Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಮಕರ ಸಂಕ್ರಮಣ ಉತ್ಸವ
    ಊರ್ಮನೆ ಸಮಾಚಾರ

    ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಮಕರ ಸಂಕ್ರಮಣ ಉತ್ಸವ

    Updated:14/01/2023No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ.14 ರಿಂದ 16ರ ವರೆಗೆ ನಡೆಯಲಿರುವ ಮಕರ ಸಂಕ್ರಮಣ ಉತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆದಿದ್ದು, ಸಾವಿರಾರು ಭಕ್ತರು ಬೆಳಿಗ್ಗೆಯಿಂದ ದೇವರ ದರ್ಶನ ಪಡೆಯುತ್ತಿದ್ದಾರೆ.

    Click Here

    Call us

    Click Here

    ಜ.14ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡಸೇವೆ, ಜ.15, 16 ರಂದು ಬೆಳಗ್ಗೆ ಮಹಾಮಂಗಳಾರತಿ, ರಾತ್ರಿ 9.30ಕ್ಕೆ ಮಂಡಲ ಸೇವೆ, ಜ.14 ರಂದು ಸಂಜೆ 6ರಿಂದ 2.30 ರತನಕ ಕೆಂಡಸೇವೆ, ಜ.17 ರಂದು ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ. ಕೆಂಡಸೇವೆ,ಮಂಡಲಸೇವೆ, ಮಹಾ ಪೂಜೆ ನಡೆಯುವ ಸಮಯ ಭಕ್ತರ ಪೂಜೆ, ಹಣ್ಣುಕಾಯಿ ಸೇವೆ ಜರಗುವುದಿಲ್ಲವೆಂದು ಆನುವಂಶೀಯ ಆಡಳಿತ ಮೊಕ್ತಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

    ಹಬ್ಬದ ಸಂದರ್ಭ ಭಕ್ತರು ಸೇವಂತಿಗೆ, ಸಿಂಗಾರ ಹೂವನ್ನು ಬುಟ್ಟಿಯಲ್ಲಿಟ್ಟು ತಲೆಯಲ್ಲಿ ಹೊತ್ತು ಹರಕೆ ರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಮಾರಣಕಟ್ಟೆ ಕ್ಷೇತ್ರವನ್ನು ಬಡಗಿನ ದೇವರೆಂದು ಭಕ್ತರು ನಂಬಿದ್ದಾರೆ. ಕುಂದಾಪುರ, ಬೈಂದೂರು ಸೇರಿದಂತೆ ತುಳುನಾಡಿನವರು ಭಕ್ತರು ಮಾರಣಕಟ್ಟೆ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಧನು ಸಂಕ್ರಮಣದಂದು ಕ್ಷೇತ್ರದ ಚಿಕ್ಕು ದೇವರ ಪಾತ್ರಿ ಇಲ್ಲಿನ ಚಕ್ರ ಉಪನದಿಯನ್ನು ದಾಟಿ ತುಳುನಾಡಿನ ಭಕ್ತರ ಮನೆಯಲ್ಲಿ ಮೈದರ್ಶನ ಮಾಡುತ್ತಾ ಕೊನೆಗೆ ಮಕರ ಸಂಕ್ರಮಣದಂದು ಕ್ಷೇತ್ರಕ್ಕೆ ಆಗಮಿಸುವ ಪದ್ಧತಿ ಇಂದಿಗೂ ನಡೆಯುತ್ತಾ ಬಂದಿದೆ.

