ಕುಂದಾಪುರ: ದಶಮಾನೋತ್ಸವದ ಹೊಸ್ತಿನಲ್ಲಿರುವ ಬಸ್ರೂರು ರಥಬೀದಿ ಫ್ರೆಂಡ್ಸ್‌ನ ಲಾಂಛನ ಬಿಡುಗಡೆ ಸಮಾರಂಭವು ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಛೇರಿಯಲ್ಲಿ ಜರುಗಿತು.
ಬೆಂಗಳೂರಿನ ಉದ್ಯಮಿ ಬಸ್ರೂರು ಗಣೇಶ್ ಪಡಿಯಾರ್ ಲಾಂಛನ ಬಿಡುಗಡೆ ಮಾಡಿ ದಶಮಾನೋತ್ಸವ ಆಚರಿಸುತ್ತಿರುವ ಸಮಿತಿಯ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ದಶಮಾನೋತ್ಸವ ಸಮಾರಂಭವು ಅದ್ದೂರಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಪಡಿಯಾರ್ ದಶಮಾನೋತ್ಸವ ಸಮಾರಂಭ ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯರಿಗೆ ಕರೆನೀಡಿದರು.
ಬಸ್ರೂರು ರಥಬೀದಿ ಫ್ರೆಂಡ್ಸ್‌ನ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ನಾಗೇಶ್ ಬಳ್ಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಕೇಶ್ ಕೆಳಾಮನೆ ವಂದಿಸಿದರು.










