ಗಂಗೊಳ್ಳಿ: ಯುವಶಕ್ತಿ ಯಾವುದೇ ಊರಿನ ಅತ್ಯಮೂಲ್ಯ ಆಸ್ತಿ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಯುವಕರು ಮಾಡಬೇಕಿದೆ.ಹಾಗಾದಾಗ ಊರು ಸಮಾಜ ದೇಶ ಎಲ್ಲವೂ ಅಭಿವೃದ್ಧಿಯಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ೩೨ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ಎಲ್ಲರೂ ನೀಡಬೇಕು.ಅದು ಈ ದಿನದ ಅಗತ್ಯತೆ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ನ ಅಧ್ಯಕ್ಷರಾದ ದಿನಕರ್ ಪಟೇಲ್,ಅಖಿಲ ಭಾರತ ಕೊಂಕಣಿಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ತಿಮ್ಮಪ್ಪ ಎಮ್ ಖಾರ್ವಿ ಭಟ್ಕಳ ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರಾದ ನಾಗರಾಜ ಕೊಡಂಚರನ್ನು ಸನ್ಮಾನಿಸಲಾಯಿತು. ಮಾನವೀಯತೆಯ ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹತ್ತು ಫಲಾನುಭವಿಗಳಿಗೆ ಧನಸಹಾಯವನ್ನು ವಿತರಿಸಲಾಯಿತು
ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ. ರಾಘವೇಂದ್ರ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಎಮ್ ಸತೀಶ ಖಾರ್ವಿ ವರದಿ ವಾಚಿಸಿದರುಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಗೌರವ ಕಾರ‍್ಯದರ್ಶಿ ಜಿ.ಸೂರ್ಯಕಾಂತ ಖಾರ್ವಿ ಸನ್ಮಾನ ಪತ್ರ ಓದಿದರು. ಸುಂದರ್ ಗಂಗೊಳ್ಳಿ ಮತ್ತು ವೀಣಾ ಹರೀಶ್ ಖಾರ್ವಿ ಕಾರ‍್ಯಕ್ರಮವನ್ನು ನಿರೂಪಿಸಿದರು.ಗುಮ್ಸಿ ಸತೀಶ್ ಖಾರ್ವಿ ಧನ್ಯವಾದ ಅರ್ಪಿಸಿದರು.
ವರದಿ : ನರೇಂದ್ರ ಎಸ್ ಗಂಗೊಳ್ಳಿ.