    ಅಲಂಕಾರಗೊಂಡ ಮಾರಣಕಟ್ಟೆ ಪರಿಸರ
    ಚಿತ್ತೂರು ಸ್ವಾಗತ ಗೋಪುರದ ತಿರುವಿನಿಂದ ಮಾರಣಕಟ್ಟೆ ದೇಗುಲದವರೆಗೆ ಮಕರ ಸಂಕ್ರಮಣ ಉತ್ಸವದ ಸಲುವಾಗಿ ವಿಶೇಷವಾಗಿ ಅಲಂಕರಿಸಲಾಗಿದೆ. ಗ್ರಾಮಸ್ಥರು, ಕ್ಷೇತ್ರದ ಅರ್ಚಕರು, ಸಿಬಂದಿ, ದರ್ಶನ ಪಾತ್ರಿಗಳು, ಚಿತ್ತೂರು ಗುಡಿಕೇರಿ ಮನೆ ಕುಟುಂಬಸ್ಥರ ನೇತೃತ್ವದಲ್ಲಿ ಆಗಮಿಸುವ ಭಕ್ತರಿಗೆ ವಿವಿಧ ಸೌಕರ್ಯಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಭಕ್ತರ ನೂಕುನುಗ್ಗಲಾಗದಂತೆ ಸರತಿಯಲ್ಲಿ ವಿಶೇಷ ವ್ಯವಸ್ಥೆ ಅಣಿಗೊಳಿಸಲಾಗಿದೆ.

    Click here

    Click here

    Click here

    Click Here

    Call us

    Call us

    ಕಂಹಾಸುರ ಎಂಬ ರಾಕ್ಷಸನನ್ನು ಜಗಜ್ಜನನಿ ಮೂಕಾಂಬಿಕೆ ವಧಿಸಿದ ಸ್ಥಳವೇ ಮಾರಣಕಟ್ಟೆ ಎಂಬುದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಜಗನ್ಮಾತೆ ಅಸುರನನ್ನು ವಧಿಸುವಾಗ ಕೊನೆ ಕ್ಷಣದಲ್ಲಿ ಕಂಹಾಸುರನಿಗೆ ತನ್ನ ಹಿಂದಿನ ಜನ್ಮದ ಪುಣ್ಯಫಲದಿಂದ ರಕ್ಕಸ ಬುದ್ದಿ ತೊರೆದು ಅನನ್ಯ ಭಕ್ತಿಯಿಂದ ದೇವಿಯನ್ನು ಆರಾಧಿ ಸಿದ್ದರಿಂದ ಭಕ್ತಿಗೆ ಮೆಚ್ಚಿದ ದೇವಿ ಭೂತಗಳಿಗೆ ಒಡೆಯನಾಗಿ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿಯುಳ್ಳವನಾಗು, ನಿನ್ನ ಪರಿವಾರದವರು ಕೂಡ ಮಾರಣಕಟ್ಟೆಗಣಗಳು ಎಂದು ಪ್ರಸಿದ್ಧವಾಗಲಿ, ಮುಂದೆ ನಿನ್ನ ಕೊಂದ ಸ್ಥಳ ಮಾರಣಕಟ್ಟೆ ಎಂದು ಕಲಿಯುಗದಲ್ಲಿ ಖ್ಯಾತಿ ಪಡೆಯಲಿ ಎಂದು ಹರಿಸಿದ್ದಳು. ಮುಂದೆ ಕೊಲ್ಲೂರಿಗೆ ಬಂದ ಆದಿಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ ಇಲ್ಲಿನ ಕಟ್ಟೆಯ ಮೂಲ ಸ್ಥಾನದಲ್ಲಿ ಶ್ರೀ ಚಕ್ರ ಪೀಠ ಸ್ಥಾಪಿಸಿದ್ದರಿಂದ ಸಕಲ ಭಕ್ತರ ಈಡೇರಿಕೆಯ ಕ್ಷೇತ್ರವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇಗುಲ ಇಂದು ಪ್ರಸಿದ್ಧ ದೇವಾಲಯವಾಗಿದೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ

    26/05/2026

    ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

    26/05/2026

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ

    26/05/2026
    Leave A Reply Cancel Reply

    fifteen + thirteen =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾಗಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ
    • ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕರಿಗೆ ಕಾರ್ಯಗಾರ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಕ್ಯಾಂಪಸ್ ಟು ಕಾರ್ಪೊರೇಟ್ – ಕೆರಿಯರ್ ರೆಡಿನೆಸ್ʼ ಕಾರ್ಯಕ್ರಮ
    • ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಕುಣಿತ ಭಜನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.