ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಹಜ ಯೋಗದಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯ. ಅತ್ಯಂತ ಸರಳವಾದ ಯೋಗ ಕ್ರಿಯೆಗಳು ಮತ್ತು ಕ್ರಮಬದ್ಧವಾದ ಆಹಾರ ಸೇವನೆಯಿಂದ ಒತ್ತಡವನ್ನು ನಿರ್ವಹಿಸಬಹುದು ಎಂದು ಚಂದ್ರಕಾಂತ ಡಿಯೋಡ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಸಹಜ ಯೋಗ ಕುರಿತ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 5 ಗೋಷ್ಠಿಯಲ್ಲಿ ನಡೆದ ಈ ಶಿಬಿರದಲ್ಲಿ ಡಾ| ಆಶಿಶ್, ಕಲ್ಪನಾ, ಕೋಪಾಲ್, ಪ್ರಣಮ್, ತಿಮ್ಮಪ್ಪ, ನೀತು, ಡಾ. ವೀರೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೌಶಲ್ಯ ಪ್ರೇರಣ ಅಭಿಯಾನದ ಅಂಗವಾಗಿ ಕುಂದಾಪುರ ತಲ್ಲೂರಿನ ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್‌ಕಟ್ಟೆಯ ಪ್ರಾಚಾರ್ಯ ಹರೀಶ್ ಮಾರ್ಗದರ್ಶನದಂತೆ ಹಾಗೂ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಬಿದ್ಕಲ್ ಕಟ್ಟೆ ಸರಕಾರಿ ಐಟಿಐ ಮೆಕಾನಿಕ್ ಮೋಟಾರ್ ವೆಹಿಕಲ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಬಿ.ಟಿ.ನಾಯ್ಕ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶೈಕ್ಷಣಿಕ ಪದವಿ ಸಾಕಾಗುವುದಿಲ್ಲ, ಉದ್ಯೋಗವಕಾಶ ಪಡೆಯಲು ಮತ್ತು ವೃತ್ತಿ ಜೀವನದಲ್ಲಿ ಪ್ರಾಯೋಗಿಕ, ತಾಂತ್ರಿಕ ಅಧ್ಯಯನ, ಅತ್ಯಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಯು ಇಂತಹ ತರಬೇತಿಯನ್ನು ನೀಡುತ್ತಿದ್ದು ಯುವಜನರಲ್ಲಿ ಆತ್ಮವಿಶ್ವಾಸ, ಉದ್ಯಮಶೀಲತೆ, ಜಾಗತಿಕ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು ಆಯ್ಕೆಮಾಡಿಕೊಂಡು ತರಬೇತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಫಿಟ್ಟರ್ ವಿಭಾಗದ ಹಾಗೂ ಕೌಶಲ್ಯ ಪ್ರೇರಣಾ ಸಂಸ್ಥೆಯ ಕೋಟ ಅಜಿತ್ ಆಚಾರ್ 10ನೇ ತರಗತಿಯ ನಂತರದ ಕೌಶಲ್ಯ ಕೋರ್ಸುಗಳು ಹಾಗೂ ವಿದ್ಯಾರ್ಥಿನಿಯರಿಗೆ ಸರಕಾರಿ ಉದ್ಯೋಗದಲ್ಲಿ 33%…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಂಡಿಸಿದ 17ನೇ ರಾಜ್ಯ ಬಜೆಟ್ ಕರಾವಳಿ ಭಾಗದ ಜನರಲ್ಲಿ ಭಾರೀ ನಿರಾಸೆ ಮತ್ತು ಆಕ್ರೋಶವನ್ನು ಉಂಟುಮಾಡಿದೆ ಎಂದು ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್. ಬೇಲೆಮನೆ ಟೀಕಿಸಿದ್ದಾರೆ. ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಭಾಗ ಬಜೆಟ್‌ನಲ್ಲಿ ಮತ್ತೆ ನಿರ್ಲಕ್ಷ್ಯಕ್ಕೆ ಗುರಿಯಾಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಕರಾವಳಿ ಭಾಗದ ಜನರು ರಾಜ್ಯಕ್ಕೆ ಅಪಾರ ತೆರಿಗೆ ಕೊಡುಗೆ ನೀಡುತ್ತಾರೆ. ಶಿಕ್ಷಣ, ಬ್ಯಾಂಕಿಂಗ್, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಈ ಭಾಗವು ಕರ್ನಾಟಕದ ಹೆಮ್ಮೆಯಾಗಿದೆ. ಆದರೆ ಸರ್ಕಾರ ಬಜೆಟ್ ಮಂಡಿಸುವಾಗ ಮಾತ್ರ ಈ ಭಾಗವನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರುವುದು ದುಃಖಕರ ಸಂಗತಿ ಎಂದರು. ಮೀನುಗಾರರ ಬದುಕು ಸುಧಾರಣೆ, ಕಡಲ್ಕೊರೆತ ತಡೆ ಯೋಜನೆಗಳು, ಕರಾವಳಿ ರಕ್ಷಣಾ ಕಾಮಗಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿ, ಬಂದರುಗಳ ವಿಸ್ತರಣೆ, ಯುವಕರಿಗೆ ಉದ್ಯೋಗ ಸೃಷ್ಟಿ – ಇಂತಹ ಪ್ರಮುಖ ವಿಷಯಗಳಿಗೆ ಈ ಬಜೆಟ್‌ನಲ್ಲಿ ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಉಪಯೋಗವಾಗುವ ಹಾಗೂ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಬಲ್ಲ ಸಂಶೋಧನೆಯಾಗಬೇಕು ಎಂದು ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ಹೇಳಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರ ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಅಲೋಕ 2026ನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹೆಚ್ಚು ಉಪಯುಕ್ತವಾಗುವಂತೆ ಮಾಡಬೇಕು. ಕೇವಲ ಸಿದ್ಧಾಂತದ ಹಂತದಲ್ಲಿ ಉಳಿಯದೆ, ಅವು ಜನರ ಆರೋಗ್ಯಕ್ಕೆ ನೇರವಾಗಿ ಪ್ರಯೋಜನವಾಗಬೇಕು. ಸಂಶೋಧನೆಯಿಂದ ಹೊಸ ಔಷಧಿಗಳು, ಆರೋಗ್ಯ ಉತ್ಪನ್ನಗಳು ಮತ್ತು ಚಿಕಿತ್ಸಾ ವಿಧಾನಗಳು ಅಭಿವೃದ್ಧಿಯಾಗಬೇಕು. ಇವುಗಳು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆಯುವಂತಾದರೆ ಆಯುರ್ವೇದ ಕ್ಷೇತ್ರಕ್ಕೆ ಆರ್ಥಿಕ ಲಾಭವೂ ಹೆಚ್ಚುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಹಿಂದೆ ಆಯುರ್ವೇದದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ 1976ರ ಬ್ಯಾಚ್ ವಿದ್ಯಾರ್ಥಿಗಳ ಪುನರ್ಮಿಲನ “ಬಂಗಾರದ ಭೇಟಿ” ಕಾರ್ಯಕ್ರಮ ನಡೆಯಿತು. 1976ನೇ ಸಾಲಿನಲ್ಲಿ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದು ಮುಗಿಸಿದ ಈ ವಿದ್ಯಾರ್ಥಿಗಳು 50ನೇ ವರ್ಷದ ನೆನಪಿಗಾಗಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರುಗಳಾದ ಎ.ಪಿ.ಮಿತ್ತಂತ್ತಾಯ, ಬಾಲಕೃಷ್ಣ ಭಟ್, ಮನೋಹರ ಪೈ ಮತ್ತು ಶರ್ಮಾ ಅವರು ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಎ.ಪಿ.ಮಿತ್ತಂತ್ತಾಯ, ಬಾಲಕೃಷ್ಣ ಭಟ್ ದಿನ ವಿದ್ಯಾರ್ಥಿಗಳು ಮತ್ತು ಗುರುಗಳ ಬಾಂಧವ್ಯವನ್ನು ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ವಹಿಸಿದ್ದರು. ಕರ್ನಾಟಕ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಗಿರಿಧರ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. 1976ರ ಬ್ಯಾಚ್ ವಿದ್ಯಾರ್ಥಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಛೇರ್ಮನ್ ಕೆ.