Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸುವ ಬಗ್ಗೆ ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಅಧಿವೇಶನದಲ್ಲಿ ಸರ್ಕಾರದ ಗಮನ ಸಳೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1,53, 114 ಹೆಕ್ಟರ್ ಕೃಷಿ ಭೂಮಿ ಇದ್ದು ಅದರಲ್ಲಿ ರೈತರು ಭತ್ತ ಮತ್ತು ಕಮರ್ಷಿಯಲ್ ಕ್ರಾಪ್ ಆದ ಅಡಿಕೆ, ತೆಂಗು, ಇತರೆ ಕೃಷಿಯನ್ನ ನಿರ೦ತರ ಮಾಡುತ್ತಾ ಇದ್ದಾರೆ. 2010ರಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆವಾಗ ಕೃಷಿ ಕಾಲೇಜು ಮಂಜೂರಾತಿ ನೀಡಲಾಗಿದೆ. ಆದರೆ 2014ರ ತನಕ ಯಾವುದೇ ಕೆಲಸ ಆಗಿರುವುದಿಲ್ಲ. 2014ರಲ್ಲಿ ಕೃಷಿ ಡಿಪೆ ‘ಮಾ ಕಾಲೇಜು ಪ್ರಾರ೦ಭ ಮಾಡಲಾಗಿರುತ್ತದೆ. ಅದರ ನಂತರ ನಿರಂತರವಾಗಿ ಉಡುಪಿ ಜಿಲ್ಲೆಯಲ್ಲಿ ಕೃಷಿ ಕೃಷಿ ಪದವಿ ಕಾಲೇಜುಗಾಗಿ ಸರಕಾರಕ್ಕೆ ಬೇಡಿಕೆ ಇಟ್ಟಿದ್ದು ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ 300 ಎಕರೆ ಜಾಗವಿದ್ದು, ಹಾಸ್ಟೆಲ್‌ ಹಾಗೂ ಕಾಲೇಜ್ ಗೆ ಅಗತ್ಯವಿರುವ ಕಟ್ಟಡ ಮತ್ತು ಲ್ಯಾಬೋರೇಟರಿ ಸೇರಿದಂತೆ ಇತರ ಸಂಪೂರ್ಣ ಮೂಲಭೂತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಜನತಾ ಸಂಸ್ಥೆಯ ವತಿಯಿಂದ 55ನೇ ರಾಷ್ಟ್ರೀಯ ಸುರಕ್ಷತಾ ವಾರ ಹಾಗೂ ಸಂಸ್ಥೆಯ ನಾಲ್ಕನೇ ವರ್ಷದ ಸುರಕ್ಷತಾ ವಾರ ಜಾಗೃತಿ 2026 ಸಮಾರೋಪ ಸಮಾರಂಭವು ಸಂಸ್ಥೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜತನಾ ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಅವರು ಸುರಕ್ಷತೆ ಎಂಬುದು ಕೇವಲ ನಿಯಮವಲ್ಲ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಹೇಳಿದರು. ಕೆಲಸ ಮಾಡುವ ಸ್ಥಳದಲ್ಲಿ ಎಚ್ಚರಿಕೆ ಮತ್ತು ಜಾಗೃತಿಯಿಂದ ನಡೆದುಕೊಂಡರೆ ಅನೇಕ ಅಪಘಾತಗಳನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡಿದರು. ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್ ಕಾರ್ಯಕ್ರಮದ ಪ್ರಸ್ತಾವನೆಗೈದು ಸುರಕ್ಷತಾ ವಾರದ ಮಹತ್ವವನ್ನು ವಿವರಿಸಿದರು. ನಂತರ ಸಂಸ್ಥೆಯ ಸಿಬ್ಬಂದಿ ಮಹೇಶ್ ನಾಯರಿ ಪ್ರಾರ್ಥನೆ ನಡೆಸಿದರು. ಸುರಕ್ಷತಾ ವಾರದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಪಘಾತದಿಂದ ಪಾರಾದ ಸಿಬ್ಬಂದಿಗಳ ಅನುಭವಗಳು, ಅಗ್ನಿ ಅವಘಡದ ಸಂದರ್ಭದಲ್ಲಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಗೆ 07 ಅಭ್ಯರ್ಥಿಗಳ ಗುರಿ ನಿಗಧಿಪಡಿಸಿದ್ದು, ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, ಕೃಷಿ ಜಮೀನು ಹೊಂದಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 23ರ ಪೂರ್ವಾಹ್ನ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಪಂ), ಉಡುಪಿ ರವರ ಕಛೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಏ. 27 ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ https://horticulturedir.karnataka.gov.in ನಲ್ಲಿ ಅಥವಾ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಪಂ), ಉಡುಪಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಉಡುಪಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಜೇಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಹೆಮ್ಮಾಡಿಯ ಜಯಶ್ರೀ ವಿನಯ್ ಪೂಜಾರಿ, ಕಾಲೇಜಿನ ಬಹುಮುಖ ಪ್ರತಿಭೆಗಳಾದ ಶ್ರೇಯಾ ಖಾರ್ವಿ, ಬ್ರಾಹ್ಮೀ, ಶೈಕ್ಷಣಿಕ ಪ್ರತಿಭೆಗಳಾದ ಐಶ್ವರ್ಯ ಶೆಟ್ಟಿ, ಗೌತಮಿ, ಕ್ರೀಡಾ ಪ್ರತಿಭೆ ಲಕ್ಷ್ಮಿ ಶೆಟ್ಟಿ, ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿನಿ ಝರಾ ಎಂ. ಇಮ್ರಾನ್ ಅವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕರು & ಅಡ್ಮಿಷನ್ ಆಫೀಸರ್‌ರಾದ ಪೂಜಾ ಯಶವಂತ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕಿಯರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕುಂದಾಪುರ ಸಿಟಿ ಜೇಸಿಐ ಅಧ್ಯಕ್ಷ ಜೇಸಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ವಚನ ಕಲ್ಯಾಣ’ ಎಂಬ ಅತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು, ಅನುಭವಿ ರಂಗ ಕಲಾವಿದರು ಹಾಗೂ ಗಾಯಕರುಗಳಿಂದ ಇಲಾಖೆಯ ವೆಬ್‌ಸೈಟ್ kannadasiri.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 40 ವರ್ಷದೊಳಗಿನ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 20ರ ಒಳಗಾಗಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ kanakaresearchcentre@gmail.com ಮೂಲಕ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾಸಿಕ ಗೌರವಧನ ಮತ್ತು ಊಟ-ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು 30 ವರ್ಷಗಳಿಂದ ಮನೆಯಲ್ಲಿ ಜೀತಕ್ಕೆ ಇಟ್ಟು ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಪೊಲೀಸರು‌ ಬಂಧಿಸಿದ್ದಾರೆ. ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಸುಮಾರು 30 ವರ್ಷಗಳ ಹಿಂದೆ ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ಎಂಬವರು ನಾಗ ಅವರನ್ನು ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿ ಕೊಂಡಿದ್ದರು. ಇವರು ನಾಗ ಅವರಿಂದ ದನ, ಎಮ್ಮೆ, ಸೆಗಣಿ ತೆಗೆದು ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು. ನಾಗ ಅವರನ್ನು 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು ಎನ್ನಲಾಗಿದೆ. ದನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೊಮೆ ಸಮುದ್ರ ತೀರದಲ್ಲಿರುವ ರೆಸಾರ್ಟಗಳಿಗೆ ಆಗಮಿಸುವ ಪ್ರವಾಸಿಗರಿಂದ ಮಲಿನಗೊಳ್ಳುತ್ತಿರುವ ಹಿನ್ನಲ್ಲೆಯಲ್ಲಿ ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಕೊಮೆ ಭಾಗದ ಗ್ರಾಮಸ್ಥರು ಕೋಟ ಆರಕ್ಷಕ ಠಾಣೆಗೆ ತೆರಳಿ ಆರಕ್ಷಕ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ದೂರು ನೀಡಿದರು. ಈ ವೇಳೆ ಗ್ರಾಮಸ್ಥರು ಮಾಧ್ಯಮಕ್ಕೆ ಮಾಹಿತಿ ನೀಡಿ ಸಮುದ್ರ ತೀರದಲ್ಲಿ ಪಾರ್ಟಿಗಳನ್ನು ಮಾಡುವುದರ ಮೂಲಕ ಮದ್ಯದ ಬಾಟಲಿಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಸಮುದ್ರ ತೀರದಲ್ಲೆ ಎಸೆದು ಪರಿಸರವನ್ನು