ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ’ಕಠಿಣ ಪರಿಶ್ರಮ, ಶ್ರಮದಲ್ಲಿನ ಭಕ್ತಿ, ಸಮರ್ಪಣಾ ಭಾವ ಮತ್ತು ಕಾರ್ಯ ಬದ್ಧತೆಯಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ನಿರ್ದಿಷ್ಟ ಗುರಿಯೆಡೆಗೆ ಸ್ಪಷ್ಟತೆ ಇರಲಿ. ಗೊಂದಲ ಬೇಡ’ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್, ಕೋಲ್ಕತ್ತಾದಲ್ಲಿನ ಯೂನಿಯನ್ ಬ್ಯಾಂಕ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಸತೀಶ್ ರೈ ಹೇಳಿದರು. ವಿದ್ಯಾಗಿರಿಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ’ ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಹಲವಾರು ನುರಿತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿಯು ಆರಂಭಗೊಂಡಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ ಡಾ. ಟಿ.ಎಂ.ಎ. ಪೈ ಅವರ ಸಮರ್ಪಣೆ ಮತ್ತು ಸಮಾಜ ಸೇವೆಯಲ್ಲಿ ಬದ್ಧತೆ ಅಸಾಧಾರಣವಾಗಿ ಅಪರೂಪ. ಅವರ ಕನಸನ್ನು ನನಸಾಗಿಸುವಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡುವುದು ಈ ಕಾರ್ಡ್‌ನ ಉದ್ದೇಶವಾಗಿದೆ. ಮಣಿಪಾಲ್ ಆರೋಗ್ಯ ಕಾರ್ಡ್ “ಇಡೀ ಕುಟುಂಬಕ್ಕಾಗಿ, ಉತ್ತಮ ಮೌಲ್ಯ, ವಿಶ್ವಾಸಾರ್ಹ ಸೇವೆ ” ಎಂಬ ಅಡಿಬರಹದ ಅಡಿಯಲ್ಲಿ, ಎಲ್ಲಾ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ ಹೇಳಿದರು. ಅವರು ಅ.15ರಂದು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಮಾಹೆಯ ಕುಲಾಧಿಪತಿ ಡಾ. ರಾಮದಾಸ್ ಪೈ ಅವರ ನೇತೃತ್ವದಲ್ಲಿ 2000ರಲ್ಲಿ ಪ್ರಾರಂಭವಾದ ಮಣಿಪಾಲ್ ಆರೋಗ್ಯ ಕಾರ್ಡ್ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸುತ್ತಿದೆ. ಉಚಿತ ಆರೋಗ್ಯ ಸೇವೆಯನ್ನು ನೀಡುವುದು ಸವಾಲಿನದ್ದಾಗಿದ್ದರೂ, ಈ ಉಪಕ್ರಮವು ರಿಯಾಯಿತಿ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿಯ ನಿರಂತರ ಸುಳ್ಳು ಅಪಾದನೆಗಳಿಂದ ಜನಪರ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸುವುದು ಅಸಾಧ್ಯ ವಿಧಾನಪರಿಷತ್ತಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಧ್ವನಿ ಆಗಬಲ್ಲ ರಾಜು ಪೂಜಾರಿ ಅವರನ್ನು ಬೆಂಬಲಿಸಿದರೆ ,ಕರಾವಳಿಯ ಸ್ಥಳೀಯ ಆಡಳಿತಕ್ಕೆ ಶಕ್ತಿ ಬಂದಂತಾಗುತ್ತದೆ, ಮಾತ್ರವಲ್ಲದೆ ಸಿದ್ದರಾಮಯ್ಯನವರ ಕೈ ಬಲಪಡಿಸಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹೇಳಿದರು. ಕೋಟೇಶ್ವರ ಸಹನಾ ಹೋಟೆಲ್ ಸುಮುಖ ಹಾಲಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕುಂದಾಪುರ ಕಾಂಗ್ರೆಸ್ ಉಸ್ತುವಾರಿಗಳನ್ನು ಉದ್ದೇಶಿಸಿ ಇವರು ಮಾತನಾಡಿ, ಪ್ರತಿಯೊಂದು ಮನೆಗೆ ಆರ್ಥಿಕ ಶಕ್ತಿಯನ್ನು ನೀಡಿದ ಕಾಂಗ್ರೆಸ್ ಆಡಳಿತದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆಯವರು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ವಹಿಸಿದ್ದರು. ವೇದಿಕೆಯಲ್ಲಿ ಅಭ್ಯರ್ಥಿ ಎಸ್. ರಾಜು ಪೂಜಾರಿ, ಕುಂದಾಪುರ ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಿಶನ್ ಹೆಗ್ಡೆ, ದಿನೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ವಿಕಾಸಕ್ಕಾಗಿ ವಿಧಾನಪರಿಷತ್ ಚುನಾವಣೆಯಾಗಿದೆ. ಇದಕ್ಕೆ ಶಕ್ತಿ ತುಂಬುವ ಕೆಲಸಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಸಾಮಾನ್ಯ ಕಾರ್ಯಕರ್ತರನ್ನು ಸ್ಥಳೀಯ ಮಟ್ಟದಿಂದ ದಿಲ್ಲಿಯ ಮಟ್ಟದವರೆಗೆ ಬೆಳೆಸುವ ಪಕ್ಷ ಇದ್ರೆ ಅದು ಬಿಜೆಪಿ ಪಕ್ಷ ಮಾತ್ರ. ಸಾಮಾನ್ಯ ಕಾರ್ಯಕರ್ತನನ್ನು ಪರಿಷತ್‌ಗೆ ಕಳಿಸುವ ಕೆಲಸವನ್ನು ಸ್ಥಳೀಯಾಡಳಿತ ಸದಸ್ಯರು ಒಗ್ಗಟ್ಟಿನ ಮೂಲಕ ಮಾಡಬೇಕು ಎಂದು ಸಂಸದ ಬಿ. ವೈ ರಾಘವೇಂದ್ರ ಹೇಳಿದರು. ಅವರು ಸಿದ್ದಾಪುರ ಶ್ರೀ ರಂಗನಾಥ ಸಭಾಭವನದಲ್ಲಿ ಸೋಮವಾರ ವಿಧಾನಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯ ಪರವಾಗಿ ಸಿದ್ದಾಪುರ ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸ್ಥಳೀಯಾಡಳಿತ ಸದಸ್ಯರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಪ್ರಕೃತಿಯ ಜತೆಯಲ್ಲಿ ಜನ ಜೀವನ ಉಳಿಯಬೇಕು. ಪ್ರಕೃತಿ ಉಳಿದರೆ ಮನುಷ್ಯ ಕೂಡ ಬದುಕುತ್ತಾನೆ. ಕಸ್ತೂರಿರಂಗನ್ ವರದಿಯಲ್ಲಿ ಜನ ವಸತಿ ಪ್ರದೇಶವನ್ನು ಬಿಟ್ಟು, ಅರಣ್ಯ ಪ್ರದೇಶವನ್ನು ವರದಿಗೆ ಸೇರಿಸಲು ಅಭ್ಯಂತರ ಇಲ್ಲ ಎಂದರು. ಉಡುಪಿ ಚಿಕ್ಕಮಗಳೂರು ಸಂಸದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಹಣ, ಅಂತಸ್ತಿನಿಂದ ದೇವರ ಸಾಕ್ಷಾತ್ಕಾರವಾಗುವುದಿಲ್ಲ. ನಿಷ್ಕಲ್ಮಶ ಭಕ್ತಿ, ಪ್ರಾರ್ಥನೆಯಿಂದ ದೇವರ ಸಾಕ್ಷಾತ್ಕಾರವಾಗಿ ನಮ್ಮ ಜೀವನದಲ್ಲಿ ಖುಷಿ, ಸಂತೋಷ ಹೆಚ್ಚಾಗುತ್ತದೆ. ದೇವರ ಮೇಲೆ ಶ್ರದ್ಧೆ, ನಂಬಿಕೆ ಇಟ್ಟುಕೊಂಡು ಮುನ್ನಡೆದರೆ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳು ದೂರವಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಪ್ರಸಿದ್ಧ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು. ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-2024 ಅಂಗವಾಗಿ ಗಂಗೊಳ್ಳಿಯ ಸ. ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿ ಹೇಳುವ ಮತ್ತು ಅವರು ತಪ್ಪು ದಾರಿ ಹಿಡಿಯದಂತೆ ಎಚ್ಚರ ವಹಿಸುವ ಅಗತ್ಯತೆ ಇದೆ. ಸಮಾಜಕ್ಕಾಗಿ ಬದುಕುವ ಮಕ್ಕಳನ್ನಾಗಿ ರೂಪಿಸಿ ನಮ್ಮ ದೇಶ ಹಾಗೂ ಸಮಾಜದ ಬೆಳವಣಿಗೆ ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ. ನಮ್ಮ ಜೊತೆ ಇದ್ದುಕೊಂಡು ನಮ್ಮ ಸಮಾಜವನ್ನು ಹಾಳು ಮಾಡುತ್ತಿರುವ ದುಷ್ಟಶಕ್ತಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ‘ಆಳ್ವಾಸ್ ಫಾರ್ಮಸಿಯು 1982ರಲ್ಲಿ ಆರಂಭಗೊಂಡಿದ್ದು, ಆಯುರ್ವೇದ ಔಷಧಿ ಮತ್ತು ಇತರ ಆಯುಷ್ ಉತ್ಪನ್ನಗಳನ್ನು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉತ್ಪಾದಕರಾಗಿ ಅಭಿವೃದ್ಧಿಗೊಂಡಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಮಿಜಾರಿನ ಆಳ್ವಾ ಫಾರ್ಮಸಿಯಲ್ಲಿ ಸೋಮವಾರ ನಡೆದ ವಿವಿಧ ಔಷಧೀಯ ಉತ್ಪನ್ನಗಳ ‘ಫ್ಯಾಕ್ಟರಿ ಔಟ್‌ಲೆಟ್, ವೆಬ್‌ಸೈಟ್ ಬಿಡುಗಡೆ ಮತ್ತು ಟಿವಿಸಿ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು. ಹೇಗೆ ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತದೆಯೋ, ಹಾಗೆಯೇ ನಾವು ನಂಬಿರುವ ಮೌಲ್ಯಗಳು ನಮ್ಮನ್ನು ರಾಜ ಮಾರ್ಗದಲ್ಲಿ ಕ್ರಮಿಸುವಂತೆ ಮಾಡುತ್ತವೆ. ಆದರೆ ಇಂದಿನ ಸ್ಪರ್ಧಾತ್ಮಕ ಜಾಹೀರಾತಿನ ಯುಗದಲ್ಲಿ ವಸ್ತುಗಳ ಮಾರುಕಟ್ಟೆ ವಿಧಾನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉತ್ಪನ್ನವೊಂದು ತನ್ನ ಅಂತಸತ್ವದ ಜೊತೆ ಜಾಹೀರಾತುಗೊಂಡಾಗ ಜನರನ್ನು ತಲುಪುತ್ತದೆ. ಜಾಹೀರಾತು ಪ್ರಾಮಾಣಿಕರಾಗಿರಬೇಕು. ಜನರಲ್ಲಿ ವಿಶ್ವಾಸರ್ಹತೆಯನ್ನು ಮೂಡಿಸಬೇಕು ಎಂದರು. ಆಳ್ವಾಸ್ ಫಾರ್ಮಸಿಯ ನೂತನ ಉತ್ಪನ್ನ ಸುಕೇಶ್ ಪೋಷಕ ತೈಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ. ಇನ್ನಿತರ ಔಷಧೀಯ ಉತ್ಪನ್ನಗಳನ್ನು ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮುದ್ಯತಾ ಸಂಸ್ಥೆ ಮತ್ತು ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಜಂಟಿ ಆಶ್ರಯದಲ್ಲಿ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹ ಯೋಗದೊಂದಿಗೆ ಅಂತರ್ ಜಿಲ್ಲಾ ಮಟ್ಟದ ಮುಕ್ತ ಮತ್ತು ಮಹಿಳೆಯರ ವಿಭಾಗದಲ್ಲಿ ರ‍್ಯಾಪಿಡ್ ಚೆಸ್ ಸಮುದ್ಯತಾ ಚದುರಂಗ ಸ್ಪರ್ಧೆ – 2024 ಅ.19 ರಂದು ಕುಂದಾಪುರದ ಪ್ರೆಸಿಡೆಂಟ್ ಕನ್ವೆಷನ್ ಸೆಂಟರ್ ಕ್ರೌನ್ ಹಾಲ್ ತೆಕಟ್ಟೆಯಲ್ಲಿ ನಡೆಯಲಿದೆ. ಮುಕ್ತ ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಚೆಸ್ ಪಂದ್ಯಾವಳಿ ನಡೆಯಲಿದೆ, ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಅತ್ಯಧಿಕ ನಗದು ಬಹುಮಾನ (1.25 ಲಕ್ಷ ) ವಿಜೇತರಿಗೆ ನೀಡಲಾಗುವುದು. ಈ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಶ್ವಿ ಚೆಸ್ ಸ್ಕೂಲ್ ನ ಸ್ಥಾಪಕ ಅಧ್ಯಕ್ಷರಾಗಿರುವ ನರೇಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರು ನೊಂದಾಯಿಸಲು ಕೊನೆಯ ದಿನಾಂಕ 17th ಅಕ್ಟೋಬರ್. (7899969063)
