Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ನಡೆಸುತ್ತಿದ್ದರು ಕೂಡಾ ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಗುರುವಾರದಂದು ಗ್ರಾಮ ಪಂಚಾಯತ್ ಗೆ ತೆರಳಿ ಅಂತಿಮವಾಗಿ ಒಂದು ವಾರದ ಗಡುವು ನೀಡಿದರು. ಅಭಿವೃದ್ಧಿ ಅಧಿಕಾರಿ ಗೀತಾ ಅವರಿಗೆ ಮನವಿ ಸಲ್ಲಿಸಿ ಬಿಜೂರು ಗ್ರಾಮದ 2ನೇ ವಾರ್ಡನ ನಾರಂಬಳ್ಳಿ, ಬಾರ್ತಿಮಕ್ಕಿ, ಸಣ್ಣ ನಾರಂಬಳ್ಳಿ ಕಂಚಿಕಾನ್ ಕೋಟ್ನಾಡಿ ಕೋಡಿಕೇರಿ, ಕೋಣೂರು ಪ್ರದೇಶದಲ್ಲಿ ಹಲವು ತಿಂಗಳುಗಳಿಂದ ಚಿರತೆ ಸಂಚರಿಸುತ್ತಿದ್ದು ಗ್ರಾಮಸ್ಥರು ಭಯ ಭೀತಿ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆಯಂಗಳಕ್ಕೆ ಚಿರತೆ ಬಂದು ನಾಯಿ, ಕೋಳಿಗಳು ಆಹುತಿ ತೆಗೆದುಕೊಳ್ಳುತ್ತಿದ್ದರು ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗಂಡಿಲ್ಲ ಇದೀಗ ವಾರದ ಗಡುವು ನೀಡುತ್ತಿದ್ದೇವೆ ಈ ಸಮಯದಲ್ಲಿ ಚಿರತೆ ಹಿಡಿಯಲು ಸಾಧ್ಯವಾಗದಿದ್ದರೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಒಂದು ಗ್ರಾಮಪಂಚಾಯತ್ ಬಹುಕ್ಷೇತ್ರದಲ್ಲಿ ಮುಂಚೂಣಿಗೆ ಬರುವುದು ಸುಲಭದ ಮಾತಲ್ಲ ಈ ದಿಸೆಯಲ್ಲಿ ಕೋಡಿ ಗ್ರಾಮಪಂಚಾಯತ್ ವಿವಿಧ ಯೋಜನೆಗಳ ಅನುಷ್ಠಾನಗಳ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಕೋಡಿ ಗ್ರಾಮ ಪಂಚಾಯತ್‌ನಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಉಡುಪಿ ಕೋಡಿ ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕು ಪಂಚಾಯತ್ ಇವರ ಆಶ್ರಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಜಲಜೀವನ ಮಿಷನ್ ಯೋಜನೆಯಡಿ ಕೋಡಿ ಗ್ರಾಮದಲ್ಲಿ 24*7 ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋಡಿ ಗ್ರಾಮಪಂಚಾಯತ್ ಪ್ರಧಾನಮಂತ್ರಿಗಳ ಪ್ರತಿ ಕಾರ್ಯವನ್ನು ಯಶಸ್ಸಿನತ್ತ ಕೊಂಡ್ಯೋಯ್ದು ದಿನದ 24ಗಂಟೆ ನೀರುಣಿಸು ಯೋಜನೆಯನ್ನು ಅನುಷ್ಠಾನ ಅಸಮಾನ್ಯ ಕಾರ್ಯವನ್ನು ಸಾಧಿಸಿದ್ದಾರೆ.ಅದರಲ್ಲೂ ಪಂಚವರ್ಣ ಸಂಘಟನೆ, ಗೀತಾನಂದ ಫೌಂಡೇಶನ್ ಸಹಕಾರ ಪಡೆದು ಇಡೀ ಗ್ರಾಮ ಹಸಿರಿಕರಣಗೊಳಿಸುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಂಗಳೂರಿನಲ್ಲಿ ಗುರುವಾರ ನಡೆದಿದೆ. ಮೃತ ಯುವಕನನ್ನು ಹಂಗಳೂರು ಗ್ರಾಮದ ಶ್ರೀಧರ ಎಂಬವರ ಮಗ ಶ್ರೀಷ (28) ಎಂದು ಗುರುತಿಸಲಾಗಿದೆ. ಈತ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಗಿಸಿ ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸುತ್ತಿದ್ದು ಒಂದು ವರ್ಷದ ಹಿಂದೆ ಶಾಸ್ರ್ತಿ ಪಾರ್ಕ್‌ ಸಮೀಪ ಪ್ಲೈ ಒವರ್‌ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಗೆ ಹಾರಿ ಕೈಕಾಲು ಪೆಟ್ಟಾಗಿದ್ದು ಚಿಕಿತ್ಸೆ ಕೊಡಿಸಿ ಗುಣಮುಖವಾಗಿದ್ದಾರೆ. ಗುರುವಾರದಂದು ವಿಪರೀತ ಮಳೆ ಕಾರಣ ಶಾಲಾ ಕಾಲೇಜು ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಊಟ ಬಡಿಸಲು ಕರೆದಾಗ ಏಲ್ಲಿಯೋ ಕಾಣದೇ ಇದ್ದು ಮನೆಯ ಬಾವಿ ನೋಡಿದಾಗ ಬಾವಿಯಲ್ಲಿ ಬಿದ್ದಿದ್ದು ಕೂಡಲೇ ತಂದೆ ಬೇಕರಿಯಿಂದ ಮನೆಗೆ ಹೋಗಿ ಮಗನನ್ನು ಮೇಲೆತ್ತಿದ್ದಾಗ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ ಸಂಸ್ಥೆಯೊಂದಕ್ಕೆ ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಆಡಳಿತ ಮಂಡಳಿಗಳು ಆಧಾರ ಸ್ಥಂಭವಾಗಿದ್ದು ಈ ಮೂರರ ನಡುವೆ ಸೇತುವೆಯಾಗಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಕಾರ್ಯನಿರ್ವಹಿಸಬೇಕು. ಈ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದಷ್ಟು ಶೈಕ್ಷಣಿಕ ಸಂಸ್ಥೆ ಸೃಜನಶೀಲವಾಗಿರುತ್ತದೆ ಎಂದು ಬೆಹರಿನ್ ಕಿಂಗ್‌ಡಮ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಡಾ. ಇಕ್ಬಾಲ್ ಹವಾಲ್ದಾರ್ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ 2025-26ನೇ ಶೈಕ್ಷಣಿಕ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ನೂತನ ಕಾರ್ಯದರ್ಶಿ ಆಕಾಶ್ ಬಿ. ಶೆಟ್ಟಿ ಪ್ರತಿಜ್ಞಾ ವಿಧಿ ಪೂರೈಸಿದರು. ಎಸ್‌ಕ್ಯೂಎಸಿ ಪ್ರತಿನಿಧಿ ನಿರೀಕ್ಷಾ ಶೆಟ್ಟಿ ವಾರ್ಷಿಕ ಚಟುವಟಿಕೆಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಮಾರಿಕಾಂಬಾ ಮಹಿಳಾ ಸಹಕಾರ ಸಂಘ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ತ್ರಾಸಿಯ ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆನಾಂಡಿಸ್ ಮಾತನಾಡಿ, ಮಹಿಳೆಯರ ಅಭಿವೃದ್ಧಿ ಹೊಂದಲು ಕ್ರಿಯಾಶೀಲವಾಗಿ ಪ್ರಯತ್ನಿಸಬೇಕು ಹಾಗೂ ಸ್ವ-ಉದ್ಯೋಗವನ್ನು ಮಾಡಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಭಾಗವಹಿಸಿದರೆ ಸಂಘ ಸಂಸ್ಥೆಗಳನ್ನು ಲಾಭದಾಯಕಗೊಳಿಸಲು ಸಾಧ್ಯ ಎಂದು ಹೇಳಿದರು. ಸಂಘದ ನಿರ್ದೇಶಕರುಗಳಾದ ರತ್ನ ಟಿ. ದೇವಾಡಿಗ, ಸುರೇಖಾ ಕಾನೋಜಿ, ಮಹಾಲಕ್ಷ್ಮೀ, ಶಾಂತ, ಜಿ. ರೇಣುಕಾ, ವಿಜಯಾ ಬಿ., ಲಲಿತಾ ಖಾರ್ವಿ, ಶ್ಯಾಮಲಾದೇವಿ, ಸುನೀತಾ ಪೂಜಾರಿ, ಶಾಂತ ಮರಾಠಿ ನಾಯ್ಕ ಉಪಸ್ಥಿತರಿದ್ದರು. 