ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ತಾಲೂಕಿನ 15 ಗ್ರಾಮ ಪಂಚಾಯತಿಗಳ ಅಭ್ಯರ್ಥಿಗಳ ಸಂಪೂರ್ಣ ವಿವರ ಶಿರೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ) ರಮೇಶ ಮೇಸ್ತ (242), ಲಿಂಗಪ್ಪ ಆರ್. ಮೇಸ್ತ (408), ಭಾರತಿ(344), ಮಹಮ್ಮದ್ ಶೋಯಿಬ್(390), ಮಹಮ್ಮದ್ ಅನ್ವರ್ ಹಸನ್ (467), ಶಕೀಲಾ ಅಹಮದ್ (522), ಚಂದು ಹಣಬರಕೇರಿ (247), ರವೀಂದ್ರ ಶೆಟ್ಟಿ ಪಟೇಲರಮನೆ (276), ಸಂಧ್ಯಾ ವಿಶ್ವನಾಥ (235), ಕಾವೇರಿ ಉದಯ ಪೂಜಾರಿ (220), ಆರ್ಮಕ್ಕಿ ರವೀಂದ್ರ ಶೆಟ್ಟಿ (391), ದಿ ಯು ದಿಲ್ಸಾದ್ ಬೆಗಂ (369), ಬಿಬಿ ಸಮೀನಾ (317), ಮಹಮ್ಮದ್ ಗೌಸ್ (417), ಬಾವು ಬಿಬಿ ಪಾತೀಮಾ (243), ಅಲ್ ದಿದಾ (233), ಮೌಲನ್ ಅಬ್ದುಲ್ ಸತ್ತಾರ್ (295), ರಘುರಾಮ ಮೇಸ್ತ(224), ಗೀತಾ ಮೇಸ್ತ(193), ಶಂಕರ ಮೇಸ್ತ (224), ಉಷಾ (245), ಪ್ರೇಮ (232), ನಾಗಯ್ಯ ಶೆಟ್ಟಿ (312), ಪದ್ಮಾವತಿ (437), ಪ್ರಭಾವತಿ (434), ಪ್ರಸನ್ನ ಶೆಟ್ಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆವಹಿಸಿ ಮಾತಾನಾಡಿದ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ನಾವು ಯಾವಾಗ ಸಹಬಾಳ್ವೆಯನ್ನು ಮರೆತು ಜೀವಿಸಲು ಆರಂಭಿಸುತ್ತವೆಯೋ ಅಂದು ಪರಿಸರದ ಜತೆಗೆ ನಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ಆ ಸ್ಪರ್ಧೆಯಲ್ಲಿ ನಮ್ಮ ಸೋಲು ಖಚಿತವಾಗಿರುತ್ತದೆ ಎಂದು ಹೇಳಿದರು. ಕೊರೊನಾ ಒಂದು ವೈರಸ್ ಇದರಿಂದ ಹೊರಬರುವ ಮಾರ್ಗಗಳು ನಮಗೆ ಇಗಾಗಲೇ ತಿಳಿದಿದೆ, ಆದರೆ ಜಗತ್ತು ಮಾರ್ಚ್ತಿಂ ಗಳನಲ್ಲೆ ಉಳಿದುಬಿಟ್ಟಿದೆ. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ ಇದನ್ನು ನಾವೆಲ್ಲರೂ ಅರಿತು ನಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸಬೇಕು. ಸಿನಿಮಾ ನೋಡಬೇಕು ಆದರೆ ಸಿನಿಮಾದಲ್ಲಿ ನಮ್ಮನ್ನು ನಾವು ನೋಡಬಾರದು ಆದರೆ ಇಂದಿನ ಯುವಪೀಳಿಗೆ ಸಿನಿಮಾ ಪಾತ್ರಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಸಿನಿಮಾ ಮನುಷ್ಯನ ಜೀವನದ ಒಂದು ಭಾಗವಾಗಿರಬೇಕೇ ಹೊರತು ಅದೇ ಜೀವನವಾಗಿರಬಾರದು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ ಒಟ್ಟು 554 ಸ್ಥಾನಗಳ ಪೈಕಿ 24 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 530 ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆರಂಭಗೊಂಡಿದೆ. ಬೈಂದೂರು ತಾಲೂಕಿನ 259 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 252 ಸ್ಥಾನಗಳಿಗೆ ಮತ ಎಣಿಕೆ ಕಾರ್ಯ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಆರಂಭಗೊಂಡಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ಉಪಸ್ಥಿತಿಯಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮೂಲಕ ಭದ್ರತಾ ಕೊಠಡಿಯ ಬಾಗಿಲು ತೆರೆದು ಮತ ಎಣಿಕೆ ಕಾರ್ಯ ನಡೆಯುವ ವಿವಿಧ ಕೊಠಡಿಗಳಿಗೆ ಮತ ಪೆಟ್ಟಿಗೆಯನ್ನು ಸಾಗಿಸಲಾಗಿದೆ. ಇದೀಗ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕುಂದಾಪುರ ತಾಲೂಕಿನ 530 ಅಭ್ಯರ್ಥಿಗಳು ಹಾಗೂ ಬೈಂದೂರು ತಾಲೂಕಿನ 252 ಅಭ್ಯಥರ್ಿಗಳ ಭವಿಷ್ಯ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಸಹಕಾರಿ ಧುರೀಣ, ಕುಂದಾಪುರ ತಾ.ಪಂ.ಮಾಜಿ ಅಧ್ಯಕ್ಷ ಎಸ್.ದಿನಕರ ಶೆಟ್ಟಿ (66) ಅವರು ಮಂಗಳವಾರ ನಿಧನರಾಗಿದ್ದಾರೆ. ಅವರು ಡಿ.29ರಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಅವರು ಉಡುಪಿ ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದರು. 25 ವರ್ಷಗಳ ಕಾಲ ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ರಾಜ್ಯ ನಿರ್ದೇಶಕರಾಗಿ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಇವರು ಕಳೆದ ವರ್ಷ ಕಬ್ಬು ಬೆಳೆಗಾರರನ್ನು ಪ್ರೇರೆಪಿಸುವ ಸಲುವಾಗಿ ಹುಣ್ಸೆಮಕ್ಕಿಯಲ್ಲಿ ಆಲೆಮನೆ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಮಾಜಿ ಶಾಸಕ ಕಾಪು ಸಂಜೀವ ಶೆಟ್ಟಿಯವರ ಪುತ್ರರಾಗಿದ್ದ ಇವರು ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೂ ವಿಶೇಷ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಹೊಳೆಯುವ ಹಾಗೂ ದೃಢವಾದ ಬಿಗಿಯಾದ ಚರ್ಮಕ್ಕಾಗಿ ಮುಖದ ಯೋಗ, ವ್ಯಾಯಾಮಗಳು ಅತ್ಯಂತ ಉಪಕಾರಿ. ಇದು ಅನಾದಿಕಾಲದಿಂದಲೂ ಜಾರಿಯಲ್ಲಿದೆ. ಈ ಆಸನಗಳು ನೈಸರ್ಗಿಕವಾದ ಆರೋಗ್ಯವನ್ನು ನೀಡುವುದಲ್ಲದೇ, ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವುದು ಬಹಳ ಪ್ರಯೋಜನಕಾರಿ. ಬೆವರು, ಉಸಿರಾಟ-ತಾಲೀಮು ಮೂಲಕ ನಿಮ್ಮ ದೇಹದಿಂದ ವಿಷವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಮುಖದ ಯೋಗವು ಟೋನ್‌ಗಳು, ವಿಶ್ರಾಂತಿ ಮತ್ತು ಮುಖದ ಚರ್ಮಕ್ಕೆ ನೈಸರ್ಗಿಕ ವರ್ಧಕವನ್ನು ನೀಡುತ್ತದೆ ಮತ್ತು ಮುಖದ ಸ್ನಾಯುಗಳನ್ನು ಮರುಹೊಂದಿಸುತ್ತದೆ. ಮುಖದ ಯೋಗವು ಮುಖ ಮತ್ತು ಕತ್ತಿನ ಸ್ನಾಯುಗಳನ್ನು ಟೋನ್, ದೃಢವಾಗಿ ವಿಸ್ತರಿಸುತ್ತದೆ ಮತ್ತು ಯುವ ನೋಟವನ್ನು ನೀಡುವ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮಗೆ ದೃಢವಾದ ಮುಖ ಮತ್ತು ಹೊಳೆಯುವ ಚರ್ಮವನ್ನು ಒದಗಿಸಲು ಸಹಾಯ ಮಾಡುವ ಕೆಲವು ಯೋಗ ಆಸನಗಳು ಇಲ್ಲಿವೆ. ವಿಪ್ರಿತಾ ಕರಣಿ ಮುಂದೆ ಬಾಗಿ ಮುಖವನ್ನು ಫ್ರೀ ಮಾಡಿ. ಅಥವಾ ಉತ್ತನಾಸನ, ವಿಪ್ರಿತಾ ಕರಣಿ ಮಾಡಿ. ಈ ಭಂಗಿಗಳು ರಕ್ತವು ನಿಮ್ಮ ತಲೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮನೆಗಳಿಗೆ ತೆರಳಿ ಗೋ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನುಗಂಗೊಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಂಗೊಳ್ಳಿ ನಿವಾಸಿ ಅಬ್ದುಲ್ ರಹೀಂ (30) ಬಂಧಿತ ಆರೋಪಿ. ಗಂಗೊಳ್ಳಿ ಠಾಣಾ ಪಿಎಸ್ಐ ಭೀಮಾಶಂಕರ್ ಅವರು ಹೆಡ್ ಕಾನ್ಸ್ಟೇಬಲ್ ಗಿರೀಶ್ ಅವರೊಂದಿಗೆ ಗಂಗೊಳ್ಳಿ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಮೀನು ಮಾರ್ಕೆಟ್ ಸಮೀಪ ಅಬ್ದುಲ್ ರಹೀಂ ಎಂಬಾತ ದನದ ಮಾಂಸವನ್ನು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಅದರಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಅಕ್ರಮವಾಗಿ 4 ಕೆ.ಜಿ ದನದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಆರೋಪಿ ಹಾಗೂ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 43 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ.76.09ರಷ್ಟು ಮತದಾನವಾಗಿದೆ. ತಾಲೂಕಿನ 266 ಮತಗಟ್ಟೆಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ. ಅಂಪಾರುವಿನಲ್ಲಿ ಮತಕೇಂದ್ರದ ಹೊರಕ್ಕೆ ಮಾತಿನ ಚಕಮಕಿ ನಡೆದಿತ್ತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಾಲಾಡಿಯಲ್ಲಿ, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಬೆಳ್ಳಾಲದಲ್ಲಿ, ಮಾಜಿ ಶಾಸಕರುಗಳಾದ ಅಪ್ಪಣ್ಣ ಹೆಗ್ಡೆ ಬಸ್ರೂರು ಹಾಗೂ ಕೆ. ಗೋಪಾಲ ಪೂಜಾರಿ ಕಟ್’ಬೆಲ್ತೂರಿನಲ್ಲಿ ಮತದಾನ ಮಾಡಿದರು. ಹಿರಿಯ ನಾಗರಿಕರು, ವಿಕಲಚೇತನರು ಹೆಚ್ಚು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಶೇ.12.41 ಮತದಾನವಾಗಿದ್ದರೇ, 11 ಗಂಟೆಯ ತನಕ ಶೇ30.17, ಮಧ್ಯಾಹ್ನ 1 ಗಂಟೆಯ ತನಕ ಶೇ.49.46 ಹಾಗೂ 3 ಗಂಟೆಯ ಒಟ್ಟು ಶೇ.61.23 ಮತದಾನವಾಗಿದೆ. ಅಂತಿಮವಾಗಿ ಶೇ.76.09 ಮತದಾನವಾಗಿದೆ. ಮತ ಕೇಂದ್ರಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಲಾಗಿದ್ದು, ಮತದಾನಕ್ಕೂ ಮುನ್ನ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿತ್ತು. ಎಸ್ಪಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತಿಚಿಗೆ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಖ್ಯಾತಿ ಗಳಿಸಿದ್ದ ನವ ದಂಪತಿಗಳಿಗೆ ಪ್ರಧಾನಿಯಿಂದಲೂ ಮೆಚ್ಚುಗೆ ದೊರೆತಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮದುವೆಯ ಬಳಿಕ ದಂಪತಿಗಳು ತಿರುಗಾಡಲು ತೆರಳುತ್ತಾರೆ. ಆದರೆ ಈ ದಂಪತಿಗಳು ಭಿನ್ನ. ಅನುದೀಪ್-ಮಿನುಷ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು. ಅನುದೀಪ್ ತಮ್ಮ ಸಂಕಲ್ಪದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಪರಿಣಾಮವಾಗಿ ಯುವಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಈ ದಂಪತಿಗಳು ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದ್ದಾರೆ. ಅನುದೀಪ್ ಹೆಗ್ಡೆ ಹಾಗೂ ಮಿನುಷಾ ಅವರು ಮದುವೆಯ ಬಳಿಯ ಹನಿಮೂನ್‌ಗೆ ತೆರಳದೇ ಬೀಚ್ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ದಂಪತಿಗಳ ಕಾರ್ಯವನ್ನು ಕಂಡು ಸ್ಥಳೀಯರೂ ಅವರಿಗೆ ಸಾಥ್ ನೀಡಿದ್ದರು. ಇದನ್ನೂ ಓದಿ ► ನವದಂಪತಿಗಳ ವೆಡ್ಡಿಂಗ್ ಚಾಲೆಂಜ್‌ಗೆ ಭಾಗಶಃ ಕಸಮುಕ್ತವಾದ ಸೋಮೇಶ್ವರ ಬೀಚ್! – https://kundapraa.com/?p=43090 . ► ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ – https://kundapraa.com/?p=43646…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಶಿರೂರು ನೀರ್ಗದ್ದೆ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವ, ಲಾರಿಯಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಾಗಲಕೋಟೆಗೆ ತೆರಳುತ್ತಿದ್ದ ವ್ಯಕ್ತಿ, ಘಟನೆಯಲ್ಲಿ ಮೃತಟ್ಟಿದ್ದಾರೆ. ಶಿರೂರು ನಿರ್ಗದ್ದೆ ಸಮೀಪ ಊಟಕ್ಕೆ ಬಸ್ ನಿಲ್ಲಿಸಿದಾಗ ಬಹಿರ್ದೇಸೆಗಾಗಿ ಹೆದ್ದಾರಿ ದಾಟುತ್ತಿದ್ದ ವೇಳೆ ಇಳಿಜಾರಿನಲ್ಲಿ ಕೋಕ್ ಲಾರಿ ಡಿಕ್ಕಿಯಾಗಿ ದೇಹ ಛಿದ್ರಗೊಂಡಿತ್ತು. ಮೃತ ವ್ಯಕ್ತಿಯನ್ನು ಬಾಗಲಕೋಟ ಜಿಲ್ಲೆ ಹುಲಗುಂದ ತಾಲೂಕಿನ ಮೈಲಾರಪ್ಪ (60) ಎಂದು ಗುರುತಿಸಲಾಗಿದೆ. ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ತೆರವುಗೊಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 43 ಗ್ರಾ.ಪಂ.ಗಳಿಗೆ ಡಿ.27 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಶನಿವಾರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. 1,262 ಅಭ್ಯರ್ಥಿಗಳು ಕಣದಲ್ಲಿ: ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳ ಒಟ್ಟು 554 ಸ್ಥಾನಗಳಿದ್ದು, ಈ ಪೈಕಿ 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1,262 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.86 ಲಕ್ಷ ಮತದಾರರು: 1,86,685 ಮತದಾರರು ಮತ ಚಲಾಯಿಸಲಿದ್ದಾರೆ. ಇವರಲ್ಲಿ 90,339 ಪುರುಷರು, 96,343 ಮಹಿಳಾ ಮತದಾರರು ಹಾಗೂ ಮೂವರು ಇತರ ಮತದಾರರಿದ್ದಾರೆ. 43 ಚುನಾವಣಾಧಿಕಾರಿಗಳು, 43 ಸಹಾಯಕ ಚುನಾವಣಾ„ಕಾರಿಗಳು, 266 ಮತಗಟ್ಟೆಗಳಿಗೆ ತಲಾ 4ರಂತೆ ಒಟ್ಟು 1,064 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 1,150 ಅ„ಕಾರಿಗಳು ಮತಗಟ್ಟೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 266 ಮತಗಟ್ಟೆ: ಒಟ್ಟು 271 ಮತಗಟ್ಟೆಗಳಿದ್ದು, ಆದರೆ ಹಾಲಾಡಿಯಲ್ಲಿ 2, ಮಚ್ಚಟ್ಟು 2 ಹಾಗೂ ಕೆದೂರಲ್ಲಿ 1 ಮತಗಟ್ಟೆಗಳಲ್ಲಿ ಅವಿರೋಧ…
