Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜನಸ್ಪಂದನ ಕಾರ್ಯಕ್ರಮ ಕಾಟಚಾರಕ್ಕೆ ಆಗದಿರಲಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ
    ಊರ್ಮನೆ ಸಮಾಚಾರ

    ಜನಸ್ಪಂದನ ಕಾರ್ಯಕ್ರಮ ಕಾಟಚಾರಕ್ಕೆ ಆಗದಿರಲಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಜನಸ್ಪಂದನ ಕಾರ್ಯಕ್ರಮ ಆಯೋಜಿಸುವ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡಲ್ಲಿ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ. ಜನಸ್ಪಂದನ ಕಾರ್ಯಕ್ರಮವನ್ನು  ಕಾಟಚಾರಕ್ಕೆ ಮಾಡದೆ ಆಗಿಂದಾಗ್ಗೆ ತಾಲೂಕು ಮಟ್ಟದಲ್ಲಿ ಕೈಗೊಳ್ಳಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    Click Here

    Call us

    Click Here

    ಅವರು ಕುಂದಾಪುರ ಶಾಸ್ರೀ ಸರ್ಕಲ್ ಬಳಿಯ ಆರ್.ಎನ್.ಶೆಟ್ಟಿ ಸಭಾಭವನ (ಬಂಟರ ಯಾನೆ ನಾಡವರ ಸಂಕೀರ್ಣ) ದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಗಳಲ್ಲಿ ನಿತ್ಯ ಸಾರ್ವಜನಿಕರ ಕೆಲಸವನ್ನು ಸುಗಮವಾಗಿ ಆಗುವ ರೀತಿಯಲ್ಲಿ ಆಗಬೇಕು ಎಂದ ಅವರು, ಕೆಲವೊಮ್ಮೆ ಪಹಣಿ ಬದಲಾವಣೆಗೆ ವರ್ಷಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ಅವುಗಳು ಕಾಲಮಿತಿಯೊಳಗೆ ಆಗಬೇಕು ಎಂದರು.

    ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿರುವ ಅಹವಾಲುಗಳನ್ನು ಇಲಾಖೆಯ ಅಧಿಕಾರಿಗಳು ನಿರ್ಲಕ್ಷಯ ವಹಿಸದೇ ಶೀಘ್ರದಲ್ಲಿಯೇ ಸ್ಪಂದಿಸಿ, ಸಮಸ್ಯೆಗಳನ್ನು ನಿಯಮಾನುಸಾರ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜನಸ್ಪಂದನ ಕಾರ್ಯಕ್ರಮವನ್ನು ಕಳೆದ ವರ್ಷದಿಂದಲೇ ಆರಂಭಿಸಲಾಗಿದ್ದು, ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸುವುದರೊಂದಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಅಲ್ಲದೇ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐ.ಪಿ.ಜಿ.ಆರ್.ಎಸ್ ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದರ ಜೊತೆಗೆ ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದರು. 

    ಜನಸ್ಪಂದನ ಸಭೆಯಲ್ಲಿ ಬಂದಂತಹ ಅರ್ಜಿಗಳಲ್ಲಿ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಬಗೆಹರಿಸುವಂತಿದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿದ್ದಲ್ಲಿ ಅಥವಾ ಸರ್ಕಾರದ ಅನುದಾನದ ಅವಶ್ಯಕತೆ ಇದ್ದಲ್ಲಿ ಅಂತಹವುಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕಳುಹಿಸಿಕೊಡಲಾಗುವುದು ಎಂದರು.

    Click here

    Click here

    Click here

    Call us

    Call us

    ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಸರಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ಆಡಳಿತವನ್ನು ಜನರ ಹತ್ತಿರ ಕರೆದೊಯ್ಯುವಂತದ್ದಾಗಿದೆ. ಜನರು ಸಹ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಉತ್ಸಾಹದಿಂದ ಬಂದಿರುತ್ತಾರೆ. ಅಧಿಕಾರಿಗಳು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

    ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತಂದರು. ವಿದ್ಯುತ್ ಸಮಸ್ಯೆ, ಜಮೀನಿನ ಅಳತೆ ವಿಳಂಬ, ರಸ್ತೆ ಸಮಸ್ಯೆ, ಮಳೆಯ ನೀರು ಸರಿಯಾಗಿ ಹರಿದು ಹೋಗದಿರುವ ಬಗ್ಗೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಸುಮಾರು 69 ಅರ್ಜಿಗಳು ಸಲ್ಲಿಕೆಯಾಗಿದ್ದವು.

    ಕಾಳವಾರ ಗ್ರಾಮದ ಸ.ನಂ.2 ರ ವಿ.ಸ ನಂ.33 ರ ಕೃಷಿ ಭೂಮಿಗೆ ಪಕ್ಕದ ಕೃಷಿ ಭೂಮಿ ಮಾಲೀಕರು ಮಣ್ಣನ್ನು ತಂದು ಹಾಕಿರುವ ಹಿನ್ನೆಲೆ ಮಳೆಯ ನೀರು ಸರಾಗವಾಗಿ ಹರಿದು ಹೋಗದೇ ನನ್ನ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅಡ್ಡಿಯಾಗಿದೆ. ನೀರು ಹರಿಯಲು ಮಾರ್ಗವಿಲ್ಲದೇ ಕೃತಕ ನೆರೆ ಉಂಟಾಗಿದೆ ಎಂದು ಕಾಳಾವಾರದ ಸುಬ್ರಹ್ಮಣ್ಯ ಎಂಬುವವರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಅದಕ್ಕೆ ಸ್ಪಂದಿಸಿ, ತಹಶೀಲ್ದಾರಗಳು ಸ್ಥಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.

    ಕುಂದಾಪುರದ ವಿಠ್ಠಲವಾಡಿ ನರ್ಸಿಬೆಟ್ಟುವಿನ ರಾಘವೇಂದ್ರ S/o ಮಂಜುನಾಥ ಪೂಜಾರಿ ಎಂಬುವವರು ನಾನು ಅಂಗವಿಕಲನಾಗಿದ್ದು, ಬಿ.ಎ ಪದವಿಯಲ್ಲಿ ಶೇ. 72 ಅಂಕವನ್ನು ಪಡೆದಿರುತ್ತೇನೆ. ನನ್ನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ನೀಡುವಂತೆ ಕೋರಿ ನೀಡಿದ ಅರ್ಜಿಗೆ ಜಿಲ್ಲಾಧಿಕಾರಿಗಳು, ಸರ್ಕಾರಿ ನೇಮಕಾತಿಯಲ್ಲಿ ಶೇ. 5 ರಷ್ಟು ವಿಕಲಚೇತನರಿಗೆ ಮೀಸಲಿರುತ್ತದೆ. ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಲು ತಿಳಿಸಿದರು.

    ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ತಹಶೀಲ್ದಾರ್ ಶೋಭಾಲಕ್ಮೀ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ಕಾಟಾಚಾರದ ಜನಸ್ಪಂದನ ಸಭೆ:
    ಮಾಧ್ಯಮ ಹಾಗೂ ಜನನಾಯಕರುಗಳಿಗೆ ಆಹ್ವಾನ ನೀಡಿ ಸಭೆಯಲ್ಲಿ ಯಾವುದೇ ಮಾಹಿತಿ ನೀಡದೇ ಜನಸ್ಪಂದನ ಸಭೆ ನಡೆಸುತ್ತಿರುವುದು ಸರಕಾರದ ಕಾರ್ಯಕ್ರಮವನ್ನು ದಾರಿ ತಪ್ಪಿಸುವ ಕ್ರಮ. ಇದು ಖಂಡನೀಯ ಎಂದು ಜಿಲ್ಲಾ‌ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಹೇಳಿದ್ದಾರೆ.

