ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದಿರೆ: ಮಂಗಳೂರಿನ ಬೆಸೆಂಟ್ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು 20ನೇ ಬಾರಿಗೆ ಅವಳಿ ಚಾಂಪಿಯನ್ಸ್ ಪ್ರಶಸ್ತಿಯನ್ನು ಪಡೆಯಿತು. ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಮಂಗಳೂರು ತಾಲೂಕನ್ನು ಪ್ರತಿನಿಧಿಸಿದ ಬೆಸೆಂಟ್ ರಾಷ್ಟ್ರೀಯ ಪದವಿಪೂರ್ವ ಕಾಲೇಜು ತಂಡವನ್ನು 35-13, 35-14 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ಎನ್.ಎಂ. ಪದವಿಪೂರ್ವ ಕಾಲೇಜು ಅರಂತೋಡು ತಂಡವನ್ನು 35-11, 35-12 ಅಂಕಗಳಿಂದ ಸೋಲಿಸಿ 20ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ವೈಕುಂಠ ಹೆಬ್ಬಾರ್ ಅವರು ಒಬ್ಬ ಸಮರ್ಥ ನಾಟಕ ನಿರ್ದೇಶಕರಾಗಿ, ಕಲಾವಿದರಾಗಿ ಮತ್ತು ಉದ್ಯಮಿಯಾಗಿ ಪ್ರಸಿದ್ದಿ ಪಡೆದವರು ಎಂದು ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು. ಅವರು ಕಲಾಕೇಂದ್ರದ ಅಧ್ಯಕ್ಷ ಆನಂದ್ ಸಿ. ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ವೈಕುಂಠ ಹೆಬ್ಬಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಮಾಜಿ ಉದ್ಘೋಷಕಿ ನಾರಾಯಣೀ ದಾಮೋದರ್‌ರರು ವೈಕುಂಠ ಹೆಬ್ಬಾರರ ಜೀವನ ವೃತ್ತಾಂತವನ್ನು ತಿಳಿಸುತ್ತಾ ಅವರ ಸಂಸ್ಮರಣಾ ಮಾತನಾಡಿದರು. ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂಧಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಹೆಬ್ಬಾರರು ಶ್ರಮದಿಂದ ಮೇಲ್ಬಂದವರು. ಔಷಧ ಅಂಗಡಿ, ಆಸ್ಪತ್ರೆ, ಮೂರು ಮಕ್ಕಳಿಗೆ ವೈದ್ಯಕೀಯ ವಿದ್ಯಾಭ್ಯಾಸ ನೀಡಿದ್ದಲ್ಲದೇ ಹಲವಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡವರು. ರೂಪರಂಗ, ಗೆಳೆಯರ ಬಳಗ ಹಂಗಳೂರು ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ನಾಟಕಗಳಿಗೆ ನಿರ್ದೇಶನ ನೀಡಿದವರು. ಹಂಗಾರಕಟ್ಟೆ- ಯಕ್ಷಗಾನ ಕಲಾಕೇಂದ್ರದ ಸದಸ್ಯರಾಗಿದ್ದು, ಅಧ್ಯಕ್ಷರಾಗಿ ಅದರ ಸರ್ವಾಂಗೀಣ ಪ್ರಗತಿಗೆ ಕಾರಣ ಪುರುಷರು, ಸಾರ್ವಜನಿಕವಾಗಿ ಗುರುತಿಸಿಕೊಂಡವರು. ಹಲವರ ಆರೋಗ್ಯ, ವಿದ್ಯಾಭ್ಯಾಸಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂಬೇಡ್ಕರ್ ಭಾರತೀಯರಿಗೆ ನೀಡಿದ ನಮ್ಮ ಹೆಮ್ಮೆಯ ಸಂವಿಧಾನದ ಪರಿಚ್ಚೇದ 19(1)(ಜಿ) ಸ್ಪಷ್ಟವಾಗಿ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ ಅವಕಾಶಗಳ ಕುರಿತು ಹೇಳುತ್ತದೆ. ಇವತ್ತು ಶುಚಿತ್ವ, ಪಾರ್ಕಿಂಗ್ ಇತ್ಯಾದಿ ನೆವನಗಳನ್ನು ಇಟ್ಟುಕೊಂಡು ಬಿಜೆಪಿ ಆಡಳಿತದ ಕುಂದಾಪುರ ಪುರಸಭೆ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸ ಹೊರಟದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ಬೀದಿ ಬದಿ ವ್ಯಾಪಾರಸ್ಥರಿಗೆ ಶುಚಿತ್ವ, ಪಾರ್ಕಿಂಗ್ ಮುಂತಾದವುಗಳಿಗೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರಸ್ಥರಿಗೆ ಅವರ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸಲು ಅವಕಾಶ ಮಾಡಿಕೊಡುವುದನ್ನು ಬಿಟ್ಟು ಜೀವನೋಪಾಯಕ್ಕಾಗಿ ಇದನ್ನೇ ನಂಬಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಅತ್ಯಂತ ಖೇದಕರ ವಿಚಾರ. ಇನ್ನು ಶುಚಿತ್ವದ ಬಗ್ಗೆ ಮಾತನಾಡುವ ಪುರಸಭೆ ಆಡಳಿತ ತಮ್ಮ ವಾಣಿಜ್ಯ ಸಂಕೀರ್ಣಗಳಿಗೆ ಒಮ್ಮೆ ಭೇಟಿ ಕೊಡುವುದು ಒಳಿತು. ಪುರಸಭೆಯ ಕಚೇರಿ, ವಾಣಿಜ್ಯ ಸಂಕೀರ್ಣಗಳು ಶುಚಿತ್ವ ಎನ್ನುವ ಪದವನ್ನೇ ಮರೆತಿವೆ ಆದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯುವಕರು ದೇಶದ ಭವಿಷ್ಯ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶವನ್ನು ಮುನ್ನಡೆಸುವ ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಿ ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಅಂದು ಕುಂಜಿಬೆಟ್ಟುವಿನ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಂಬಾಕು ಸೇವನೆ ಒಂದು ಸಾಮಾಜಿಕ ಪಿಡುಗು. ಸರಕಾರದ ಮುಂದೆ ತಂಬಾಕು ಸೇವನೆಯನ್ನು ನಿಷೇಧಿಸುವ ಸಮಸ್ಯೆ ಒಂದೆಡೆಯಾದರೆ, ಯುವ ಜನತೆಯನ್ನು ತಂಬಾಕು ಚಟದಿಂದ ದೂರ ಇರಿಸುವ ಕಾರ್ಯವನ್ನು ನಿಭಾಯಿಸುವ ಸಮಸ್ಯೆ ಇನ್ನೊಂದೆಡೆ. ತಂಬಾಕು ಸೇವನೆಯಿಂದ ದೈಹಿಕ ಮತ್ತು ಮಾನಸಿಕವಾಗಿ ತೀವ್ರವಾದ ದುಷ್ಪರಿಣಾಮಗಳಾಗುತ್ತವೆ. ಸಮಾಜದಲ್ಲಿ ಇದೊಂದು ಗಂಭೀರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡುಬಿದ್ರಿಯ ಆಳ್ವಾಸ್ ಪಿಯು ಕ್ಯಾಂಪಸ್ ನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಬಾಕಸ್ ಮತ್ತು ಮನೋ-ಅಂಕಗಣಿತ (ಮೆಂಟಲ್ ಅರಿಥ್ ಮೆಟಿಕ್) ಸ್ಪರ್ಧೆಯಲ್ಲಿ ವಿದ್ಯಾರಣ್ಯ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ. 