ಆರ್. ಕಾಮತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ 53 ವಿದ್ಯಾರ್ಥಿಗಳು ಸಮ್ಮಿಲನದಲ್ಲಿ ಮನೋರಂಜನೆ ಹಳೆಯ ನೆನಪುಗಳನ್ನು ಮೆಲುಕುವಿಕೆ ಪರಸ್ಪರರ ಪರಿಚಯ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜನಸಂಖ್ಯಾ ಬಹಳವಿರುವ ನಮ್ಮ ದೇಶದಲ್ಲಿ ಯುವಶಕ್ತಿ ಹೇರಳವಾಗಿದ್ದು ಅದನ್ನು ದೇಶದ ಉತ್ಪಾದಕ ಶಕ್ತಿಯನ್ನಾಗಿ ಪರಿವರ್ತಿಸುವ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ ತನ್ನ ಪಂಚ ಗ್ಯಾರಂಟಿ ಕಾರ್ಯಕ್ರಮಗಳಲ್ಲಿ ಯುವನಿಧಿ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿ ಲತಾ ನುಡಿದರು. ಅವರು ಇತ್ತೀಚಿಗೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟಪಡುಕರೆ ಮತ್ತು ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಯುವ ನಿಧಿ ಯೋಜನೆಯ ನೋಂದಣಿ ಮಾಡಿಕೊಂಡು ಯುವಕರಿಗೆ ಕೌಶಲ್ಯ ತರಬೇತಿ ನೀಡುವುದರೊಂದಿಗೆ, ಅವರಿಗೆ ನಿರುದ್ಯೋಗಿಗಳಾಗಿರುವ ಅವಧಿಗೆ ಯುವನಿಧಿ ಪ್ರೋತ್ಸಾಹ ಧನ ನೀಡಿ, ಮುಂದೆ ಉದ್ಯೋಗ ಪಡೆಯಲು ಸಹಕರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಅದರ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಆಚಾರ್ ಅವರು ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನ ಸ್ಪರ್ಧೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ- ರಕ್ಷಕರ ಸಭೆಯು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಉಡುಪಿ ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಪರೀಕ್ಷಾ ತಯಾರಿಯಲ್ಲಿ ಪೋಷಕರ ಪಾತ್ರ ಹಾಗೂ ಮೊಬೈಲ್ ಫೋನಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ, ಪೋಷಕರು ಮಕ್ಕಳಲ್ಲಿ ಪರೀಕ್ಷೆಯ ಕುರಿತು ಭಯ ಹುಟ್ಟಿಸುವ ಬದಲು ಅವರಲ್ಲಿ ಓದುವ ಪ್ರೀತಿ ಹುಟ್ಟಿಸಬೇಕು. ಪೋಷಕರು ಮಕ್ಕಳಿಗೆ ಮನೆಯಲ್ಲಿ ಓದುವುದಕ್ಕೆ ಉತ್ತಮ ವಾತಾವರಣವನ್ನು ಸೃಷ್ಠಿಸಬೇಕು ಎಂದು ತಿಳಿಸಿದರು. ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಹಾಗೂ ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ ಅವರು ಸ್ವಾಗತಿಸಿ, ಹಿರಿಯ ಪ್ರಾಥಮಿಕ ವಿಭಾಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಿಜ ಜೀವನದ ದುಮ್ಮಾನಗಳನ್ನು ಬಿಂಬಿಸುವ ನಾಟಕಗಳು ಬದುಕಿನ ಅರಿವು ಮೂಡಿಸುತ್ತವೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ ಐ. ನಾರಾಯಣ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಅವರ ಸ್ಮರಣಾರ್ಥ ಲಾವಣ್ಯ ರಿ. ಬೈಂದೂರು ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ 2ನೇ ದಿನದ ರಂಗಶ್ರೀ ರಂಗಹಬ್ಬ -2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು. ವಕೀಲರಾದ ಮಂಗೇಶ ಶ್ಯಾನುಭಾಗ್ ಶುಭಸಂಸನೆಗೈದರು. ಮುಖ್ಯ ಅತಿಥಿಗಳಾಗಿ ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಕೆ., ಶಿರೂರು ಡಾಟ್ ಕಾಮ್ ವ್ಯವಸ್ಥಾಪಕ ಗಿರೀಶ್ ಶಿರೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳುಗೋಡು ಹಳ್ಳಿಹೊಳೆಯಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಧ್ಯಾಪಕರಾದ ಎಚ್. ಜಗದೀಶ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಜೀವನ ಪಾಠವನ್ನು ಕಲಿಯಲು ಸಾಧ್ಯವಾಗುತ್ತದೆ ಹಾಗೂ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಜೀವನದಲ್ಲಿ ಸೋಲುವುದಿಲ್ಲ, ಬದಲಾಗಿ ಇಲ್ಲಿ ಕಲಿತಿರುವ ಒಳ್ಳೆಯ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಶೆಟ್ಟಿ, ಶ್ರೀನಿವಾಸ ಪೂಜಾರಿ, ಉಷಾಲತಾ ಶಿವರಾಮ ಪೂಜಾರಿ, ಜಯರಾಮ್ ಪೂಜಾರಿ, ಸುಬ್ರಾಯ ಕನ್ನಂತ ಕಾಲೇಜಿನ ಆಡಳಿತಾಧಿಕಾರಿ ಮೋಹನ್ ಕೆ.ಎನ್. ಉಷಾ, ಪಲ್ಲವಿ ಉಪಸ್ಥಿತರಿದ್ದರು. ಸಹ ಶಿಬಿರಾಧಿಕಾರಿ ಮನವಿ ಕೆ.ಕೆ. ಸ್ವಾಗತಿಸಿದರು. ಎನ್.ಎಸ್.ಎಸ್.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಿಕ್ಷಣವು ಕೇವಲ ಪುಸ್ತಕದ ಪಾಠಗಳಿಗೆ ಸೀಮಿತವಾಗಿರಬಾರದು. ಜ್ಞಾನ, ಮೌಲ್ಯ ಮತ್ತು ಕೌಶಲ್ಯಗಳ ಸಮನ್ವಯವೇ ನಿಜವಾದ ಶಿಕ್ಷಣವಾಗಿದ್ದು, ಮೌಲ್ಯವಿಲ್ಲದ ಶಿಕ್ಷಣ ಅಪೂರ್ಣವಾಗುತ್ತದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಫೆಡರೇಶನ್(ಎನ್‌ಇಸಿಎಫ್)ನ ರಾಜ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದರು. ಅವರು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಾನವಿಕ ವಿಭಾಗದ ವತಿಯಿಂದ ‘ಆರ್ಟ್ಸ್-ಎಕ್ಸುಂಯಬುರೆನ್ಸ್ 2026’ ಅಂಗವಾಗಿ ಆಯೋಜಿಸಲಾದ ‘ಕ್ಷಿತಿವನ್ಷ್’ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್‌ನ್ನು ಉದ್ಘಾಟಿಸಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಕೃತಜ್ಞತೆಯ ಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಸಮಾಜವು ಕನ್ನಡಿಯಂತಿದ್ದು, ನಾವು ಹೇಗೆ ವರ್ತಿಸುತ್ತೇವೋ ಅದೇ ರೀತಿಯಲ್ಲಿ ಸಮಾಜ ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಮಾಜವನ್ನು ದೂಷಿಸುವುದಕ್ಕಿಂತ ನಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಭೂಮಿ ಕೇವಲ ಮಾನವರಿಗೆ ಮಾತ್ರವಲ್ಲ. ಎಲ್ಲಾ ಜೀವಿಗಳಿಗೆ ಸೇರಿದೆ. “ತನ್ನಂತೆ ಪರರನ್ನು ಬಗೆದೊಡೆ ಬಿನ್ನಾಣುವಕ್ಕೂ ಇಲ್ಲವಯ್ಯ” ಎಂಬ ಸರ್ವಜ್ಞನ ನುಡಿಯಂತೆ, ಇತರರನ್ನು ನಮ್ಮಂತೆಯೇ ಕಾಣುವ ಮೌಲ್ಯ ಬಹಳ ಮುಖ್ಯ. ಇಂತಹ ಮೌಲ್ಯಗಳು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಕೃತಿಯ ಪ್ರತಿಯೊಂದು…
