ಕುಂದಾಪುರ: ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಚೈತನ್ಯ ಆರ್ಟ್ಸ್ ಅಕಾಡೆಮಿ (ಸಾಂಸ್ಕೃತಿಕ ಪ್ರತಿಭಾನ್ವೇಷಣ ಕೇಂದ್ರ) ಸಂಸ್ಥೆಯಿಂದ ಗುರು ಪುರಸ್ಕಾರ್ ನೀಡಿ ಗೌರವಿಸಲಾಯಿತು. ಸಂದೀಪ್ ಅವರ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಇತರೇ ಸಾಂಸ್ಕೃತಿಕ ವಿಭಾಗದ ಸಾಧನೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.
Author: ನ್ಯೂಸ್ ಬ್ಯೂರೋ
ಗಂಗೊಳ್ಳಿ : ವಿಶ್ವಸಾಗರ ಕ್ರಿಕೆಟರ್ಸ್ ಮತ್ತು ಸಹರಾ ಕ್ರಿಕೆಟರ್ಸ್ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ 30 ಗಜಗಳ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಶನಿವಾರ ಗುಜ್ಜಾಡಿ ಶಾಲಾ ವಠಾರದಲ್ಲಿ ಜರಗಿತು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ಸಹರಾ ಕ್ರಿಕೆಟರ‍್ಸ್‌ನ ಅಧ್ಯಕ್ಷ ಚೇತನ್ ಆರ್ಕಾಟಿ, ವಿಶ್ವಸಾಗರ ಕ್ರಿಕೆಟರ‍್ಸ್‌ನ ಅಧ್ಯಕ್ಷ ಅಕ್ಷಯ ಖಾರ್ವಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚೇತನ ಖಾರ್ವಿ ಸ್ವಾಗತಿಸಿದರು. ಸಉಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಆರ್ಕಾಟಿ ವಂದಿಸಿದರು. ಉಡುಪಿ ಜಿಲ್ಲೆಯ ಸುಮಾರು ೨೫ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದೆ.
ಬೈಂದೂರು: ಸಮಾಜದಲ್ಲಿ ಇತ್ತೀಚಿಗೆ ಯುವಜನರು ಅದರಲ್ಲಿಯೂ ಪದವೀಧರರು ಸಂಗದೋಷದಿಂದ ತಪ್ಪುದಾರಿಯಲ್ಲಿ ಸಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದು ಆಘಾತಕಾರಿಯಾಗಿದೆ. ಭವಿಷ್ಯದ ಸಮಾಜಕ್ಕೆ ಆಸ್ತಿಯಾಗಿರುವ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ತಾಪಂ ಸದಸ್ಯ, ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬೈಂದೂರು ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಕೆಲವು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ವ್ಯವಸ್ಥೆಗಳು ಎತ್ತಲೋ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ದೇಶಕ್ಕೆ ಅಭಿವೃದ್ದಿಗೆ ಪೂರಕವಾದ ಕೊಡುಗೆ ನೀಡಿದಂತಾಗುತ್ತದೆ. ಜ್ಞಾನ ಭಂಡಾರವಾಗಿರುವ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿದರೆ ಸಧೃಡ ದೇಶ ನಿರ್ಮಾಣ ಹಾಗೂ ಸಮಾಜಕ್ಕೆ ಉತ್ತಮ ಸಾಧಕರನ್ನು ಕೊಡುಗೆಯಗಿ ನೀಡಬಹುದು. ಗ್ರಾಮೀಣ ಭಾಗದಲ್ಲಿರುವ ಮಕ್ಕಳು ಬೇರೆ ಬೇರೆ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿಯೂ ಮುಂದಿದ್ದು, ಅಂತಹ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಚಿಂತನೆಗಳನ್ನು ತುಂಬಿ ಅವರನ್ನು…
