ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸಿಟಿ ಪಾಯಿಂಟ್ ನಲ್ಲಿರುವ ಮಾತೃಭೂಮಿ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಬೈಂದೂರಿನ ರೋಟರಿ ಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ನಿರ್ದೇಶಕರಾದ ಉಮಾವತಿ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿ ಡಿ.ಕೆ.ಆರ್.ಡಿ.ಎಸ್ ಮಹಾಸಂಘದ ಅಧ್ಯಕ್ಷರಾದ ಬಾನುಮತಿ ಜಯಾನಂದ್ ಬಿ.ಕೆ ಭಾಗವಹಿಸಿದ್ದರು. ಅವರ ಸಾಮಾಜಿಕ ಧಾರ್ಮಿಕ ಸೇವೆ ಗುರುತಿಸಿ ಸಂಸ್ಥೆಯು ಅವರನ್ನು ಸನ್ಮಾನಿಸಿ ಗೌರವಿಸಿತು.
ಸಭೆಯಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ಹಾಗೂ ನಿರ್ದೇಶಕರಾದ ಶ್ಯಾಮಲಾ, ಮಹಾಲಕ್ಷ್ಮೀ, ಸಾವಿತ್ರಿ, ನ್ಯಾನ್ಸಿ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ವಾರ್ಷಿಕ ವರದಿ ಲೆಕ್ಕಪತ್ರಗಳ ಮಂಡನೆ ಮಾಡಿದರು. ಸಂಸ್ತೆಯ ನಿರ್ದೇಶಕರಾದ ಮಹಾಲಕ್ಷ್ಮೀ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಪತ್ರಕರ್ತರಾದ ಅಂದುಕಾ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಅನ್ವಿತಾ ಮೆಂಡನ್ ಮತ್ತು ನಾಗಶ್ರೀ ಹಾಜರಿದ್ದರು.










