Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಗೊಬ್ಬರಬೆಟ್ಟು ಓಂ ಸ್ಟಾರ್ ಫ್ರೆಂಡ್ಸ್ ಇದರ ರಜತ ಮಹೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚಿಗೆ ಗೊಬ್ಬರಬೆಟ್ಟು ಪರಿಸರದಲ್ಲಿ ಜರಗಿತು. ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು. ಇದೇ ವೇಳೆ ಕೋಟ ಶಾಲೆಯ ಅಂಗನವಾಡಿ ಶಿಕ್ಷಕಿ ಕಮಲ ಟೀಚರ್, ನಿವೃತ್ತ ಶಿಕ್ಷಕ, ಸಾಹಿತಿ ವಿಠ್ಠಲ್ ವಿ. ಗಾವ್ಕಂರ್, ಹಿರಿಯ ಕೃಷಿಕ ವೈಕುಂಠ ಹಂದೆ ಅವರುಗಳಿಗೆ ನಮ್ಮೂರ ಸಾಧಕರಿಗೆ ನಮ್ಮೂರ ಹಿರಮೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನ ಕಾರ್ಯಕ್ರಮ ನೆರವೆರಿಸಿದರು. ಸಭೆಯ ಅಧ್ಯಕ್ಷತೆಯನ್ನು ಓಂ ಸ್ಟಾರ್ ಫ್ರೆಂಡ್ಸ್ ಅಧ್ಯಕ್ಷ ನಾಗೇಶ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕೋಟ ನಾರಾಯಣಗುರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಹಾಗೂ  ಮಂಗಳೂರು ವಿವಿ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಉಡುಪಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡವು ಜಯಶಾಲಿಯಾಯಿತು. ಫೈನಲ್ ಪಂದ್ಯದಲ್ಲಿ ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದು, ಶಿರ್ವ ಲೆಸ್ಲಿ ಡಿಸೋಜಾ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನ ತಂಡದ ವಿರುದ್ಧ 23 ರನ್‌ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಆಳ್ವಾಸ್ ಕಾಲೇಜಿನ ಜಿಷ್ಣು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡುವ ಕಾರ್ಯಕ್ರಮವನ್ನು ದಾನಿಗಳಾದ ಬೈಂದೂರಿನ ಉದ್ಯಮಿ ಜಯಾನಂದ ಹೋಬಳಿದಾರ್ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡಿ, ಶುಭ ಹಾರೈಸಿದರು. ಈ ವೇಳೆ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಉಪಸ್ಥಿತರಿದ್ದರು. ಪ್ರತೀ ವರ್ಷವೂ ದಾನಿಗಳ ಸಹಕಾರದೊಂದಿಗೆ ಕುಟೀರದ ವತಿಯಿಂದ 400 ರಿಂದ 500 ಬಡ ವಿದ್ಯಾರ್ಥಿಗಳಿಗೆ  ನೋಟ್ ಬುಕ್ ಗಳನ್ನು ನೀಡಲಾಗುತ್ತಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಿ.ಯು.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಪರೀಕ್ಷೆಯನ್ನು ಏಪ್ರಿಲ್ 16 & 17 ರಂದು ನಡೆಸಿದ್ದು, ಶಿವಮೊಗ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯು ಕೈಗೆ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಮೈಮೇಲೆ ಧರಿಸಿದ್ದ ಜನಿವಾರ, ವಿದ್ಯಾರ್ಥಿಗಳ ಕೊರಳಲ್ಲಿ ಇದ್ದ ಶಿವದಾರ ಹಾಗೂ ರುದ್ರಾಕ್ಷಿಸರವನ್ನು ಭದ್ರತಾ ಸಿಬ್ಬಂದಿ ತೆಗೆಸಿದ್ದಾರೆ ಎಂದು ಪೋಷಕರುಗಳು ಆರೋಪಿಸಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು. ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರತರವಾದ ಧಕ್ಕೆ ಉಂಟಾಗಿರುತ್ತದೆ.  