ಹಕ್ಲಾಡಿಯ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಂಪನ್ನ ಕುಂದಾಪುರ: ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲೂ ಅಳವಡಿಸಿಕೊಂಡು ಮುನ್ನಡೆದರೆ ಕನ್ನಡ ಮಾಧ್ಯಮದತ್ತ ಪೋಷಕರು ಒಲವು ತೋರುತ್ತಾರೆ. ಸರಕಾರ ಶಿಕ್ಷಣಕ್ಕೆ ನೂರಾರು ಕೋಟಿ ವ್ಯಯಿಸುತ್ತಿರುವಾಗ ಉತ್ತಮ ಶಿಕ್ಷಣವನ್ನು ನೀಡಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮರುಜೀವ ನೀಡಬೇಕಿದೆ. ಕನ್ನಡ ಮಾಧ್ಯಮದ ಸೋಲು ಕನ್ನಡದ ಸೋಲು ಎಂದೇ ತಿಳಿಯಬೇಕಾಗುತ್ತದೆ ಎಂದು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಹೇಳಿದರು. ಅವರು ಹಕ್ಲಾಡಿಯ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಸುವರ್ಣ ಮಹೋತ್ಸವ ವೇದಿಕೆ 3ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಐವತ್ತು ವರ್ಷಗಳನ್ನು ಪೂರೈಸುವುದು ಮಹತ್ವದ್ದಾಗಿರುತ್ತದೆ. ಅಂದಿನ ದಿನಗಳಲ್ಲಿಯೇ ಶಿಕ್ಷಣದ ಬಗ್ಗೆ ಕಾಳಜಿಯಿಂದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಹಿನ್ನೆಲೆಯನ್ನು ಯಾರೂ ಮರೆಯಬಾರದು. ಇಂಥಹ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಳೆಮನೆ…
ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದುದು. ಇದು ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಎಂದು ಪರಿಗಣಿಸಲ್ಪಡುತ್ತಿದೆ. ಇತರ ಧರ್ಮಗಳಂತೆ ಹಿಂದೂ ಧರ್ಮ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ, ಒಂದು ಸಮುದಾಯದ ಹೆಸರಾಗಿದೆ. ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು, ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ ಎನ್ನಲಾಗಿದೆ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲ. ಹಿಂದೂ ಧರ್ಮವನ್ನು ‘ಸನಾತನ ಧರ್ಮ’ವೆಂದೂ ಕರೆಯುತ್ತಾರೆ. ‘ಸನಾತನ’ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದ ಎಂದರ್ಥ. ಹಿಂದೂ ಧರ್ಮದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಿದ್ದು, ಪ್ರತಿಯೊಬ್ಬ ಹಿಂದೂ ತನ್ನ ಬದುಕಿನಲ್ಲಿ ಈ ನಾಲ್ಕು ಪುರುಷಾರ್ಥಗಳ ಸಿದ್ಧಿಯನ್ನು ಪಡೆದಾಗ ಮಾತ್ರ ಆತನ ಬದುಕು ಸಾರ್ಥಕ್ಯಗೊಳ್ಳಲು ಸಾಧ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಹಿಂದೂ ಜ್ಞಾನಪರಂಪರೆಯಲ್ಲಿ ಶ್ರುತಿ ಮತ್ತು ಸ್ಮೃತಿಯೆಂಬ ಎರಡು ಅಭ್ಯಾಸಗಳಿದ್ದು, ಶ್ರುತಿಯು ಕೇಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದರೆ, ಸ್ಮೃತಿಯು ಕೇಳಿದ್ದನ್ನು ದಾಖಲಿಸುವುದಾಗಿದೆ. ಹಿಂದೂ ಧರ್ಮವು ಧಾರ್ಮಿಕ, ದಾರ್ಶನಿಕ ಮತ್ತು ತಾತ್ವಿಕ…
