Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕೊಲ್ಲೂರು: ಬಹು ಭಾಷಾನಟ ಕನ್ನಡದ ಅರ್ಜುನ್ ಸರ್ಜಾ ಇಂದು ಕುಟುಂಬ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅರ್ಜುನ್ ಸರ್ಜಾ ತಮ್ಮ ಪತ್ನಿ ನಿವೇದಿತಾ ಅರ್ಜುನ್, ಹಿರಿಯ ಪುತ್ರಿ ಐಶ್ವರ್ಯ ಅತ್ತೆ ಗೀತಾರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕ್ರಷ್ಣಪ್ರಸಾದ ಅಡ್ಯಂತಾಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಮೊದಲಾದವರು ಉಪಸ್ಥಿತರಿದ್ದು ಅರ್ಜುನ್ ಸರ್ಜಾ ದಂಪತಿಗಳನ್ನು ಹಾಗೂ ಕುಟುಂಬಿಕರನ್ನು ಬರಮಾಡಿಕೊಂಡರು. ಬಾಲನಟನಾಗಿ ಕನ್ನಡದ ಚಿತ್ರರಂಗ ಪ್ರವೇಶಿಸಿದ ಅರ್ಜುನ್ ಸರ್ಜಾ ಅವರಿಗೆ ಮಂದೆ ತಮಿಳು ಚಿತ್ರರಂಗ ಅವಕಾಶದ ಬಾಗಿಲು ತೆರೆದಿತ್ತು. ಶಿವರಾಜಕುಮಾರ್ ಅವರೊಂದಿಗೆ ನಟಿಸಿದ್ದ ನಿವೇದಿತಾ ಮದುವೆಯ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಈಗ ಇವರ ಪುತ್ರಿ ಐಶ್ವರ್ಯ ಇತ್ತಿಚಿಗೆ ಕಾಲಿವುಡ್ ಮೂಲಕ ಸಿನೆಮಾ ಜಗತ್ತಿಗೆ ಪ್ರವೇಶಿಸಿದ್ದಳು.

Read More

ಕುಂದಾಪುರ: ಪಕ್ಷ ಬಲವರ್ಧನೆಗೆ ಕಾರ್ಯಕರ್ತರ ಸಹಕಾರ ಅತೀ ಅಗತ್ಯ. ತಳಮಟ್ಟದಲ್ಲಿ ಕಾರ್ಯಕರ್ತರು ದುಡಿದಾಗ ಪಕ್ಷವನ್ನು ಗೆಲ್ಲಿಸಬಹುದು ಎಂದು ಶಾಸಕ ಗೋಪಾಲ ಪೂಜಾರಿ ಅವರು ಹೇಳಿದರು. ಆಲೂರು ರಾಮ ಮಂದಿರ ಸಭಾಂಗಣದಲ್ಲಿ ಸೋಮವಾರ ಸಂಜೆ ಜರಗಿದ ಪಂಚಾಯತ್‌ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ರವಿ ಶೆಟ್ಟಿ ಹಳ್ಳಿ, ಗ್ರಾಮ ಪಂಚಾಯತ್‌ ಸದಸ್ಯರಾದ ಆನಂದ ಗಾಣಿಗ, ಸುರೇಶ್‌ ದೇವಾಡಿಗ, ಬಾಬು ಗೌಡ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮೀಣ ಕಾಂಗ್ರೆಸ್‌ ಘಟಕ, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ವಿದ್ಯಾರ್ಥಿ ಕಾಂಗ್ರೆಸ್‌, ಎಸ್‌.ಸಿ./ಎಸ್‌.ಟಿ. ಘಟಕ, ಕಿಸಾನ್‌ ಮೋರ್ಚಾ ಹಾಗೂ ಪಂಚಾಯತ್‌ ವ್ಯಾಪ್ತಿಯ 7 ಬೂತ್‌ಗಳ ನೂತನ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ತಾಲೂಕು ಪಂಚಾಯತ್‌ ಸದಸ್ಯ ಎಚ್‌. ಮಂಜಯ್ಯ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Read More

ಕುಂದಾಪುರ: ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಭವ್ಯ ಭಾರತವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರಮ ವಹಿಸಬೇಕು. ಪ್ರತಿಯೊಬ್ಬನು ಧನಾತ್ಮಕವಾಗಿ ಚಿಂತನೆಯನ್ನು ಮೈಗೂಡಿಸಿಕೊಂಡು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕಾಗಿದೆ ಎಂದು ಕುಂದಾಪುರ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಹೇಳಿದರು. ಅವರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, ತಾ.ಪಂ. ಕುಂದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಬೈಂದೂರು ಮತ್ತು ರೋಟರಿ ಕ್ಲಬ್‌ ಮಿಡ್‌ಟೌನ್‌ ಕುಂದಾಪುರ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ತಾಲೂಕು ಎಸ್‌. ಡಿ.ಎಂ.ಸಿ. ಸಂಚಲನಾ ಸಮಿತಿ ಕುಂದಾಪುರ ಇವರ ಸಹಯೋಗದಲ್ಲಿ ಸೋಮವಾರ ಕುಂದಾಪುರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಜರಗಿದ ತಾಲೂಕು ಮಟ್ಟದ ಮಕ್ಕಳ ಸಂಸತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾ| ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಬಾಬು ಪೈ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಗೌರಿ ದೇವಾಡಿಗ, ತಾ.ಪಂ. ಶಿಕ್ಷಣ ಮತ್ತು ಸ್ಥಾಯಿ…

Read More

 ಕುಂದಾಪ್ರ ಡಾಟ್  ಕಾಂ ಸುದ್ದಿ ಕುಂದಾಪುರ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರುಗಾರ್ ಅವರಿಗೆ ಶ್ರೀ ರಾಮಕ್ಷತ್ರೀಯ ಗಣೇಶೋತ್ಸವ ಸುವರ್ಣ ಸಮಿತಿ ಹಾಗೂ ಇತರ ಸಮಾಜ ಸೇವ ಸಂಘಟನೆಗಳು ಜತೆಯಾಗಿ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಪೌರ ಸನ್ಮಾನ ನೀಡಿ ಗೌರವಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ಮಾತನಾಡಿ, ಆಧುನೀಕತೆಯ ಬದಲಾವಣೆಯನ್ನು ಕಾಣುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ನಮ್ಮ ಸಾಂಸ್ಕೃತಿಕ ಸೊಬಗಿನ ರಾಯಭಾರಿಯಂತಿರುವ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಉಳಿದುಕೊಂಡಿರುವ ಕಾರಣದಿಂದಾಗಿ ಈ ಭಾಗದ ಯಕ್ಷಗಾನ ಕಲಾವಿದರುಗಳು ಕಲಾ ಶೋತ್ರುಗಳ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿ-ಬೆಳೆಸುತ್ತಿರುವ ಯಕ್ಷಗಾನ ಕಲಾವಿದರ ಪರಿಶ್ರಮಕ್ಕೆ ಪದ್ಮಭೂಷಣ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳನ್ನು ನೀಡುವ ಮೂಲಕ ಈ ಪ್ರಶಸ್ತಿಗಳ ಹಿರಿಮೆ ಹೆಚ್ಚಿದೆ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವ ಈ ಕಾಲಘಟ್ಟದಲ್ಲಿ ಅರ್ಹರಿಗೆ ಪ್ರಶಸ್ತಿ ಬರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.…