5ನೇ ತರಗತಿಯ ಕೆ. ಅದ್ವಿಕ್ ಶೆಟ್ಟಿ, 6ನೇ ತರಗತಿಯ ದ್ರಿಶಾ ಎಚ್. ಶೆಟ್ಟಿ ಒಂದನೇ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಸ್ಥಾನದೊಂದಿಗೆ ವಿಜೇತರಾದ ವಿದ್ಯಾರ್ಥಿಗಳು. ಕೆ. ಅದ್ವಿಕ್ ಶೆಟ್ಟಿ ಹೆಸ್ಕತ್ತೂರು ಕೃಷ್ಣ ಶೆಟ್ಟಿ ಹಾಗೂ ದೀಪಾ ದಂಪತಿಯ ಪುತ್ರ, ದ್ರಿಶಾ ಎಚ್. ಶೆಟ್ಟಿ ಜನ್ನಾಡಿಯ ಹರ್ಷವರ್ಧನ್ ಶೆಟ್ಟಿ ಹಾಗೂ ಸೌಮ್ಯ ಹೆಚ್. ಶೆಟ್ಟಿ ದಂಪತಿಯ ಪುತ್ರಿ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ.ಲಿ. ಆಯೋಜಿಸಿದ್ದ 20ನೇ ರಾಜ್ಯಮಟ್ಟದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್. ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ.ಲಿ. ಆಯೋಜಿಸಿದ್ದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಕಾಂಪಿಟಿಷನ್ ಮೂಡಬಿದ್ರಿ ಆಳ್ವಾಸ್ ಪಿಯು ಕ್ಯಾಂಪಾಸ್‌ನಲ್ಲಿ ನಡೆಯಿತು. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 2,000 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಕೋಟ ಎಜುಕೇರ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅನೀಕ್ಷ ಎಂ. ಪ್ರಥಮ ಸ್ಥಾನ, ಸಿದ್ಧಾಂತ ಕುಂದರ್ ದ್ವಿತೀಯ ಸ್ಥಾನ, ಆತಿಷ್ ಎಸ್. ಪೂಜಾರಿ, ದ್ವಿತೀಯ ಸ್ಥಾನ, ಅಥರ್ವ ಆರ್. ಕೊಠಾರಿ ತೃತೀಯ ಸ್ಥಾನ, ಅದಿತಿ ಮೊಗವೀರ ಚತುರ್ಥ ಸ್ಥಾನ, ರಿಷಿ ಆರ್. ಮೊಗವೀರ ಚತುರ್ಥ ಸ್ಥಾನ ಪಡೆದಿದ್ದಾರೆ. ಅವರುಗಳಿಗೆ ಪ್ರಸನ್ನ ಕೆ. ಮತ್ತು ಸುಪ್ರೀತ ಮೊಗವೀರ ತರಬೇತುದಾರರಾಗಿದ್ದಾರೆ. ಕೋಟ ಎಜುಕೇರ್ ಸಂಸ್ಥೆಯ ನಿರ್ದೇಶಕರಾದ ಚೇತನ್ ಎಂ. ಬಂಗೇರ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎ.ವಿ. ಬಾಲಿಗ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮವು ದೀಪ ಪ್ರಜ್ವಲನ ಮತ್ತು ಅಧಿಕೃತ ಉದ್ಘಾಟನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿನಿ ಟೆಸ್ಕಾ ಅವರು ದಿನದ ಮಹತ್ವವನ್ನು ವಿವರಿಸಿ, 2025ರ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ “ಸೇವೆಗಳ ಪ್ರವೇಶ: ಆಪತ್ತು ಮತ್ತು ತುರ್ತು ಪರಿಸ್ಥಿತಿಯಲ್ಲಿನ ಮಾನಸಿಕ ಆರೋಗ್ಯ” ಎಂಬುದನ್ನು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುರೇಶ್ ಹಾಗೂ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿ ಚೇತನಾ ಆರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿನ್ಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ನಾಟಕವನ್ನು ಪ್ರದರ್ಶಿಸಿ, ಮಾನಸಿಕ ಆರೋಗ್ಯ ಜಾಗೃತಿ ಮತ್ತು ಸಮುದಾಯದ ಕಲ್ಯಾಣದ ವಿವಿಧ ಅಂಶಗಳನ್ನು ಒತ್ತಿ ಹೇಳಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತ್ರಿವರ್ಣ ಆರ್ಟ್ ಕ್ಲಾಸ್ ಅವರು ನಡೆಸಿದ ಆರ್ಟ್ ಎಕ್ಸಿಬಿಷನ್ ನಲ್ಲಿ ಭಾಗವಹಿಸಿ “ದ ಬೆಸ್ಟ್ ಪಬ್ಲಿಕ್ ವಿವ್” ಪ್ರಶಸ್ತಿ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ನಿಶ್ಚಿತಾ ವಿ. ಹರಗನಹಳ್ಳಿ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಹೆಚ್ಚು ಭಾಷೆಗಳನ್ನು ನಾವು ಕಲಿತಷ್ಟು ನಮ್ಮ ಜ್ಞಾನದ ಪರಿಧಿ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಭಾಷಾ ಸಾಮರಸ್ಯದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ, ಎಸ್.ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗು ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ ಭಾಷಾ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಕಾರ್ಯದರ್ಶಿ ಕಾರ್ತಿಕ್ ಬಿ. ಖಾರ್ವಿ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮಿನಿಮಿತ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಮೂಲ್ಯ ಮತ್ತು ಮಾದರಿ ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ದೀಪಾಲಿ, ಶ್ರಾವ್ಯ, ಸಾನಿಕ ಪ್ರಾರ್ಥಿಸಿದರು. ಎಸ್.ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಮಾಜದ ಸೇವೆಗಾಗಿ ತನ್ನ ಜೀವಿತ ಅವಧಿಯನ್ನು ಸಮರ್ಪಿಸುವ ಸಾಮಾಜಿಕ ಕಾರ್ಯಕರ್ತರ ಸೇವೆ ಅನನ್ಯವಾಗಿದೆ. ಅದೇ ರೀತಿ ತನ್ನ ಹುಟ್ಟುಹಬ್ಬವನ್ನು ಆಶ್ರಮದ ನಿವಾಸಿಗಳ ಜತೆ ಆಚರಿಸಿಕೊಳ್ಳುವ ಭರತ್ ಗಾಣಿಗ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹೇಳಿದರು. ಅವರು ಮಂಗಳವಾರ ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೋಟದ ಸಾಮಾಜಿಕ ಕಾರ್ಯಕರ್ತ ಭರತ್ ಗಾಣಿಗ ಅವರು ನೀಡಿದ ಬಟ್ಟೆ ಹಾಗೂ ಊಟೋಪಚಾರ ವಿತರಿಸಿ ಮಾತನಾಡಿದರು. ಸಮಾಜಕ್ಕಾಗಿ ಸೇವೆ ಸಲ್ಲಿಸುವುದರ ಜತೆಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಇಂಥಹ ಕಾರ್ಯ ಸಮಾಜಕ್ಕೆ ಇನ್ನಷ್ಟು ಸೇವಾ ಕೈಂಕರ್ಯ ತುಂಬಲು ಪ್ರೇರಣೆಯಾಗಿದೆ. ಹಸಿದ ಜೀವಕ್ಕೆ ಚೈತನ್ಯ ತುಂಬುವ ಹೊಸಬದುಕು ಆಶ್ರಮದ ಮುಖ್ಯಸ್ಥರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು. ಇದೇ ವೇಳೆ ಬಟ್ಟೆ ಪರಿಕರವನ್ನು ಗಣ್ಯರ ಮೂಲಕ ಹೊಸಬದುಕು ಆಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಸಾಸ್ತಾನ, ಪತ್ನಿ ರಾಜಶ್ರೀ ಹಸ್ತಾಂತರಿಸಿಕೊಂಡರು. ಈ ಸಂದರ್ಭದಲ್ಲಿ ಕೋಟ…
