು ಎರಡೂ ಹಾಡುಗಳೂ ನವಿರಾದ ಸಾಹಿತ್ಯ, ಅದ್ದೂರಿ ಸಂಗೀತ ಸಂಯೋಜನೆಯೊಂದಿಗೆ ಮೂಡಿಬಂದಿದ್ದು ಕುಂದನಾಡಿದರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಕುಂದಗನ್ನಡದ ಸುಂದರ ಹಾಡಿಗೆ ಮನು ಹಂದಾಡಿ ಅವರೂ ಧ್ವನಿ ಸೇರಿಸಿದ್ದಾರೆ. ಹಾಡು ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಅಲ್ಲಿಯೇ ಪ್ಲೇ ಮಾಡಿ https://soundcloud.com/kundapra_dot_com/gand-hadi-gand-title https://soundcloud.com/kundapra_dot_com/urmanigand-na

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿರುವ ಕುಂದಾಪುರ ಸಮೀಪದ ಕೋಣಿ ಗ್ರಾಮದಲ್ಲಿರುವ ಮುರೂರು ಶ್ರೀ ಮಹಾಲಿಂಗೇಶ್ವರ, ಶ್ರೀ ವೇಣುಗೋಪಾಲ ಕೃಷ್ಣ, ಶ್ರೀ ಉಮಾಮಹೇಶ್ವರ ದೇವಸ್ಥಾನದ ಐತಿಹ್ಯವನ್ನೊಳಗೊಂಡ ಮೂರೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಕೋಟೇಶ್ವರದ ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್ ಅವರು ರಚಿಸಿದ್ದು, ನ.೨೭ರಂದು ರಾತ್ರಿ ೯ಗಂಟೆಗೆ ದೇವಳದ ವಠಾರದಲ್ಲಿ ಬಿಡುಗಡೆಗೊಳ್ಳಲಿದೆ. ಅಂದು ಹಾಲಾಡಿ ಮೇಳದವರಿಂದ ಪ್ರಥಮ ಪ್ರದರ್ಶನ ನಡೆಯಲಿದೆ ಎಂದು ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ಹಾಗೂ ದೇವಳದ ಆಡಳಿತ ಮಂಡಳಿ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿಯಿತ್ತು ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಬಳಿಗಾರರಿಗೆ ಶಾಲು ಹೊದಿಸಿ, ಪ್ರಸಾದವನ್ನು ನೀಡಲಾಯಿತು. ಅವರೊಂದಿಗೆ ಮೈಸೂರಿನ ಶಾಸ್ತ್ರೀಯ ಭಾಷಾ ಅಧ್ಯಯನ ಪೀಠದ ಮುಖ್ಯಸ್ಥ ಪ್ರೋ. ಪಿ.ಕೆ.ಖಂಡೋಬಾ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಸ್ಥಳೀಯ ಮುಖಂಡ ರಮೇಶ ಗಾಣಿಗ, ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಗಣಪತಿ ಹೋಬಳಿದಾರ್, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಚಿತ್ರ ಕಲಾವಿದ ಗಿರೀಶ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಜ್ಯೂನಿಯರ್ ಕಾಲೇಜು ಬಳಿಯ ಮೂಕಾಂಬಿಕಾ ಕಾಂಪ್ಲೆಕ್ಸ್‌ನಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆಯಂದು ಕೆನರಾ ಬ್ಯಾಂಕ್ ಬೈಂದೂರು ಶಾಖೆ ಲೋಕಾರ್ಪಣೆಗೊಂಡಿತು. ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂದಕ ರಾಜಶೇಖರ ಮೇಟಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಭಾಗಿಯ ಪ್ರಬಂಧಕ ಜಗನ್ನಾಥ್, ಕಟ್ಟಡದ ಮಾಲಿಕರಾದ ಮಂಜುನಾಥ್, ಶಿಕ್ಷಕ ಬಾಲಯ್ಯ ಶೇರುಗಾರ್, ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷಪ್ಪ, ಉದ್ಯಮಿ ವೆಂಕಟೇಶ ಕಿಣಿ, ನಾಗಪ್ಪ ಪೂಜಾರಿ, ಕೆನರಾ ಬ್ಯಾಂಕ್ ಬೈಂದೂರು ಶಾಖಾ ಪ್ರಬಂದಕ ಪ್ರಭಾಕರ ಶೆಟ್ಟಿ, ನೌಕರರಾದ ಬಸಪ್ಪ, ವಿಘ್ನೇಶ್ವರ್, ದೀಪಕ್, ಗಿರೀಶ್ ಭಂಡಾರಿ ಅತುಲ್ ಸೇರಿದಂತೆ ಇನ್ನಿರರು ಉಪಸ್ಥಿತಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನು ಕಲೆಯ ಬಗೆಗೆ ಒಲವು ಬೆಳೆಸುತ್ತಾ, ಜನಸಾಮಾನ್ಯರು ಹಾಗೂ ಯುವ ಪೀಳಿಗೆಯಲ್ಲಿ ಕಾರ್ಟೂನು ಬಗೆಗೆ ಅಭಿರುಚಿಯನ್ನು ಬೆಳೆಸುವ ಉದ್ದೇಶದೊಂದಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಅವರ ನೇತೃತ್ವದಲ್ಲಿ ಸತತ ಮೂರು ವರ್ಷಗಳಿಂದ ಕಾರ್ಟೂನು ಕುಂದಾಪ್ರದ ಸಹಭಾಗಿತ್ವದಲ್ಲಿ ಜರುಗುತ್ತಿರುವ ‘ಕಾರ್ಟೂನು ಹಬ್ಬ’ ಈ ಭಾರಿಯೂ ನ.26 ರಿಂದ ನ29ರ ವರೆಗೆ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ(ಬೋರ್ಡ್ ಹೈಸ್ಕೂಲ್) ಜರುಗಲಿದೆ. ಕಾರ್ಟೂನು ಕುಂದಾಪ್ರ, ವಿಭಿನ್ನ ಐಡಿಯಾಸ್ ಅರ್ಪಿಸುವ ಟಿಎನ್‌ಎಸ್ ’ಕಾರ್ಟೂನು ಹಬ್ಬ’ಕ್ಕೆ ಚಿಕ್ಕಮಂಗಳೂರು ಎಸ್ಪಿ ಕೆ. ಅಣ್ಣಾಮಲೈ ಚಾಲನೆ ನೀಡಲಿದ್ದಾರೆ. ಕಾರ್ಟೂನು ಹಬ್ಬದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಮೊಗ್ಗು ಸ್ವರ್ಧೆ, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ಸೈಬರ್ ಕಾರ್ಟೂನು ಸ್ವರ್ಧೆ, ಕ್ಯಾರಿಕೇಚರ್, ಡೈಲಾಗ್ ರೈಟಿಂಗ್ ಹಾಗೂ ಸೆಲ್ಫಿ ಕಾರ್ನ್‌ರ್ ಸ್ವರ್ಧೆಗಳು ಜರುಗಲಿದೆ. ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗಿನ ಮಾತುಕತೆ ’ಮಾಸ್ಟರ್ ಸ್ಟ್ರೋಕ್’, ಲೈವ್ ಕ್ಯಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ ನೀಡುವ ’ಚಿತ್ರನಿಧಿ’, ಭವಿಷ್ಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋವಾ ಕುಂಡ್ಲಿ ಸಮೀಪ ನಡೆದ ಇನ್ಸುಲೇಟರ್ ಹಾಗೂ ಬೈಕ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಅಪರಿಚಿತ ಬೈಕ್ ಸವಾರ ಸೇರಿದಂತೆ ಇನ್ಸುಲೇಟರ್‌ನಲ್ಲಿದ್ದ ಕುಂದಾಪುರ ಮೂಲದ ಈರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮರವಂತೆ ನಿವಾಸಿ ರಿಯಾಝ್ (೩೪) ಹಾಗೂ ತಲ್ಲೂರು ಕೋಟೆಬಾಗಿಲು ನಿವಾಸಿ (೨೫) ಗಣೇಶ್ ಮೃತರು. ಮೀನು ತುಂಬಿಸಿಕೊಂಡು ಕುಂದಾಪುರ ಕಡೆಯಿಂದ ಗೋವಾದೆಡೆಗೆ ತೆರಳಿದ್ದ ಇನ್ಸುಲೇಟರ್ ಲಾರಿ ಕುಂಡ್ಲಿ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದಲ್ಲದೇ ನಿಯಂತ್ರಣ ತಪ್ಪಿದ ಇನ್ಸುಲೇಟರ್ ಪಲ್ಟಿಯಾಗಿ ಬಿದ್ದಿತ್ತು. ಅಫಘಾತದದ ರಭಸಕ್ಕೆ ಬೈಕ್ ಸವಾರ ಸೇರಿದಂತೆ ಮೂವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು, ಕೊಲ್ಲೂರು ಹಾಗೂ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ, ಸಮುದಾಯ ಭವನ ನಿರ್ಮಾಣಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಶಿಲನ್ಯಾಸ ನೆರವೇರಿಸಿದರು. ಗೋಳಿಹೊಳೆ ಗ್ರಾ.