Read More

ಬೈಂದೂರು: ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾನೆಂದು ಆರೋಪಿಸಿ ಪೋಲೀಸ್ ಪೇದೆಯನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೋಲೀಸರಿಗೊಪ್ಪಿಸಿದ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಬಳಿ ನಡೆದಿದೆ. ಬೈಂದೂರು ಪೋಲೀಸ್ ಠಾಣೆಯ ಪೇದೆ ಕಿರಣ ಬಂಧಿತ ಆರೋಪಿ. ಬೈಂದೂರು ಪೋಲೀಸ್ ಠಾಣೆಯಲ್ಲಿ ಸಮನ್ಸ್ ನೀಡುವ ಕರ್ತವ್ಯ ನಿರ್ವಹಿಸುತ್ತಿದ್ದ, ಪೇದೆ ಕಿರಣ ಎಂಬುವವನಿಗೆ ಕಳೆದ ಕೆಲವು ತಿಂಗಳ ಹಿಂದೆ ಯಾವುದೋ ಒಂದು ವ್ಯಾಜ್ಯ ಸಂಬಂಧಿ ಸಮನ್ಸ್ ನೀಡುವ ವಿಚಾರದಲ್ಲಿ ಶಿರೂರು ಹಡವಿನಕೋಣೆ ಎಂಬಲ್ಲಿನ ಮಹಿಳೆಯೊಂದಿಗೆ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಆಗಾಗ ಆಕೆಯ ಮನೆಗೆ ಬರುತ್ತಿದ್ದಾನೆ ಎನ್ನಲಾಗುತ್ತಿದೆ. ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು, ಸೋಮವಾರ ಬೆಳಗ್ಗೆ ಗಂಟೆ 11 ರ ಸುಮಾರಿಗೆ ಪೇದೆ ಮಹಿಳೆಯ ಮನೆಗೆ ಪ್ರವೇಶಿಸಿದ್ದನ್ನು ಗಮನಿಸಿದ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ ಪೇದೆ ಮಹಿಳೆಯೊಂದಿಗೆ ಮನೆಯ ಒಳಗೆ ಇರುವಾಗಲೇ ಹೊರಗಿನಿಂದ ಬಾಗಿಲಿಗೆ ಚೀಲಕ ಹಾಕಿದ್ದರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಠಾಣಾಧಿಕಾರಿ ಬರುವುದರೊಳಗೆ ಅದೇಗೋ ಮನೆಯಿಂದ ಹೊರಬಂದ ಕಿರಣ್ ಗೆ ಸಾರ್ವಜನಿಕರೇ…

Read More

[quote font_size=”14″ color=”#ff1000″ bgcolor=”#ffffff” bcolor=”#f9e900″ arrow=”yes” align=”right”]ನವೆಂಬರ್ 1 ರ ಭಾನುವಾರದ ಕಾರ್ಯಕ್ರಮ: ಸಂಜೆ 4.00 ರಿಂದ ಪುರಮೆವಣಿಗೆ ನಂತರ ಬಸ್ರೂರು ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸೋಲ್ಲಾಸದ ಬಳಿಕ ಸಂಜೆ 5.00 ಕ್ಕೆ ಕನ್ನಡ ತಂತ್ರಾಂಶ ಜನಕರಾದ ನಾಡೋಜ ಶ್ರೀ ಕೆ.ಪಿ. ರಾವ್ ರವರಿಂದ ಡಿಂಡಿಮ ಉದ್ಘಾಟನೆಗೊಳ್ಳಲಿದೆ. ಪ್ರೋ. ವರದೇಶ ಹಿರೇಗಂಗೆ ಮತ್ತು ಡಾ. ಪಾರ್ವತಿ ಐತಾಳ್ ಇವರ ಮಾತಿನರಮನೆ. ಜನಾನುರಾಗಿ ಬಸ್ ಚಾಲಕರಾದ ಶ್ರೀ ಎಚ್. ಹಂಝಾ ವಕ್ವಾಡಿ ಇವರಿಗೆ ಕನ್ನಡದ ನುಡಿ ಗೌರವ. ನಾಟ್ಯ ನಿಲಯಂ ಮಂಜೇಶ್ವರ ಕಾಸರಗೋಡು ಇವರ ನಾಟ್ಯೋಲ್ಲಾಸ ಕಾರ್ಯಕ್ರಮದ ಮೂಲಕ ಮೊದಲ ರವಿವಾರದ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ[/quote] ಕುಂದಾಪುರ: ವರ್ಷವಿಡೀ ಕನ್ನಡದ ಕಂಪನ್ನು ಪಸರಿಸುವ ಕಾರ್ಯಗಳ ನಡುವೆ, ಕನ್ನಡ ಮಾಸ ನವೆಂಬರ್ ತಿಂಗಳು ಪೂರ್ತಿ ಕನ್ನಡಿಗರ ಕರತಾಡನದ ಸದ್ದು ಕುಂದಾಪುರವೆಂಬ ಕಡುಕನ್ನಡದ ಪಟ್ಟಣದಲ್ಲಿ ಸ್ಥಾಯಿಯಾಗಿ ಉಳಿಯುವಂತೆ ಮಾಡಲು ಕುಂದಾಪುರದ ಕನ್ನಡ ವೇದಿಕೆ ಸಜ್ಜಾಗಿ ನಿಂತಿದೆ. `ಡಿಂಡಿಮ’ ಎಂಬ ಶಿರೋನಾಮೆಯಲ್ಲಿ…

