Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂಪಾಯಿ 96 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊರಗ ಕಾಲೋನಿಯ ಎಂಟು ಹೊಸ ಮನೆ ನಿರ್ಮಾಣಕ್ಕೆ ನಾಡೋಜ ಜಿ. ಶಂಕರ ಅವರು 3 ಲಕ್ಷ ಸಹಾಯ ಧನ ಚೆಕ್ ನೀಡಿದರು. ನಂತರ ಅವರು ಮಾತನಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊರಗರ ಎಂಟು ಹೊಸ ಮನೆ ನಿರ್ಮಾಣ ಕಾರ್ಯ ಶ್ಲಾಘನೀಯ. ಇಂದು ಸಹಾಯ ಧನ ಚೆಕ್ ವಿತರಿಸುತ್ತಿರುವ ಬಗ್ಗೆ ಖುಷಿ ಇದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಹೊಸ ಎಂಟು ಮನೆ ನಿರ್ಮಿಸಿ ಕೊಡುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ, ತಳಮಟ್ಟದ ಸಮುದಾಯವನ್ನು ಮೇಲಕ್ಕೆತ್ತುವ ಕಲ್ಯಾಣ ಕಾರ್ಯಕ್ಕೆ ಸಹಾಯ ಧನ ನೀಡಿದ ಶ್ರೀಯುತರಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ  ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಇತ್ತೀಚೆಗೆ ಎಫ್‌ಎಸ್‌ಎಲ್‌ ಇಂಡಿಯಾ ಸಹಯೋಗದೊಂದಿಗೆ ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಕೇಶ್ ಸೋನ್ಸ್, ಪ್ರೆಸಿಡೆಂಟ್, ಎಫ್ ಎಸ್ ಎಲ್ ಇಂಡಿಯಾ ಅಂಡ್ ಹಿಸ್ ಟೀಮ್ ಅವರು ಆಗಮಿಸಿ ವಿದ್ಯಾರ್ಥಿಗಳು ಹೇಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಪ್ರತಿ ವಿದ್ಯಾರ್ಥಿಗಳಲ್ಲಿಯೂ ನಾಯಕತ್ವ ಗುಣಗಳಿರುತ್ತದೆ ಅದನ್ನು ಹೇಗೆ ಸಾಮಾಜಿಕ ಅಭಿವೃದ್ಧಿಗೆ ಉಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದರು. ಈ ಕಾರ್ಯಗಾರದಲ್ಲಿ ಎಫ್ ಎಸ್ ಎಲ್ ಇಂಡಿಯಾ, ಸಿಇಎಲ್ ಕೊರ್ಡಿನೇಟರ್ ಅಂಡ್ ಇಂಚಾರ್ಜ್ ಆದ ನಾಗರಾಜ್ ಶೆಟ್ಟಿ ಎನ್, ಎಫ್ ಎಸ್ ಎಲ್ ಇಂಡಿಯಾ ವೈಡಿಪಿ ಕೋರ್ಡಿನೇಟರ್ ರಕ್ಷಾ ವಿ. ಶೆನೊಯ್ ಕೆ, ಸಿಇಎಲ್ ವಾಲೆಂಟಿರ್ ಫ್ರಮ್ ಜರ್ಮನಿಯಾವಾರಾದ ಆಂಟೋನಿಯಾ ಗ್ರೋಸ್ ಮತ್ತು ಜೋಯೆಲ್ ಫುಮಗಲ್ಲಿ ಅವರುಗಳು ಕೂಡ ಅವರ ಜೊತೆ ಸಹಕರಿಸಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಎನ್.ಐ.ಎಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಮರುಪಾವತಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳು ಪ್ರಸ್ತಾವನೆಯನ್ನು ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದೂ.ಸಂ: 0820-2521324/9845432303 ಅನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಂಘಟನೆಗಳು ಸಮಾಜ ಹಾಗೂ ಸಮುದಾಯದ ಆಸ್ತಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಯುವ ವೇದಿಕೆಯ ಒಂಭತ್ತು ವರ್ಷಗಳ ಸಾಮಾಜಿಕ ಕಾರ್ಯಗಳೇ ಸಾಕ್ಷಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಯಲು ರಂಗಮಂದಿರದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ 9ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕೃತಿಕದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಶಮಾನೋತ್ಸವ ಹೊಸ್ತಿಲ್ಲಲ್ಲಿರುವ ಈ ಸಂಸ್ಥೆ ಇನ್ನಷ್ಟು ಸಾಮಾಜಿಕ ಯೋಜನೆಗಳನ್ನು ನೀಡಲಿ ಎಂದು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸಾಲಿಗ್ರಾಮ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಶುಭಶಂಸನೆಯನ್ನು ಗೈದರು. ಪೊಂಪೈ ಕಾಲೇಜು ಐಕಳ ಇದರ ನಿವೃತ್ತ ಪ್ರಾಂಶುಪಾಲ ಡಾ| ಕೆ. ಜಗದೀಶ್ ಹೊಳ್ಳ, ಸಮಾಜಸೇವಕ ಬಿ. ಸುರೇಶ್ ಅಡಿಗ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹೊಸದಾಗಿ ಕುಂದಾಪುರದಲ್ಲಿ ಪ್ರಾರಂಭವಾದ ಸೈಂಟ್ ಫಿಲಿಫ್ ನೆರಿ ಸೊಸೈಟಿ, ಇದರ ಸ್ಥಾಪಕ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ ಆನಗಳ್ಳಿ ಆಯ್ಕೆಯಾಗಿದ್ದಾರೆ. ಸಂಸ್ಥೆಯನ್ನು ಮುಖ್ಯ ಪ್ರವರ್ತಕರಾಗಿ ಸಂಸ್ಥೆಯನ್ನು ಸಂಘಟಿಸಿದ್ದ ಅವರು ಜ.8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯನ್ನು ಸರಕಾರದ ಸಹಾಯಕ ನಿಬಂಧಕರ ಕಛೇರಿ ಕುಂದಾಪುರ ಇದರ ಅಧಿಕಾರಿಯಾದ ಎಂ.ಸಿ. ಸ್ವಾಮಿ ಅವರು ನೆರವೇರಿಸಿಕೊಟ್ಟರು. ಉಪಾಧ್ಯಕ್ಷರಾಗಿ ಅಲಿಷಾ ಡಿಸೋಜಾ ಆಯ್ಕೆಯಾದರು. ಸ್ವ-ಉದ್ಯೋಗಿಗಳಿಗೆ ನೆರವು ನೀಡುವ ಮುಖ್ಯ ಉದ್ದೇಶವಾಗಿದ್ದು, ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಬೇಕಾದ ಆನ್ಲೈನ್ ಅರ್ಜಿ ಸಲ್ಲಿಕೆ, ಹಣಕಾಸು ನೆರವು, ಮಾಹಿತಿ ಮತ್ತು ತರಬೇತಿ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಚುನಾವಣೆ ನಡೆಸಲು ನೆರವಾದ ಎಲ್ಲಾ ನಿರ್ದೇಶಕರಿಗೆ ಮತ್ತು ಸರಕಾರದ ಅಧಿಕಾರಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ಆಲಿಷಾ ಡಿಸೋಜಾ ಧನ್ಯವಾದ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಕರಾವಳಿ ಕಡಲ-ತಡಿಯಲ್ಲಿ ರೋಟರಿ ಕ್ಲಬ್‌ ಬೈಂದೂರಿನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಡಾ. ಉಮೇಶ್ ಪುತ್ರನ್ ಮಾತನಾಡಿ, ‘ರೋಟರಿ ಸಂಸ್ಥೆಯು ವಿಶ್ವಶಾಂತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ರೋಟರಿಯ ಅಂತರರಾಷ್ಟ್ರೀಯ ಬಾಂಧವ್ಯ ನೀತಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ, ರೋಟರಿ ಕ್ಲಬ್‌ ಜನಮುಖಿ ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಬಂದಿದೆ ಎಂದರು. ಹ್ಯಾಟ್ರಿಕ್‌ ಡಿಸ್ಟಿಕ್ ಕಲ್ಬರಲ್ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬೈಂದೂರು ರೋಟರಿಯ ಅಧ್ಯಕ್ಷ- ಕಾರ್ಯದರ್ಶಿ ಅವರನ್ನು, ರೋಟರಿ ಟ್ರಸ್ಟ್ ಪರವಾಗಿ ಟ್ರಸ್ಟ್‌ ಅಧ್ಯಕ್ಷ ಕೆ. ಬಾಬು ಶೆಟ್ಟಿ ಗೌರವಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಲಕ್ಷ್ಮಿ ಪ್ರಕಾಶ್ – ದೀಪಿಕಾ ದಂಪತಿಯನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. 2026- 27ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶಿರೂರು, 2027-28ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಸೂರ್ಕುಂದ ಆಯ್ಕೆಯಾದರು. ರೋಟರಿ ಕ್ಲಬ್ ಬೈಂದೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಕೋಟ: ಇಲ್ಲಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕೇಂದ್ರ ಸರ್ಕಾರದ ಸಹಾಯಕ ಸಚಿವ ಸುರೇಶ್ ಗೋಪಿ ಅವರು ಕುಟುಂಬದವರೊಂದಿಗೆ ಶನಿವಾರ ಭೇಟಿ ನೀಡಿದರು. ಸಚಿವರನ್ನು ವಾದ್ಯ ಗೋಷ್ಠಿಗಳೊಂದಿಗೆ ಆಡಳಿತ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯರು ಹಾಗೂ ಪರ್ಯಾಯ ಅರ್ಚಕರಾದ ವ್ಯಾಸ ಉಪಾಧ್ಯಾಯ ಸಹೋದರರು ಆದರದಿಂದ ಬರಮಾಡಿಕೊಂಡು ವಿಶೇಷ ಗೌರವ ಪ್ರಸಾದವನ್ನು ನೀಡಿದರು ವಿಶ್ರಾಂತ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು, ಅರ್ಚಕ ಸಿಬ್ಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪಾರಿಜಾತದ ವತಿಯಿಂದ ದಿ। ರಾಮಚಂದ್ರ ಭಟ್ ಮತ್ತು ದಿ। ಅಹಲ್ಯ ಭಟ್ ಸವಿನೆನಪಿಗಾಗಿ ಕೋಡಿ ಬೀಚ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ. ಸರಕಾರಿ ಶಾಲಾ ಮಕ್ಕಳ ಧೈಯವನ್ನಿಟ್ಟುಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯು “ಸ್ಯಾಂಡ್ ಥೀಂ” ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಿಂದ 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿದ್ದು, ದಿನಾಂಕ 18ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಪರ್ಯಾಯ ಪೀಠವನ್ನು ಏರಲಿರುವ ಶಿರೂರು ಮಠದ ಯತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರಿಗೆ ಬಿಕ್ಷಾ ಕಾರ್ಯಕ್ರಮವನ್ನು ಶ್ರೀದೇವಳದ ವತಿಯಿಂದ ಹಮ್ಮಿಕೊಳ್ಳಲಾಯಿತು. ಶ್ರೀ ಪಾದಂಗಳವರನ್ನು ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀ ಪಾದಂಗಳವರು ಪಟ್ಟದ ದೇವರ ಪೂಜೆಯನ್ನು ನೆರವೇರಿಸಿ, ವಿಶೇಷ ಪ್ರವಚನವನ್ನು ನೀಡಿ ಭಿಕ್ಷೆಯನ್ನು ಸ್ವೀಕರಿಸಿ ಮುಂದೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಆಹ್ವಾನದ ರಾಯಸವನ್ನು ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯ ದಂಪತಿಗಳು ಶ್ರೀಗಳನ್ನು ಸ್ವಾಗತಿಸಿ, ಪಾದಪ್ರಕ್ಷಾಲನ ಮಾಡಿ ಮಾಲಿಕೆ ಮಂಗಳಾರತಿಯೊಂದಿಗೆ ಫಲ ಕಾಣಿಕೆಯನ್ನು ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ಈ ಸಂದರ್ಭದಲ್ಲಿ ವಿಶ್ರಾಂತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯರು, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು, ಆನೆಗುಡ್ಡೆ ಉಪಾಧ್ಯಾಯ ಕುಟುಂಬ ಸದಸ್ಯರು, ದೇವಳದ ಆಡಳಿತ ಹಾಗೂ ಅರ್ಚಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರೆಡ್ ಕ್ರಾಸ್ ಮಾನವೀಯ ನೆಲೆಯಲ್ಲಿ ಕೆಲಸ ಮಾಡುವ ದೊಡ್ಡ ಸಂಸ್ಥೆ. ಬೇರೆ ಸಂಸ್ಥೆಗಳಿಂದ ಭಿನ್ನವಾಗಿರುವ ರೆಡ್ ಕ್ರಾಸ್ ದೇಶದ ಉದ್ದಗಲಕ್ಕೂ  ಹಲವಾರು ಜನಪರ. ಜನಹಿತ ಕಾರ್ಯಗಳನ್ನು ಮಾಡಿದೆ. ರೆಡ್ ಕ್ರಾಸ್ ಸಂಸ್ಥೆಯ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕದ ಚೇರ್ ಮೆನ್ ಜಯಕರ್‌ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕ, ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಸರೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಡಾ. ಸೋನಿ ಡಿಕಾಸ್ಟ್ ಅವರು ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರಥಮ ಚಿಕಿತ್ಸೆ ಹೇಗೆ ಮಾಡುವುದು ಅದರ ಪ್ರಥಮ ಹಂತದ ಕಾರ್ಯಗಳು ಯಾವುವು, ತೆಲೆಸುತ್ತಿ ಬಿದ್ದವ್ಯಕ್ತಿಗೆ ಯಾವ ರೀತಿ ಪ್ರಾಥಮಿಕ ಹಂತದಲ್ಲಿ ಪ್ರಥಮ ಚಿಕಿತ್ಸೆ…

Read More