ಪಂ ವ್ಯಾಪ್ತಿಯ ಕೊಡಾಳಕೇರಿ ಎಸ್.ಟಿ ರಸ್ತೆ ಅಭಿವೃದ್ದಿ, ಕೊಲ್ಲೂರು ಗ್ರಾಮದ ಮಾವಿನಕಾರು ಎಂಬಲ್ಲಿ ಕಿರು ಸೇತುವೆ ನಿರ್ಮಾಣ, ಹಳ್ಳಿಬೇರು ಕೆಳಮಕ್ಕಿ ಸೇತುವೆಯಿಂದ ಎಸ್.ಟಿ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ದಿ, ಅಗ್ನಿತೀರ್ಥ (ನುಕ್ಸಾಲ್ ) ಹೊಳಗೆ ಕಿರು ಸೇತುವೆ ನಿರ್ಮಾಣ, ವಿರಾಜಪೇಟೆ – ಬೈಂದೂರು ರಸ್ತೆ ಕಿ.ಮೀ ೩೭೪.೦೩ ರಲ್ಲಿ ಸೇತುವೆ ಪುನರ್ ನಿರ್ಮಾಣ, ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್.ಟಿ ಕಾಲನಿಯಲ್ಲಿ ಸಮುದಾಯ ಭವನ ರಚನೆ, ಬೀಸಿನಪಾರೆ ಸಿಂಸಾಲ್ ಎಸ್.ಟಿ ಕಾಲನಿ ರಸ್ತೆ ಅಭಿವೃದ್ಧಿ., ಬಸ್ರಿಬೇರು ಎಸ್.ಟಿ ಕಾಲನಿ ರಸ್ತೆ ಅಬಿವೃದ್ದಿ ಶಿಲನ್ಯಾಸ ಜರುಗಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕ ಪಂಚಾಯತ್ ಸದಸ್ಯರಾದ ವಿಜಯ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹಟ್ಟಿಯಂಗಡಿಯಲ್ಲಿ ಕಾರ್ತಿಕ ಸಂಕಷ್ಟಹರ ಚತುರ್ಥಿಯಂದು ಕಾರ್ತಿಕ ದೀಪೋತ್ಸವ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ರಾತ್ರಿ ಚಂದ್ರೋದಯದ ನಂತರ ವಿಶೇಷ ಅಭಿಷೇಕ, ಮಹಾ ರಂಗ ಪೂಜಾದಿಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವವು ಸಂಪನ್ನಗೊಂಡಿತು. ಭಜನಾ ತಂಡಗಳಿಂದ ಕುಣಿತ ಭಜನೆ ಹಾಗೂ ಚಂಡೆವಾದನ ದೀಪೋತ್ಸವದ ಮೆರಗನ್ನು ಹೆಚ್ಚಿಸಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಸಾಹಿತಿ, ಹಾಡುಗಾರ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಎರಡು ಹಾಡುಗಳುಳ್ಳ ಆಲ್ಬಂ ನ.೨೫ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರೇ ಸಾಹಿತ್ಯ ಬರೆದು ಹಾಡಿರುವ ಕುಂದಾಪ್ರ ಕನ್ನಡದ ಹಾಡು ಅದ್ದೂರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬರಲಿದ್ದು ಕುಂದಗನ್ನಡಿಗರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರುಕ್ಮಿಣಿ ಸುರೇಶ್ ನಿರ್ಮಾಪಕರಾಗಿದ್ದಾರೆ. ಹುಟ್ಟೂರಿನ ಅಭಿಮಾನದಿಂದ ಕುಂದಗನ್ನಡದಲ್ಲಿಯೇ ಹಾಡು ರಚಿಸಿ, ಧ್ವನಿ ನೀಡಿರುವ ಸಂದೀಪ್ ಅವರ ಪ್ರಯತ್ನಕ್ಕೆ ಕುಂದಾಪ್ರ ಕನ್ನಡದ ವಾಟ್ಸಪ್ ಹೀರೋ ಮನು ಹಂದಾಡಿ ಸೇರಿದಂತೆ ಹಲವರು ಸಹಕಾರವಿತ್ತಿದ್ದು, ಎರಡೂ ಹಾಡುಗಳೂ ಅತ್ಯುತ್ತಮವಾಗಿ ಮೂಡಿಬಂದಿವೆ. Gand hadi gandi releasing on nov 25

Read More