ಕುಂದಾಪುರ ವೆಂಕಟರಮಣ ವಿದ್ಯಾಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ಕುಂದಾಪುರ: ಸಾಕ್ಷರತೆಯಲ್ಲಿ ಮೊದಲಿರುವ ಉಡುಪಿ ಜಿಲ್ಲೆ ಏಡ್ಸ್ ಸೋಂಕಿನ ಪ್ರಮಾಣದಲ್ಲಿಯೂ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿ. ಈ ಪೈಕಿ ಯುವಜನರ ಪಾಲು ಹೆಚ್ಚಿರುವುದು ಚಿಂತೆಗೀಡು ಮಾಡಿದೆ. ಯುವಸಮೂಹದಲ್ಲಿ ಜಾಗೃತಿ ಮೂಡಿಸುವುದೊಂದೇ ಸದ್ಯದ ಮಾರ್ಗ ಎಂದು ಉಡುಪಿಯ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಅಶೋಕ್ ಹೇಳಿದರು. ಅವರು ಕುಂದಾಪುರದ ವೆಂಕಟರಮಣ ವಿದ್ಯಾ ಸಂಸ್ಥೆ, ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಸಹಭಾಗಿತ್ವದಲ್ಲಿ ನಡೆದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನವಿತ್ತರು. ಕುಂದಾಪುರದ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಎ. ಬಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೆಂಕಟರಮಣ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕ ಸಂದೇಶ್ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಅಜಯ ಭಂಡಾರ್‌ಕಾರ್, ವೆಂಕಟರಮಣ ವಿದ್ಯಾಸಂಸ್ಥೆಗಳ…
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯ ಕೋರಂ ಅಭಾವದ ಹಿನ್ನಲೆಯಲ್ಲಿ ತಿರಸ್ಕೃತಗೊಂಡಿದೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಲಾಗಿರುವ ಅವಿಶ್ವಾಸ ಸೂಚನೆ ಪರ್ಯಾಲೋಚನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರ ಬಿದ್ದಿದೆ. ಸಭೆಯಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 33 ಸದಸ್ಯರಲ್ಲಿ ಕೇವಲ ನಾಲ್ಕು ಜನ ಸದಸ್ಯರು ಹಾಜರಾಗಿರುವ ಹಿನ್ನಲೆಯಲ್ಲಿ ಕೋರಂ ಅಭಾವದಿಂದ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ಗೊತ್ತುವಳಿಯ ನಿರ್ಣಯವನ್ನು ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 49ರಂತೆ ತಿರಸ್ಕರಿಸಿ ಸಭೆಯಲ್ಲಿ ಘೋಷಣೆ ಮಾಡಲಾಯಿತು. ಗಂಗೊಳ್ಳಿ ಗ್ರಾಪಂ ನ 33 ಸದಸ್ಯರಲ್ಲಿ 19 ಮಂದಿ ಬಿಜೆಪಿ ಬೆಂಬಲಿಯ ಹಾಗೂ 14 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಗ್ರಾಪಂ ಅಧ್ಯಕ್ಷರು ಸೇರಿದಂತೆ 15 ಮಂದಿ ಬಿಜೆಪಿ ಬೆಂಬಲಿತ ಮತ್ತು ಕಾಂಗ್ರೆಸ್ ಬೆಂಬಲಿತ ಎಲ್ಲಾ 14 ಮಂದಿ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.…
ಕುಂದಾಪುರ: ವಿದ್ಯಾರ್ಥಿಗಳು ಋಣಾತ್ಮಕ ಮತ್ತು ಸ್ಥಿರ ಮನೋಭಾವನೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಮುನ್ನೆಡೆದಾಗ ಉನ್ನತ ಮಟ್ಟದದಲ್ಲಿ ಸಾಧಿಸಬಹುದು ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೋ. ಕೆ.ರಾಧಾಕೃಷ್ಣ ಹೇಳಿದರು. ಅವರು ಹೆಮ್ಮಾಡಿ ಶ್ರೀ ವಿ.ವಿ.ವಿ.