ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕ್ಷತ್ರಿಯ ಸಂಘದ ವತಿಯಿಂದ 14ನೇ ವರ್ಷದ ಶ್ರೀ ಸೀತಾರಾಚಂದ್ರ ಕಲ್ಯಾಣೋತ್ಸವ ಬುಧವಾರ ವೈಭದಿಂದ ಜರುಗಿತು.
ಶ್ರೀಮದ್ ಸ್ವರ್ಣವಲ್ಲಿ ಮಠಾಧೀಶ ಶ್ರಿಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಸಾನಿಧ್ಯದಲ್ಲಿ ವಿದ್ವಾನ್ ವೇದಮೂರ್ತಿ ಕಟ್ಟೆ ಶಂಕರ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಹಾಗೂ ಬಾಡಾ ಸುಬ್ರಹ್ಮಣ್ಯ ಭಟ್ಟರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳ ಮೂಲಕ ಸೀತಾರಾಮಚಂದ್ರ ದೇವರ ವಿವಾಹ ನಡೆಯಿತು.
ಸೇವಾಕರ್ತರಾದ ಚೇತನಾ ಮತ್ತು ವೆಂಕಟರಮಣ ಬಿಜೂರು ಹಾಗೂ ಸುಮಿತಾ ಮತ್ತು ಗುರುಪ್ರಕಾಶ್ ಬಂಗ್ಲಮನೆ ಮಯ್ಯಾಡಿ, ಪರಮೇಶ್ವರ ಹೋಬಳಿದಾರ್, ರಾಮಕೃಷ್ಣ ಶೇರುಗಾರ್ ಮೊದಲಾದವರು ಇದ್ದರು.