2024-25ನೇ ಸಾಲಿನನಲ್ಲಿ ಎಸ್ ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಆತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘದ ಸಿಬ್ಬಂದಿ ಶ್ರೀಲವಿ ರವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿಲಿಂಗೇಶ್ವರ್ ಅವರು ವಾರ್ಷಿಕ ವರದಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ‘ಜಿನೇವಾ ಒಪ್ಪಂದದ ಜಾಗೃತಿ ಮತ್ತು ಪ್ರಥಮ ಚಿಕಿತ್ಸಾ ತರಬೇತಿ’ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಘಟಕ ಇದರ ಮುಖ್ಯಸ್ಥರಾದ ಜಯಕರ್‌ ಶೆಟ್ಟಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಜಿನೇವಾ ಒಪ್ಪಂದದ ಮಹತ್ವ, ರೆಡ್ ಕ್ರಾಸ್ ಸಂಸ್ಥೆಯ ಚರಿತ್ರೆ ಅದು ವಿಶ್ವದಾದ್ಯಂತ ವ್ಯಾಪಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ನಿರ್ವಹಿಸಿದ ಕಾರ್ಯಗಳು, ವ್ಯಾಪ್ತಿ ಮತ್ತು ಮಹತ್ವವನ್ನು ತಿಳಿಸಿದರು. ಅಲ್ಲದೆ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಧೋರಣೆ ಯನ್ನು ವಿವರಿಸುತ್ತ ಯುದ್ದ, ಪ್ರವಾಹ ಹಾಗೂ ಕಷ್ಟದ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಅಸಹಾಯಕರಿಗೆ ಸಹಾಯವನ್ನು ಮಾಡುವುದು. ಮಾನವೀಯತೆಯನ್ನು ತೋರಿ ಅವರಿಗೆ ಶುಶ್ರೂಷೆಯನ್ನು ಮಾಡುವುದು. ದೇಶ ಧರ್ಮವನ್ನು ಮೀರಿ ಮನುಷತ್ವಕ್ಕೆ ಹಾಗೂ ಮಾನವೀಯತೆಗೆ ಮೊದಲ ಆದ್ಯತೆಯನ್ನು ನೀಡುವುದು ಎಂದು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇಶಾನಿ ಮೆಡಿಕಲ್ ಸೆಂಟರ್ ಇದರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಆಗಷ್ಟೇ ಜಡಿ ಮಳೆ ಸುರಿದು ಧರೆಯಲ್ಲಾ ತಂಪಾದ ಗಳಿಗೆ! ಒಂದು ಕಡೆ ಮಕ್ಕಳೆಲ್ಲಾ ಹೊಸ ಬಟ್ಟೆ ತೊಟ್ಟುಕೊಂಡು ಖುಷಿಯಿಂದ ಓಡಾಡುತ್ತಿದ್ದರೆ, ಇನ್ನೊಂದು ಕಡೆ ಘಂ ಎನ್ನುವ ಹಬ್ಬದೂಟದ ಪರಿಮಳ. ಪೂಜೆ ಪುನಸ್ಕಾರಗಳು ಮತ್ತೊಂದು ಕಡೆ…ಅರೇ ಏನಿದು ಸಂಭ್ರಮ, ಸಡಗರವೆಂದು ಎಲ್ಲರೊಳಗೊಂದು ಕುತೂಹಲ! ಇದು ಯಡಾಡಿ-ಮತ್ಯಾಡಿಯ ಸುಂದರವಾದ ಪರಿಸರದಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಹಾಗೂ ಸುಜ್ಞಾನ ಪಿಯು ಕಾಲೇಜಿನಲ್ಲಿ ಕಂಡು ಬಂದ ಗೌರಿ-ಗಣೇಶ ಹಬ್ಬದ ಸಂಭ್ರಮ! ಹೌದು, ಹಬ್ಬವೆಂದರೆ ಮನೆ ಮನದಲ್ಲಿ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಹಬ್ಬಕ್ಕಿರುವ ಶಕ್ತಿಯೇ ಅಂಥದ್ದು! ಈ ಹಬ್ಬಗಳ ನೆಪದಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಸಿಹಿಯುಂಡು ಖುಷಿ ಪಡುತ್ತಾರೆ. ಆದರೆ ಕಣ್ತುಂಬ ಭವಿಷ್ಯದ ಕನಸು ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಬಿಟ್ಟು ಹಾಸ್ಟೆಲ್ನಲ್ಲಿರುವ ಓದುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ಹಬ್ಬದ ಖುಷಿಯಿಂದ ವಂಚಿತರಾಗುತ್ತಾರೆ. ಹಾಸ್ಟೆಲ್ನಲ್ಲಿರುವ ಮಕ್ಕಳಿಗೆ ಹಬ್ಬದ ಪ್ರಾಮುಖ್ಯತೆ, ಅದರ ಆಚರಣೆಗಳ ಬಗ್ಗೆ ತಿಳಿದಿರುವುದಿಲ್ಲ ಎಂಬ ತಪ್ಪು