    ಜನಸ್ಪಂದನ ಸಭೆಗೆ ಅರ್ಜಿ ಸ್ವೀಕಾರಕ್ಕೆ 2 ಕೌಂಟರ್ ಮಾಡಲಾಗಿತ್ತು. ಟೋಕನ್ ನಂಬರ್ ಪ್ರಕಾರ ವೇದಿಕೆಗೆ ಕರೆದು ಡಿಸಿ ಬಳಿ ಸಮಸ್ಯೆ ಮಂಡನೆ ಮಾಡಬೇಕಿತ್ತು. ಆದರೆ ಇಡೀ ಸಭಾಂಗಣದಲ್ಲಿ ಅರ್ಜಿಯ ಸಾರಾಂಶ ಏನು, ಅದಕ್ಕೆ ಆಡಳಿತ ನೀಡಿದ ಪರಿಹಾರ ಏನು ಎನ್ನುವುದು ತಿಳಿಯುತ್ತಿರಲಿಲ್ಲ. ಜನ ಮೂಕಪ್ರೇಕ್ಷಕರಾಗಿ ಕೂರಬೇಕಿತ್ತು. ಸಭೆಯಲ್ಲಿದ್ದ ಕಾಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ ಸಮಸ್ಯೆಗಳ ಕುರಿತು ಮೈಕ್ ನಲ್ಲಿ ಹೇಳಿ ಎಂದು ಹೇಳಿದಾಗಲೂ ಯಾವುದೇ ಸ್ಪಂದನ ಬರಲಿಲ್ಲ. ಬಳಿಕ ಸುಸ್ತಾಗಿ ಮಾಧ್ಯಮದವರು ಒಟ್ಟಾಗಿ ಡಿಸಿ ಬಳಿ ಸಭೆಗೆ ಯಾವುದೇ ಮಾಹಿತಿ ತಿಳಿಯುತ್ತಿಲ್ಲ. ಇಂತಹ ಸಭೆಯಲ್ಲಿ ಗೌಪ್ಯತೆ ಕಾಪಾಡುವ ಅವಶ್ಯ ಏನು ಎಂದು ಪ್ರಶ್ನಿಸಿದರು. ನಮಗೆ ಸರಕಾರದ ಆದೇಶ ಇರುವುದೇ ಹೀಗೆ ಎಂದು ಡಿಸಿ ಹೇಳಿದರು. ನಿಮ್ಮನ್ನು ತಡೆದವರು ಯಾರು, ಅರ್ಜಿ ನೀಡಿದವರು ಸಭೆಗೆ ಬಂಡಾಗ ಅವರ ಬಳಿ ಮಾಹಿತಿ ಕೇಳಿ ಎಂದು ಹೇಳಿದರು. ಒಂದು ಹಂತದಲ್ಲಿ ಮಾತಿನ ಚಕಮಕಿ ನಡೆಯಿತು. ಆಗ ವಾರ್ತಾಧಿಕಾರಿ, ಗಂಗೊಳ್ಳಿ ಹಾಗೂ ಕುಂದಾಪುರ ಎಸ್‌ಐ ಆಗಮಿಸಿ ಸಮಾಧಾನಕ್ಕೆ ಕೇಳಿಸಿ ಯತ್ನಿಸಿದರು. ಮಾಧ್ಯಮದವರು ಸಭೆಯಿಂದ ಹೊರ ನಡೆದಾಗ, ಕಾಂಗ್ರೆಸ್ ಮುಖಂಡರು ಸಭೆಯಿಂದ ನಿರ್ಗಮಿಸಿದರು. ಸಭಾಂಗಣದಿಂದ ಹೊರ ಬಂದ ಬಳಿಕವೂ ಮಾತಿನ ಚಕಮಕಿ ಮುಂದುವರಿಯಿತು. ಕಾಂಗ್ರೆಸ್ ನಾಯಕರು ಕೂಡ ಈ ಘಟನೆಯನ್ನು ಇರುವ ಖಂಡಿಸಿದರು. ಈ ಹಿಂದೆ ಬೈಂದೂರಿನಲ್ಲಿ ಸಭೆ ನಡೆದಾಗ ಅಹವಾಲು ಸಲ್ಲಿಸುವವರಿಗೆ, ಆಲಿಸುವವರಿಗೆ ಮೈಕ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಇಷ್ಟು ಗೌಪ್ಯತೆ ಯಾಕೆಂದು ಎಂದು ಸಭೆಗೆ ಆಗಮಿಸಿದವರು ಪ್ರಶ್ನಿಸಿದರು. ಜನರ ಭಾಗವಹಿಸುವಿಕೆ ಕೂಡ ಕಡಿಮೆ ಇತ್ತು

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ

    19/12/2025

    ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿ.ವೈ. ರಾಘವೇಂದ್ರ

    19/12/2025

    ರಾಜ್ಯ ಮಟ್ಟದ ಜ್ಞಾನಜ್ಯೋತಿ ಪ್ರಶಸ್ತಿಗೆ ಮೊಳಹಳ್ಳಿ ಶಾಲೆಯ ಶಿಕ್ಷಕಿ ಶೋಭಾ ಸಿ. ಶೆಟ್ಟಿ ಆಯ್ಕೆ

    19/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಸಿಎಲ್‌ಎಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣ  
    • ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ
    • ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿ.ವೈ. ರಾಘವೇಂದ್ರ
    • ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಮಗುವಿನ ಹಕ್ಕು: ಜಿಲ್ಲಾಧಿಕಾರಿ
    • ರಾಜ್ಯ ಮಟ್ಟದ ಜ್ಞಾನಜ್ಯೋತಿ ಪ್ರಶಸ್ತಿಗೆ ಮೊಳಹಳ್ಳಿ ಶಾಲೆಯ ಶಿಕ್ಷಕಿ ಶೋಭಾ ಸಿ. ಶೆಟ್ಟಿ ಆಯ್ಕೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.