ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೀದರಿನ ರಂಗಮಂದಿರದಲ್ಲಿ ನ್ಯೂ ಸೆಂಚುರಿ ರೋಟರಿ ಕ್ಲಬ್ ಆಯೋಜಿಸಿದ್ದ ಮಿಸ್ ಉಡಾನ್ ೨೦೨೦ ಸೌಂದರ್ಯ ಸ್ಪರ್ಧೆಯಲ್ಲಿ ಕುಂದಾಪುರ ವಂಡ್ಸೆ ಮೂಲದ ಅನುಪಮ ಹೊಳ್ಳ ಪ್ರಥಮ ಸ್ಥಾನವನ್ನು ಅಲಂಕರಿಸಿ ಪ್ರಶಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ದೈಹಿಕ ಸೌಂದರ್ಯದ ಜೊತೆ ಅತ್ಯುತ್ತಮ ವ್ಯಕ್ತಿತ್ವ ರೂಪಿಸುಕೊಳ್ಳುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಲೀಲಾಜಾಲವಾಗಿ ಉತ್ತರಿಸುವುದರೊಂದಿಗೆ ತನ್ನ ಹೃದಯ ಸೌಂದರ್ಯವನ್ನೂ ಮೆರೆದಿದ್ದಾರೆ. ವಿವಿಧ ಮಜಲುಗಳುಳ್ಳ ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ , ಆಂಧ್ರಪ್ರದೇಶ, ತೆಲಂಗಾಣ ಕರ್ನಾಟಕ ಹಾಗೂ ಇತರ ರಾಜ್ಯಗಳ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನ್ಯೂ ಸೆಂಚುರಿ ರೋಟರಿ ಕ್ಲಬ್ ಬೀದರ್ ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಪ್ರಥಮ ಸುತ್ತಿನಲ್ಲಿ ಮೂವತ್ತು ವಿದ್ಯಾರ್ಥಿನಿಯರು ಸ್ಪರ್ಧಿಸಿದ್ದು ಎರಡನೇ ಸುತ್ತಿಗೆ ಸಂಖ್ಯೆ ಆರಕ್ಕೆ ಇಳಿಯಿತು. ದ್ವಿತೀಯ, ತೃತೀಯ ಸ್ಥಾನವನ್ನು ಬೀದರ್ ನ ಎಸ್. ಬಿ.ಪಾಟೀಲ್ ಡೆಂಟಲ್ ಕಾಲೇಜು ಹಾಗೂ ತೆಲಂಗಾಣದ ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿಯರು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರು, ಕಲಾವಿದರು ಹಲವಾರು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಕೆಲಸವಿರಲಿ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು, ಅದನ್ನು ಮತ್ತಷ್ಟು ಉತ್ತಮಗೊಳಿಸುವುದು ಮತ್ತು ನ್ಯಾಯಸಮ್ಮತವಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದ್ದು, ಈ ಮೂರು ಅಂಶಗಳು ಸಸೂತ್ರವಾಗಿ ನಡೆದರೆ ಮಾಡುವ ಕಾರ್ಯ ಸಾರ್ಥಕತೆ ಕಂಡುಕೊಳ್ಳುವುದಲ್ಲದೇ, ಆತ್ಮತೃಪ್ತಿಯೂ ದೊರೆಯುತ್ತವೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರು ಹಾಗೂ ಸ್ನೇಹ ತರಂಗ ಬೈಂದೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಾಲೇಜಿನ ಎ.ವಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ’ವಿಷಯಾಧಾರಿತ ಶಿಕ್ಷಣ & ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು. ಮಾಡುವ ಕೆಲಸವನ್ನು ಭಿನ್ನವಾಗಿಯೂ, ಆತ್ಮಸಾಕ್ಷಿಗೆ ತಕ್ಕುದಾಗಿಯೂ ಮಾಡಿದರೆ ಯಾರನ್ನೂ ಮೆಚ್ಚಿಸುವ, ಓಲೈಸುವ ಸಂದರ್ಭ ಬರುವುದಿಲ್ಲ. ಮಾತು ಮತ್ತು ಕೃತಿಯಲ್ಲಿ ಸಾಮ್ಯತೆ ಇರಬೇಕಾದರೆ ಅಂತಹದ್ದೊಂದು ಬದ್ಧತೆ ನಮ್ಮಲ್ಲಿರಬೇಕು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ನೆಹರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇವರ ಸಾಮಿಪ್ಯ ಸಾಧಿಸಲು ಅನುಸರಿಸುವ ನವವಿಧ ಭಕ್ತಿಮಾರ್ಗಗಳಲ್ಲಿ ಭಜನೆಯೂ ಒಂದು. ಅನ್ಯ ಮಾರ್ಗಗಳ ಅನುಸರಣೆ ಸಾಮಾನ್ಯರಿಗೆ ಕಷ್ಟವೆನಿಸುವುದರಿಂದ ಭಜನೆ ಸುಲಭದ ಮಾರ್ಗವೆನಿಸಿ, ನಮ್ಮ ಕಾಲಕ್ಕೆ ತುಂಬ ಪ್ರಶಸ್ತವೆನಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಹೇರಂಜಾಲು ಗ್ರಾಮದ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ನಡುವೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಂದಾಜು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ರಾಜಗೋಪುರ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿ ಕೀರ್ತನೆಯ ಮೂಲಕ ದೇವರನ್ನು ಒಲಿಸಿಕೊಂಡ ಹಲವು ದೃಷ್ಟಾಂತಗಳಿವೆ. ಅದು ಸಾಧ್ಯವಾಗಬೇಕಾದರೆ ದುಶ್ಚಟಗಳಿಂದ ದೂರರಾಗಿ, ದೀಕ್ಷಾಬದ್ಧರಾಗಿ ಅದನ್ನು ಅನುಸರಿಸಬೇಕು. ದೇವರನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬೇಕು ಎಂದರು. ಭಜನೆಯ ಮಹತ್ವ ಅರಿತ ಕಾರಣ ಧರ್ಮಸ್ಥಳ ಕ್ಷೇತ್ರ ಸಾಮೂಹಿಕ ಭಜನೆಗೆ ತರಬೇತಿಯ ಮೂಲಕ ಜನರನ್ನು ಅಣಿಗೊಳಿಸುತ್ತಿದೆ. ಭಜನೆಯಲ್ಲಿ ಎಲ್ಲ ವರ್ಗದ ಜನರು ಭೇದ ಮರೆತು ಒಂದಾಗುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ನಾಕಟ್ಟೆಯಿಂದ ಯಡ್ತರೆ ಜಕ್ಷನ್ ಮೂಲಕ ಹೊರಟ ಶ್ರೀನಿವಾಸ ಪದ್ಮಾವತಿಯರ ಮದುವೆ ದಿಬ್ಬಣ ವತ್ತಿನಕಟ್ಟೆ ಕಲಾಣ್ಯೋತ್ಸವ ಸ್ಥಳಕ್ಕೆ ಆಗಮಿಸಿದ ಬಳಿಕ ಕಲ್ಯಾಣೋತ್ಸವದ ಪ್ರಕ್ರಿಯೆಗಳು ಆರಂಭಗೊಂಡವು. ಆರಂಭದಲ್ಲಿ ದೀಪಿಕಾ ಪಾಂಡುರಂಗಿ ಅವರ ದಾಸರ ಪದಗಳ ಗಾಯನ ಜರುಗಿತು. ತಿರುಪತಿ ಆಚಾರ್ಯರು, ದಾಸ ಶೈಲಿಯಲ್ಲಿ ಬೆಂಗಳೂರಿನ ಶ್ರೀ ವಾರಿ ಫೌಂಡೇಶನ್ ನಿರೂಪಣೆಯಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು. ಸಂಪೂರ್ಣ ಕಾರ್ಯಕ್ರಮದ ವೀಡಿಯೋ ನೋಡಿ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿಯ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ, ದೊಟ್ಟಯ್ಯ ಪೂಜಾರಿ, ನಾಗರಾಜ ಗಾಣಿಗ ಬಂಕೇಶ್ವರ, ಕೃಷ್ಣಯ್ಯ ಮದ್ದೋಡಿ, ರವೀಂದ್ರ ಶ್ಯಾನುಭಾಗ್, ಉದಯ ಆಚಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಗ್ ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ತಮ್ಮ ಗೆಲುವಿನ ಬಳಿಕ ಹುಟ್ಟೂರು ಆರ್ಡಿಯಲ್ಲಿರುವ ಚಿಕ್ಕಪ್ಪ ಗುಣಕರ ಶೆಟ್ಟಿ ನಿವಾಸಕ್ಕೆ ಮೊದಲ ಬಾರಿಗೆ ಆಗಮಿಸಿ, ಕುಟುಂಬಿಕರು ಹಾಗೂ ಸ್ಥಳೀಯರೊಂದಿಗೆ ಗೆಲುವಿನ ಖುಷಿಯನ್ನು ಹಂಚಿಕೊಂಡರು. ಈ ಸಂದರ್ಭ ಶೈನ್ ಮಾತನಾಡಿ, ಪ್ರತಿಭೆಗೆ ಗ್ರಾಮೀಣ, ನಗರ ಎಂಬ ಭೇದವಿಲ್ಲ. ಎಲ್ಲರೂ ಒಂದೇ. ಆದರೆ ಪರಿಶ್ರಮ ಅಗತ್ಯ. ಬಿಗ್‌ಬಾಸ್ ಗೆಲುವಿನ ಹಿಂದೆ ಒಂಬತ್ತು ವರ್ಷಗಳ ಪರಿಶ್ರವಿದೆ. ಜೊತೆಗೆ ಜನರ ಪ್ರೀತಿ ದೊರೆತಿದ್ದರಿಂದ ಗೆಲುವು ಸಾಧ್ಯವಾಯಿತು. ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ್ದರೆ ಜನರ ಖಂಡಿತ ಗುರುತಿಸುತ್ತಾರೆ. ಕರಾವಳಿಯ ಹೆಮ್ಮೆ ಎಂದು ಪ್ರೀತಿಯಿಂದ ಹೇಳುತ್ತಿದ್ದವರಿಗೆ ಹೆಮ್ಮ ಪಡುವ ಕೆಲಸವನ್ನು ಮಾಡಿ ತೋರಿಸಿದ್ದೇನೆ. ನಮ್ಮವರಿಗೆ ಸ್ವಲ್ಪ ಗತ್ತು ಜಾಸ್ತಿ. ಗತ್ತಿರಲಿ ಆದರೆ ಗತ್ತು ನಮ್ಮನ್ನು ನುಂಗದಿರಲಿ ಎಂದರು. ಶೈನ್ ಶೆಟ್ಟಿ ಅವರೊಂದಿಗೆ ಯುವಕರು ಸೆಲ್ಪಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಖುಷಿಪಟ್ಟರು. ಹಿಲಿಯಾಣದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ಕರುಣಾಕರ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೊವಾಡಿಯ ಹಿರಿಯ ಪ್ರಾಥಮಿಕ ಶಾಲೆಯ 1997-98 ರ ಸಾಲಿನ ವಿದ್ಯಾರ್ಥಿಗಳು ಕೊಡಮಾಡಿದ ಎರಡು ಕಂಪ್ಯೂಟರ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅನಂತ ಮೊವಾಡಿ ಮಾತನಾಡಿ ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಹಳೆ ವಿದ್ಯಾರ್ಥಿಗಳ ಈ ತೆರನಾದ ಕೊಡುಗೆ ಎಲ್ಲರಿಗೂ ಮಾದರಿಯಾಗಿರಲಿ. ಸಮಾಹದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಲಿ ಎಂದು ಹೇಳಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಸಂಧ್ಯಾ ಕಾರಂತ ಅಧ್ಯಕ್ಷ ತೆ ವಹಿಸಿದ್ದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶೇಖರ ಗಾಣಿಗ, ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಐತಾಳ್, ಹಕಲೆ ವಿದ್ಯಾರ್ಥಿಗಳ ಪರವಾಗಿ ಮೆಸ್ಕಾಂನ ಎ.ಇ. ಶಶಿರಾಜ್, ಭರತ್ ಆಚಾರ್ಯ ಎಸ್ ಡಿ ಎಮ್ ಸಿ ಸದಸ್ಯರು, ಶಿಕ್ಷಕರು , 1997-98 ಸಾಲಿನ ಹಳೆ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶರಾವತಿ ವಂದಿಸಿದರು. ಸಹಶಿಕ್ಷಕ ದೇವದಾಸ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣ ಅತ್ಯವಶ್ಯವಾಗಿದೆ. ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದ ಕಾಣುವಂತಾಗಬೇಕು. ಇದು ಭಜನೆಯಿಂದ ಮಾತ್ರ ಸಾಧ್ಯ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೈಂದೂರು ವತ್ತಿನೆಣೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಷ್ಟಬಂಧ ಪುನಃಪ್ರತಿಷ್ಠೆ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಅಖಂಡ ಭಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಹಿಂದು ಧರ್ಮದಲ್ಲಿ ಭಜನೆಗೆ ಹೆಚ್ಚಿನ ಮಹತ್ವವಿದೆ. ಅನೇಕ ದಾಸವರೇಣ್ಯರು ಕೂಡ ಭಜನೆ ಮೂಲಕ ಸದ್ಗತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ವಿವಿಧ ರೀತಿಯಲ್ಲಿ ದೇವರ ಸ್ಮರಣೆ ಮಾಡುತ್ತಿರಬೇಕು. ದೇವರ ಸೇವೆ, ಭಜನೆಯನ್ನು