ಕಲ್ಪನೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸರಕಾರ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲ್‌ಜೀವನ್ ಮಿಷನ್ ಅಡಿ ಮನೆ ಮನೆಗೆ ನಳ ನೀರು ಪೂರೈಸುವ ಕಾಮಗಾರಿಗಳನ್ನು ಕೈಗೊಂಡಿದೆ. ಇದು ಪ್ರತಿಯೊಂದು ಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಅಭಿಯಂತರರಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 247190 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಲು ಜಲ ಜೀವನ ಅಡಿಯಲ್ಲಿ ಗುರಿ ಹೊಂದಲಾಗಿದ್ದು, ಈವರೆಗೆ 2,15,499 ಮನೆಗಳಿಗೆ ನಳ ಸೌಲಭ್ಯವನ್ನು ಒದಗಿಸುವುದರೊಂದಿಗೆ ಶೇ.93 ರಷ್ಟು ಪೂರ್ಣಗೊಂಡಿದೆ. ಬಾಕಿ ಉಳಿದ 31,691 ಮನೆಗಳಿಗೆ ನಳ ಸೌಲಭ್ಯ ಕಲ್ಪಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೈಭಾರತ್, ಉಡುಪಿ ಹಾಗೂ ಪಂಚವರ್ಣ ಯುವಕ ಮಂಡಲ ರಿ. ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ಜಂಟಿ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕೋಡಿ ಇವರ ಸಹಯೋಗದೊಂದಿಗೆ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನ ಕಾರ್ಯಕ್ರಮ ಮಂಗಳವಾರ ಕೋಡಿ ಗ್ರಾಮಪಂಚಾಯತ್ ನಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಗಿಡ ನಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಉಪಾಧ್ಯಕ್ಷ ಪ್ರಸಾದ್, ಗೀತಾನಂದ ಟ್ರಸ್ಟ್ ನ ಮುಖ್ಯಸ್ಥ ಆನಂದ್ ಸಿ. ಕುಂದರ್, ಉಡುಪಿ ನೆಹರು ಕೇಂದ್ರದ ಉಲ್ಲಾಸ್, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಪ್ರಯುಕ್ತ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗ ಹಾಗೂ ಕುಂದಗನ್ನಡ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ನಡೆದ “ಚೆನ್ನಿಮಣಿ – 2025 – ಎಲ್ಲಾ ಒಂದು ಗಳ್ಗಿ ಬನ್ನಿ” ಎಂಬ ಕುಂದಗನ್ನಡ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ರಶಿತಾ, ತೃತೀಯ ಬಿಸಿಎ, ಕುಂದಗನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಅಕ್ಷತಾ, ದ್ವಿತೀಯ ಬಿಸಿಎ, ಕುಂದಗನ್ನಡ ಪದ ಬಳಕೆ ಸ್ಪರ್ಧೆಯಲ್ಲಿ ದ್ವಿತೀಯ, ವೈಭವಿ, ತೃತೀಯ ಬಿಸಿಎ, ಒಂಟಿ ಕಾಲಿನ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಹಾಗು ಲಗೋರಿ ಸ್ಪರ್ಧೆಯಲ್ಲಿ ಪ್ರಥಮ ಬಿಕಾಂನ ವಿದ್ಯಾರ್ಥಿಗಳಾದ ಆಕಾಶ್ ಹೆಚ್ ಯು, ಪ್ರೀತಮ್, ಮಂಜು, ಗೌತಮ್, ಸಚಿನ್, ವೈಭವ್ ಮತ್ತು ಕಾರ್ತಿಕ್ ಅವರು ದ್ವಿತೀಯ ಬಹುಮಾನ ಪಡೆದಿದ್ದಾರೆ. ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ.…

Read More