ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ – 2025 ಆಚರಿಸಲಾಯಿತು. ವಿ.ಟಿ.ಯು ಎಕ್ಸ್ ಟೆಂಷನ್ ಸೆಂಟರ್ ಮಂಗಳೂರು ಇಲ್ಲಿನ ವಿಶೇಷ ಅಧಿಕಾರಿಗಳಾದ ಡಾ. ಎನ್. ದಾಮೋದರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಉದ್ಯೋಗವಕಾಶಗಳನ್ನು ಪಡೆಯುವ ವಿವಿಧ ಹಾದಿಗಳ ಬಗ್ಗೆ ತಿಳಿಸಿದರು. ಐ. ಎಂ. ಜೆ ಇನ್ಸ್ಟಿಟ್ಯೂಷನ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ಆರ್ಟಿಫಿಷಿಯಲ್ ಇಂಟಲಿಜಸನ್ ಉಪಯೋಗ ಹೆಚ್ಚುತಿರುವುದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಬೇಕು ಎಂದರು. ಎಂ. ಐ.ಟಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಅವರು ವರದಿ ವಾಚನಗೈದರು. ಕಾಲೇಜಿನ ಉಪಾಪ್ರಾಂಶುಪಾಲಾರದ ಡಾ. ಮೆಲ್ವಿನ್. ಡಿ ಸೋಜ ಅವರು ಕಲಿಕೆಯಲ್ಲಿ ಉತ್ತಮ ಸಾಧನೆಗೈದವರ ಪಟ್ಟಿಯನ್ನು ಓದಿದರು. ಕಾರ್ಯಕ್ರಮದ ಸಂಚಾಲಕರಾದ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಸ್ವಾಗತಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಸಹರಾ ಕಾರ್ಯಕ್ರಮ ನಿರ್ವಹಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಶಾಂಭವಿ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಡಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಕಛೇರಿ ಸೇವಕ ಹಾಗೂ ಲೆದರ್ ವರ್ಕರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಛೇರಿ ಸೇವಕ ಹುದ್ದೆಗೆ ಎಸ್.ಎಸ್.ಎಲ್ಸಿ ವಿದ್ಯಾರ್ಹತೆ ಹಾಗೂ ಲೆದರ್ ವರ್ಕರ್ ಹುದ್ದೆಗೆ ಸರ್ಟಿಫಿಕೇಟ್ ಇನ್ ಲೆದರ್ ವರ್ಕಿಂಗ್ ಇನ್ ಶೂ ಮೇಕಿಂಗ್ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಮೇ 7 ರ ಒಳಗಾಗಿ ಸದಸ್ಯ ಕಾರ್ಯದರ್ಶಿಯವರು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ, ರೆಡ್ ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0820-2533372, ಮೊ.ನಂ: 9964583433 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಹಂದಟ್ಟು ಪರಿಸರದ ಚಿತ್ರಕಲಾವಿದ ಪುನಿತ್ ಪೂಜಾರಿ ಅಶ್ವಥ ಎಲ್ಲೆಯ ಮೂಲಕ ಬಿಡಿಸಿದ ವೀರಚಂದ್ರಹಾಸ ಯಕ್ಷಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದೇ ಬರುವ ಎ. 18 ರಂದು ತೆರೆಕಾಣಲಿರುವ ಹಾಗೂ ಕನ್ನಡ ಚಿತ್ರರಂಗದಲ್ಲೆ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪರಿಚಯಿಸುಲು ಮಂದಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಈ ಯಕ್ಷ ಚಿತ್ರ ವೀರಚಂದ್ರಹಾಸ ಕಲಾವಿದ ಪುನಿತ್ ಅಶ್ವಥ ಮರದ ಎಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ಬಿಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ ಅಲ್ಲದೆ ರವಿ ಬಸ್ರೂರ್ ಇವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರಾವಳಿಯ ಜಾನಪದದ ಸೊಗಡಿಗೆ ಸರಿಸಾಟಿಯೇ ಇಲ, ಇಲ್ಲಿನ ಜಾನಪದ ಬದುಕಿನ ಪರಿಭಾಷೆ ವಿಶಿಷ್ಟವಾದದ್ದು ಎಂದು ಉದ್ಯಮಿ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು. ಅವರು ಬುಧವಾರ ಕೋಟದ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ಜಾನಪದ ಹಬ್ಬ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿನ ಜಾನಪದಲ್ಲಿ ವಿವಿಧ ತರಹದ ಬದುಕಿನ ಚಹರೆಗಳಿವೆ ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡ್ಯೋಯಬೇಕಿದೆ ಎಂದರಲ್ಲದೆ ಗತವೈಭವ ಮತ್ತೆ ಮರುಕಳಿಸಬೇಕಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ .ರಾಜೇಂದ್ರ ಎಸ್. ನಾಯಕ ವಹಿಸಿದ್ದರು. ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕೋಟತಟ್ಟು ಶಾಂತಾ ಐತಾಳ್ ಅವರನ್ನು ಗುರುತಿಸಿ ಗೌರವಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಉಪನ್ಯಾಸಕರಾದ ರಮೇಶ್ ಆಚಾರ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಶಂಕರ್ ನಾಯ್ಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಭೂಮಿಕ ನಿರೂಪಿಸಿ, ವಂದಿಸಿದರು. ಜಾನಪದ ಸೊಗಡಿಗೆ ವಿಶಿಷ್ಟ ಆಯೋಜನೆಜಾನಪದ ಹಬ್ಬದ ಅಂಗವಾಗಿ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಯೋಜಿಸಿದ್ದು ಗಣ್ಯರಿಗೆ ಕಾಲು ತೊಳೆಯಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಭಾಗದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಸಿದ್ಧ ಸಮಾಧಿ ಯೋಗ ಬೈಂದೂರು ವಲಯದ ಮೂಲಕ ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಇದೀಗ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಾರೈಸುವುದಾಗಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಹೇಳಿದರು. ಸಿದ್ಧ ಸಮಾದಿ ಯೋಗ ಬೈಂದೂರು ವಲಯದ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶ್ರೀ ಶ್ರೀನಿವಾಸ ಮತ್ತು ಶ್ರೀ ಪದ್ಮಾವತಿಯವರ ಸಾರ್ವಜನಿಕ ವೈಭವದ ಕಲ್ಯಾಣೋತ್ಸವವು ಮೇ.10 ರಂದು ಇಲ್ಲಿನ ಯಡ್ತರೆ ಗ್ರಾಮದ ನೆಲ್ಯಾಡಿ ಬೈಲಿನಲ್ಲಿ ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಿದ್ಧ ಸಮಾದಿ ಯೋಗದ ಆರ್ಚಾರ್ಯ ಕೇಶವಜೀ ಮಾತನಾಡಿ, ಮೇ.10ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು ಅಂದು ಬೆಳ್ಳಿಗೆ 8.00 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಳಿಕ 9.30ರಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಲ್ಯಾಣೋತ್ಸವ ನಡೆಯುವ ಸ್ಥಳಕ್ಕೆ ಪುರಮೆರವಣೆಗೆ ಮೂಖಾಂತರ ಶ್ರೀ ಶ್ರೀನಿವಾಸ ದೇವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಚಿಣ್ಣರ ಬೇಸಿಗೆ ಶಿಬಿರ ಅಪರಂಜಿ 2.0 ಉದ್ಘಾಟನಾ ಸಮಾರಂಭವು ಮಂಗಳವಾರದಂದು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರಾವಳಿ ಭಾಗದಲ್ಲಿ ಮರೀಚಿಕೆಯಾಗಿ ರುವ ಆಂಗ್ಲ ಭಾಷಾ ಸಂವಹನ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಗುರಿಯಾಗಿದೆ. ಪ್ರತಿಯೊರ್ವ ಶಿಬಿರಾರ್ಥಿಯು ಇದರ ಸದುಪಯೋಗವನ್ನು ಪಡೆದುಕೊಂಡಾಗ ಈ ಕಾರ್ಯಕ್ರಮವು ಯಶಸ್ವಿಯಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ವಲಯದ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯಕ್ ಅವರು ಶೈಕ್ಷಣಿಕ ಗುಣಮಟ್ಟ ಹಾಗೂ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ. ಮಗು ಶಾಲಾ ವ್ಯವಸ್ಥೆಯಲ್ಲಿದ್ದಾಗ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ. ಈ ಕಾರ್ಯಕ್ರಮದಲ್ಲಿ ಪಡೆದುಕೊಂಡ ಶಿಕ್ಷಣವನ್ನು ತಮ್ಮ ಸ್ನೇಹಿತರು ಹಾಗೂ ಪೋಷಕರೊಂ ದಿಗೆ ಹಂಚಿಕೊಂಡಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಂಐಟಿ ಅಂತಿಮ ವರ್ಷದ ಎಐಅಂಡ್ ಎಂಎಲ್ ವಿದ್ಯಾರ್ಥಿನಿ ಮೇಘನಾ ವಿಜಯ್ ಕುಮಾರ್, ಕಾನ್ಫರೆನ್ಸ್ ಸಂಯೋಜಕಿ ಜೀನ್ ಆಶ್ಲೇ ಅವರ ಅಧಿಕೃತ ಆಹ್ವಾನದ ಮೇರೆಗೆ, ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ದುಭಾಯ್ ನಲ್ಲಿ ವರ್ಚುವಲ್ ಆಗಿ ಪ್ರಬಂಧ ಮಂಡಿಸಿದ್ಧಾರೆ. ವಿಭಾಗ ಮುಖ್ಯಸ್ಥರಾದ ಡಾ. ಇಂದ್ರ ವಿಜಯ್ ಸಿಂಗ್ ಮತ್ತು ಟಿ. ದಿಲೀಪ್ ಅವರು ಸಹ-ಲೇಖಕರಾಗಿ ಬರೆದ ಸೆಲ್ ಫೋನ್ ಮತ್ತು ಸೆಲ್ ಟವರ್ ವಿಕಿರಣಕ್ಕೆ ಒಡ್ಡಿಕೊಂಡ ಮಕ್ಕಳಲ್ಲಿ ಆಕ್ಸಿಡೇಟಿವ್ ಒತ್ತಡದ ಸೂಚಕಗಳ ಅಧ್ಯಯನ ಎಂಬ ಕಾನ್ಫರೆನ್ಸ್ ಪ್ರಬಂಧವನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲು ಆಯ್ಕೆ ಮಾಡಿದ್ದರಿಂದ ಈ ಆಹ್ವಾನವನ್ನು ನೀಡಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಮನಿತರ ಧನಿಯಾಗಿ, ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯನ್ನು ಹೋಗಲಾಡಿಸಿ ನ್ಯಾಯೋಚಿತವಾಗಿ ಬದುಕುವ ಹಕ್ಕನ್ನು ಸಂವಿಧಾನ ರಚನೆಯ ಮೂಲಕ ಕೊಡಮಾಡಿಸಿದ ಹಿರಿಯ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಸಮೃದ್ಧ ಭಾರತದ ಕನಸು ಕಂಡರು. ಸಾಮರಸ್ಯ, ಸಮಾನತೆ, ಸಹಬಾಳ್ವೆ, ಧಾರ್ಮಿಕ ಸೌಹಾರ್ದತೆ ಇಂದಿನ ಅಗತ್ಯವಾಗಿದ್ದು ಯುವ ಜನತೆ ಇದನ್ನು ಅರ್ಥೈಸಿಕೊಂಡು ಅಂಬೇಡ್ಕರ್ರವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭವ್ಯ ಭಾರತದ ಅಭಿವೃದ್ಧಿಗೆ ಪಣತೊಡಬೇಕೆಂದು ನಾಗರಾಜ ವೈದ್ಯ ಎಂ. ಹೇಳಿದರು. ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಬಗ್ಗೆ ತಿಳಿಸಿ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿಉಡುಪಿ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ 2024-25 ನೇ ಸಾಲಿನಲ್ಲಿ ಕನಕದಾಸರ ಮುಂಡಿಗೆ ಸಾಹಿತ್ಯ-ತಾತ್ವಿಕ ವಿವೇಚನೆ, ಕರ್ನಾಟಕ ತತ್ವಪದಗಳ ಚಾರಿತ್ರಿಕ ಅಧ್ಯಯನ, ಕನ್ನಡದಲ್ಲಿ ಅನುಭಾವ ಸಾಹಿತ್ಯ-ತಾತ್ವಿಕ ಅಧ್ಯಯನ ಹಾಗೂ ಕನ್ನಡದಲ್ಲಿ ಕೀರ್ತನ ಸಾಹಿತ್ಯದ ಸಮಾಜೋ-ಸಾಂಸ್ಕೃತಿಕ ಅಧ್ಯಯನ ಈ ವಿಷಯಗಳ ಕುರಿತು ಕಿರು ಅಧ್ಯಯನ ನಡೆಸಲು ತಲಾ 1.50 ಲಕ್ಷ ರೂ. ಗಳಂತೆ ಫೆಲೋಶಿಪ್ ನೀಡಲಿದ್ದು, ಆಸಕ್ತ ಯುವ ಸಂಶೋಧನಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 12 ತಿಂಗಳ ಅವಧಿಯ ಈ ಅಧ್ಯಯನ ಯೋಜನೆಯ ಬಗ್ಗೆ ಆಸಕ್ತ 20 ರಿಂದ 55 ವರ್ಷದೊಳಗಿನ ಸಂಶೋಧನಾರ್ಥಿಗಳು ತಮ್ಮ ವಿದ್ಯಾರ್ಹತೆ, ಸಂಶೋಧನೆಯ ಬಗೆಗಿನ ಅನುಭವ ಹಾಗೂ ತಮ್ಮ ಆಸಕ್ತಿ ಕ್ಷೇತ್ರಗಳ ಒಳಗೊಂಡ ವಿವರಗಳನ್ನು ಹಾಗೂ ಆಯ್ಕೆ ಮಾಡಿಕೊಂಡ ವಿಷಯವನ್ನು ಕುರಿತು ಅಧ್ಯಯನ ವ್ಯಾಪ್ತಿ ಮತ್ತು ಆಕರ ಸಾಮಾಗ್ರಿಗಳನ್ನು ಒಳಗೊಂಡ ಸಂಕ್ಷಿಪ್ತ ಮಾಹಿತಿಯಿರುವ ಸಾರಲೇಖವನ್ನು ಅರ್ಜಿಯೊಂದಿಗೆ ಲಗತ್ತಿಸಿ, ಅಧ್ಯಯನ ಕೇಂದ್ರದ ಇ-ಮೇಲ್ಗೆ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ರೀಡೆಯಿಂದ ವ್ಯಕ್ತಿಯ ಜೀವನಕ್ಕೆ ಹಲವು ಉಪಯುಕ್ತ ಸಂದೇಶಗಳು ಸಿಗುತ್ತವೆ. ವೇಗ, ದೂರ ಮತ್ತು ಎತ್ತರ ಇವು ಮೂರು ಯಶಸ್ಸನ್ನು ಪಡೆಯಲು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಬಾರಕೂರು ನ್ಯಾಷನಲ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಉಮೇಶ್ ಶೆಟ್ಟಿ ಹೇಳಿದರು. ಅವರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇದರ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಭಾಸ್ಕರ ಶೆಟ್ಟಿ ಸಲ್ವಾಡಿ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವುಕ್ಕಿಂತ ಕ್ರೀಡಾಸ್ಪೂರ್ತಿ ಮುಖ್ಯ. ಶಿಸ್ತಿನ ಜೀವನ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಸಿ.ಕೆ., ದೈಹಿಕ ಶಿಕ್ಷಣ ನಿರ್ದೇಶಕಿ ಸುಮತಿ, ಬೋಧಕ ಬೋಧಕೇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ವೀರೇಶ್…
