Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ನಡೆಯಲಿರುವ “ನೋವೆಷನ್” ಕಾರ್ಪೊರೇಟ್ ಬ್ಯಾಟಲ್ ಮ್ಯಾನೇಜ್ಮೆಂಟ್ ಫೆಸ್ಟ್ ಇಂಟರ್ ಕಂಪನಿ ಸ್ಪರ್ಧೆಯನ್ನು ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉದ್ಘಾಟಿಸಿದರು. ಕಾಲೇಜಿನ ಡೀನ್ಸ್‌ಗಳಾದ ರಕ್ಷಿತ್ ರಾವ್ ಗುಜ್ಜಾಡಿ, ಗಿರಿರಾಜ್ ಭಟ್, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ನಂದಾ ರೈ, ಕಾರ್ಯಕ್ರಮ ಸಂಯೋಜಕರಾದ ರಜತ್ ಬಂಗೇರ, ವಿಭಾಗದ ಪ್ರಾಧ್ಯಾಪಕರುಗಳಾದ ಪ್ರವೀಣ್ ಮೊಗವೀರ, ಹರೀಶ್ ಬಿ., ಅವಿತಾ ಕೊರೆಯಾ, ವಿಶಾಲಾಕ್ಷಿ ಎಸ್. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರುಗಳು ವಿದ್ಯಾರ್ಥಿ ಪ್ರತಿನಿಧಿಗಳಾದ ಕಲ್ಪನಾ ಹಾಗೂ ಕಿಶನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಫ್ಲಾಶ್ ಮೊಬ್ ನಡೆಯಿತು. ವಿದ್ಯಾರ್ಥಿಗಳಾದ ಶ್ರೀರಕ್ಷಾ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಗಲ್ಫ್: ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾದ್ ಅಲ್ ಶೀಬಾ ಜಿಮ್ಸ್ ಮಾರ್ಡನ್ ಅಕಾಡೆಮಿಯಲ್ಲಿ ಅಂತರಾಷ್ಟ್ರೀಯ ಜಾನಪದ ಉತ್ಸವ – 2025” ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ಜನಪದ ಪರಿಷತ್ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಥಾಪಿತವಾದ ಯುಎಇ ಘಟಕವು, ರಾಜ್ಯದ ಜೀವಂತ ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಿ ಬೆಳೆಸುವ ಕನಸನ್ನು ಈ ಉತ್ಸವದ ಮೂಲಕ ಯಶಸ್ವಿಯಾಗಿ ಅನಾವರಣಗೊಳಿಸಿತು. ಜಾನಪದ ಪರಿಷತ್ ಬೆಂಗಳೂರು ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜೆರಾಜ್ ಮತ್ತು ಅಧ್ಯಕ್ಷರಾದ ಬೋರಲಿಂಗಯ್ಯನವರು ಯುಎಇ ಘಟಕದ ಲಾಂಛನವನ್ನು ಲೋಕಾರ್ಪಣೆ ಗೊಳಿಸುವುದರ ಮೂಲಕ ಘಟಕವನ್ನು ಉದ್ಘಾಟಿಸಿದರು . ನಂತರ ಮಾತನಾಡಿ, ಜಾನಪದ ಪರಿಷತ್‌ನ ವಿಸ್ತರಣೆಗೆ ಹರ್ಷ ಪಡಿಸುತ್ತಾ ಕೇಂದ್ರ ಸಂಸ್ಥೆಯಿಂದ ಈ ಘಟಕಕ್ಕೆ ಸರ್ವ ವಿಧದ ಸಹಕಾರ ನೀಡುವುದಾಗಿ ಈರ್ವರು ಭರವಸೆ ನೀಡಿದರು. ಅಂತರಾಷ್ಟ್ರೀವ ಜಾನಪದ ಉತ್ಸವವನ್ನು ಸಂಪ್ರಾದಾಯಿಕವಾಗಿ ಸಮೃದ್ಧಿಯ  ಸಂಕೇತವಾದ ತೆಂಗಿನ ಸಿಂಗಾರ ಹೂವನ್ನು ಅರಳಿಸುವುದರ ಮೂಲಕ ಅಬುದಾಬಿ ಕರ್ನಾಟಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ ) ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು  ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ  ಹಿಮೇಶ್, ಆತೀಫ್, ರೋಹಿತ್,  ಮಾಝ, ಜಾಹೀದ್ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾ‌ರ್, ತರಬೇತಿ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕ ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕೋಟ: ಹಬ್ಬಹರಿದಿನಗಳು ಜನರ ಧಾರ್ಮಿಕ ಭಾವನೆಗಳನ್ನು ಗಟ್ಟಿಗೊಳಿಸುವ ಆಚರಣೆಯಾಗಿದೆ ಅದರಂತೆ ಶಾರದೋತ್ಸವ ಕಾರ್ಯಕ್ರಮಗಳು ಜನಮಾನಸದಲ್ಲಿ ನೆಲೆಯೂರಿ ಒಗ್ಗಟ್ಟು ಪ್ರದರ್ಶಿಸುವ ಸಂಭ್ರಮವಾಗಲಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್ ಹೇಳಿದರು. ಅವರು ಗುರುವಾರ ಸಾಲಿಗ್ರಾಮ ದೇಗುಲದಲ್ಲಿ ಪಾಂಡೇಶ್ವರ ಶಾರದೋತ್ಸವ ಸಮಿತಿ ವತಿಯಿಂದ ನಡೆಸಲ್ಪಡುವ ಇದರ 32ನೇ ವರ್ಷದ ಶಾರದೋತ್ಸವ ಸಂಭ್ರಮ ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಧಾರ್ಮಿಕ ಆಚರಣೆಗಳು ಗ್ರಾಮದಲ್ಲಿ ಸಹಬಾಳ್ವೆ ಹಾಗೂ ಸಾಮರಸ್ಯ ಬೆಸೆಯುವ ಉತ್ಸವಗಳಾಗಿ ಮೂಡಿಬರಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ದೇಗುಲದ ಮ್ಯಾನೇಜರ್ ಗಣೇಶ್ ಭಟ್ಟ ಪಾಂಡೇಶ್ವರ, ಕೂಟಮಹಾಜಗತ್ತು ಅಂಗ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ,ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಸಮಿತಿಯ ಉಪಾಧ್ಯಕ್ಷ ದೇವದಾಸ್ ಸಾಲ್ಯಾನ್, ಪಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫುಟ್‌ಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಹ್ಯಾಂಡ್‌ಬಾಲ್ ಮತ್ತು ಈಜು ಸ್ಪರ್ಧೆಗಳು ಸೆಪ್ಟಂಬರ್ 13 ಮತ್ತು 14 ರಂದು ಹಾಸನದ ಜಿಲ್ಲಾ ಕ್ರೀಡಾಂಗಣ ಹಾಗೂ ಹಾಕಿ, ಯೋಗ ಮತ್ತು ಜಿಮ್ನಾಸ್ಟಿಕ್ಸ್ (ಆಯ್ಕೆ) ಸ್ಪರ್ಧೆಗಳು ಸೆಪ್ಟಂಬರ್ 15 ರಂದು ಕೊಡಗು ಜಿಲ್ಲೆ ಕೂಡಿಗೆ ಕ್ರೀಡಾಶಾಲೆಯಲ್ಲಿ ನಡೆಯಲಿವೆ. ಸದರಿ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾಪಟುಗಳು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿದ ಗುರುತಿನ ಚೀಟಿ ಹಾಗೂ ಇತರ ದಾಖಲೆಗಳೊಂದಿಗೆ ನಿಗಧಿತ ದಿನದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂ: 