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜೇಸಿಐ ಕುಂದಾಪುರ ಸಿಟಿ ಮತ್ತು ಕಿಯೋನಿಕ್ಸ್ ಚರ್ಚ್ ರಸ್ತೆ ಕುಂದಾಪುರ ಇವರ ಸಹಕಾರದೊಂದಿಗೆ ಚೌಡೇಶ್ವರಿ ಟೈಗರ್ಸ್ ಟಿ.ಟಿ. ರಸ್ತೆ ಕುಂದಾಪುರ ಇವರಿಂದ ಹುಲಿವೇಷ ಕುಣಿತ ಪ್ರದರ್ಶನ ನಡೆಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರ, ಜೇಸಿಐ ಸಿಟಿ ಕುಂದಾಪುರದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಸ್ಥಾಪಕಾಧ್ಯಕ್ಷರಾದ ಹುಸೇನ್ ಹೈಕಾಡಿ, ಕಾರ್ಯಕ್ರಮದ ಪ್ರಾಯೋಜಕರಾದ ಹರ್ಷವರ್ಧನ್ ಶೆಟ್ಟಿ, ಮಾಲಕರು ಕಿಯೋನಿಕ್ಸ್ ಚರ್ಚ್ ರಸ್ತೆ ಕುಂದಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೌಡೇಶ್ವರಿ ಹುಲಿ ಕುಣಿತ ತಂಡದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಬೈಂದೂರು ಬ್ಲಾಕ್ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ಎಸ್. ವೀರಭದ್ರ ಗಾಣಿಗ ಹಾಲಂಬೇರ್ ಅವರು ಆಯ್ಕೆಯಾಗಿದ್ದಾರೆ. ಅವರಿಗೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಹಾಗೂ ಸಮಸ್ತ ಬೈಂದೂರು ಕಾಂಗ್ರೆಸ್ ಪಕ್ಷದ ನಾಯಕರ ಸಮ್ಮುಖದಲ್ಲಿ ಪಕ್ಷದ ನಾಯಕರಾದ ಗೋಪಾಲ ಪೂಜಾರಿ ಅವರಿಂದ ಆದೇಶ ಪ್ರತಿಯನ್ನು ಹಸ್ತಾಂತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆಯ ಬೆಂಕಿ ಧರಿಸಿದ್ದ ಬಟ್ಟೆಗೆ ತಗಲಿ ಗಂಭೀರ ಗಾಯಗೊಂಡು ಗುಜ್ಜಾಡಿ ಸಮೀಪದ ಕೊಡಪಾಡಿಯ ಫಾತಿಮಾ ಕಾರ್ಡಿನ್ (65) ಸಾವನ್ನಪ್ಪಿದ್ದಾರೆ. ಫಾತಿಮಾ ಅ. 2ರಂದು ಪುತ್ರನ ಮನೆಲ್ಲಿದ್ದಾಗ ದುರ್ಘಟನೆ ಸಂಭವಿಸಿತ್ತು. ಗಂಭೀರ ಸುಟ್ಟ ಗಾಯಗಳೊಂದಿಗೆ ಅವರನ್ನು ಮರವಂತೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ, ಅನಂತರ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅ. 5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅ. 13ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಬರುತ್ತಿರುವಾಗ ಕುಂದಾಪುರದ ಬಳಿ ಮತ್ತೆ ಅಸ್ವಸ್ಥಗೊಂಡರು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರೂ ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿದರು. ಪುತ್ರ ದಿಲೀಪ್ ಕಾರ್ಡಿನ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
