Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ-ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆಯಡಿ ಮೀನುಗಾರರು, ಮೀನು ಕೃಷಿಕರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು, ಮೀನು ಸಾಗಾಣಿಕೆ ಮಾಡುವವರು, ಮೀನು ಸಂಸ್ಕರಣಾ ಘಟಕಗಳು, ಮೀನು ಆಧಾರಿತ ಸೂಕ್ಷ್ಮ ಅಥವಾ ಸಣ್ಣ ಉದ್ಯಮಗಳು, ಐಸ್ ಪೂರೈಕೆದಾರರು ಹಾಗೂ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ನಿರತರಾದ ಪ್ರತಿಯೋರ್ವರೂ ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (ಓಈಆP) ಪೋರ್ಟಲ್ ನಲ್ಲಿ ನೇರವಾಗಿ ಅಥವಾ ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರದ (ಅSಅ) ಮೂಲಕ ಶುಲ್ಕ ರಹಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (ಓಈಆP) ಪೋರ್ಟಲ್ ನಲ್ಲಿ ನೋಂದಾಯಿಸಲು ಹೆಚ್ಚುವರಿ ಶುಲ್ಕ ವಿಧಿಸುವ/ ವಿಧಿಸಿರುವ/ ವಿಧಿಸುತ್ತಿರುವ ಮೀನುಗಾರಿಕೆ ಸಹಕಾರಿ ಸಂಘಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ತಂಡವನ್ನು 35-20, 35-5 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ತಂಡವನ್ನು 35-12, 35-10 ಅಂಕಗಳಿಂದ ಸೋಲಿಸಿ 19ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ಬಾಲಕರ ವಿಭಾಗದಲ್ಲಿ ಆಕಾಶ್ ಉತ್ತಮ ರಕ್ಷಣಾಕಾರ, ಲಿಖಿತ್ ಉತ್ತಮ ಆಕ್ರಮಣಕಾರ ಹಾಗೂ ಬಾಲಕಿಯರ ವಿಭಾಗದಲ್ಲಿ ಲಾಂಛನ ಉತ್ತಮ ರಕ್ಷಣಾಕರ್ತಿ, ಶಾಲಿನಿ ಉತ್ತಮ ಆಕ್ರಮಣಕಾರ್ತಿ ಪ್ರಶಸ್ತಿ ಪಡೆದರು.  ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘದ ಸಹಯೋಗದಲ್ಲಿ “ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುವ ಕಲೆ” ಕುರಿತು ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಎನ್.ಎಮ್.ಎ.ಎಮ್.ಐ.ಟಿ ಇದರ ಆಪ್ತ ಸಮಾಲೋಚಕರೋದ ಅಂಕಿತ್ ಎಸ್.ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುವ ವಿಚಾರಗಳು ಪರಿಣಾಮಕಾರಿಯಾಗಿ ಅವರಿಗೆ ತಲುಪುವ ಮತ್ತು ಅರ್ಥವಾಗುವ ರೀತಿಯಲ್ಲಿ ಇರಬೇಕು. ವಿದ್ಯಾರ್ಥಿ ಸಮುದಾಯದ ಮನಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಮೊದಲು ಮಾಡಬೇಕು. ಅವರು ಆಸಕ್ತಿಯನ್ನು ಅರಿತು ಅದಕ್ಕೆ ತಕ್ಕ ರೀತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಾಠಗಳನ್ನು ಮಾಡಬೇಕು. ಈ ನೆಲೆಯಲ್ಲಿ ಶಿಕ್ಷಕರ ಸಾಕಷ್ಟು ಹೊಸ ನೆಲೆಯಲ್ಲಿ ಯೋಚಿಸಬೇಕು. ಮತ್ತು ಅದೇ ರೀತಿ ತಯಾರಿ ನಡೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ, ಶಿಕ್ಷಕರ ಸಂಘದ ಉಪಾಧ್ಯಕ್ಷ ವಿದ್ಯಾಧರ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಅಭಿಮುಖವಾಗಿ ಬರುತ್ತಿದ್ದ ಈಚರ್ ವಾಹನ, ಕಾರು ಹಾಗೂ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿ – ಹಾಲಾಡಿ ಪ್ರಮುಖ ಸಂಪರ್ಕ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಹುಣ್ಸೆಮಕ್ಕಿಯಿಂದ ತೆಕ್ಕಟ್ಟೆ ಕಡೆಗೆ ಅತೀ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್ ಮೊದಲು ಎದುರಿನಿಂದ ಬರುತ್ತಿದ್ದ ಈಚರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅನಂತರ ಮುಂಭಾಗದಲ್ಲಿ ಚಲಿಸುತ್ತಿದ್ದ ಸ್ಯಾಂಟ್ರೋ ಝಿಂಗ್ ಕಾರಿಗೆ ಢಿಕ್ಕಿ ಹೊಡೆದುಕೊಂಡು ಎಳೆದು ಸಾಗಿದೆ. ಇದೇ ವೇಳೆ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಸಾಗುತ್ತಿದ್ದ ಮಾರುತಿ ಸುಜುಕಿ ಸೂಪರ್ ಕ್ಯಾರಿ ಪಿಕ್‌ಅಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಹಾಗೂ ಪಿಕಪ್ ವಾಹನಗಳು ನಜ್ಜುಗುಜ್ಜಾಗಿದೆ. ಪಿಕಪ್ ವಾಹನ ಆಯತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಟಿಪ್ಪರ್ ಚಾಲಕ ಅತಿವೇಗದಿಂದ ಬಂದು ಈಚರ್ ಹಾಗೂ ಸ್ಯಾಂಟ್ರೋ ಝಿಂಗ್ ಕಾರಿಗೆ ಢಿಕ್ಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲಾ ಸೇರಿ ಮಹಾನಗರಿ ಬೆಂಗಳೂರಿನಲ್ಲಿ ಸಂಯೋಜಿಸಿದ ನಾಲ್ಕನೇ ವರ್ಷದ ಯಶಸ್ವಿ ಯಕ್ಷಗಾನ ಬಯಲಾಟ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ  ಯಶಸ್ವಿ ಪ್ರದರ್ಶನ ಕಂಡಿತು. ಕಮಲಶಿಲೆ ಯಕ್ಷಗಾನ ಮೇಳದ ಸಾಂಪ್ರದಾಯಿಕ ರಂಗಸ್ಥಳ ಮತ್ತು ಪುಷ್ಪಾಲಂಕೃತ ಬೆಳ್ಳಿ ತೊಟ್ಟಿಲ ಸೊಬಗಿನಲ್ಲಿ ಕಮಲಶಿಲೆ ಯಕ್ಷೋತ್ಸವ 2024 ಮೇಳೈಸಿತು. ಹಿರಿಯ ಭಾಗವತ ಕಿಗ್ಗ ಹಿರಣ್ಣಯ್ಯ ಆಚಾರ್ ಮತ್ತು ಯುವ ಭಾಗವತ ಗಣೇಶ್ ಶೆಟ್ಟಿ ಬೆಪ್ಡಿ ಹಾಗೂ ಗಣೇಶ್ ಬಿಲ್ಯಾಡಿ ಯವರ ‘ಹಳಬೇರು-ಹೊಸ ಚಿಗುರು’ ಸಮಾಗಮಕ್ಕೆ ಮೆರುಗುತಂದ ಚಂಡೆ-ಮದ್ದಳೆ ಮತ್ತು ಕಾಡು ದೇವಡಿಗರ ಅದ್ಭುತ ನಾದಸ್ವರದ ಜೇಂಕಾರ. ಮಧು-ಕೈಟಭ, ಚಂಡ-ಮುಂಡ, ಶುಂಭ ಮತ್ತು ಕಲಿ ರಕ್ತಬೀಜರ ಸಾಂಪ್ರದಾಯಕ ಬಡಗು ತಿಟ್ಟಿನ ವೇಷ – ಕುಣಿತ ಮಹಾನಗರಿ ಪ್ರೇಕ್ಷಕರ ಮನಸೋರೆಗೊಳಿಸಿದೆ. ಉಪ್ಪುಂದ ನಾಗೇಂದ್ರರ ವಿದ್ಯುನ್ಮಾಲಿ, ಮಹಿಷಾಸುರ, ಶ್ರೀದೇವಿ ಮತ್ತು 65 ಹರೆಯದ ಕೊಚ್ಚಾಡಿ ರಾಮ ದೇವಾಡಿಗರ ರಕ್ತೇಶ್ವರಿ ಪಾತ್ರಗಳ ವೇಷಾಲಂಕಾರ ಮತ್ತು ಆಂಗೀಕ ಅಭಿನಯ ಯಶಸ್ವಿ ಪ್ರದರ್ಶನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಪ್ರಾರಂಭಿಸಲು ಸೊಸೈಟಿ ರಿಜಿಸ್ಟ್ರೇಷನ್ ಆ್ಯಕ್ಟ್/ ಟ್ರಸ್ಟ್ ಆ್ಯಕ್ಟ್ ಅಡಿ ನೋಂದಣಿಯಾದ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯು ನೋಂದಣಿ ಹೊಂದಿ ಕನಿಷ್ಠ 02 ವರ್ಷಗಳಾಗಿರಬೇಕು, ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಲಾದ ವಿದ್ಯಾರ್ಹತೆಯುಳ್ಳ ಸೇವಾ ಮನೋಭಾವದ ಸಿಬ್ಬಂದಿಗಳನ್ನು, ಹಿರಿಯ ನಾಗರಿಕರ ಅವಶ್ಯಕತೆಗಳನ್ನು ಪೂರೈಸುವ ಮೂಲಭೂತ ಸೌಕರ್ಯ ಒದಗಿಸುವ ಸೇವಾ ಮನೋಭಾವ ಹೊಂದಿರುವ ಆಡಳಿತ ಮಂಡಳಿಯನ್ನು ಹಾಗೂ ಸಂಸ್ಥೆಯು ಆಡಳಿತ ಮಂಡಳಿಯ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟ ಹಾಗೂ ಖಚಿತವಾಗಿರುವ ಉಪನಿಯನಗಳನ್ನು ಹೊಂದಿರಬೇಕು. ಸಂಸ್ಥೆಯು ಆರ್ಥಿಕ ಸ್ಥಿತಿಗತಿಯು ಸಧೃಡವಾಗಿರಬೇಕು. ಯಾವುದೇ ಓರ್ವ ವ್ಯಕ್ತಿ ಹಾಗೂ ಜನಾಂಗದ ಲಾಭಕ್ಕಾಗಿ ಸಂಸ್ಥೆಯನ್ನು ನಡೆಸುತ್ತಿರಬಾರದು ಹಾಗೂ ಯಾವುದೇ ಜಾತಿ, ಪಂಥ, ಮತ ಮತ್ತು ಭಾಷೆಗಳನ್ನು ಪರಿಗಣಿಸದೇ ಎಲ್ಲರಿಗೂ ಸೌಲಭ್ಯ ಒದಗಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತರುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ಶಿಧಿ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವುವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಮಿಕ ಕಾಯಿದೆಗಳು ಬಲಿಷ್ಠವಾಗಿದ್ದು, ಇವುಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಂತಿವನ ಟ್ರಸ್ಟ್‌ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಹೊರತಂದ ಜ್ಞಾನ ವರ್ಷಿಣಿ ಮತ್ತು ಜ್ಞಾನ ದರ್ಶಿನಿ ಪುಸ್ತಕಗಳ ಕುರಿತ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದರು. ಪ್ರೌಢಶಾಲಾ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಪೂರ್ವಿ ಜೆ. ಎಮ್. ಪ್ರಥಮ ಸ್ಥಾನ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ರಿಷಿಕಾ ದೇವಾಡಿಗ ದ್ವಿತೀಯ ಸ್ಥಾನ ಹಾಗೂ ಚಿತ್ರಕಲಾ ವಿಭಾಗದಲ್ಲಿ ಅನನ್ಯ ವಿ. ತೃತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದರು. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಶಾಲಾ ಪ್ರಾಂಶುಪಾಲರು ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶರಣ ಕುಮಾರ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಸೇವೆಯಾಟದಂದು ಶ್ರೀ ಕ್ಷೇತ್ರದ ವತಿಯಿಂದ ನೀಡುವ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಪ್ರಶಸ್ತಿಗೆ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್. ಶ್ರೀಧರ ಹಂದೆ ಅವರು ಭಾಜನರಾಗಿದ್ದಾರೆ.  ನ.17ರಂದು ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರಥಮ ಸೇವೆಯಾಟದಂದು ರಾತ್ರಿ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿರುವುದು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸರಕಾರ ರಾಜ್ಯ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಕಾಲೇಜು ಉಡುಪಿ, ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಈ ಸ್ಪರ್ಧೆಯಲ್ಲಿ ಕೋಟೇಶ್ವರ ಯಡಾಡಿ-ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಈಶಾನ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರಣ್ಯ ಸಂಸ್ಥೆಯಲ್ಲಿ ಪ್ರಾಥಮಿಕ ತರಗತಿಯಿಂದಲೇ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆ ಆಧಾರಿತ ಬೋಧನೆಯು ಮಕ್ಕಳ ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಮತ್ತು ಶಾಲೆಯಲ್ಲಿನ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳು ಮತ್ತು ಶಾಲೆಯಲ್ಲಿ ಆಯೋಜಿಸುವ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳು ಕಲಿಕೆಯಲ್ಲಿ ಸ್ರಜನಶೀಲವಾಗಿ ಮತ್ತು ಆಸಕ್ತಿದಾಯಕವಾಗಿ ಕಲಿಕೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ. ಈಗಾಗಲೇ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.…

Read More