ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕನ್ನಡಿಗರು ದುಬೈನ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (KPCC) ಯ ಸಹಯೋಗದೊಂದಿಗೆ “67 ನೇ ಕರ್ನಾಟಕ ರಾಜ್ಯೋತ್ಸವ” ಹಾಗೂ ಒಂದನೇ “ವಿಶ್ವ ಕನ್ನಡ ಹಬ್ಬ”ವನ್ನು ಇಂಡಿಯನ್ ಹೈಸ್ಕೂಲ್ನ ಶೇಖ್ ರಶೀದ್, ದುಬೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಮ್ ಅಲ್ ಕುವೈನ್ನ ರಾಜಮನೆತನದಿಂದ ಹಿಸ್ ಹೈನೆಸ್ ಶೇಖ್ ರಶೀದ್ ಬಿನ್ ಮಜಿದ್ ಅಲ್ ಮುಲ್ಲಾಮಹರ್ಷಿ ಆನಂದ ಗುರೂಜಿ, ಬಸವ ರಮಾನಂದ ಸ್ವಾಮಿ; ಸಿ ಸೋಮಶೇಖರ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಡಾ. ಚಿತ್ರನಟ ವಿಜಯ ರಾಘವೇಂದ್ರ, ಪ್ರೇಮಾ, ಭವ್ಯ, ವಸಿಷ್ಠ ಸಿಂಹ, ಪ್ರಥಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆಪಿಸಿಸಿಯ ಪ್ರಮುಖ ಸಂಘಟಕರು, ಅಧ್ಯಕ್ಷರು ಶಿವಕುಮಾರ್ ನಾಗರನವಿಲೆ ನೇತೃತ್ವದಲ್ಲಿ ಕರ್ನಾಟಕದಿಂದ ಬೃಹತ್ ತಂಡವನ್ನು ಹೊಂದಿದ್ದರು ಮತ್ತು ರವಿ ಸಂತು, ಪ್ರಸಾದ್ ಶೆಟ್ಟಿ, ಸುಧಾ, ಪಲ್ಲವಿ, ಪಾರ್ಥ, ಹೇಮಲತಾ ಅವರ ತಂಡವಾಗಿತ್ತು. ದುಬೈನಿಂದ ಗಲ್ಫ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿ ರೋಶನ್ ಆರ್. ಜಿಲ್ಲಾ ಮಟ್ಟದ 100 ಮೀ. ಓಟದ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ವಿಜೇತ ವಿದ್ಯಾರ್ಥಿಗೆ ಮದರ್ ಥೆರೆಸಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೋಲೆ ಗೆಲುವಿನ ಸೋಪಾನ. ಸೋಲಿನಿಂದಾಚೆಗೆ ಬರುವುದು ಹೇಗೆ ಎಂದು ನಾವು ತಿಳಿದಿಲ್ಲದಿದ್ದರೆ ಗೆಲುವನ್ನು ನಿಭಾಯಿಸುವುದು ಕಷ್ಟಸಾಧ್ಯ. ವ್ಯಕ್ತಿ ತನ್ನ ಜೀವನದಲ್ಲಿ ಸೋತೆ ಇಲ್ಲ ಎಂದರೆ ಅವನು ಜೀವನದ ಹೊಸತನಕ್ಕೆ ಪ್ರಯತ್ನಿಸಿಲ್ಲ ಎಂದರ್ಥ ಎಂದು ಕೋಟ ಪೋಲಿಸ್ ಠಾಣೆಯ ಪಿಎಸೈ ಮಧು ಬಿ.ಇ. ಅವರು ಹೇಳಿದರು. ಅವರು ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಈ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ನಾಯಕತ್ವಗುಣ ಬೆಳೆಸಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಕಲಿಸಬಲ್ಲದು ಎಂದರು. ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಧ್ವಜಾರೋಹಣಗೈದು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅದರಂತೆ ಯಶಸ್ವಿ ಜೀವನಕ್ಕೆ ತಾಳ್ಮೆಯ ಜತೆಗೆ ಗುರಿ ಇರಿಸಿಕೊಂಡು ಸಾಗುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಹ ಮತ್ತು ಮನಸ್ಸು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಶರಣ್ಯ, ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಗೆ ಮದರ್ ಥೆರೆಸಾ ಪಿಯು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂದಿಗ್ದತೆ, ಅತ್ಯಂತ ನೋವಿನ ಸಂಗತಿಗಳನ್ನೂ ಗೆರೆಗಳ ಮೂಲಕ ತೆರೆದಿಟ್ಟು, ನಗುವರಳಿಸುವ ಜೊತೆಗೆ ಸಮಾಜವನ್ನು ತಿದ್ದುವ ತಾಕತ್ತು ಕಾರ್ಟೂನಿಗಿದೆ. ಎಲ್ಲಾ ಕಾರ್ಟೂನಿಸ್ಟ್ಗಳು ಸಮಾಜಕ್ಕೊಂದು ಸಂದೇಶ ನೀಡುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದರು. ಅವರು ವಿಭಿನ್ನ ಹಾಗೂ ಕಾರ್ಟೂನು ಕುಂದಾಪ್ರ ಬಳಗದ ವತಿಯಿಂದ ಕುಂದಾಪುರದ ಕಲಾಮಂದಿರದಲ್ಲಿ 5 ದಿನಗಳ ಕಾಲ ಆಯೋಜಿಸಲಾದ 10ನೇ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ ಸಂತಷವಿರಲಿ ವಿಷಾದವಿರಲಿ ಮೊಗದಲ್ಲಿ ನಗುವರಳಿಸಿ, ಹೇಳುವ ತಾಕತ್ತು ಕಾರ್ಟೂನ್ ಗೆರೆಗಳಿಗಲ್ಲದೆ ಮತ್ತಾವ ಮಾಧ್ಯಮದಲ್ಲಿ ಕಾಣಲಾಗದು. ಸತೀಶ್ ಆಚಾರ್ಯ ಅವರ ಕಾರ್ಟೂನನ್ನು ಸಾಕಷ್ಟು ವರ್ಷದಿಂದ ಫಾಲೋ ಮಾಡುತ್ತಿದ್ದು, ಕಾರ್ಟೂನು ಹಬ್ಬದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದರು. ಹಿರಿಯ ವ್ಯಂಗ್ಯಚಿತ್ರಗಾರ ಜೇಮ್ಸ್ ವಾಜ್, ಸತೀಶ್ ಆಚಾರ್ಯ ಪುಸ್ತಕ ಗೋ ಕೊರೋನಾ ಗೋ-2 ಬಿಡುಗಡೆ ಮಾಡಿ, ಕಾರ್ಟೂನ್ ಕಲಿಕೆಗೆ ಉತ್ತಮ ಮಾರ್ಗದರ್ಶಿ ಪುಸ್ತಕವಾಗಿದ್ದು, ಗೆರೆಗಳ ರಚನೆ, ಬಣ್ಣಗಳ ಸಂಯೋಜನೆಗೆ ಇದು ಮಾರ್ಗದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಬುಧವಾರ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಹಾಗೂ ರಥೋತ್ಸವವು ವೈಭವದೊಂದಿಗೆ ನೆರವೇರಿತು. ವಾರ್ಷಿಕ ಜಾತ್ರೋತ್ಸವವದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಪೂರ್ವಾಹ್ನ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ದೇವಳದ ಪುಷ್ಪ ರಥೋತ್ಸವ ಹಾಗೂ ಶ್ರೀ ದೇವರ ಕಟ್ಟೆಪೂಜೆ ನಡೆಯಿತು. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದ ಬಳಿಕ ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರತಂದು ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಿಸಲಾಯಿತು. ಕೊನೆಯ ಸುತ್ತಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ನ.22: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನೇತೃತ್ವದಲ್ಲಿ ಜರುಗಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೇಂದ್ರೀಕೃತ ವಿದ್ಯಾರ್ಥಿಗಳ ತಂಡ ರನ್ನರ್ ಅಪ್ ಆಗಿದ್ದು, ಈ ಪೈಕಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೈಂದೂರು ಜ್ಯೂನಿಯರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳಾದ ವಿಘ್ನೇಶ್ವರ ಹಾಗೂ ರಿತೇಶ್ ಎಂ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಮೈಸೂರು ವಿಭಾಗೀಯ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಂಡವು, ಮೈಸೂರು ವಿಭಾಗೀಯ ಮಟ್ಟದಲ್ಲಿ ವಿಜೇತರಾಗಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಜರುಗಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ ಎಸ್. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಕುಂದಾಪುರ ವೆಂಕಟರಮಣ ಶಾಲೆಯ ವಿದ್ಯಾರ್ಥಿ ಸೃಜನ್, ಮಂಗಳೂರು ಭಗವತಿ ಶಾಲೆಯ ವಿದ್ಯಾರ್ಥಿ ಸುಮುಖ, ಮಂಗಳೂರು ಮೊರಾರ್ಜಿ ಶಾಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೇಂದ್ರದ ಪರ್ವತ ಮಾಲಾ ಯೋಜನೆಯಡಿ ಅನುಷ್ಠಾನಗೊಳ್ಳಲಿರುವ ನೂತನ ಕೇಬಲ್ ಕಾರ್ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಡಚಾದ್ರಿಯಿಂದ ಕೊಲ್ಲೂರಿನವರೆಗೆ ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ಪರಿಹರಿಸಲು ಪ್ರವಾಸೋಧ್ಯಮ ಇಲಾಖೆ, ಅರಣ್ಯ ಇಲಾಖೆ, ರಾಷ್ಟೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ ಸೇರಿ ಪರಿಹರಿಸಿ, ಕನಿಷ್ಠ ಒಂದು ತಿಂಗಳ ಅವಧಿಯಲ್ಲಿ ಡಿಪಿಆರ್ ಮಂಜೂರಾತಿ ಪಡೆಯುವುದಾಗಿ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ. ಶನಿವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕೊಡಚಾದ್ರಿಯ ಸರ್ವಜ್ಞ ಪೀಠದಿಂದ – ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತನಕ ಕೇಬಲ್ ಕಾರ್ ಅಳವಡಿಸಿವ ಕಾಮಗಾರಿಗೆ ಕೇಂದ್ರದ ಭೂ ಸಾರಿಗೆ ಮಂತ್ರಾಲಯದ ನ್ಯಾಶನಲ್ ಹೈವೇ ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ (NHLML) ಅಧಿಕಾರಿಗಳ ತಂಡವು ಡಿಪಿಆರ್ ಮತ್ತು ಪತನ ನಕ್ಷೆಯನ್ನು ಅಂತಿಮಗೊಳಿಸಲು ಹಾಗೂ ಡಿಪಿಆರ್ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಅಭ್ಯಾಸ ಮಾಡಿ, ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನದ ಸರ್ವೇ ಕಾರ್ಯ ಮತ್ತು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೇಬಲ್ ಕಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇದ್ದಾಗ ಮಾತ್ರ ಪರಿಸರ ಸ್ನೇಹಿ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದೆ. ಮೊದಲು ನಾವು ಬದಲಾಗಬೇಕು. ಪರಿಸರ ಪೂರಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದೆ ಎಂದು ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಹೇಳಿದರು. ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಿಬಿಎ ವಿದ್ಯಾಥಿ೯ಗಳಿಂದ ಕಾಲೇಜಿನ ಸಭಾಭವನದಲ್ಲಿ ಜರುಗಿದ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪರಿಸರವನ್ನು ಮಾಲಿನ್ಯ ಮತ್ತು ನಾಶಪಡಿಸುವಂತಹ ಕೆಲಸಗಳು ನಡೆಯುತ್ತಿವೆ. ಪ್ರಕೃತಿ ದತ್ತವಾದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಮತ್ತು ನೈಸಗಿ೯ಕ ವಸ್ತುಗಳನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆ ಎನ್ನುವುದು ಕೇವಲ ಪ್ರಮಾಣ ಪತ್ರಗಳನ್ನು ಉತ್ಪಾದಿಸುವ ಪ್ಯಾಕ್ಟರಿಯಾಗಬಾರದು. ವಿದ್ಯಾಥಿ೯ಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬಿತ್ತಿಸಲು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿವೃತ್ತ ಮುಖ್ಯ ಶಿಕ್ಷಕ ಕಂದಾವರ ಕಂಗೊಳ್ಳಿಮನೆ ಕೆ ಪ್ರಭಾಕರ ಹೆಗ್ಡೆ (89) ಅಲ್ಪಕಾಲದ ಅಸೌಖ್ಯದಿಂದಾಗಿ ಸೋಮವಾರ ಬೆಳಗ್ಗೆ ಅಂಪಾರು ಕಂಚಾರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 39 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಅಂಪಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ರಾಮಾಯಣ ವಾಚಕರಾಗಿದ್ದ ಅವರು ಪರಿಸರದ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದ ಅವರು ಅಪಾರ ಜನಮನ್ನಣೆ ಪಡೆದಿದ್ದರು. ಮೃತರಿಗೆ ಪುತ್ರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಹೆಗ್ಡೆ ಅಂಪಾರು ಹಾಗೂ ಬಂಧು-ಬಳಗದವರಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ. ಶೃದ್ದಾಂಜಲಿ ಸಲ್ಲಿಸಿದ್ದಾರೆ.