0820-2521324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್‌ಗೆ ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ -11 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯನ್ನಾಧರಿಸಿ, ವಾರ್ಡುವಾರು ಮೀಸಲಾತಿಯನ್ನು ನಿಗಧಿಪಡಿಸಿ, ಅಂತಿಮ ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ವಾರ್ಡುವಾರು ಮೀಸಲಾತಿ ವಿವರ: ತಾರಾಪತಿ – ಹಿಂದುಳಿದ ವರ್ಗ-ಎ (ಮಹಿಳೆ), ವಿರೂಪಾಕ್ಷಿ – ಸಾಮಾನ್ಯ, ಸೋಮೇಶ್ವರ – ಹಿಂದುಳಿದ ವರ್ಗ -ಬಿ (ಮಹಿಳೆ), ದೊಂಬೆ – ಸಾಮಾನ್ಯ, ಪಂಚಲಿಂಗೇಶ್ವರಿ – ಹಿಂದುಳಿದ ವರ್ಗ ಎ, ಆಲಂದೂರು-ತೂದಳ್ಳಿ – ಸಾಮಾನ್ಯ (ಮಹಿಳೆ), ಕಡ್ಕೆ-ಮದ್ದೋಡಿ – ಹಿಂದುಳಿದ ವರ್ಗ-ಬಿ, ಯೋಜನಾ ನಗರ -ಪರಿಶಿಷ್ಟ ಜಾತಿ, ಬಂಕೇಶ್ವರ- ಹಿಂದುಳಿದ ವರ್ಗ-ಎ (ಮಹಿಳೆ), ಬೈಂದೂರು ಪೇಟೆ- ಸಾಮಾನ್ಯ, ವೆಂಕಟ್ರಮಣ- ಸಾಮಾನ್ಯ, ಪಾಣ್ತಿಗರಡಿ – ಹಿಂದುಳಿದ ವರ್ಗ-ಎ, ಯಡ್ತರೆ- ಸಾಮಾನ್ಯ (ಮಹಿಳೆ), ಮಯ್ಯಾಡಿ ಕಳವಾಡಿ – ಹಿಂದುಳಿದ ವರ್ಗ-ಎ (ಮಹಿಳೆ), ಬಾಡಾ, ಬಿಯಾರ- ಸಾಮಾನ್ಯ, ಸೂರ್ಕುಂದ – ಹಿಂದುಳಿದ ವರ್ಗ ಎ, ಗಂಗನಾಡು –…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನಲ್ಲಿ, ‘ಗ್ರಾಂಡ್ ಪೇರೆಂಟ್ಸ್ ಡೇ ‘ಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಉದ್ದೇಶ, ಮಕ್ಕಳಿಗೆ ಹಿರಿಯರ ಮಹತ್ವವನ್ನು ಮನವರಿಕೆ ಮಾಡಿಸುವುದೂ ಹೌದು, ಜೊತೆಗೆ ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಪಡಿಸುವುದೂ ಆಗಿತ್ತು. ಇಂತಹ ಕಾರ್ಯಕ್ರಮಗಳು ಹಿರಿಯರ ಅನುಭವ, ಬೆಳೆವಣಿಗೆ ಹಾಗೂ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಸಹಾಯಕವಾಗುತ್ತವೆ. ಒಂದರಿಂದ ಎಂಟನೇ ತರಗತಿ ವರೆಗಿನ ವಿದ್ಯಾರ್ಥಿಗಳು ತಮ್ಮ ಅಜ್ಜ-ಅಜ್ಜಿಯೊಂದಿಗೆ ಕಳೆದ ಸವಿ ಕ್ಷಣಗಳನ್ನು ಮೆಲುಕು ಹಾಕುತ್ತಾ, ಅದನ್ನು ಕಿರು ವಿಡಿಯೋ ರೂಪದಲ್ಲಿ ದಾಖಲಿಸಿ ಕಳುಹಿಸುವ ಸ್ಪರ್ಧೆಯನ್ನು ನಡೆಸಲಾಯಿತು. ಈ ವಿಡಿಯೋ ತುಣುಕುಗಳಲ್ಲಿ ಮಕ್ಕಳು ತಮ್ಮ ಹೆಮ್ಮೆಯ ಕ್ಷಣಗಳು, ಆಟವಾಡಿದ ಸಂದರ್ಭಗಳು, ಅವರಿಂದ ಕಲಿತ ಪಾಠಗಳು ಮತ್ತು ಕಥೆಗಳು ಮುಂತಾದವುಗಳನ್ನು ಹಂಚಿಕೊಂಡರು. ಈ ಕಿರುಚಿತ್ರಗಳು ಕೇವಲ ನೆನಪಿನ ಸಂಗ್ರಹವಷ್ಟೇ ಅಲ್ಲದೇ, ಮೌಲ್ಯಮಯ ಸಂಬಂಧಗಳ ಪ್ರತಿಬಿಂಬವಾಗಿಯೂ ಸಹ ಜನರಿಗೆ ಅನುಭವವಾಯಿತು. ಹಿರಿಯರ ಜೀವಿತಾನುಭವ ಮತ್ತು ಪ್ರೀತಿ ಎಂಬ ಅಪಾರ ಸಂಪತ್ತನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಮೂಡುಬಿದಿರೆ: ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಎಸ್‌ಡಿಪಿಟಿ ಪಿಯು ಕಾಲೇಜು ಕಟೀಲು ಇವರ ಜಂಟಿ ಆಶ್ರಯದಲ್ಲಿ ನಡೆದ ನಡೆದ ಬಾಲಕರ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ಕ್ರಮವಾಗಿ 18ನೇ ಬಾರಿಗೆ ಹಾಗೂ 16ನೇ ಬಾರಿಗೆ ಸಮಗ್ರ ಚಾಂಪಿಯನ್ಸ್ ಪಟ್ಟ ಆಲಂಕರಿಸಿತು. ಬಾಲಕರ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ವಿವೇಕಾನಂದ ಕಾಲೇಜು ಪುತ್ತೂರು ತಂಡವನ್ನು 5 ಅಂಕಗಳು ಹಾಗೂ ಇನ್ನಿಂಗ್ಸ್ನೊಂದಿಗೆ ಮಣಿಸಿ 18ನೇ ಬಾರಿ ಚಾಂಪಿಯನ್ಸ್ ಪ್ರಶಸ್ತಿ ಪಡೆಯಿತು. ಬಾಲಕರ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಆಳ್ವಾಸ್‌ನ ಅಮರೇಶ್ ಹಾಗೂ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಆಳ್ವಾಸ್‌ನ ಅಶ್ವಿನ್ ಪಡೆದರು. ಬಾಲಕಿಯರ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ಎಸ್‌ಡಿಪಿಟಿ ಪಿಯು ಕಾಲೇಜು ಕಟೀಲು ತಂಡವನ್ನು 8 ಅಂಕಗಳು ಹಾಗೂ ಇನ್ನಿಂಗ್ಸ್ನೊಂದಿಗೆ ಮಣಿಸಿ 16ನೇ ಬಾರಿ ಜಯಶಾಲಿಯಾಯಿತು. ಬಾಲಕಿಯರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಗಂಗೊಳ್ಳಿ: ಕಳೆದ ಕೆಲವು ವರ್ಷಗಳ ಹಿಂದೆ ಕ್ರೀಡಾ ಪ್ರತಿಭೆಗಳಿದ್ದರೂ ಅವರಿಗೆ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಯಿಂದ ಹಾಗೂ ಶಾಲೆಯಿಂದ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಹಲವು ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಸಾಧ್ಯವಾಗುತ್ತಿದೆ. ಕ್ರೀಡೆಯಲ್ಲಿ ಸೋಲು ಗೆಲವು ಸಾಮಾನ್ಯವಾಗಿದ್ದು, ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟ್ ಪಂದ್ಯಾಟ 2025-26ನ್ನು ಗುರುವಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಜ್ಜರ ಕಾಡಿನಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನು ಪೂಜಾರಿ 110 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ  ಸ್ಥಾನವನ್ನು ಪಡೆದುಕೊಂಡು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More