Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೇಕೋಡು: ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆ – ಎಸ್. ಪ್ರಕಾಶ್ಚಂದ್ರ ಶೆಟ್ಟಿ
    ಊರ್ಮನೆ ಸಮಾಚಾರ

    ಮೇಕೋಡು: ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆ – ಎಸ್. ಪ್ರಕಾಶ್ಚಂದ್ರ ಶೆಟ್ಟಿ

    Updated:22/08/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು:
    ಸ್ವಾವಲಂಭಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆಯಾಗಿದೆ. ಹೈನುಗಾರಿಕೆಯ ಅನುಭವ ಇಲ್ಲದವರೂ ತರಬೇತಿ ಪಡೆದು ಇದರಲ್ಲಿ ತೊಡಗಿಕೊಳ್ಳಲು ಅವಕಾಶವಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕಿದ್ದರೆ ಸ್ವ-ಉದ್ಯೋಗದ ಮಾರ್ಗ ಉತ್ತಮವಾದುದು ಎಂದು ಮೇಕೋಡು ಹಾಲು ಉತ್ಪಾದರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

    Click Here

    Call us

    Click Here

    ಅವರು ಶನಿವಾರ ಶ್ರೀ ಮೇಕೋಡಮ್ಮ ಸಭಾಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮೇಕೋಡು ಸಂಘವು ಹಾಲು ಉತ್ಪಾದನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ವಾರ್ಷಿಕ 6,42,127 ಲೀ. ಹಾಲು ಸಂಗ್ರಹಿಸಿ ರೂ.1,92,02,862 ಹಣವನ್ನು ಸಂಘದ ಮೂಲಕ ಸದಸ್ಯರು ಪಡೆದುಕೊಂಡಿದ್ದಾರೆ. ವಾರ್ಷಿಕ ವಹಿವಾಟಿನಿಂದ ಸಂಘವು ರೂ.9.59 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಟ್ ಹಾಗೂ ಶೇ.65 ಉತ್ಪಾದಕರ ಬೋನಸ್ ನೀಡಲಾಗುತ್ತದೆ ಎಂದರು.

    ಮೇಕೋಡು ಸಾಂದ್ರ ಶೀತಲೀಕರಣ ಘಟಕದಿಂದ ಆರಂಭಿಸಿದ ಬಳಿಕ ಪ್ರತಿನಿತ್ಯ ಅಂದಾಜು 8,000 ಲೀ.ನಷ್ಟು ಹಾಲು ಪೂರೈಕೆ ಮಾಡಲಾಗುತ್ತಿದ್ದು ಅದರ ಪ್ರಮಾಣ ಮುಂದೆ ಹೆಚ್ಚಲಿದೆ. ದೂರದಿಂದ ಹಾಲು ಪೂರೈಕೆ ಮಾಡುವ ಕಡೆಗಳಿಗೆ ಸಂಘದ ಮೂಲಕ ವಾಹನ ಕಳುಹಿಸಿ ಹೆಚ್ಚುವರಿ ಹಾಲನ್ನು ಶೀತಲೀಕರಣ ಘಟಕಕ್ಕಾಗಿ ಸಂಗ್ರಹಿಸುವ ಯೋಜನೆಯಿದ್ದು, ಇದರಿಂದ ಹಾಲು ಉತ್ಪಾದಕರಿಗೂ ಅನುಕೂಲವಾಗಲಿದೆ ಎಂದರು.

    ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಕೃಷಿ ಅಧಿಕಾರಿ ಈಶ್ವರ ನಾಯ್ಕ್ ಕೃಷಿ ಮಾಹಿತಿಯನ್ನು, ಕೆಎಂಎಫ್ ಬೈಂದೂರು ವಲಯ ವಿಸ್ತರಣಾಧಿಕಾರಿ ರಾಜರಾಮ ಹೈನುಗಾರಿಕೆ ಮಾಹಿತಿಯನ್ನು ನೀಡಿದರು.

    ಸಂಘಕ್ಕೆ ಕಳೆದ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂತೋಷ ಗೌಡ, ಚಂದ್ರಶೀಲ ಶೆಟ್ಟಿ, ಶ್ಯಾಮಲ ಶೆಟ್ಟಿ, ಉಮೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಹೆಚ್ಚಿನ ಹಾಲು ಪೂರೈಕೆದಾರರಿಗೆ ವಿವಿಧ ಬಹುಮಾನಗನ್ನು ವಿತರಿಸಲಾಯಿತು. ಬೈಂದೂರು ವಲಯ ವಿಸ್ತರಣಾಧಿಕಾರಿ ರಾಜರಾಮ ಅವರನ್ನು ಸನ್ಮಾನಿಸಲಾಯಿತು.

    Click here

    Click here

    Click here

    Click Here

    Call us

    Call us

    ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ ಗೌಡ ಕೊಣಾಲ್, ನಿರ್ದೇಶಕರುಗಳಾದ ಗೋಪಾಲ ಶೆಟ್ಟಿ, ಎನ್. ಪದ್ಮನಾಭ ಅಡಿಗ, ವೈ. ಜಯರಾಮ ಹೆಬ್ಬಾರ್, ವೈ. ಗೋವಿಂದ ಹೆಬ್ಬಾರ್, ಎಂ.ಎನ್. ಬಾಬು ಪೂಜಾರಿ, ಭಾಸ್ಕರ ದೇವಾಡಿಗ ಉಳ್ಳೂರು, ಉಮೇಶ ಪೂಜಾರಿ ಉಪ್ರಳ್ಳಿ, ಕುಷ್ಟು ಯರುಕೋಣೆ, ಲೀಲಾವತಿ ಪೂಜಾರಿ ಉಪ್ರಳ್ಳಿ, ಸುಶೀಲ ಗಾಣಿಗ ನೂಜಾಡಿ, ಗೌರಿ ಬಿ. ಉಳ್ಳೂರು ಉಪಸ್ಥಿತರಿದ್ದರು.

    ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಕುಶಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿಯರಾದ ಸುಮನ, ಸರೋಜ, ಗೀತಾ ಸಹಕರಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    five + fourteen =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.