ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ 2022-23ನೇ ಸಾಲಿನ ಪದಪ್ರದಾನ ಸಮಾರಂಭ ಇತ್ತೀಚಿಗೆ ಜರುಗಿತು.
ಮುಖ್ಯ ಅತಿಥಿಗಳಾಗಿ ಖ್ಯಾತ ದಂತ ವೈದ್ಯರಾದ ರೊ. ಡಾ. ರಾಜಾರಾಮ್ ಶೆಟ್ಟಿ ಜೀವನಶೈಲಿ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ರೋಟರಿ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವುಂದ ಇಂಟರಾಕ್ಟ್ ಅಧ್ಯಕ್ಷೆ ಕು. ಕೃತಿಕಾ ಮತ್ತು ತಂಡದವರಿಗೆ ಪದ ಪ್ರದಾನ ಮಾಡಿ ರೋಟರಿ ಬಗ್ಗೆ ಮಾಹಿತಿ ನೀಡಿ ಶುಭಾಶಯ ಕೋರಿದರು. ಕಾರ್ಯದರ್ಶಿ ರೊ. ನಾಗರಾಜ್ ಶೆಟ್ಟಿ ಇಂಟರಾಕ್ಟ್ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಮಂಜು ಕಾಳವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಣೆ ಮಾಡಿದರು. ಇಂಟ್ರಾಕ್ಟ್ ಕಾರ್ಯದರ್ಶಿ ಪ್ರೀತಮ್ ವಂದಿಸಿದರು.