ಇದು ವಿದ್ಯಾರ್ಥಿಗಳ ಪರೀಕ್ಷೆಯ ಕಾರ್ಯಕ್ಷಮತೆಯ ಮೇಲೆ ತೀವ್ರತರವಾದ ಪರಿಣಾಮ ಬೀರಿದೆ.  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ನೇಮಕಾತಿ ಪರೀಕ್ಷೆ, ಸ್ಪಧಾತ್ಮಕ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆಗೆ ವಸ್ತ್ರ ಸಂಹಿತೆ ಬಗ್ಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದಾಗ್ಯೂ ಕೂಡ ಅದನ್ನು ಉಲ್ಲಂಘಸಿ ಸಿ.ಇ.ಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಧರಿಸಿದ್ದ ಶಿವದಾರ, ಜನಿವಾರ, ರುದ್ರಾಕ್ಷಿ ಸರಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇತಿಹಾಸ ಪ್ರಸಿದ್ಧ ಬೈಂದೂರು ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಬಿ. ದೊಟ್ಟಯ್ಯ ಪೂಜಾರಿ ಅವರು ನೇಮಕಗೊಂಡಿದ್ದಾರೆ.   ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಬಿ. ದೊಟ್ಟಯ್ಯ ಪೂಜಾರಿ ಅವರು ಸೌತ್‌ ಕೆನರಾ ಪೋಟೋಗ್ರಾಫರ್ಸ ಅಸೋಸಿಯೇಶನ್‌ ಕುಂದಾಪುರ- ಬೈಂದೂರು ವಲಯದ ನಿಕಟಪೂರ್ವ ಅಧ್ಯಕ್ಷರಾಗಿದ್ದಾರೆ. ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಮಟ್ಟದ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಮನ ಸೆಳೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ವಾರ್ಷಿಕ ಸಂಚಿಕೆ ‘ಶಿಖರʼವನ್ನು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀನಿವಾಸ ಸೋಮಯಾಜಿ ಅವರು ಅನಾವರಣಗೊಳಿಸಿ, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ದೀಪಾ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹರೀಶ್ ಕಾಂಚನ್ ನಿರೂಪಿಸಿದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ರವಿನಾ ಸಿ. ಪೂಜಾರಿ ಸ್ವಾಗತಿಸಿ, ಶಿಖರ ವಾರ್ಷಿಕ ಸಂಚಿಕೆಯ ನಿರ್ವಾಹಕ ಸಂಪಾದಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಾಗ್ರಾಮ್ ಮೂಲಕ ಕಂಪನಿಯೊಂದರ ಷೇರು ಮಾರುಕಟ್ಟೆಯ  ಸ್ಟಾಕ್‌ ಅಡ್ವೈಸ್‌ ಮಾಡುತ್ತೇನೆ ಎಂದು ನಂಬಿಸಿ ವಂಚನೆ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ. ಕುಂದಾಪುರದ ನಿವಾಸಿ ವಿಘ್ನೇಶ್‌ (28) ಇವರಿಗೆ ಸೈರಾನ್‌ ಟೆಕ್ನಾಲಜೀಸ್ ಕಂಪನಿಯ ಮಾರುಕಟ್ಟೆ ಸ್ಟೋಕ್ ಅಡ್ವೈಸ್‌ ಮಾಡುತ್ತೇವೆಂದು ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ಅದರಂತೆ ಅವರು ಕಂಪನಿಯು ನೀಡಿದ ದೂರವಾಣಿ ನಂಬ್ರಕ್ಕೆ ಕರೆ ಮಾಡಿದಾಗ 6 ತಿಂಗಳವರೆಗೆ ಷೇರು ಮಾರುಕಟ್ಟೆಯಲ್ಲಿ ಸ್ಟೋಕ್ ಅಡ್ವೈಸ್‌ ಮಾಡುವ ಬಗ್ಗೆ 74,300 ರೂ. ಮುಂಗಡವಾಗಿ ಹಣ ಕೊಡಬೇಕು ಎಂದು ತಿಳಿಸಿದ್ದರು. ಅದರಂತೆ ತನ್ನ ಬ್ಯಾಂಕ್ ಖಾತೆಯಿಂದ  ಕಂಪನಿಯ ಮಹೇಂದ್ರ ಬ್ಯಾಂಕ್ ಖಾತೆಗೆ 38,900ರೂ. ಹಾಗೂ ಎಕ್ಸಿಸ್ ಬ್ಯಾಂಕ್ ಖಾತೆಗೆ 35,400ರೂ, ಹಣವನ್ನು ಪೋನ್ ಪೇಯಿಂದ ವರ್ಗಾವಣೆ ಮಾಡಿದ್ದರು. ನಂತರ ಷೇರು ಮಾರುಕಟ್ಟೆಯಲ್ಲಿ ಸ್ಟೋಕ್ ಅಡ್ವೈಸ್‌ ಮಾಡದೇ ವಂಚನೆ ಎಸಗಿದ್ದಾರೆ. ನಂತರ ವಿಘ್ನೇಶ್‌ ಸೈಬ‌ರ್ ಕ್ರೈಮ್‌ಗೆ ದೂರು ಸಲ್ಲಿಸಿದ್ದು, ದೂರಿನಂತೆ ಆಪಾದಿತರ ಬ್ಯಾಂಕ್ ಖಾತೆಯನ್ನು ಪ್ರೀಝ್ ಮಾಡಲಾಗಿದೆ. ಈ ಬಗ್ಗೆ ಕುಂದಾಪುರ ಪೋಲೀಸ್‌…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: 2024-25ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ರ್ಯಾಂಕ್‌ ಪಟ್ಟಿ ಬಿಡುಗಡೆಗೊಂಡಿದೆ. ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಡಾ. ಜ್ಯೋತಿ ಕೆ. ವಿ. ಕ್ಲಿನಿಕಲ್ ನಾಚುರೋಪತಿ ವಿಭಾಗದಲ್ಲಿ ದ್ವಿತೀಯ ರ್ಯಾಂಕ್‌, ಡಾ. ಅನಘಶ್ರೀ ಎಸ್. ಕ್ಲಿನಿಕಲ್ ಯೋಗ ವಿಭಾಗದಲ್ಲಿ ತೃತೀಯ ರ್ಯಾಂಕ್‌, ಡಾ. ಲೆಂಜಿಕ್ಲೂ ಗಾನ್‌ಮೈ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಆರನೆಯ ರ್ಯಾಂಕ್‌, ಡಾ. ಮೇಘನಾ ಎಂ. ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದಲ್ಲಿ ಒಂಬತ್ತನೆಯ ರ್ಯಾಂಕ್‌ ಗಳಿಸಿದ್ದಾರೆ. ರ್ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕೈಗಾರಿಕಾ ಪರಿವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚಂದು ಮಸಾಲ ಇಂಡಸ್ಟ್ರಿ ಮತ್ತು ರಾಜಾರಾಮ್ ಪಾಲಿಮರ್ ಕೋಟೇಶ್ವರ ಇಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಈ ಸಂದರ್ಭ ಕಾಲೇಜಿನ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸಂಯೋಜಕರಾದ ರಾಜೇಶ್ ಶೆಟ್ಟಿ ವಕ್ವಾಡಿ, ಕಿಶೋರ್ ಕೃಷ್ಣ ಮರಕಾಲ ಹಾಗೂ ಚಂದು ಮಸಾಲ ಇಂಡಸ್ಟ್ರಿ ಮಾಲೀಕರಾದ ಮಂಜುನಾಥ್ ಕಾಮತ್ ಹಾಗೂ ರಾಜಾರಾಮ್ ಪಾಲಿಮರ್ ಮಾಲೀಕರಾದ ಸುರೇಶ್ ಕಾಮತ್ ಮತ್ತು ಜಗದೀಶ್ ಕಾಮತ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ – 2025 ಆಚರಿಸಲಾಯಿತು. ವಿ.ಟಿ.ಯು ಎಕ್ಸ್ ಟೆಂಷನ್ ಸೆಂಟರ್ ಮಂಗಳೂರು ಇಲ್ಲಿನ ವಿಶೇಷ ಅಧಿಕಾರಿಗಳಾದ ಡಾ. ಎನ್. ದಾಮೋದರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಉದ್ಯೋಗವಕಾಶಗಳನ್ನು ಪಡೆಯುವ ವಿವಿಧ ಹಾದಿಗಳ ಬಗ್ಗೆ ತಿಳಿಸಿದರು. ಐ. ಎಂ. ಜೆ ಇನ್ಸ್ಟಿಟ್ಯೂಷನ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ಆರ್ಟಿಫಿಷಿಯಲ್ ಇಂಟಲಿಜಸನ್ ಉಪಯೋಗ ಹೆಚ್ಚುತಿರುವುದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಬೇಕು ಎಂದರು. ಎಂ. ಐ.ಟಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಅವರು ವರದಿ ವಾಚನಗೈದರು. ಕಾಲೇಜಿನ ಉಪಾಪ್ರಾಂಶುಪಾಲಾರದ ಡಾ. ಮೆಲ್ವಿನ್. ಡಿ ಸೋಜ ಅವರು ಕಲಿಕೆಯಲ್ಲಿ ಉತ್ತಮ ಸಾಧನೆಗೈದವರ ಪಟ್ಟಿಯನ್ನು ಓದಿದರು. ಕಾರ್ಯಕ್ರಮದ ಸಂಚಾಲಕರಾದ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಸ್ವಾಗತಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಸಹರಾ ಕಾರ್ಯಕ್ರಮ ನಿರ್ವಹಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಶಾಂಭವಿ ವಂದಿಸಿದರು.

Read More