Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಿತ್ಯೋತ್ಸವ ಕವಿ ನಿಸಾರ್ ಅಹಮದರ ಕುಂದಾಪುರ-ಬೈಂದೂರು ನಂಟು. ಅಡಿಗರ ಪ್ರೀತಿ
    ಊರ್ಮನೆ ಸಮಾಚಾರ

    ನಿತ್ಯೋತ್ಸವ ಕವಿ ನಿಸಾರ್ ಅಹಮದರ ಕುಂದಾಪುರ-ಬೈಂದೂರು ನಂಟು. ಅಡಿಗರ ಪ್ರೀತಿ

    Updated:03/05/20201 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಬೈಂದೂರು, ಮೇ.3: ಇಂದು ನಿಧನರಾದ ನಿತ್ಯೋತ್ಸವದ ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ಕರಾವಳಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ವಿವಿಧ ಕಾರ್ಯಕ್ರಮಗಳಿಲ್ಲಿಯೂ ಭಾಗವಹಿಸಿದ್ದರು. 2017ರಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರಲ್ಲಿ ಬೈಂದೂರು ತಾಲೂಕಿನ ಮೊಗೇರಿ ಹಾಗೂ 2014ರಲ್ಲಿ ಬೈಂದೂರಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Click Here

    Call us

    Click Here

    2017ರ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಕನ್ನಡ ಪರ ಹೋರಾಟಗಳ ಅಗತ್ಯ, ಇಂಗ್ಲಿಷ್ ಕಲಿಕೆಯ ಅಗತ್ಯತೆ, ರಾಜಕೀಯ ಪ್ರಕ್ಷುಬ್ಧತೆ, ಕನ್ನಡ ನಾಡಿನ ಪ್ರಾಕೃತಿಕ ವೈಭವ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಮನಮುಟ್ಟುವ ಮನಮುಟ್ಟುವಂತೆ ಮಾತನಾಡಿದ್ದರು.

    2012ರ ನವಂಬರ್ 20ರ ವೇಳೆಗೆ ಅಡಿಗರು ಹುಟ್ಟಿದ ನೆಲ ಮತ್ತು ಮನೆ ನೋಡಬೇಕು ಎಂದು ಆಶಿಸಿದರು. ನಿಸಾರ್ ಅವರನ್ನು ಬೈಂದೂರಿನ ಸಾಂಸ್ಕೃತಿಕ ಸಂಘಟಕ ಸುಧಾಕರ ಪಿ. ಬೈಂದೂರು ಮತ್ತು ಲೇಖಕ ಓಂ ಗಣೇಶ್ ಅವರು ಮೊಗೇರಿ ಮತ್ತು ಅಡಿಗರ ಮನೆಗೆ ಕರೆದೊಯ್ದಿದ್ದರು. ಅಲ್ಲಿ ತೀರ ಬಾವುಕರಾದ ಅವರು ಅಡಿಗರ ಕವನಗಳನ್ನು ಗುಣುಗುಣಿಸುತ್ತಿದ್ದರು. ಅಡಿಗರು ಹುಟ್ಟಿ, ಬಾಲ್ಯದ ದಿನಗಳನ್ನು ಕಳೆದ ಮನೆಯ ತುಂಬೆಲ್ಲ ಓಡಾಡಿ, ನೋಡಿ ಅಡಿಗರನ್ನು ಮತ್ತೆಮತ್ತೆ ನೆನೆಯುತ್ತ ಪುಲಕಿತರಾಗಿದ್ದರು. ಅಡಿಗರ ದೊಡ್ಡಪ್ಪನ ಮಗ ಶಂಕರನಾರಾಯಣ ಅಡಿಗರಿಂದ ಕವಿ ಅಡಿಗರ ಬಗೆಗೆ ಅವರು ತಿಳಿದಿದ್ದ ವಿಷಯಗಳನ್ನು ಕೇಳಿಸಿಕೊಂಡಿದ್ದರು.

