Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೆಸಕುತ್ತೂರು ಶಾಲೆಯಲ್ಲಿ ನಡೆಯಿತು ತರಹೇವಾರಿ ತಿನಿಸುಗಳ ಜಾತ್ರೆ!
    ಊರ್ಮನೆ ಸಮಾಚಾರ

    ಹೆಸಕುತ್ತೂರು ಶಾಲೆಯಲ್ಲಿ ನಡೆಯಿತು ತರಹೇವಾರಿ ತಿನಿಸುಗಳ ಜಾತ್ರೆ!

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ:
    ಅದು ಶಾಲಾ ವಠಾರ. ಆದರೂ ಫ್ರೂಟ್ ಸಲಾಡ್, ಕೇಕ್, ಅವಲಕ್ಕಿ, ಕೋಸಂಬರಿ, ಬ್ರೆಡ್ ಜಾಮ್, ವಿವಿಧ ರೀತಿಯ ಪಾನೀಯಗಳು, ರಸಾಯನ, ಮಂಡಕ್ಕಿ ಉಪ್ಕರಿ… ಹೀಗೆ ತರಹೇವಾರಿ ಬಾಯಲ್ಲಿ ನೀರೂರಿಸುವ ತಿನಿಸುಗಳ ಜಾತ್ರೆಯೇ ಅಲ್ಲಿ ನೆರೆದಿತ್ತು. ಇವ್ಯಾವುವೂ ಪರಿಣತ ಬಾಣಸಿಗರ ಮೂಲಕ ಸಿದ್ಧಗೊಂಡವುಗಳಲ್ಲ. ಸದಾ ಒಂದಿಲ್ಲೊಂದು ಗುಣಾತ್ಮಕ ಶೈಕ್ಷಣಿಕ ಪ್ರಯೋಗಗಳ ಮೂಲಕ ಗಮನ ಸೆಳೆಯುವ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಕೈಗಳ ಅಡುಗೆ ಸಾಹಸ.

    Click Here

    Call us

    Click Here

    ಬೆಂಕಿ ಉಪಯೋಗಿಸದೆ ಅಡುಗೆ ಸಿದ್ಧಪಡಿಸುವ ನಿಯಮಕ್ಕೆ ಬದ್ಧವಾಗಿ ನೂರಾರು ಪುಟಾಣಿಗಳು 12 ವಿವಿಧ ತಂಡಗಳಾಗಿ ಸೇರಿಕೊಂಡು ತಮ್ಮದೇ ಪರಿಕಲ್ಪನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿವು. ಮಕ್ಕಳಿಗೆ ಎಳೆವೆಯಲ್ಲಿಯೇ ಅಡುಗೆ ಕಲೆಯ ಕುರಿತಾದ ಅಭಿರುಚಿ ಬೆಳೆಸುವುದರ ಜೊತೆಗೆ ನಾವು ಸೇವಿಸುವ ಆಹಾರ ಹೇಗಿರಬೇಕು, ಅದನ್ನು ತಯಾರಿಸುವ ಪ್ರಕ್ರಿಯೆ ಹೇಗೆ, ಬಳಸುವ ಸಾಮಗ್ರಿಗಳು ಯಾವುವು, ಪ್ರಮಾಣಬದ್ಧವಾಗಿ ಅವುಗಳನ್ನು ಉಪಯೋಗಿಸುವ ಜ್ಞಾನ, ಅಡುಗೆ ತಯಾರಿಗೆ ಬೇಕಾಗಿ ನಮ್ಮಲ್ಲಿರಬೇಕಾದ ಕೌಶಲಗಳು, ಸ್ವಚ್ಛತೆಯ ಪ್ರಾಮುಖ್ಯ, ಅಡುಗೆ ತಯಾರಿಯ ನಂತರ ಅವುಗಳನ್ನು ಸುಂದರವಾಗಿ ಸಾಲಾಗಿಟ್ಟು ಪ್ರಸ್ತುತ ಪಡಿಸುವ ರೀತಿ… ಹೀಗೆ ಒಂದಷ್ಟು ಬಹುಮುಖ್ಯ ಕಲಿಕೆಗಳಿಗೆ ಈ ಅಡುಗೆ ಹಬ್ಬ ಮಕ್ಕಳಿಗೆ ಅವಕಾಶ ಒದಗಿಸಿತ್ತು. ತಾವೇ ಪುಟಾಣಿ ಬಾಣಸಿಗರಾಗಿ ಉಡುಪು ಧರಿಸಿಕೊಂಡು, ಹಿರಿಯ ಕಿರಿಯ ವಿದ್ಯಾರ್ಥಿಗಳೆಲ್ಲ ಒಂದು ತಂಡವಾಗಿ ಸೇರಿಕೊಂಡು ಉತ್ಸಾಹದಿಂದ ಸಂಭ್ರಮದಿಂದ ಈ ಅಡುಗೆ ಹಬ್ಬದಲ್ಲಿ ಅವರು ಭಾಗವಹಿಸಿ ರೀತಿ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಿತ್ತು.

    ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾ ಪ್ರದರ್ಶನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಹಾಗೂ ಜೇಸಿಐ ಕುಂದಾಪುರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಯಮಿ ಗಣೇಶ, ಒಂದು ಆಹಾರದ ತಿನಿಸನ್ನು ಸಿದ್ಧಪಡಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ನಾಗರತ್ನ ಜಿ ಹೇರಳೆ, ಜೇಸಿ ವಲಯ ಉಪಾಧ್ಯಕ್ಷರಾದ ವಿಜಯ ನರಸಿಂಹ ಐತಾಳ್, ಮಹಿಳಾ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ಗೌರವ ಶಿಕ್ಷಕಿ ಮಧುರಾ ಉಪಸ್ಥಿತರಿದ್ದರು.

    ಶಾಲಾ ಮುಖ್ಯ ಶೇಖರಕುಮಾರ ಸ್ವಾಗತಿಸಿದರು. ಸಹ ಶಿಕ್ಷಕರಾದ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಾಯಕ್ ವಂದಿಸಿದರು.

    Click here

    Click here

    Click here

    Click Here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ

    26/05/2026

    ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

    26/05/2026

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ

    26/05/2026
    Leave A Reply Cancel Reply

    sixteen + 19 =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ
    • ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಕ್ಯಾಂಪಸ್ ಟು ಕಾರ್ಪೊರೇಟ್ – ಕೆರಿಯರ್ ರೆಡಿನೆಸ್ʼ ಕಾರ್ಯಕ್ರಮ
    • ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಕುಣಿತ ಭಜನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.