ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭೆ ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮ್ಮ ಏರಿಯಾಕ್ಕೆ ಯಾರೂ ಹೊರಗಿನವರು ಬಾರದಂತೆ ನಾಮಫಲಕ ಹಾಕಿದ್ದಾರೆ. ಮದ್ದುಗುಡ್ಡೆ ವಾರ್ಡ್ ಪ್ರವೇಶದಲ್ಲಿ ಗೇಟ್ ಮಾಡಿ ಒಳಗೆ ಹೊರಗೆ ಹೋಗುವವರ ಗೇಟ್ ಮೂಲಕ ಬಿಡುತ್ತಿದ್ದಾರೆ. ಪೊಲೀಸ್ ಗೇಟ್ ರೀತಿಯಲ್ಲಿ ಗೇಟ್ ಅಳವಡಿಸಿದ್ದು, ಹಗ್ಗದ ಮೂಲಕ ಗೇಟ್ ಏರಿಸಿ, ಇಳಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದಯವಿಟ್ಟು ಹೊರಗಡೆಯವರಿಗೆ ನಮ್ಮಲ್ಲಿ ಪ್ರವೇಶ ಇಲ್ಲ. ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸೋಣ ಎಂಬ ಬೋರ್ಡ್ ಅಳವಡಿಸಲಾಗಿದೆ. ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮಗೆ ತಾವೇ ನಿರ್ಬಂಧ ಹೇರಿಕೊಳ್ಳುವ ಮೂಲಕ ಮನೆಯಲ್ಲಿ ಉಳಿದಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾಚ್.29ರಂದು ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೊಂಕು ಇರುವುದು ದೃಢಪಟ್ಟಿದೆ. ಮಾಚ್. 17ರಂದು ದುಬೈನಿಂದ ಆಗಮಿಸಿದ್ದ ಉಡುಪಿ ವ್ಯಕ್ತಿಯಲ್ಲಿ (35 ವರ್ಷ ಪ್ರಾಯ) ಕೊರೋನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಮಾಚ್ 27ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಗಂಟಲು ದ್ರಾವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಇಂದು ವರದಿಯಲ್ಲಿ ಪಾಸಿಟಿವ್ ಬಂದಿದೆ. /ಕುಂದಾಪ್ರ ಡಾಟ್ ಕಾಂ/ ಕೆಲಸದ ನಿಮಿತ್ತ ತ್ರಿವೆಂಡಮ್‌ಗೆ ತೆರಳಿದ್ದ ಉಡುಪಿಯ ವ್ಯಕ್ತಿಯನ್ನು (29 ವರ್ಷ) ಮಾರ್ಚ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಗಂಟಲು ದ್ರಾವಣ ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಇಬ್ಬರು ರೋಗಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಮೂರು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾದಂತಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ./
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟಲು ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಆದೇಶವನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಬಿಗುಗೊಳಿಸಲಾಗಿದ್ದು, ಶನಿವಾರ ಜಿಲ್ಲೆಯ ಗಡಿಗಳಲ್ಲಿ ಪೊಲೀಸರು ಹೆಚ್ಚಿನ ಬಂದೋವಸ್ತ್, ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲೆಡೆ ಜನಸಂಚಾರ ವಿರಳವಾಗಿದ್ದು, ದಿನಸಿ, ಆಸ್ಪತ್ರೆ, ಮೆಡಿಕಲ್‌ಗಳಿಗೆ ತೆರಳುವವರು ಮಾತ್ರ ಹೊರಬರುತ್ತಿದ್ದಾರೆ. ವಿರಳ ಜನಸಂಚಾರ: ಲಾಕ್‌ಡೌನ್ ಆರಂಭದ ದಿನಗಳಿಗೆ ಹೋಲಿಸಿದರೆ ಶನಿವಾರ ಎಲ್ಲೆಡೆ ಜನಸಂಚಾರ ವಿರಳವಾಗಿತ್ತು. ಕೆಲವು ದಿನಸಿ ಅಂಗಡಿ ಹಾಗೂ ಮೆಡಿಕಲ್‌ಗಳ ಮುಂದೆ ಜನರಿದ್ದು, ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದರು. ಬೈಂದೂರು ತಾಲೂಕಿನ ಯಡ್ತರೆ, ಉಪ್ಪುಂದ, ಮರವಂತೆ, ಕೊಲ್ಲೂರು, ಜಡ್ಕಲ್, ಕುಂದಾಪುರ ತಾಲೂಕಿನ ವಂಡ್ಸೆ,ಗಂಗೊಳ್ಳಿ, ತ್ರಾಸಿ, ನೆರಳಕಟ್ಟೆ, ಅಂಪಾರು, ಬಸ್ರೂರು, ಕೋಟೇಶ್ವರದ ಪ್ರಮುಖ ಬೀದಿಗಳಲ್ಲಿ ಹಾಗೂ ಕುಂದಾಪುರ ನಗರ ಭಾಗದಲ್ಲಿ ಜನ ಸಂಚಾರ ವಿರಳವಾಗಿತ್ತು. ಅಂಪಾರು, ಕುಂದಾಪುರ ಶಾಸ್ತ್ರೀ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಜನರನ್ನು ತಡೆದು ವಿಚಾರಣೆ ನಡೆಸಿ ಕಳುಹಿಸುತ್ತಿದ್ದುದು ಕಂಡುಬಂತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಹೊರಜಿಲ್ಲೆಗಳಿಗೆ ತೆರೆಳುವುದು ಸಂಪೂರ್ಣ ಬಂದ್: ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತ ಸಮಯ ನಿಗದಿಗೊಳಿಸಿದ್ದು, ಬೆಳಿಗ್ಗೆ 7 ರಿಂದ ಬೆಳಿಗ್ಗೆ 11 ಗಂಟೆಯ ತನಕ ಮಾತ್ರ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ಖರೀದಿಸಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಾಗರಿಕ ಸಂಚಾರವನ್ನು ನಿಬಂಧಿಸಲಾಗಿದ್ದರೂ, ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಲಾಗಿತ್ತು. ಇದರಿಂದ ಜನರು ಅನಗತ್ಯವಾಗಿ ಹೊರಬರುತ್ತಿರುವುದನ್ನು ಮನಗಂಡು ಜಿಲ್ಲಾದ್ಯಂತ ಒಂದೇ ಸಮಯ ನಿಗದಿಗೊಳಿಸಲಾಗಿದ್ದು, ಮಾಚ್. 29ರಿಂದಲೇ ಜಾರಿಗೊಳ್ಳಲಿದೆ. ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೀನು, ಮಾಂಸ, ಹಾಲು, ಹಣ್ಣು ಹಂಪಲುಗಳನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ11ರ ತನಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ವರ್ತಕರು ನಿಗದಿತ ಅವಧಿಯಲ್ಲಿಯೇ ಅಂಗಡಿಗಳನ್ನು ಮುಚ್ಚಬೇಕು. ಮೆಡಿಕಲ್ ಶಾಪ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅನಗತ್ಯವಾಗಿ ತಿರುಗಾಡುವುದು ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ವತಿಯಿಂದ ಶುಕ್ರವಾರ ವಿವಿಧ ಗ್ರಾಮಗಳ ಅಗತ್ಯವುಳ್ಳ ಸಾರ್ವಜನಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಬೈಂದೂರು ತಾಲೂಕಿನ ಎಲ್ಲೂರು, ಗೋಳಿಹೊಳೆ, ಬೈಂದೂರು, ಉಪ್ಪುಂದ, ಹೆರಂಜಾಲು ಗ್ರಾಮಗಳಲ್ಲಿ ಸುಮಾರು 110 ಕುಟುಂಬಕ್ಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ಆಹಾರ ಸಾಮಾಗ್ರಿ ಕಿಟ್‌ನಲ್ಲಿ ಐದು ಕೆಜಿ ಅಕ್ಕಿ, ನಾಲ್ಕು ಕೆ.ಜಿ ಬೇಳೆ, ಸಕ್ಕರೆ, ಚಹಾಪುಡಿ, ಅಡುಗೆ ಎಣ್ಣೆ ಸೇರಿದ್ದವು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಟ್ರಸ್ಟ್‌ನ ಸದಸ್ಯರಾದ ಸುಧಾಕರ ಪೂಜಾರಿ, ರಾಘವೇಂದ್ರ ಪೂಜಾರಿ ಇದ್ದರು. ಬಿಜೂರು ಗ್ರಾಮದಲ್ಲಿಯೂ ಶನಿವಾರ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುವ ಬಗ್ಗೆ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರು ತಿಳಿಸಿದ್ದು, ಅಗತ್ಯವುಳ್ಳವರು ಸಂಪರ್ಕಿಸಬಹುದು ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯದ ಮುಖ್ಯಮಂತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದರೆ ಲಾಠಿಚಾರ್ಜ್ ಅಷ್ಟೇ ಅಲ್ಲ ಒಳಗಡೆ ಇಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಕುಂದಾಪುರಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಂದಾಪುರ ಎಸಿ, ಎಎಸ್ಪಿ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಆದಾಗ್ಯ ಕೆಲವರು ಅನವಶ್ಯಕವಾಗಿ ಹೊರಕ್ಕೆ ಬರುತ್ತಿದ್ದಾರೆ. ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ. ಅದನ್ನು ಬಿಟ್ಟು ದಿನ ಮೀನು, ತರಕಾರಿ ಅಂತೆಲ್ಲಾ ಬಾರದೆ, ಒಂದು ವಾರಕ್ಕಾಗುವಷ್ಟು ಒಂದೇ ಭಾರಿ ತೆಗೆದುಕೊಂಡು ಹೋಗಿ ಎಂದಿರುವ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಇದನ್ನ ಉಲ್ಲಂಗಿಸಿದರೆ ಅಂಗಡಿ ಮುಚ್ಚಿಸುತ್ತೇವೆ. ದಿನಸಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ವ್ಯಾಪಾರ ಮಾಡಿದರೆ, ಅಂಗಡಿ ಪರವಾನಿಗೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ದಿನಬಳಕೆ ವಸ್ತುಗಳ ಅಭಾವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ತನಕ ಅಂಗಡಿಗಳು ತೆರೆದಿರುತ್ತವೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೇ ಸಾಮಾಜಿಕ ಅಂತರ ಪಾಲಿಸಿ, ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಜನಸಾಮಾನ್ಯರ ಅಗತ್ಯತೆಯನ್ನು ಮನಗಂಡು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹಾಗೂ ಹಾಗೂ ಎಎಸ್ಪಿ ಹರಿರಾಂ ಶಂಕರ್ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿದ್ದು ಮಾಚ್.27ರಿಂದ ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯ ತನಕ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹಾಲು ಮತ್ತು ತರಕಾರಿ ಅಂಗಡಿ ಬೆಳಿಗ್ಗೆ 9ಗಂಟೆಗೆ ಮುಂಚಿತವಾಗಿ ಮತ್ತು ಮೆಡಿಕಲ್ ಶಾಪ್‌ಗಳು ಸಂಜೆ 6ಗಂಟೆಯ ನಂತರವೂ ತೆರೆಯಲು ಅವಕಾಶವಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ: ಅಂಗಡಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲೆಡೆ ಕರೋನಾ ವೈರಸ್ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಹಕ್ಲಾಡಿ ಗ್ರಾಮದ ಬಗ್ವಾಡಿ ನಾಗರಿಕರು ಬೇರೆ ಬೇರೆ ಕಡೆಯಿಂದ ಬರುವವರಿಗೆ ತಾತ್ಕಾಲಿಕ ನಿಷೇಧ ಎಂಬ ಬೋರ್ಡು ಹಾಕಿದ್ದಾರೆ. ವಿದೇಶದಿಂದ ಮಾತ್ರ ಕರೋನಾ ಬರುತ್ತಿಲ್ಲ. ನೀವು ಬರುತ್ತಿರುವ ಪ್ರದೇಶದಲ್ಲೂ ಕರೋನಾ ಇದೆ. ಈ ಹಿನ್ನೆಲೆಯಲ್ಲಿ ಯಾರೂ ಊರು ಪ್ರವೇಶ ಮಾಡಿ ನಮ್ಮೂರ ನೆಮ್ಮದಿ ಹಾಳು ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಬಾಂಬೆ, ಗೋವಾ, ಬಾಗಿಲುಕೋಟೆ ಮುಂತಾದ ಕಡೆಯಿಂದ ಬಂದು ಊರಲ್ಲಿ ಸುಖಾಸುಮ್ಮನೆ ಅಲೆಯದೆ ಮನೆಯಲ್ಲೇ ಇರುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್‌ಡೌನ್ ಮೂರನೇ ದಿನವಾದರೂ ಅನಾವಶ್ಯಕ ಪೇಟೆ ಸುತ್ತುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ, ಇನ್ನು ಕೆಲವರಿಗೆ ಬಸ್ಕಿ ಶಿಕ್ಷೆ ಕೂಡಾ ನೀಡಲಾಯಿತು. ನಿಷೇದಾಜ್ಞೆ ಹೇರಿದ್ದಾಗಿಯೂ ಕುಂದಾಪುರದಲ್ಲಿ ವಾಹನ ಸವಾರರು ಬೇಕಾಬಿಟ್ಟಿ ಬಂದು ನಮಗೂ ನಿಷೇದಾಜ್ಞೆಗೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ನ ಮೂರನೇ ದಿನವಾದ ಗುರುವಾರ ಕುಂದಾಪುರ ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕುಂದಾಪುರದ ಸಹಾಯಕ ಕಮೀಷನರ್(ಎಸಿ) ಕೂಡ ಇದಕ್ಕೆ ಸಾಥ್ ನೀಡಿದರು. ಕುಂದಾಪುರ ಎಸಿ ಕೆ. ರಾಜು ಅವರು ಒಂದೆಡೆ ರಸ್ತೆಯಲ್ಲಿ ಅಲೆಯುತ್ತಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರಳಿ ಹೆಚ್ಚಿನ ದರ ವಿಧಿಸದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ನಿಯಮ ಪಾಲಿಸದಿದ ಬಗ್ಗೆ ದೂರು ಬಂದರೆ ಅಂಗಡಿ ಮುಚ್ಚಿಸುವ ಜೊತೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಸಿದರು. ಮೆಡಿಕಲ್ ಸ್ಟೋರ್, ಜನ ಔಷಧಿ ಕೇಂದ್ರಗಳಿಗೆ ತೆರಳಿ ಸರಿತಿಯಲ್ಲಿ ನಿಲ್ಲುವಂತೆ ಸೂಚಿಸಿ ಒಬ್ಬರಿಂದ ಒಬ್ಬರಿಗೆ ಅಂತರ ಕಾಪಾಡುವಂತೆ ಸೂಚಿಸಿ, ರಸ್ತೆ ಬದಿಯಲ್ಲಿ ಅನಾವಶ್ಯಕ ನಿಂತ ವಾನಗಳ ತೆರವು ಮಾಡಿದರು. ನಂತರ ಶಾಸ್ತ್ರಿ ವೃತ್ತದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ನಿಲ್ಲುವ ಮೂಲಕ ಅನಾವಶ್ಯಕವಾಗಿ ಬರುವ ವಾನಗಳ ಚಾಲಕರಿಗೆ ಯಾಕೆ ಸುಖಾಸುಮ್ಮನೆ ಬರುತ್ತೀರಾ…