    ನಿಸಾರ್ ಅಹಮದ್ ಎರಡನೆ ಬಾರಿ ಬೈಂದೂರಿಗೆ ಬಂದಿದ್ದು 2014ರ ಡಿಸೆಂಬರ್ 27 ಮತ್ತು 28ರಂದು. ಕವಿ ಮೊಗೇರಿ ಗೋಪಾಕೃಷ್ಣ ಅಡಿಗರು ಓದಿದ್ದ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಸುರಭಿ ರಿ. ಬೈಂದೂರು ಆಯೋಜಿಸಿದ್ದ ’ಅಡಿಗ ಸಾಹಿತ್ಯೋತ್ಸವ’ದ ಅಧ್ಯಕ್ಷತೆ ವಹಿಸಿದ್ದರು. ಎರಡೂ ದಿನ ನಡೆದ ಅದರ ವಿವಿಧ ಕಾರ್ಯಕ್ರಮಗಳಲ್ಲಿ ಅತ್ಯಂತ ಸಂತಸ ಮತ್ತು ಲವಲವಿಕೆಯಿಂದ ಭಾಗವಹಿಸಿದ್ದರು. ಎಲ್ಲರೊಂದಿಗೆ ಬೆರೆತು, ಕಲೆತು ಆತ್ಮೀಯತೆ ತೋರಿದ್ದರು. ಅದೇ ಸಂದರ್ಭ ಕವಿ, ಕತೆಗಾರ ಜಯಂತ ಕಾಯ್ಕಿಣಿ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ನಡೆದ ’ಸುರಭಿ’ಯ ವಾರ್ಷಿಕ ಕಾರ್ಯಕ್ರಮದಲ್ಲಿ ನಿಸಾರ್ ಅಹಮದ್ ಅವರನ್ನು ಸಂಸ್ಥೆ ಸನ್ಮಾನಿಸಿತ್ತು. ಅವರ ಈ ಎರಡೂ ಭೇಟಿಗಳನ್ನು ಇಲ್ಲಿನ ಸಂಘಟಕರು ಮತ್ತು ಸಹೃದಯಿಗಳು ಈಗಲೂ ಮೆಲುಕು ಹಾಕುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

    Click here

    Click here

    Click here

    Call us

    Call us

    ಬೈಂದೂರಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಬಗ್ಗೆ ನಿಸಾರ್ ಅವರಾಡಿದ್ದ ಮಾತು:
    ಕನ್ನಡಕಾವ್ಯ ಪರಂಪರೆಯ ಮೇಲೆ ಅಗಾಧ ಪ್ರಭಾವ ಬೀರಿ ಕಾವ್ಯವನ್ನು ನೋಡುವ ದೃಷ್ಟಿಯನ್ನು ಬದಲಿಸಿದ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯ ಆಸ್ವಾದಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಪೂರ್ವ ಕವಿಗಳನ್ನು ಅನುಕರಿಸಿ ಬರೆಯುತ್ತಿದ್ದ ನನ್ನಂತಹ ಹಲವರನ್ನು ಅಡಿಗರು ತಿದ್ದಿ ಸ್ವಂತಿಕೆ ರೂಢಿಸಿಕೊಳ್ಳುವಂತೆ ಮಾಡಿದರು. ಕನ್ನಡದಲ್ಲಿ ಕೃತಿನಿಷ್ಠ ವಿಮರ್ಶೆ ಕಲಿಸಿದ ಅವರಲ್ಲಿ ಇದ್ದ ಮಾನವೀಯತೆ, ಸದಭಿರುಚಿ, ಧೀರ ನಿಷ್ಠೆ, ಅಸಾಧಾರಣವಾದುದು. ಓದುಗನ ಮೇಲೆ ಪ್ರಭಾವ ಬೀರುವಂತೆ, ಅವನನ್ನು ದೀರ್ಘಕಾಲ ಕಾಡುವಂತೆ ಬರೆಯುವವನೇ ಶ್ರೇಷ್ಠ ಕವಿ. ಅಡಿಗರ ಕವನಗಳ ಪ್ರಮುಖ ಗುಣ ಅದು. ಅಡಿಗರು ಆರಂಭಿಕ ಶಿಕ್ಷಣ ಪಡೆದ ಶಾಲೆಯಲ್ಲಿ ಅವರ ಕಾವ್ಯಾವಲೋಕನ ನಡೆಯುತ್ತಿರುವುದು ಅರ್ಥಪೂರ್ಣವಾದುದು.

    ಕವಿ ನಿಸಾರ್ ಅಹಮದರ ಕವಿತೆಗಳನ್ನು ಮಲೆಯಾಳಕ್ಕೆ ಅನುವಾದಿಸಿದ್ದ ಕುಂದಾಪುರದ ಹಿರಿಯ ಲೇಖಕಿ ಪಾರ್ವಜಿ ಜಿ. ಐತಾಳ್ ಅವರು ನಿಸಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

    19/12/2025

    ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿಯು ಕಾಲೇಜು

    19/12/2025

    ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ

    19/12/2025

    1 Comment

    1. Sachin Thaggarse on 03/05/2020 10:04 pm

      Good news media Kundapur. Com

      Reply
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
    • ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿಯು ಕಾಲೇಜು
    • ಸಿಎಲ್‌ಎಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣ  
    • ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ
    • ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿ.ವೈ. ರಾಘವೇಂದ್ರ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.