Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಭ್ರಷ್ಟರನ್ನು ಸಹಿಸಿಕೊಳ್ಳುವ ತನಕ ನೈಜ ಪ್ರಜಾಪ್ರಭುತ್ವ ಸ್ಥಾಪನೆಯಾಗದು: ಸಂತೋಷ ಹೆಗ್ಡೆ
    ಊರ್ಮನೆ ಸಮಾಚಾರ

    ಭ್ರಷ್ಟರನ್ನು ಸಹಿಸಿಕೊಳ್ಳುವ ತನಕ ನೈಜ ಪ್ರಜಾಪ್ರಭುತ್ವ ಸ್ಥಾಪನೆಯಾಗದು: ಸಂತೋಷ ಹೆಗ್ಡೆ

    Updated:24/12/2018No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ’ಭಾರತ ಸ್ವಾತಂತ್ರ್ಯ ಗಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಹೊರಳಿಕೊಂಡಾಗ ಜನರಿಂದ ಆದ ಜನರಿಗಾಗಿ ಇರುವ ಜನರ ಸರ್ಕಾರ ಬಂತೆಂದು ಹಿಗ್ಗಿದೆವು. ಆದರೇ ನಾವೀಗ ಇಲ್ಲಿ ಕೆಲವರಿಂದ ಆದ ಕೆಲವರಿಗಾಗಿ ಇರುವ ಕೆಲವರ ಸರ್ಕಾರವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆ ಇದನ್ನು ಬದಲಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.

    Click Here

    Call us

    Click Here

    ನಾಗೂರಿನ ಕುಸುಮ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗ್ಡೆ ಅವರಿಗೆ ಈ ಸಾಲಿನ ’ಕುಸುಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ದಿಕ್ಸೂಚಿ ಭಾಷಣ ಮಾಡಿದರು.

    ಲೋಕಾಯುಕ್ತನಾದ ಬಳಿಕ ನನಗೆ ದೇಶದ ವಾಸ್ತವ ಸ್ಥಿತಿಯ ಅರಿವಾಯಿತು. ಜನರು ಭ್ರಷ್ಟರನ್ನು, ಅಯೋಗ್ಯರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಬದಲಿಗೆ ಪುರಸ್ಕರಿಸುವುದನ್ನು ಕಂಡು ಆಘಾತಗೊಂಡೆ. ಇದರ ಫಲವಾಗಿ ದೇಶ ಅಭಿವೃದ್ಧಿಯಾಗುವುದರ ಬದಲಿಗೆ ಆಡಳಿತಗಾರರಿಂದ ನಡೆಯುತ್ತ ಬಂದ ಹಗರಣಗಳ ಮೊತ್ತ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಈ ಪರಿಯ ಸೋರಿಕೆಯಿಂದ ನಿಜವಾದ ಅಭಿವೃದ್ಧಿಗೆ ವೆಚ್ಚವಾಗುವ ಮೊತ್ತ ಕುಸಿಯುತ್ತಿದೆ. ಈ ಪ್ರವೃತ್ತಿ ಪ್ರಜಾತಂತ್ರದ ಸ್ತಂಭಗಳೆನಿಸಿದ ಶಾಸನಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಮನಾಗಿ ವ್ಯಾಪಿಸಿದೆ. ನಾಲ್ಕನೆ ಸ್ತಂಭವೆಂದು ಸ್ವಯಂಘೋಷಿಸಿಕೊಂಡ ಮಾಧ್ಯಮ ರಂಗವೂ ಇದಕ್ಕೆ ಹೊರತಾಗಿಲ್ಲ ಎಂದು ಅವರು ವಿಷಾದಿಸಿದರು.

    ಆಡಳಿತದ ಅಂಗಗಳಲ್ಲಿ ಮನೆಮಾಡಿರುವ ಭ್ರಷ್ಟತೆಗೆ ಅವುಗಳನ್ನು ಪ್ರವೇಶಿಸುವ ನಮ್ಮ ಜನರಲ್ಲಿ ತೃಪ್ತಿಯ ಬದಲಾಗಿ ದುರಾಸೆ ಹೆಚ್ಚುತ್ತಿರುವುದು, ಮೌಲ್ಯಗಳ ಪತನ ಆಗಿರುವುದು ಕಾರಣ. ಇಂತಹ ವ್ಯವಸ್ಥೆ ಇರುವಷ್ಟು ಕಾಲ ದೇಶದ ನೈಜ ಅಭಿವೃದ್ಧಿ ಅಸಾಧ್ಯ ಎಂದರು.

    ಸಂತೋಷ್ ಹೆಗ್ಡೆ ಅವರ ಮಾತುಗಳು ಹಾಗೂ ಸಮಾರಂಭದ ವೀಡಿಯೋ ನೋಡಿ

    Click here

    Click here

    Click here

    Click Here

    Call us

    Call us

    ಪ್ರಶಸ್ತಿ ಸ್ವೀಕರಿಸಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ’ದೇಶದ ಅಸಂಖ್ಯ ಮತ್ತು ವೈವಿಧ್ಯಮಯ ಕಲಾಪ್ರಕಾರಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ಯಕ್ಷಗಾನ ಅದ್ವಿತೀಯ ಸ್ಥಾನ ಗಳಿಸಿದೆ. ಅದಕ್ಕೆ ಯುನೆಸ್ಕೋದ ವಿಶ್ವ ಪರಂಪರಾ ಮಾನ್ಯತೆ ಸಿಗುವ ದಿನ ಬರಲಿದೆ. ಅವಿಭಜಿತ ದಕ್ಷಿಣ ಕನ್ನಡದ ಜನರು ಯಕ್ಷಗಾನ ಕಲೆಯನ್ನು, ಕೆರೆಮನೆ ಕಲಾವಿದರನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ. ಅಂತಹ ನೆಲದಲ್ಲಿ ನೀಡಲಾದ ಪ್ರಶಸ್ತಿ ಸ್ವೀಕರಿಸುವುದು ಬದುಕಿನ ಅತಿ ಮಹತ್ವದ ಸಂಗತಿ. ಇದರಿಂದ ನನ್ನ ಜವಾವಾಬ್ದಾರಿ ಹೆಚ್ಚಿದೆ’ ಎಂದರು.

    ಫೌಂಡೇಶನ್‌ನ ಆಡಳಿತ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಸ್ವಾಗತಿಸಿ, ಸಂಸ್ಥೆಯ ಆಶಯ ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದರು. ನಯನಾ ಶೆಟ್ಟಿ, ವಿಶ್ವನಾಥ ಶೆಟ್ಟಿ ನಿರ್ವಹಿಸಿದರು. ಶಿವಾನಂದ ಹೆಗಡೆ ಅವರ ಪತ್ನಿ ಇದ್ದರು. ಸಂಸ್ಥೆ ನಡೆಸಿದ್ದ ಜಿಲ್ಲಾ ಮಟ್ಟದ ಗಾನಕುಸುಮ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ, ಅವರಿಂದ ಮತ್ತು ಅನ್ಯ ಕಲಾವಿದರಿಂದ ಸಂಗೀತ ಸಂಧ್ಯಾ ಪ್ರಸ್ತುತಗೊಂಡಿತು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    20 − 3 =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.