ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಫೇಸ್‌ಮಾಸ್ಕ್‌ಗಳನ್ನು ಉಚಿತವಾಗಿ ನೀಡಿದ್ದು, ಸೋಮವಾರ ಕರೋನ ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿರುವ ಬೈಂದೂರು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಬೈಂದೂರಿನಲ್ಲಿರುವ ವಲಸೆ ಕಾರ್ಮಿಕರಿಗೆ ಹಸ್ತಾಂತರಿಸಿದರು. ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್‌ಕುಮಾರ್ ಶೆಟ್ಟಿ ಮಾಸ್ಕ್‌ಗಳನ್ನು ವಿತರಿಸಿದರು. ಸಂಸದರ ಬೈಂದೂರು ಕಛೇರಿ ಆಪ್ತ ಸಹಾಯಕ ಶಿವಕುಮಾರ್ ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದ್ದು, ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ/ಅವಶ್ಯಕ ಸಾಮಾಗ್ರಿಗಳನ್ನು ಸ್ವಇಚ್ಛೆಯಿಂದ ನೀಡಬಯಸುವ ದಾನಿಗಳು / ಸಂಘ ಸಂಸ್ಥೆಗಳು/ ಸಾರ್ವಜನಿಕರು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಘಂಟೆ ಯವರೆಗೆ ನೀಡಬಹುದು ಎಂದು ಈಗಾಗಲೇ ತಿಳಿಸಲಾಗಿದೆ. ಆದರೂ ಕೆಲವೊಂದು ವ್ಯಕ್ತಿಗಳು / ಸಂಸ್ಥೆಗಳು ಮನೆ ಮನೆಗೆ ನೇರ ತೆರಳಿ ದೈನಂದಿನ ದಿನಸಿ/ ಅವಶ್ಯಕ ಸಾಮಾಗ್ರಿಗಳನ್ನು ಯಾವುದೇ ಅನುಮತಿ ಇಲ್ಲದೆ ಹಾಗೂ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಪು ಗುಂಪಾಗಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ತೆರಳಿ ಸಾಮಾಗ್ರಿಗಳನ್ನು ಹಂಚುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪದೇ ಪದೇ ದೂರುಗಳು ಬರುತ್ತಿವೆ. ಇದರಿಂದಾಗಿ ಲಾಕ್‌ಡೌನ್ / ನಿಷೇಧಾಜ್ಞೆಯ ಉಲ್ಲಂಘನೆಯಾಗುತ್ತದೆ ಅಲ್ಲದೇ ಲಾಕ್‌ಡೌನ್ ನ ಮೂಲ ಉದ್ದೇಶವೇ ಬುಡಮೇಲಾಗುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಸಂದರ್ಭ ತಾಲೂಕಿನ ಸೌಡ ಪರಿಸರದ ಜನರಿಗೆ ನೆರವಾಗುವ ಉದ್ದೇಶದಿಂದ ಸೌಡ ಮಧುರ ಯುವಕ ಮಂಡಲ (ರಿ) ಸದಸ್ಯರುಗಳು ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ತರಕಾರಿ, ಹಾಲು, ಮೊಸರನ್ನು ಮಾರುಕಟ್ಟೆ ಬೆಲೆಯಲ್ಲಿಯೇ ವಿತರಿಸಲು ಯುವಕ ಮಂಡಲದಿಂದ ತಾತ್ಕಾಲಿಕ ಅಂಗಡಿ ತೆರೆದಿದ್ದಾರೆ. ಅಷ್ಟೇ ಅಲ್ಲದೇ ವಿದ್ಯುತ್ ಸಮಸ್ಯೆ, ಮೆಡಿಸಿನ್, ಮೊಬೈಲ್ ರೀಚಾರ್ಜ್ ಹಾಗೂ ಜನರು ಪಡಿತರ ಪಡೆಯುವುದಕ್ಕಾಗಿ ನೆರವಾಗುವ ಪ್ರಯತ್ನದಲ್ಲಿ ಉತ್ಸಾಹಿ ಯುವಕರಿದ್ದಾರೆ. ಸೌಡ ಪರಿಸರದವರು ನಿಗದಿಪಡಿಸಿದ ದಿನಾಂಕದಂದು ಸೊಸೈಟಿಯಲ್ಲಿ ರೇಷನ್ ತೆಗೆದುಕೊಳ್ಳಲು ಸೊಸೈಟಿಗೆ ತೆರಳಿದರೆ ಅವರಿಗೆ ಉಚಿತವಾಗಿ ಸಾಗಾಟ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮೂರು ದಿನಗಳ ಕಾಲ ವಿವಿಧ ಭಾಗಗಳ ಜನರಿಗೆ ರೇಷನ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಉಳಿದಂತೆ ಅಗತ್ಯ ತರಕಾರಿ, ಹಾಲು ಮೊಸರು ಕೊಂಡುಕೊಳ್ಳಲು ನೆರವಾಗಿರುವುದಲ್ಲದೇ ವಿದ್ಯುತ್ ಸಮಸ್ಯೆಯಿದ್ದರೇ, ಮೊಬೈಲ್ ರೀಚಾರ್ಜ್ ಮಾಡುವುದಿದ್ದರೇ, ಇನ್ಸುರೆನ್ಸ್ ವಿದ್ಯುತ್ ಬಿಲ್ ಕಟ್ಟಬೇಕಿದ್ದರೇ, ಜೌಷಧಿಗಳ ಅಗತ್ಯವಿದ್ದರೆ ಎಲ್ಲದಕ್ಕೂ ಮಧುರ ಯುವಕ ಮಂಡಲದ ಯುವಕರುಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ವೈದ್ಯರು / ತಜ್ಞರು: 10 ಹುದ್ದೆಗಳು (ವೇತನ 60,000) ವಿದ್ಯಾರ್ಹತೆ: ಎಂಬಿಬಿಎಸ್/ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿವಿ ಯಿಂದ ಪದವಿ ಆಗಿರಬೇಕು), ಶುಶ್ರೂಶಕರು: 20 ಹುದ್ದೆಗಳು (ವೇತನ 20,000), ವಿದ್ಯಾರ್ಹತೆ : ಕರ್ನಾಟಕ ಸರ್ಕಾರದ ನೊಂದಾಯಿತ ಸಂಸ್ಥೆಗಳಿಂದ ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ, ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅರ್ಜಿಯೊಂದಿಗೆ ವಿದ್ಯಾರ್ಹತೆಗೆ ಸಂಬಂದಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ಜನ್ ಅವರ ಮೊಬೈಲ್ ಸಂ. 9449843181 ಅಥವಾ ಜಿಲ್ಲಾ ಸರ್ಜನರ ಕಚೇರಿಯನ್ನು ಸಂಪರ್ಕಿಸಬಹುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ವತಿಯಿಂದ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು ಹಾಗೂ ನರ್ಸ್‌ಗಳಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ರೂ. 20,000ವನ್ನು ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ನಳೀನ ಕುಮಾರ್, ಶಂಕರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಬಶೀರ್, ನಿರಂಜನ್ ಶೆಟ್ಟಿ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ತಾಲೂಕಿನ ಶಿರಿಯಾರ ಹಾಗೂ ಕುಂದಾಪುರ ತಾಲೂಕಿನ ಯಡ್ಯಾಡಿ- ಮತ್ಯಾಡಿ ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಿಗೆ, ಭಂಡಾರ್‌ಕಾರ‍್ಸ್ ಕಾಲೇಜು 93-94ರ ಸಾಲಿನ ಪಿಯುಸಿ ಸ್ನೇಹಿತರು ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಕೊಲ್ಲುಕೋರೆ ಕೆಲಸ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಕುಟುಂಬಗಳು ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದು, ಲಾಕ್‌ಡೌನ್ ಬಳಿಕ ಅವರ ಸ್ಥಿತಿ ದುಸ್ಥರವಾಗಿರುವುದನ್ನು ಅರಿತು ೨೫ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಣೆ ಮಾಡಲಾಗುತ್ತಿದೆ. ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರ ಮಾರ್ಗದರ್ಶನದಲ್ಲಿ ಪಡಿತರ ವಿತರಿಸುವ ಎಲ್ಲಾ ಶಾಖೆಗಳಲ್ಲಿಯೂ ಪ್ರತಿದಿನ ವಾರ್ಡುವಾರು ಜನರಿಗೆ ಬರಲು ತಿಳಿಸಲಾಗಿದ್ದು ಅದರಂತೆಯೇ ವಿತರಲಿಸಲಾಗುತ್ತಿದೆ. ಯಾವುದೇ ಗೊಂದಲವಿಲ್ಲದೇ ಜನರು ಪಡಿತರ ಪಡೆಯುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಾದ್ಯಂತ ಲಾಕ್‌ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಹಾಲನ್ನು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅರ್ಹರಿಗೆ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಬೈಂದೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ದ. ಕ. ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹಾಲಿನ ಪ್ಯಾಕೇಟ್ ವಿತರಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಳೆದೆರಡು ದಿನಗಳಿಂದ ಹಾಲಿನ ಮಾರುಕಟ್ಟೆ ಕುಸಿಯುತ್ತಿರುವ ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಒಕ್ಕೂಟ ಖರೀದಿಸಿದ ಸುಮಾರು 4,08,000 ಲೀ ಹಾಲಿನಿಂದ ಅಂದಾಜು 3.5 ಲಕ್ಷ ಲೀ. ಹಾಲು ಮೊಸರು, ಮಜ್ಜಿಗೆ ರೂಪದಲ್ಲಿ ಮಾರಾಟವಾಗಿದ್ದು, ಸುಮಾರು ಒಂದು ಲಕ್ಷ ಲೀ. ಹಾಲು ಮಾರುಕಟ್ಟೆಯ ಸಮಸ್ಯೆ ಎದುರಿಸುತ್ತಿದೆ. ಕಳೆದ ಒಂದು ವಾರದ ಹಿಂದೆ ಸುಮಾರು 6 ಲಕ್ಷ ಲೀ ಹಾಲು ಸಂಗ್ರಹವಾಗಿದ್ದು, ಪೌಡರ್ ಮಾಡಿ ಪರಿವರ್ತಿಸಲೂ ಸಾಧ್ಯವಾಗದೇ ಒಂದುವರೆ ದಿನ ಹಾಲನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಒಂದು ದಿನ 4.10ಲಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಜಮುತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಗಂಗೊಳ್ಳಿ ಪರಿಸರದ ಸುಮಾರು 600 ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು. ಗಂಗೊಳ್ಳಿ ಜಮುತುಲ್ ಮುಸ್ಲಿಮೀನ್ ಕಮಿಟಿ ಅಧ್ಯಕ್ಷರಾದ ಪಿ. ಎಂ. ಹಸೈನರ್ ನೇತೃತ್ವದ ತಂಡವು ಅಗತ್ಯವುಳ್ಳ ಸರ್ವಧರ್ಮಿಯರಿಗೂ ಈ ಕಿಟ್ ವಿತರಿಸಿರುವುದಾಗಿ ತಿಳಿಸಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ದೇಶದಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳು ನಿರಂತರವಾಗಿ ಸಾಗಲು ನಿರಂತರವಾಗಿ ಸಾಗಲು ಭಾರತ ಸರಕಾರದ ಮಾರ್ಗಸೂಚಿಗಳು ನೀಡಿದ್ದು, ಆದೇಶವನ್ನು ಜಾರಿಗೆ ತರುವಂತೆ ರಾಜ್ಯ ಸರಕಾರದ ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಈ ಕೆಳಗಿನ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳು ಹೊರತಾಗಿವೆ: i. ಪಶು ಚಿಕಿತ್ಸಾ ಆಸ್ಪತ್ರೆಗಳು. ii. ಕನಿಷ್ಟ ಬೆಂಬಲ ಬೆಲೆ ನೀಡುವ ಸಂಸ್ಥೆಗಳು ಸಹಿತವಾಗಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಂಸ್ಥೆಗಳು. iii. ರಾಜ್ಯ ಸರ್ಕಾರದ ಪರವಾನಗಿ ಪಡೆದಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆಯುವ ಮಂಡಿಗಳು. iv. ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಂದ ನಡೆಯುವ ಕೃಷಿ ಚಟುವಟಿಕೆಗಳು. v. ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರಗಳು. vi. ರಸಗೊಬ್ಬರಗಳು, ಕ್ರಿಮಿನಾಶಕಗಳು ಹಾಗೂ ಬೀಜಗಳ ಉತ್ಪಾದನಾ ಮತ್ತು ಪ್ಯಾಕ್ ಮಾಡುವ ಕೇಂದ್ರಗಳು. vii. ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಂದ ಕೊಯ್ಲಿಗೆ ಹಾಗೂ ಬಿತ್ತನೆಗಾಗಿ ಬಳಸುವ ಕೊಯ್ಲು ಯಂತ್ರಗಳುಮತ್ತುಕೃಷಿ ಹಾಗೂ ತೋಟಗಾರಿಕೆಗೆ ಬಳಸುವ ಉಪಕರಣಗಳ ಸಾಗಾಣಿಕೆ ಚಲನವಲನಗಳು.…
