ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.12ರ ಶನಿವಾರ 169 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 47, ಉಡುಪಿ ತಾಲೂಕಿನ 95 ಹಾಗೂ ಕಾರ್ಕಳ ತಾಲೂಕಿನ 22 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 76 ಸಿಂಥಮೇಟಿವ್ ಹಾಗೂ 93 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 58, ILI 46, ಸಾರಿ 1 ಪ್ರಕರಣವಿದ್ದು, 58 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 5 ಮಂದಿ ಹೊರ ಜಿಲ್ಲೆ ಹಾಗೂ ಓರ್ವ ವ್ಯಕ್ತಿ ಹೊರದೇಶದಿಂದ ಬಂದಿದ್ದಾರೆ.
ಇಂದು 91 ಮಂದಿ ಆಸ್ಪತ್ರೆಯಿಂದ ಹಾಗೂ 147 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 89 ಹಾಗೂ 70 ವರ್ಷದ ವೃದ್ಧೆಯರು ಇಂದು ಮೃತಪಟ್ಟಿದ್ದಾರೆ.
915 ನೆಗೆಟಿವ್:
ಈ ತನಕ ಒಟ್ಟು 84073 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 69710 ನೆಗೆಟಿವ್, 13912 ಪಾಸಿಟಿವ್ ಬಂದಿದ್ದು, 451 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 915 ನೆಗೆಟಿವ್, 169 ಪಾಸಿಟಿವ್ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 13912 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 12022 ಮಂದಿ ಬಿಡುಗಡೆಯಾಗಿದ್ದು, ಒಟ್ಟು 782 ಸಕ್ರಿಯ ಪ್ರಕರಣಗಳಲ್ಲಿ 834 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 978 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 130 ಮಂದಿ ಮೃತಪಟ್ಟಿದ್ದಾರೆ.