Read More

ಕುಂದಾಪುರ: ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀಪಾತ್ರಗಳ ಮೂಲಕ ತನ್ನ ಕಲಾವರ್ಚಸ್ಸನ್ನು ಅಸಂಖ್ಯ ಯಕ್ಷಪ್ರೀಯರಿಗೆ ಉಣಬಡಿಸಿದ ಕಲಾವಿದ ಕುಂದಾಪುರ ತಾಲೂಕಿನ ಮಾರ್ಗೋಳಿ ಗೋವಿಂದ ಶೇರುಗಾರ್ ಅವರಿಗೆ 2015ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಮಾರ್ಗೋಳಿ ಅವರ ಬದುಕಿನ ಸುತ್ತ: ಐವತ್ತು ವರುಷಗಳ ರಂಗ ಬದುಕಿನಲ್ಲಿ ತೆಂಕು-ಬಡಗಿನುದ್ದಕ್ಕೂ ತಿರುಗಾಟ ಮಾಡಿದ ಮಾರ್ಗೋಳಿಯವರು ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದ. ಬಡಗಿನ ಹಳೆಯ ಕ್ರಮಗಳ ಬಗ್ಗೆ ಅಧಿಕೃತ ದನಿ. ನಾಟ್ಯದಿಂದ ರಂಗಸೂಕ್ಷ್ಮದ ವರೆಗಿನ ಸಂಗತಿಗಳಿಗೆ ಈ ಕಾಲಘಟ್ಟದಲ್ಲಿ ಮಾರ್ಗೋಳಿಯವರು ಯಕ್ಷಗಾನಕ್ಕೆ ಅನಿವಾರ್ಯ. ತನ್ನ ಹದಿಮೂರನೇ ವರುಷದಿಂದ ಬಣ್ಣದ ಬದುಕು ಆರಂಭ. ಕುಂದಾಪುರದ ಬಸ್ರೂರಿನಲ್ಲಿ ನಾಲ್ಕನೇ ತರಗತಿ ತನಕ ವಿದ್ಯಾಭ್ಯಾಸ. ಬದುಕಿನ ಅನಿವಾರ್ಯತೆಯೊಂದಿಗೆ ಬೆಳೆದು, ಬಡಗುತಿಟ್ಟಿನ ಬಹುತೇಕ ಖ್ಯಾತರೊಡನೆ ಪಾತ್ರವಹಿಸಿ, ತಾನೂ ಗಟ್ಟಿಯಾಗಿ ರಂಗದ ಸಾರಸರ್ವಸ್ವವನ್ನುಂಡ ಅಪರೂಪದ ಕಲಾಗಾರಿಕೆ. ಅವರ ರಂಗ ಬದುಕಿನ ಉಚ್ಛ್ರಾಯ ಕಾಲದ ನೆನಪು ಅವರ ಇಳಿವಯಸ್ಸಿನ ಲವಲವಿಕೆಯ ಗುಟ್ಟು. ಗುರು ವೀರಭದ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ.. ಮೊದಲಾದ…