ಹಾಳುಗೆಡವುತ್ತಿದ್ದಾರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪರಿಸರದ ಗ್ರಾಮದ ಗ್ರಾಮಸ್ಥರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಹಿರಿಯ ಪತ್ರಕರ್ತರಾದ ಹಾಗೂ ಪ್ರಜಾವಾಣಿ ವರದಿಗಾರರಾಗಿದ್ದ ಶೇಷಗಿರಿ ಭಟ್ ಅವರ ಅಗಲಿಕೆಯನ್ನು ಸ್ಮರಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನುಡಿನಮನ ಹಾಗೂ ಶ್ರದ್ದಾಂಜಲಿ ಸಭೆಯು ಬುಧವಾರ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಮಿನಿ ಸಭಾಂಗಣದಲ್ಲಿ ನಡೆಯಿತು. ಪತ್ರಕರ್ತ ಕೆ.ಸಿ. ರಾಜೇಶ್ ಸಂಸ್ಮರಣೆ ಮಾತನಾಡಿ, ಶೇಷಗಿರಿ ಭಟ್ ಅವರು ಮಿತಭಾಷಿ, ಸರಳ ಸಜ್ಜನಿಕೆಯಿಂದ ಬಾಳಿದವರು. ಪತ್ರಿಕಾ ರಂಗದಲ್ಲಿ ಅವರ ಸೇವೆ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸುಪ್ರಸಾದ್ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ನಿರ್ದೇಶಕ ಕಮಲಾಕ್ಷ ಹೆಬ್ಬಾರ್, ಮಾಜಿ ತಾ.ಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಉಪನ್ಯಾಸಕಿ ಸವಿತಾ ಎರ್ಮಾಳ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಜಿ ಕುರ್ಯ, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋಮೊಹನ್, ಜಿಲ್ಲಾ ಸಂಘದ ಉಪಾಧ್ಯಕ್ಷ ಪ್ರಭಾಕರ್ ಆಚಾರ್ಯ, ತಾಲೂಕು ಗ್ಯಾರಂಟಿ ಸಮಿತಿಯ ಡಾ.ಸುನಿತಾ ಶೆಟ್ಟಿ, ಉಪನ್ಯಾಸಕರಾದ ಪ್ರಶಾಂತ್ ನೀಲಾವರ, ಉಡುಪಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೀದರ್‌ನ ಎಚ್.ಕೆ.ಇ. ಸೊಸೈಟಿಯ ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಅನುಪಮಾ ಹೊಳ್ಳ ಅವರು ಇಂಗ್ಲೀಷ್, ವಿಜ್ಞಾನ ವಿಭಾಗದ ಬಿ.ಎಡ್‌ನಲ್ಲಿ 8.88 ಎಸ್‌ಜಿಪಿಎ ಶ್ರೇಣಿಗಳಿಸಿ ಕಾಲೇಜಿಗೆ ಪ್ರಥಮ ರ್ಯಾಂಕ್‌ಗಳಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳು, ಬೌದ್ಧಿಕ ವಲಯದವರು ಹಾಗೂ ಕಾಲೇಜಿನ ಆಡಳಿತ ವರ್ಗದವರು ಅನುಪಮಾ ಹೊಳ್ಳ ಅವರನ್ನು ಅಭಿನಂದಿಸಿದ್ದಾರೆ. ಅನುಪಮ ಹೊಳ್ಳ ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸಾಹಿತಿ ವಂಡ್ಸೆ ಗೋಪಾಲಕೃಷ್ಣ ಹೊಳ್ಳ ಹಾಗೂ ಮಾಲಿನಿ ಹೊಳ್ಳ ದಂಪತಿಗಳ ಪುತ್ರಿಯಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದವರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ತೆಕ್ಕೆಟ್ಟೆಯ ಜನಪ್ರಿಯ ಕಾಂಪ್ಲೇಕ್ಸ್‌ನಲ್ಲಿ ಎಸ್‌ಪಿ ಕ್ರಿಯೇಷನ್ ಕ್ಲಬ್‌ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ವೀಟ್ ಜುಗಾರಿ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್‌ ಕುಮಾರ್‌ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್‌ ಶೆಟ್ಟಿ, ಆನಂದ, ಹರೀಶ ಎಂಬುರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 65,664/ ರೂಪಾಯಿ, ಮೊಬೈಲ್ ಪೋನ್ -10, ಪ್ಲಾಸ್ಟೀಕ್‌ ಚೇರ್‌ಗಳು-31, ದೊಡ್ಡ ರೌಂಡ್ ಟೇಬಲ್ 1, ಸಣ್ಣ ರೌಂಡ್ ಟೇಬಲ್ -1, ಕ್ಲಬ್‌ನಲ್ಲಿದ್ದ ಸಿಸಿ ಕ್ಯಾಮೆರಾ ಡಿವಿಆರ್ -1, ಕ್ಲಬ್‌ನ ಲೆಜ್ಜರ್ -2 ಮತ್ತು ಟಿವಿಎಸ್ ಮೋಟಾರ್ ಸೈಕಲ್ -1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More