ಮಂಡಳಿ ಅಧೀನಕ್ಕೆ ಒಳಪಟ್ಟ ಹೆಮ್ಮಾಡಿ ಜನತಾ ಪ್ರೌಢ ಶಾಲೆ ಮತ್ತು ಜನತಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿಯೋಜಿನ ಭಾಷಣ ಮಾಡುತ್ತಾ ಮಾತನಾಡಿದರು. ನಾವು ಮಾತ್ರ ಬದಲಾವಣೆಯಾದರೆ ಸಾಲದು. ಎಲ್ಲಾ ಕಡೆಯಿಂದ ಬರುವ ಜ್ಷಾನವನ್ನು ಸ್ವೀಕರಿಸಿ, ಶಿಕ್ಷಣದ ಸಂಕೀರ್ಣತೆಯಿಂದ ಹೊರಬಂದು ಸದಾ ಮುನ್ನುಗ್ಗುವ ಪ್ರವೃತ್ತಿ ಇದ್ದರೆ ಗುರಿ ತಲುಪಬಹುದು ಎಂದರು. ಆಡಳಿತ ಮಂಡಳಿಯ ಸಂಘಟನಾ ಕಾರ್ಯದರ್ಶಿ ಶಂಕರ.ಎ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಅವರು ದ್ವಜಾರೋಹಣ ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಶುಭಾಂಶಸನೆಗೈದರು. ಮರವಂತೆ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಚಂದ್ರ.ಡಿ ಸ್ವಸ್ತಿ ವಾಚನಗೈದರು. ಬೈಂದೂರು ರತ್ತು ಬಾ ಜನತಾ…
ಗಂಗೊಳ್ಳಿ: ಯಾವುದೇ ಶೈಕ್ಷಣಿಕ ಸಂಸ್ಥೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಕ್ರೀಡೆ ಅತ್ಯವಶ್ಯ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ಸದಾ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಕ್ರೀಡಾಪಟುಗಳನ್ನು ಹುರಿದುಂಬಿಸಬೇಕು. ಕ್ರೀಡಾಪಟುಗಳು ಯಾವುದೇ ಜಾತಿ ಮತ ಪಂಥಗಳ ಬೇಧ ಮಾಡದೆ ಕ್ರೀಡಾಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಗಂಗೊಳ್ಳಿಯ ಶ್ರೀ ಸಿದ್ಧಿ ಫ್ರೀಜರ‍್ಸ್ ಎಂಡ್ ಎಕ್ಸ್‌ಪೋರ್ಟ್ಸ್‌ನ ಜನರಲ್ ಮ್ಯಾನೇಜರ್ ಎಂ.ಎಂ.ಸುವರ್ಣ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು. ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್. ಎನ್.ರೇವಣಕರ್ ಸ್ವಾಗತಿಸಿದರು. ಉಪನ್ಯಾಸಕ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್ ವಂದಿಸಿದರು.
ಕುಂದಾಪುರ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇದಿಕೆ 2ರಲ್ಲಿ ಸುವರ್ಣ ಸಂಚಿಕೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಶ್ರೀ ಕ್ಷೇತ್ರ ಮಾಣಿಕೊಳಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಜಗದೀಶಯ್ಯ ಹಲ್ಸನಾಡು, ಶ್ರೀ ಕ್ಷೇತ್ರ ಸೌಕೂರು ಮಾಜಿ ಧರ್ಮದರ್ಶಿ ಅಶೋಕ್ ಕುಮಾರ್ ಶೆಟ್ಟಿ ಕಾವ್ರಾಡಿ, ವಕೀಲ ಟಿ.ಬಿ. ಶೆಟ್ಟಿ, ಧ.ಗ್ರಾ.ಯೋ. ಕುಂದಾಪುರ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ನೂಜಾಡಿ ಸಂತೋಷಕುಮಾರ್ ಶೆಟ್ಟಿ, ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಳದ ಅಧ್ಯಕ್ಷ ಬಡಾಕೆರೆ ಮಂಜುನಾಥ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯಲ್ಲಿ ಕಳೆದ 50ವರ್ಷಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳನ್ನು ಗೌರವಿಸಲಾಯಿತು. ಶಾಲೆ ಮುಖ್ಯೋಪಧ್ಯಾಯ ಡಾ. ಕಿಶೋರ್ ಕುಮಾರ್ ಶೆಟ್ಟಿ, ಹೊಸಂಗಡಿ ಸ.ಪ.ಪೂ.…