ಭಕ್ತಿಯಿಂದ ಮಾಡಿದರೆ ಫಲ ಪ್ರಾಪ್ತಿಯಾಗುತ್ತದೆ. ದೇವರ ವಿಸ್ತಾರವನ್ನು ಅರಿತುಕೊಂಡು ಹಾಗೂ ಉಪಕರಣಗಳ ಜತೆಗೆ ಅಂತಃಕರಣದಿಂದ ಭಜಿಸಿದಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 2020-25ರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ, ಪಡುಕೋಣೆ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.೧೫ರಂದು ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಬಸ್ರೂರು, ಜೇಕಬ್ ಡಿ’ಸೋಜ, ಕುಂದಾಪುರ, ವಿನೋದ್ ಕ್ರಾಸ್ಟೊ, ಕುಂದಾಪುರ, ಬ್ಯಾಪ್ಟಿಸ್ಟ್ ಡಾಯಸ್, ಸಂತೆಕಟ್ಟೆ, ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ, ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ, ಶಾಂತಿ ಡಾಯಸ್, ಬೈಂದೂರು, ಪ್ರಕಾಶ್ ಲೋಬೊ, ಗಂಗೊಳ್ಳಿ, ವಿಲ್ಸನ್ ಡಿ’ಸೋಜ, ಶಿರ್ವಾ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಕಾರ್ಕಳ, ಓಝ್ಲಿನ್ ರೆಬೆಲ್ಲೊ, ತಲ್ಲೂರು, ವಿಲ್ಫ್ರೇಡ್ ಮಿನೇಜಸ್, ಹಂಗಳೂರು, ತಿಯೋದರ್ ಒಲಿವೆರಾ, ಕೋಟಾ, ಟೆರೆನ್ಸ್ ಸುವಾರಿಸ್, ಉಡುಪಿ, ಡೆರಿಕ್ ಡಿ’ಸೋಜ, ಸಾಸ್ತಾನ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ’ ಸುದ್ದಿ. ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗುರುಪ್ರಸಾದ ರಾಜ್ಯ ಸರಕಾರಿ ನೌಕರರಿಗಾಗಿ ಎರ್ಪಡಿಸಿದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಾದ್ಯಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಗಿರುತ್ತಾರೆ ಹಾಗೂ ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ವಿದ್ವಾನ್ ಅಲೆವೂರು ಸುಂದರ ಸೇರಿಗಾರ್ ಅವರ ಶಿಷ್ಯರಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನನ್ನ ಕಸ ನನ್ನ ಜವಾಬ್ದಾರಿ ಅಥವಾ ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ ಎಂಬ ವಿಷಯದ ಕುರಿತು ಸ್ವಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಬಂಧನೆಗಳು: ಸ್ವಚ್ಛ ಭಾರತ್- ಕಿರುಚಿತ್ರ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಇವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಆಸಕ್ತರಿಗೆ ಮುಕ್ತ ಅವಕಾಶವಿದೆ. ಕಿರುಚಿತ್ರವನ್ನು ತುಳು, ಕನ್ನಡ ಅಥವಾ ಆಂಗ್ಲಬಾಷೆಯಲ್ಲಿ ಮಾಡಬಹುದು. ಕಿರುಚಿತ್ರದ ಗರಿಷ್ಟ ಅವಧಿಯು ೩ ನಿಮಿಷಗಳಾಗಿದ್ದು, ಕಿರುಚಿತ್ರವನ್ನು ಮಾರ್ಚ್ ೧ ಒಳಗಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ಪಂಚಾಯತ್, ಉಡುಪಿ ರಜತಾದ್ರಿ, ಮಣಿಪಾಲ ಇಲ್ಲಿಗೆ (ಡಿವಿಡಿ/ ಯುಎಸ್‌ಬಿ ಡ್ರೈವ್ ಓನ್ಲೀ) ಸಲ್ಲಿಸಬೇಕು, ನಂತರ ಬಂದ ಕಿರುಚಿತ್ರಗಳನ್ನು…