Read More

ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯ ವತಿಯಿಂದ ದಶಾರ್ಪಣಂ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ನವಂಬರ್ ೮ರಂದು ಬೆಳಿಗ್ಗೆ ೯ಕ್ಕೆ ಹಂಗಳೂರಿನ ಅನಂತಪದ್ಮನಾಭ ಸಭಾಗೃಹದಲ್ಲಿ ನಡೆಯಲಿದೆ. ಭರತನಾಟ್ಯ ಅತೀ ಕಿರಿಯ ವಿಭಾಗ, ಕಿರಿಯ ವಿಭಾಗ ಹಿರಿಯ ವಿಭಾಗ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ನೋಂದಣಿಗೆ ನವಂಬರ್ ೪ ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9845497206, 9448487789ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Read More

ಗಂಗೊಳ್ಳಿ: ಕಳೆದ ಕೆಲವು ದಿನಗಳಿಂದ ಗಂಗೊಳ್ಳಿ-ಕುಂದಾಪುರ ನಡುವೆ ಸಂಚರಿಸುತ್ತಿರುವ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಒಂದು ಬಸ್‌ನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಇದೇ ರೀತಿ ಮುಂದುವರಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಕಳೆದ ಹಲವು ದಶಕಗಳ ಹೋರಾಟದ ಫಲವಾಗಿ ಮಂಜೂರಾಗಿರುವ ಎರಡು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಕುಂದಾಪುರ ಡಿಪೋದ ಅಧಿಕಾರಿಗಳು ಕುಂಟು ನೆಪವೊಡ್ಡಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದಾರೆ. ಕಳೆದ ಸುಮಾರು ಎರಡು ತಿಂಗಳಿನಿಂದ ಪ್ರತಿ ಆದಿತ್ಯವಾರ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ಹೀಗಾಗಿ ನಾಗರಿಕರು ಮತ್ತೊಮ್ಮೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ನಾಗರಿಕರ ಹೋರಾಟ ಸಮಿತಿ ತಿಳಿಸಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಅನುಕೂಲಕ್ಕಾಗಿ ಸಂಚರಿಸುತ್ತಿರುವ ಸರಕಾರಿ ಬಸ್‌ಗಳ ಸಂಚಾರವನ್ನು ಮೊಟಕುಗೊಳಿಸಿ ಸಂಚಾರವನ್ನೇ ರದ್ದು ಮಾಡುವ ಹುನ್ನಾರ ನಡೆಯುತ್ತಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಬೀಜಾಡಿ ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-66 ಇನೋವಾ ಕಾರಿಗೆ ಇನ್ಸುಲೇಟರ್ ಲಾರಿ ಡಿಕ್ಕಿಯಾದ ಪರಿಣಾಮ ಇನೋವಾದಲ್ಲಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಸುಮಾರಿಗೆ ನಡೆದಿದೆ. ಕ್ಲಬ್ ಮಹೇಂದ್ರ ಸಂಸ್ಥೆಯ ಉದ್ಯೋಗಿ ಬಾಲಕೃಷ್ಣ (26) ಮೃತ ದುರ್ದೈವಿ. ಘಟನೆಯ ವಿವರ: ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಬೀಜಾಡಿ ಬೈಪಾಸ್ ಬಳಿಯ ಡಿವೈಡರ್ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಕುಂದಾಪುರ ಕಡೆಗೆ ತೆರಳುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ಇನೋವಾ ಕಾರು ಹಾಗೂ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇನೋವಾದಲ್ಲಿದ್ದ ಬಾಲಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರೇ, ಮಣಿಕಂಠ ಹಾಗೂ ಅರುಣ್ ಎಂಬುವವರಿಗೆ ಗಾಯಗಳಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕುಂದಾಪುರದಲ್ಲಿ ಕಂಪೆನಿಯ ಮೀಟಿಂಗ್ ಇದ್ದ ಕಾರಣ ಆರು ಮಂದಿ ಬೆಂಗಳೂರಿನಿಂದ ಆಗಮಿಸಿದ್ದರು. ಮೀಟಿಂಗ್ ಬಳಿಕ ಮೂವರು ಆನೆಗುಡ್ಡೆ ದೇವಳಕ್ಕೆ…

Read More